ಸದಸ್ಯ:Sujith166/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಎ.ವಿ.ಶೇಷಗಿರಿರಾವ್

ಪರಿಚಯ[ಬದಲಾಯಿಸಿ]

ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್.ಬೆಟ್ಟದ ಹುಲಿಚಲನಚಿತ್ರದಿಂದ ಸ್ವತಂತ್ರ ನಿರ್ದೇಶಕರಾದರು.ಕನ್ನಡ ಹಾಗೂ ತೆಲುಗಿನಲ್ಲಿ ೩೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎ.ವಿ.ಶೇಷಗಿರಿರಾವ್ ಹುಟ್ಟಿದು ೧೯೨೬. ಇವರು ಚಲನಚಿತ್ರ ನಿರ್ದೇಶಕರಾಗಿದರು. ಇವರು ತಮ್ಮ ವೃತ್ತಿ ಬದುಕನ್ನು ತಮ್ಮ ಯವ್ವನದಲ್ಲಿಯೇ ಆರಂಭಿಸಿದರು.ಅವರು ಕನ್ನಡ, ತಮಿಳು, ತೆಲುಗು,ಮುಂತಾದಭಾಷೆಗಳಲ್ಲಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಅವರ ವೃತ್ತಿ ಬದುಕಿನ ಮೊದಲನೆ ಚಿತ್ರ ತೆಲುಗು ಭಾಷದ ನಾಯಕ ನಂದಮುರಿ ತಾರಕ ರಾಮರಾವ್ ನಟಿಸಿದ "ಪೆಳ್ಳಿ ಪಿಲ್ಲುಪು"(pelli pillupu).ಅದರಲ್ಲಿ ನಾಯಕಿ ದೇವಿಕಾ ರಾಣಿ ನಟಿಸಿದ್ದರು. ಈ ಚಿತ್ರವು ೧೯೬೨ ರಲ್ಲಿ ಬಿಡುಗಡೆ ಆಗಿತ್ತು. ಇವರ ಮೊದಲನೆ ಕನ್ನಡ ಚಿತ್ರ "ಬೆಟ್ಟದ ಹುಲಿ" (bettada huli). ಈ ಚಿತ್ರ ೧೯೬೫ ರಲ್ಲಿ ಬಿಡುಗಡೆ ಆಗಿತ್ತು.ಇವರು ೫೦ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅವರಿಗೆ ತುಂಬ ಹೆಸರು ತಂದು ಕೊಟ್ಟ ಚಿತ್ರ ಡಾ. ರಾಜ್ ಕುಮಾರ್ ನಟಿಸಿದ "ಸಂಪತ್ತಿಗೆ ಸವಾಲ್" (sampathige saval)," ಬಹದ್ದೂರ್ ಗಂಡು" (bahaddur gandu) ಮುಂತಾದ ಚಿತ್ರಗಳು.ಈ ಚಿತ್ರಗಳು ಬಹಳ ಪ್ರಸಿದ್ದಿಯಾದ ಚಿತ್ರಗಳು.ಕೇವಲ ಕನ್ನಡಲ್ಲಿ ಮಾತ್ರವಲ್ಲ ತೆಲುಗುನಲ್ಲಿ ಕೂಡ ಅವರು ಪ್ರಸಿದ್ದ ನಿರ್ದೇಶಕರಾಗಿದರು. [೧] thumb|ಸಂಪತ್ತಿಗೆ ಸವಾಲ್

ಚಿತ್ರರಂಗದ ಜೀವನ[ಬದಲಾಯಿಸಿ]

ಇವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ ಚಲನಚಿತ್ರೋದ್ಯಮದಲ್ಲಿ ಡಾ. ರಾಜ್ ಕುಮಾರ್ ಅವರ ಜೊತೆ ಬಹಳ ಚಿತ್ರಗಳನ್ನು ನಿರ್ದೇಶಿಸಿದ್ದಾರೆ,ಬಹಳ ಜನಪ್ರಿಯವಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ಕೆಲವು ಚಿತ್ರಗಳು ಇಂದಿಗೂ ಮನೆಯ ಮಾತಾಗಿವೆ. ಎ.ವಿ.ಶೇಷಗಿರಿ ರಾವ್ ಅತ್ಯಂತ ಯಶಸ್ವಿ ನಿರ್ದೇಶಕರಾಗಿದ್ದರು.ಅವರ ಎಲ್ಲಾ ಸಿನಿಮಾಗಳು ವಿಶೇಷ ಪ್ರಾಮುಖ್ಯತೆ ಹೊಂದಿದ್ದವು.ಉದಾಹರಣೆಗೆ ರಾಜ್ ಕುಮಾರ್ ಅವರ ಸಂಪತ್ತಿಗೆ ಸವಾಲ್ ಚಿತ್ರ.ಇದು ತುಂಬ ಪ್ರಸಿದ್ದವಾದ ಚಿತ್ರ.ಎ.ಎಸ್.ಮೂರ್ತಿ ನಿರ್ಮಾಣದ ಚಿತ್ರವಾಗಿದೆ.ಈ ಚಿತ್ರ ಪಿ.ಬಿ.ದತ್ತಗಿರಿ ಬರೆದಿರುವ ನಾಟಕದಿಂದ ಆರಿಸಲಾಗಿದೆ.ಮಂಜುಳ ಅವರು ನಾಯಕಿಯಾಗಿ ನಟಿಸಿದ್ದರು.ಈ ಚಿತ್ರವು ಸಂಗೀತ ಬ್ಲಾಕ್ಬಸ್ಟರ್ ಆಗಿತ್ತು.ಈ ಚಿತ್ರದ ಮೂಲಕ ರಾಜ್ ಕುಮಾರ್ "ಯಾರೇ ಕೂಗಾಡಲಿ" ಎಂಬ ಹಾಡಿನಿಂದ ಚೊಚ್ಚಲ ಗಾಯಕನಾಗಿ ಹಾಡಿದರು.


ಕೆಲವು ಚಿತ್ರಗಳು[ಬದಲಾಯಿಸಿ]

"ರಾಜ ನನ್ನ ರಾಜ"೧೯೭೬ (raja nanna raja)," ಮ‍ರ್ಯಾದೆ ಮಹಲ್" ೧೯೮೪ (maryade mahal)," ಕೆರಳಿದ ಹೆಣ್ಣು" ೧೯೮೩ (keralida hennu),"ಸೊಸೆ ತಂದ ಸೌಭಾಗ್ಯ" ೧೯೭೭(sose thanda soubhagya)" ಪವಿತ್ರ ಪ್ರೇಮ" ೧೯೮೪ (pavitra prema)," ಪಟ್ಟಣಕ್ಕೆ ಬಂದ ಪತ್ನಿಯರು" ೧೯೮೦(pattanakke banda pathniyaru), "ನಾನಿರುವುದು ನಿನಾಗಾಗಿ "೧೯೭೯(naniruvudu ninagagi)," ಬೆಟ್ಟದ ಹುಲಿ "೧೯೬೫(bettada huli), "ಹೂವು ಮುಳ್ಳು" ೧೯೬೮(hoovu mullu), "ಜಯಾ ವಿಜಯ "೧೯೭೩(jaya vijaya), "ಸಂಪತ್ತಿಗೆ ಸವಾಲ್ "೧೯೭೪(sampathige saval) ," ರವಿ ಚಂದ್ರ" ೧೯೮೦(ravi chandra) ," ವಸಂತ ಲಕ್ಶ್ಮೀ" ೧೯೭೮(vasantha lakshmi) , "ಪವಿತ್ರ ಪ್ರೇಮ" ೧೯೮೪(pavitra prema) ," ತಾಳಿಗಾಗೆ" ೧೯೮೯(thaligagi), ಹೆಣ್ಣು ಸಂಸಾರದ ಕಣ್ಣು ೧೯೭೫(hennu samsarada kannu),ಬದುಕು ಬಂಗಾರ ವಾಯಿತು ೧೯೭೬(baduku bangaravauthu), ಶ್ರೀಮಂತನ ಮಗಳು ೧೯೭೭(shrimanthana magalu), ಹದ್ದಿನ ಕಣ್ಣು ೧೯೮೦(haddina kannu), ಗುಣನೋಡಿ ಹೆಣ್ಣು ಕೊಡಿ ೧೯೮೨(guna nodi hennu kodi) , ಕೆರಳಿದ ಹೆಣ್ಣು ೧೯೮೩(keralida hennu) , ಪ್ರೇಮವೆ ಬಾಳಿನ ಬೆಳಕು ೧೯೮೪(premave balina belaku), ಕುಂಕುಮ ತಂದ ಸೌಭಾಗ್ಯ ೧೯೮೫( kunkuma thanda soubhagya). ಅವರು ತಮ್ಮ ೮೧ನೆ ವಯಸಿನಲ್ಲೂ ತುಂಬ ಚುರುಕಾಗಿದ್ದರು.೮೧ ನೇ ವಯಸ್ಸಿನಲ್ಲೂ ಅವರಿಗೆ ಚಲನಚಿತ್ರಗಳಲ್ಲಿ ಆಸಕ್ತಿಯಿತ್ತು. ಸಾವಿನ ದಿನ ಮುಂಚೆ ಕೂಡ ರಜಿನಿಕಾಂತ್ ಅಭಿನಯಿಸಿದ ಶಿವಾಜಿ ಚಿತ್ರವನ್ನು ನೋಡಲು ಟಿಕೆಟ್ ಬುಕ್ ಮಾಡಿದರು,ಆದರೆ ವಿದಿಯಾಟಕೆ ಬಲಿಯಾಗಿ, ತಮ್ಮ ಮನೆಯಲ್ಲಿಯೆ ಜಾರಿ ಬಿದ್ದು ತಲೆಗೆ ಪೆಟ್ಟಾಗಿ "ಮೆದುಳು ನಿಷ್ಕ್ರಿಯ"( brain haemorrhage) ವಾಗಿ ಚೆನ್ನೈ ಅಪೋಲೋ ಆಸ್ಪತ್ರೆ ಯಲ್ಲಿ ೧೭ ಜುನ್ ೨೦೦೭ ರಂದು ಅವರು ಕೊನೆಯುಸಿರು ಎಳೆದರು.ಅವರ ಕೊನೆಯ ಚಿತ್ರ ಕನ್ನಡ ಭಾಷೆಯ "ಬಹದ್ದುರ್ ಹೆಣ್ಣು" (bahaddur hennu). thumb|ರಾಜ ನನ್ನ ರಾಜ


