ಸದಸ್ಯ:Sushmitha shetty/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಯಿ ನೆರಳು
ಎಸ್.ಎಲ್. ಭೈರಪ್ಪನವರ[೧] ಜನಪ್ರಿಯ ಕಾದಂಬರಿಗಳಲ್ಲಿ ನಾಯಿ ನೆರಳು ಕೂಡ ಒಂದು. ಮೂರು ತಲೆಮಾರುಗಳ ಹಾಗೂ ಪುನರ್ಜನ್ಮದ ಕಥೆಯನ್ನು ಹೊಂದಿರುವ ಈ ಕಾದಂಬರಿಯನ್ನುನಾಯಿ ನೆರಳು ಎಂಬ ಹೆಸರಿನಲ್ಲೇ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿಸಿದ್ದಾರೆ.
ಎಸ್.ಎಲ್.ಬೈರಪ್ಪ


ಈ ಚಲನಚಿತ್ರದಲ್ಲಿ ಪವಿತ್ರ ಲೋಕೇಶ್ ಅವರು ವೆಂಕಟಲಕ್ಷ್ಮಿ ಎಂದು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಚಲನಚಿತ್ರದಲ್ಲಿ ಅಚ್ಛನ್ನಯ್ಯ ಎಂಬುವವರು ತಮ್ಮ ಹೆಂಡತಿಯಾದ ನಾಗಲಕ್ಷ್ಮಿ ಮತ್ತು ತಮ್ಮ ಸೊಸೆಯಾದ ವೆಂಕಟಲಕ್ಷ್ಮಿ ಎಂಬುವವರೊಂದಿಗೆ ಕರ್ನಾಟಕದ ಒಂದು ಹಳ್ಳಿಯಲ್ಲಿ ಜೀವಿಸುತ್ತಿದ್ದರು.ಅವರ ಮೊಮ್ಮಗಳಾದ ರಾಜಲಕ್ಷ್ಮಿಯು ಹೆಚ್ಚಿನ ವಿದ್ಯಭ್ಯಾಸಕ್ಕಾಗಿ ದೂರದ ಊರಿಗೆ ಹೋಗಿದ್ದಾಳೆ.ಅಚ್ಚನ್ನಯ್ಯನವರು ಅವರ ಒಬ್ಬ ಸ್ನೇಹಿತರಿಂದ ಯಾರೋ ಒಬ್ಬ ಯುವಕನು ತನ್ನ ಹಿಂದಿನ ಜನ್ಮದಲ್ಲಿ ಅಚ್ಚನ್ನಯ್ಯನವರ ಮಗನಾಗಿದ್ದನೆಂದು ತಿಳಿಸಿರುತ್ತಾನೆ.ಈ ವಿಚಾರವನ್ನು ಅಚ್ಚನ್ನಯ್ಯರವರು ನಂಬುವುದಿಲ್ಲ ಆದರೆ ಅವರ ಹೆಂಡತಿಯು ಇಪ್ಪತ್ತು ವರ್ಷಗಳ ಹಿಂದೆ ಸತ್ತ ತಮ್ಮ ಮಗನೇ ಬದುಕಿ ಬಂದಿರುವನೆಂದು ನಂಬುತ್ತಾಳೆ.ಅಚ್ಚನ್ನಯ್ಯರವರು ಆ ಯುವಕ ವಿಶ್ವನೊಂದಿಗೆ ಮಾತನಾಡಿ ತಮ್ಮ ಮನೆಗೆ ಕರೆದುಕೊಂಡು ಬರುತ್ತಾರೆ.ಅಚ್ಚನ್ನಯ್ಯರವರ ಹೆಂಡತಿಯು ವಿಶ್ವನನ್ನು ತನ್ನ ಮಗನಾಗಿ ಭಾವಿಸಿದಳು.ಮೊದಲಿಗೆ ತಮ್ಮ ಸೊಸೆ ವೆಂಕಟಲಕ್ಷ್ಮಿಗೆ ಮೊದಲು ವಿಶ್ವ ತನ್ನ ಗಂಡನೆಂದು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು.