ಸದಸ್ಯ:VIVEK.P(750)/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುರಾಯಿ ಚಿಟವ[ಬದಲಾಯಿಸಿ]

ತುರಾಯಿ ಚಿಟವ

ಕ್ಷೇತ್ರ ಪಾತ್ರಗಳು[ಬದಲಾಯಿಸಿ]

ಒಂದು ಸಣ್ಣ ಗಾತ್ರದ ಇರುಳಿನ ಚಿಟವ ದೊಡ್ಡ ಕಣ್ಣುಗಳನ್ನು ಹೊಂದಿದ್ದು,ಅದರ ಕಿರೀಟ ಮತ್ತು ಕತ್ತಿನ ಹಿಂಬದಿಯು ಗಾಢ ಕಂದಿನಿಂದ ಕೂಡಿ,ಸ್ಥೂಲ ಬಿಳಿಯ ಪ್ರತಿಷ್ಠೆಯನ್ನು ಕತ್ತಿನ ಹಿಂಭಾಗದವರೆಗೆ ಕೂಡಿರುತ್ತದೆ.ಮೇಲಿನ ಪುಕ್ಕಗಳು ಬೂದು ಕಂದು ಬಣ್ಣದಲ್ಲಿರುತ್ತದೆ.ಗಲ್ಲ ಮತ್ತು ಗಂಟಲು ಬಿಳಿಯ ಬಣ್ನವಾಗಿದ್ದು, ಮುಂಭಾಗದ ಕುತ್ತಿಗೆ ಕೆಂಪು ಬಣ್ಣದಿಂದ ಕೂಡಿ,ಕಂದು ಸ್ತನಗಳನ್ನು ಬಿಳಿ ಪಟ್ಟಿಯು ಬೇರ್ಪಡಿಸಲಾಗಿದೆ.ಬಿಳಿಯ ಹೊಟ್ಟೆ ಹೊಂದಿದ್ದು ಕಪ್ಪು ಮತ್ತು ಬಿಳಿಯ ಬಾಲ ಹಾಗು ಬಿಳಿಯ ರೆಕ್ಕೆ ಹಾರಾಡುವಾಗ ಗೋಚರಿಸುತ್ತದೆ.ಕಣ್ಪೊರೆ ಕಂದು ಬಣ್ಣದಲ್ಲಿರುತ್ತದೆ.ಕೆಳದವಡೆಗಳ ತುದಿಯ ಕೊಕ್ಕು ಕಪ್ಪಾಗಿದ್ದು,ಸೀಳು ಮತ್ತು ತಳದಲ್ಲಿ ಮಸುಕಾದ ಹಳದಿ ಬಣ್ಣದಲ್ಲಿರುತ್ತದೆ.ಲೈಂಗಿಕ ದ್ವಿರೂಪತೆ ಲಕ್ಷಣಗಳು ಕಾಣುವುದಿಲ್ಲ[೧].

ವಿತರಣೆ[ಬದಲಾಯಿಸಿ]

ತುರಾಯಿ ಚಿಟವ ಮೊದಲ ಬಾರಿಗೆ ೧೮೪೮ರಲ್ಲಿ ಟಿ.ಸಿ.ಜೇರ್ಡನ್ ರವರು ಪೂರ್ವ ಘಟ್ಟಗಳು ಹಾಗು ಕಡಪ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ದಾಖಲಿಸಿದ್ದಾರೆ.ಮೇ ೧೮೬೭ರಂದು ಡಬ್ಲ್ಯೂ.ಟಿ.ಬ್ಲ್ಯನ್ಫೊರ್ಡ್ ರವರು ಈ ಹಕ್ಕಿಯನ್ನು ಪೂರ್ವ ಮಹಾರಾಷ್ಟ್ರದ ಗೊದಾವರಿಯ, ಸಿರೊಚ ಬಳಿ ನೊಡಿದ್ದಾರೆ.ತದನಂತರ ೧೮೭೧ ಮಾರ್ಚನಲ್ಲಿ ಆಂಧ್ರ ಪ್ರದೇಶದ ಭದ್ರಾಚಲಂನಲ್ಲಿ ವೀಕ್ಷಿಸಿದ್ದಾರೆ.೧೯೯೦ರಲ್ಲಿ ಹೋವರ್ಡ್ ಕ್ಯಾಂಪ್ಬೆಲ್ರವರು ತುರಾಯಿ ಚಿಟವವನ್ನು ಆಂಧ್ರ ಪ್ರದೇಶದ ಅನಂತಪುರದಲ್ಲಿ ದಾಖಲಿಸಿದ್ದಾರೆ.ಬರೋಬರಿ ೮೬ ವರ್ಷಗಳಿಂದ ಈ ಹಕ್ಕಿಯ ದಾಖಲೆಗಳು ವಿಫಲವಾಗಿದ್ದು,೧೯೮೬ ಜನವರಿಯಲ್ಲಿ ಕಡಪ ಜಿಲ್ಲೆಯ ರೆಡ್ಡಿಪಲ್ಲಿಯಂಬಲ್ಲಿ ಭೂಷಣ್ ರವರು ಮರು ಪತ್ತೆಯಚ್ಚಿದ್ದಾರೆ[೨].