ಚಲನಚಿತ್ರಗಳ ವಿವರ[ಬದಲಾಯಿಸಿ]

೧. ರಾಜ ನನ್ನ ರಾಜ [೨]; ಈ ಚಿತ್ರವು ಎ.ವಿ ಶೇಷಗಿರಿರಾವ್ ರವರ ನಿರ್ದೇಶನದ ಮತ್ತು ಎ.ಎಲ್ ಅಬ್ಬಯ್ಯ ನಾಯ್ಡುರವರ ನಿರ್ಮಾಣದ ಒಂದು ಕನ್ನಡ ಪ್ರಣಯ ಚಿತ್ರ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಜ್ ಕುಮಾರ್, ಮಂಗಳಾರತಿ ಮತ್ತು ಚಂದ್ರಶೇಕರ್ ರವರು ನಟಿಸಿದ್ದಾರೆ, ಈ ಚಿತ್ರದ ಸಂಗೀತವನ್ನು ಜಿ.ಕೆ ವೆಂಕಟೇಶ್ ರವರು ಸಂಯೋಜಿಸಿ ಗೀತೆಗಳನ್ನು ಅತ್ಯಂತ ಚೆನ್ನಾಗಿ ಪರಿಗಣಿಸಲಾಗಿದೆ. ಜಿ.ಕೆ ವೆಂಕಟೇಶ್ ರವರು ಧ್ವನಿ ಪಥವನ್ನು ಸಂಯೋಜಿಸಿ ಮತ್ತು ಸಾಹಿತ್ಯವನ್ನು ಬರೆದಿದ್ದಾರೆ, ಈ ಆಲ್ಬಮ್ ಉದಯಶಂಕರ್ ರವರ ಧ್ವನಿಮುದ್ರಿಕೆಗಳನ್ನು ಒಳಗೊಂಡಿದೆ. ರಾಜ್ ಕುಮಾರ್ ಮತ್ತು ಮಂಗಳಾರತಿಯ ಪ್ರಣಯ ಪಾತ್ರಗಳು ಮತ್ತು ಅವರ ಪ್ರೀತಿ ಪ್ರೇಮವು ಪೂರ್ವಜನ್ಮದಲ್ಲಿ ವಿವರವಾಗಿ ತೋರಿಸಿದ್ದಾರೆ, ಈ ಚಲನಚಿತ್ರವು ಬಿಡುಗಡೆಯ ನಂತರ ಒಂದು ಬೃಹತ್ ಯಶಸ್ಸನ್ನು ಗಳಿಸಿತು.