ಆದರೆ ನಂತರ ವಿಶ್ವನ್ನನ್ನು ಗಂಡನಾಗಿ ಒಪ್ಪಿಕೊಳ್ಳುತ್ತಾಳೆ.ರಾಜಲಕ್ಷ್ಮಿಯು ತನ್ನ ವಯಸ್ಸಿನ ಆಸುಪಾಸಿನ ವಿಶ್ವನ್ನನ್ನು ತನ್ನ ತಂದೆ ಎಂದು ಒಪ್ಪಿಕೊಳ್ಳಲು ಕಷ್ಟವಾಗಿ ತನ್ನ ತಾಯಿಗೆ ತಿಳಿಸಿ ಹೆಳುತ್ತಾಳೆ.ಆದರೆ ಅಚ್ಚನ್ನಯ್ಯರವರಿಗೆ ವೆಂಕಟಲಕ್ಷ್ಮಿಯು ವಿಶ್ವನ ಮಗುವಿಗೆ ತಾಯಿಯಾಗುತ್ತಿರುವ ವಿಚಾರ ಕೇಳಿ ಬೆಸರವಾಗುತ್ತದೆ.ತನ್ನ ಸ್ನೇಹಿತರ ಮುಂದೆ ನಾಚಿಕೆಯಾಗುತ್ತದೆ.ಇದರಿಂದ ಬೆಸರವಾಗಿ ವೆಂಕಟಲಕ್ಷ್ಮಿಯು ವಿಶ್ವನ ಜೊತೆ ಯಾವುದೋ ದೇವರಿಗೆ ಅರ್ಪಿಸಿರುವ ಸ್ಥಳದಲ್ಲಿ ಜೀವಿಸುತ್ತಿರುತ್ತಾಳೆ.ವಿಶ್ವನಿಗೆ ಸುಕ್ರಿ ಎಂಬ ಕೆಲಸ ಮಾಡುವ ಯುವತಿಯು ಇಷ್ಟವಾಗುತ್ತಾಳೆ.ಇದನ್ನೆಲ್ಲಾ ನೊಡಲಾಗದ ನಾಗಲಕ್ಷ್ಮಿಯು ಬೆಸರದಲ್ಲಿಯೇ ತೀರಿ ಹೋಗುತ್ತಾರೆ.ರಾಜಲಕ್ಷ್ಮಿಯು ತನ್ನ ತಾಯಿಯನ್ನು ತಿರುಗಿ ಪಡೆಯಲು ನ್ಯಾಯಾಲಯದಲ್ಲಿ ಕೇಸ್ ಹಾಕುತ್ತಾಳೆ.ಇದರಿಂದ ವಿಶ್ವನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ದೊರೆಯುತ್ತದೆ.ಆದರೆ ವೆಂಕಟಲಕ್ಷ್ಮಿಯು ವಿಶ್ವನು ಜೈಲಿನಿಂದ ಹೊರಬರುವುದನ್ನೇ ಕಾಯುತ್ತಿರುತ್ತಾಳೆ.ವೆಂಕಟಲಕ್ಶ್ಮಿಯು ತನ್ನ ಮಗಳೊಂದಿಗೆ ವಿಶ್ವನ್ನನ್ನು ತನ್ನ ಗಂಡನೆಂದು ಎಂದಿಗೂ ನಂಬಲೇ ಇಲ್ಲ ಎಂದು ಹೇಳುತ್ತಾಳೆ.ಮೊದಲಿಗೆ ವೆಂಕಟಲಕ್ಷ್ಮಿಗೆ ವಿಶ್ವನ್ನನ್ನು ಒಪ್ಪಿಕೊಳ್ಳಲು ಕಷ್ಟವಾದರೂ ನಂತರ ಧೈರ್ಯವಾಗಿ ಮುನ್ನಡೆಯುತ್ತಾಳೆ.[೨]

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/S._L._Bhyrappa
  2. https://en.wikipedia.org/wiki/Naayi_Neralu