ಇತ್ತೀಚಿನ ದಾಖಲೆಗಳು[ಬದಲಾಯಿಸಿ]

ಮರು ಪತ್ತೆಯಚ್ಚಿದನಂತರ ಖಚಿತಪಡಿಸಲಾದ ದಾಖಲೆಗಳು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಲಂಕಮಲ್ಲೇಶ್ವರದ ಸುಬತ್ತಮುತ್ತ ಕಂಡುಬಂದಿದೆ.ಮರುಪತ್ತೆಯಚ್ಚಿದ ನಂತರ ತಕ್ಷಣವೇ ದಕ್ಷಿಣ ಆಂಧ್ರ ಪ್ರದೇಶದ ಕಡಪ,ನೆಲ್ಲೂರು,ಚಿತ್ತೂರು ಹಾಗು ಅನಂತಪುರ ಜಿಲ್ಲೆಗಳಲ್ಲಿ ಭೂಷಣ್ರವರು ಸಮೀಕ್ಷೆಯನ್ನು ಕೈಗೊಡಿದ್ದರು[೩].ಈ ಸಮೀಕ್ಷೆಯಲ್ಲಿ ಖಚಿತವಾದ ವರದಿ ದೊರಕ್ಕಿದ್ದು,ಎರಡು ಜಾಗಗಳಲ್ಲಿ ಇದರ ವೀಕ್ಷಣೆ ಕೂಡ ಖಚಿತವಾಗಿದೆ.೧೪ ಜಾಗಗಳಿಂದ ಈ ಹಕ್ಕಿಯ ದೃಢೀಕರಿಸದ ವರದಿಗಳು ಬಂದಿವೆ.ಅಲ್ಲಿನ ಸ್ಥಳೀಯ ಬುಡಕಟ್ಟು ಜನರು ಅಥವ ಹಕ್ಕಿಯ ಜಾಲ ಒಡ್ಡುವವರು ಇಂತಹ ದೃಢೀಕರಿಸದ ವರದಿಗಳನ್ನು ಮಾಡಿದ್ದಾರೆ.ಸಮಂತ್ ಹಾಗು ಎಲನ್ಗೋವನ್ ಮೇ ೧೯೯೪ರಿಂದ ಅಕ್ಟೋಬರ್ ೧೯೯೫ರವರೆಗೆ ದಕ್ಷಿಣ ಆಂಧ್ರ ಪ್ರದೇಶದಲ್ಲಿ ಸಮೀಕ್ಷೆಯನ್ನು ನಡೆಸಿದರು,ಲಂಕಮಲ್ಲೇಶ್ವರದ ಸುತ್ತಮುತ್ತ ಪ್ರದೇಶಗಳಲ್ಲಿ ಮುಖ್ಯವಾಗಿ ಕಾರ್ಯವನ್ನು ನಿರ್ವಹಿಸಿದರು.೧೯ನೇ ಶತಮಾನಾದಿಂದ ಇಂದಿನವರೆಗು ಉತ್ತರ ಆಂಧ್ರ ಪ್ರದೇಶದಲ್ಲಿ ಈ ಹಕ್ಕಿಯ ವರದಿ ದಾಖಲೆಯಾಗಿಲ್ಲ.೨೦೦೧ರಲ್ಲಿ ಈ ಹಕ್ಕಿಯನ್ನು ಪತ್ತೆಯಚ್ಚಲು ಹೊಸ ವಿಧಾನವೊಂದನ್ನು ಅಭಿವೃದ್ಧಿಗೊಳಿಸಿದ್ದಾರೆ.ಈ ವಿಧಾನದ ಪ್ರಕಾರ ಟ್ರ್ಯಾಕಿಂಗ್ ಪಟ್ಟಿಗಳ ಮೇಲೆ ತುರಾಯಿ ಚಿಟವ ಹಕ್ಕಿಯ ವಿಶಿಷ್ಟ ಹೆಜ್ಜೆಗುರುತನ್ನು ರುಜುಮಾಡುತ್ತದೆ.ತದನಂತರ ಸ್ವಯಂಚಾಲಿತ ಕ್ಯಾಮೆರಾಗಳು ಸಮತಲವಾಗಿರುವ ನಸುಗೆಂಪು ಕಿರಣಗಳನ್ನು ಈ ಹಕ್ಕಿ ಅಡ್ಡಿಮಾಡಿದಾಗ,ಅದರ ವರದಿಯನ್ನು ದಾಖಲಿಸಿಕೊಳ್ಳುತ್ತದೆ.ಇಂತಹ ಸಮೀಕ್ಷೆಯಿಂದ ಮೂರು ಹೊಸ ಪ್ರದೇಶಗಳಲ್ಲಿ ಈ ಹಕ್ಕಿಯ ವರದಿಯಾಗಿದೆ ಹಾಗು ಈ ಮೂರು ಜಾಗಗಳ ಪೈಕಿ ಒಂದು ಆವಾಸಸ್ಥಾನವನ್ನು ತೆಲುಗು ಗಂಗಾ ಕಾಲುವೆಯ ನಿರ್ಮಾಣ ಮಾಡುವಾಗ ನಾಶಗೊಂಡಿದೆ.ಈವರೆಗೆ ೨೫ ರಿಂದ ೨೦೦ ಹಕ್ಕಿಗಳಿರಬಹುದೆಂದು ಒಂದು ಅಂದಾಜಾಗಿದೆ[೪].