೨.ಮರ್ಯಾದ ಮಹಲ್; ಈ ಚಿತ್ರದ ಮುಖ್ಯ ಅರ್ಥವೇನೆಂದರೆ ಸಭ್ಯತೆ ಮತ್ತು ನೀತಿ, ಈ ಚಿತ್ರದ ಮುಖ್ಯ ಪಾತ್ರಗಳಾಗಿ ರಾಜೇಶ್ ಖನ್ನ, ರಾಜ್ ಕುಮಾರ್ ಮತ್ತು ಮಾಲಾ ಸಿನ್ಹ ನಟಿಸಿದ್ದಾರೆ. ಈ ಚಿತ್ರ ೧೯೬೯ ಮತ್ತು ೧೯೭೧ರ ನಡುವೆ ೧೭ ಭಾರಿ ಸತತ ಯಶಸ್ವಿ ಗಳಿಸಿದೆ .

೩.ಸೊಸೆ ತಂದ ಸೌಭಾಗ್ಯ; ಈ ಚಿತ್ರವು ಪಿ.ಬಿ ದತ್ತರಗಿ ಬರೆದ ಮತ್ತು ಎ.ವಿ ಶೇಶಗಿರಿರಾವ್ ನಿರ್ದೇಶನದ ಚಿತ್ರ ಇದರ ಪ್ರಮುಖ ಪಾತ್ರಗಳಾಗಿ ಡಾ.ವಿಷ್ಣುವರ್ಧನ್ ಮತ್ತು ಮಂಜುಳ ನಟಿಸಿದ್ದಾರೆ, ಇದು ಕನ್ನಡ ಮಾಡಿದ ಮೊಟ್ಟಮೊದಲ ಸಿನೆಮಾಸ್ಕೋಪ್ ಚಿತ್ರ.

೪.ಪಟ್ಟಣಕ್ಕೆ ಬಂದ ಪತ್ನಿಯರು; ಈ ಚಿತ್ರವು ಎ.ವಿ ಶೇಷಗಿರಿರಾವ್ ನಿರ್ದೇಶನದ ಮತ್ತು ಎಸ್.ಡಿ ಅಂಕಲಗಿ, ಬಿ.ಎಚ್ ಚಂದನ್ನನವಾರ್, ಎಂ.ಜಿ ಹುಬ್ಲಿಕರ್ ಮತ್ತು ಸುರೇಂದ್ರ ಇಂಗ್ಲೆ ರವರ ನಿರ್ಮಾಣನದ ೧೯೮೦ರ ಭಾರತೀಯ ಕನ್ನಡ ಚಿತ್ರವಾಗಿದೆ, ಈ ಚಿತ್ರದಲ್ಲಿ ಶ್ರೀನಾಥ್ , ಮಂಜುಳ ಮತ್ತು ಲೋಕೇಶ್ ರವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಈ ಚಿತ್ರವು ರಂಗರಾವ್ ರವರ ಸಂಗೀತವನ್ನು ಹೊಂದಿದೆ. ಈ ಚಿತ್ರದ ಸಾರಂಶವೇನೆಂದರೆ ಮುಗ್ದ ಹಳ್ಳಿ ಹುಡುಗರಿಬ್ಬರು ತಮ್ಮ ಪತ್ನಿಯರ ಸಲುವಾಗಿ ಹಣ ಪಡೆಯಲು ಮತ್ತು ಯಶಸ್ವಿಯಾಗಲು ಪಟ್ಟಣಕ್ಕೆ ಬಂದು ತಲುಪುತ್ತಾರೆ ಆದರೆ ಅವರು ಕೆಲವು ವಿರೋಧಿ ಸಾಮಾಜಿಕ ಅಂಶಗಳ ಸಭೆಯಲ್ಲಿ ಕೊನೆಗೊಳ್ಳುತ್ತಾರೆ ನಂತರ ತಮ್ಮ ತಪ್ಪುಗಳು ಅವರಿಗೆ ಅರಿವಾಗಿ ಅವುಗಳನ್ನು ತೊಡೆದುಹಾಕಲು ನಿರ್ಧರಿಸುತ್ತಾರೆ.