ಜೀವಾವರಣ[ಬದಲಾಯಿಸಿ]

ತುರಾಯಿ ಚಿಟವ ಮೊಟ್ಟೆ ಪ್ರದರ್ಶನ, ಪ್ರಾಣಿಶಾಸ್ತ್ರ ಮ್ಯೂಸಿಯಂ, ಅಬರ್ದೀನ್ ವಿಶ್ವವಿದ್ಯಾಲಯ..

ತುರಾಯಿ ಚಿಟವಗಳು ವಿರಳ,ಮುಳ್ಳಿನ ಹಾಗು ಮುಳ್ಳಿಲ್ಲದ ಪೊದೆಗಳು ಮತ್ತು ಪೊದೆಗಳ ಅರಣ್ಯಗಳಲ್ಲಿ ಹಾಗು ಕಲ್ಲಿನ ಅಡಿ ಬೆಟ್ಟಗಳಲ್ಲಿ ವಾಸಿಸುತ್ತದೆ.ಟ್ರ್ಯಾಕಿಂಗ್ ಪಟ್ಟಿಗಳ ಸಹಾಯದಿಂದ ಅಧ್ಯಯನಗಳನ್ನು ಮಾಡಿ ಇದರ ಬಹಿರಂಗವಾಗಿ ತುರಾಯಿ ಚಿಟವಗಳ ಆದ್ಯತೆಯ ಪ್ರಕಾರ ಮುಖ್ಯ ವಾಸಸ್ಥಾನ ಕೆಲವು ಸಾಂದ್ರತೆಯುಳ್ಳ ಪೊದೆಗಳ ಕಾಡುಗಳಾಗಿದೆ.ಈ ಹಕ್ಕಿಯ ನಡವಳಿಕೆಯ ವಿಷಯ ಬಹಳಷ್ಟು ನಿಗದಿತವಾಗಿದೆ.ಈ ಹಕ್ಕಿಯ ಹಿಕ್ಕೆಗಳಲ್ಲಿ ಮುಖ್ಯವಾಗಿ (macrotermes termites)ಗೆದ್ದಲುಗಳು ಹಾಗು ಇರುವೆಗಳ ದೇಹದ ಭಾಗಗಳು ಕಂಡುಬಂದಿದೆ.ಇದರ ತಳಿ ಪರಿಸರವಾಗಲಿ, ಗೂಡುಗಳು ಅಥವಾ ಎಳೆ ಹಕ್ಕಿಗಳ ಬಗ್ಗೆ ಮಾಹಿತಿ ದಾಖಲಾಗಿಲ್ಲ.ಆದಾರೆ ಎಳೆ ಹಕ್ಕಿಯ ಹೆಜ್ಜೆಗುರುತು ಟ್ರ್ಯಾಕಿಂಗ್ ಪಟ್ಟಿಗಳಲ್ಲಿ ಮುದ್ರಣವಾಗಿದ್ದು ಇದರ ಸೂಚನೆಯಂತೆ ಈ ಹಕ್ಕಿಯು ಯಶಸ್ವಿಯಾಗಿ ತಳಿ ವರ್ಧನಗೊಂಡಿದೆ.