೫. ಬೆಟ್ಟದ ಹುಲಿ; ಎ.ವಿ ಶೇಷಗಿರಿರಾವ್ ಬರೆದ ಮತ್ತು ನಿರ್ದೇಶಿಸಿದ ೧೯೬೫ರ ಕನ್ನಡ ನಾಟಕ ಚಿತ್ರ, ಇದರ ಮುಖ್ಯ ಪಾತ್ರಗಳನ್ನು ರಾಜ್ ಕುಮಾರ್, ಜಯಂತಿ ಮತ್ತು ಕೆ.ಎಸ್ ಅಶ್ವಥ್ ರವರು ನಿರ್ವಹಿಸಿದ್ದಾರೆ, ಇದು ಉದಯ್ ಕುಮಾರ್ ನಿರ್ವಹಿಸಿದ ಡಕಾಯಿತ ಚಿತ್ರ ಇದರಲ್ಲಿ ಕಳ್ಳನಾದ ರಾಜ್ ಕುಮಾರ್ ರವರು ಕೊನೆಯಲ್ಲಿ ಹೇಗೆ ಒಬ್ಬ ಒಳ್ಳೆಯ ಮನುಷ್ಯನಾಗಿ ಬದಲಾಗುತ್ತಾರೆ ಮತ್ತು ತಮ್ಮ ಜೀವನವನ್ನು ಒಳ್ಳೆಯವರಾಗಿ ಕಳೆಯುವ ಪಾತ್ರವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.

೬.ಹೂವು ಮುಳ್ಳು; ಈ ಚಿತ್ರ ನಿರ್ಮಾಪಕಿ ಎಲ್.ಎ ನಾಯ್ಡುರವರ ಮತ್ತು ನಿರ್ದೇಶಕ ಎ.ವಿ ಶೇಷಗಿರಿರಾವ್ ರವರ ೧೯೬೮ರ ಭಾರತೀಯ ಕನ್ನಡ ಚಿತ್ರ, ಇದರ ಪ್ರಮುಖ ಪಾತ್ರಗಳಾಗಿ ಕಲ್ಪನಾ, ಬಾಲಕೃಷ್ಣ ಮತ್ತು ಡಿಕ್ಕಿ ಮಾದವ್ ರಾವ್ ರವರು ನಟಿಸಿದ್ದಾರೆ, ಈ ಚಿತ್ರವು ಚೆಲ್ಲಪಿಲ್ಲ ಸತ್ಯಂರವರ ಸಂಗೀತವನ್ನು ಹೊಂದಿದೆ.

೭.ಸಂಪತ್ತಿಗೆ ಸವಾಲ್; ಈ ಚಿತ್ರ ಎ.ವಿ ಶೇಷಗಿರಿರಾವ್ ನಿರ್ದೇಶನದ ಮತ್ತು ಎ.ಎನ್ ಮೂರ್ತಿ ನಿರ್ಮಾಣನದ ೧೯೭೪ರ ಭಾರತದ ಕನ್ನಡ ನಾಟಕ ಚಿತ್ರ, ಇದರ ನಕ್ಷತ್ರಗಳಾಗಿ ರಾಜ್ ಕುಮಾರ್, ವಜ್ರಮುನಿ ಮತ್ತು ಮಂಜುಳರವರು ಕಾರ್ಯ ನಿರ್ವಹಿಸಿದ್ದಾರೆ, ಈ ಚಿತ್ರದ ಧ್ವನಿಪಥಗಳು, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಉದಯ್ ಶಂಕರ್ ರವರು ಬರೆದಿದ್ದಾರೆ, ಈ ಚಿತ್ರವು ಮತ್ತು ಚಿತ್ರದ ಹಾಡುಗಳು ಬೃಹತ್ ಯಶಸ್ಸನ್ನು ಗಳಿಸಿದೆ.

ಉಲ್ಲೆಖನಗಳು[ಬದಲಾಯಿಸಿ]

  1. https://chiloka.com/celebrity/a-v-sheshagiri-rao
  2. http://www.saregama.com/artist/a-v-sheshagiri-rao_9635/songs