ತುರಾಯಿ ಚಿಟವಗಳ ಮತ್ತೊಂದು ಆದ್ಯತೆಯ ಪ್ರಕಾರ ವುಡಿ ಸಸ್ಯ ಜಾತಿಗಳಾದ Hardwickia binataವಿರುವ ಬಲಿತ ಪೊದೆಗಳು ಇದರ ವಾಸಸ್ಥಾನವಾಗಿದೆ.

ಅಪಾಯಗಳು/ಜೀವ ಭೀತಿ[ಬದಲಾಯಿಸಿ]

೯ ನಿರ್ದಿಷ್ಟ ಜೀವ ಭೀತಿಗಳನ್ನು ಗುರುತಿಸಲಾಗಿದ್ದು,ಪೊದೆಗಳ ಅರಣ್ಯ ಅವನತಿ ಇದರ ಮುಖ್ಯ ಕಾರಣವಾಗಿದ್ದೆ.ಸೊಮಸಿಲ್ಲ ಅಣೆಕಟ್ಟು ನಿರ್ಮಾಣ ಇದರ ಮತ್ತೊಂದು ಮುಖ್ಯ ಕಾರಣವಾಗಿದೆ.ಇದರ ಪರಿಣಾಮವಾಗಿ ಅಲ್ಲಿನ ಜನರು ಲಂಕಮಲೈ,ಪಾಲ್ಗೊಂಡ,ಸೇಶಾಚಲಂ ಎಂಬ ಜಾಗಗಳಿಗೆ ಸ್ಥಳಾಂತರಗೊಂಡರು.ಇದರಿಂದಾಗಿ ಮೂಲನಿವಾಸಿಗಳು ಆ ಜಾಗದ ಸಂಪನ್ಮೂಲಗಳನ್ನು ಅವಲಂಬಿಸುವುದರಿಂದ ಈ ಹಕ್ಕಿಯ ವಿನಾಶಕ್ಕೆ ಮುಖ್ಯ ಕಾರಣವಾಗಿದೆ.ಇದರ ಜೊತೆಗೆ ಕಲ್ಲುಗಣಿಗಾರಿಕೆಯಿಂದ ಮತ್ತಷ್ಟು ಹಾನಿ ಉಂಟುಮಾಡುತ್ತಿದೆ.ಕಡಪ ಜಿಲ್ಲೆಯ ತೆಲುಗು ಗಂಗ ಕಾಲುವೆ ನಿರ್ಮಾಣ ಕೂಡ ಈ ಹಕ್ಕಿಯ ವಿನಾಶಕ್ಕೆ ಒಂದು ಮುಖ್ಯ ಕಾರಣವಾಗಿದೆ[೫].

ಉಲ್ಲೇಖಗಳು[ಬದಲಾಯಿಸಿ]