ಸದಸ್ಯ:Suhaas M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Father of economics Adam smith.

ಪೀಠಿಕೆ[ಬದಲಾಯಿಸಿ]

ಅರ್ಥಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾಗಿರುವ ಆ್ಯಡಂಸ್ಮಿತ್ ಒಬ್ಬ ಸ್ಕಾಟಿಷ್ ನೈತಿಕ ತತ್ವಜ್ಞಾನಿ, ರಾಜಕೀಯ ‌ಅರ್ಥಶಾಸ್ತ್ರದ ಪ್ರವರ್ತಕ ಮತ್ತು ಸ್ಕಾಟ್ಲೆಂಡ್ ಜನರ ಜ್ಞಾನೋದಯಕ್ಕೆ ಕಾರಣವಾದ ಪ್ರಮುಖ ವ್ಯಕ್ತಿ. ಇವರು "ದ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್" ಮತ್ತು "ಆ್ಯನ್ ಇನ್ಕೈರಿ ಇನ್ ಟು ದಿ ನೇಚರ್ ಅಂಡ್ ಕಾಸಸ್ ಆಫ್ ವೆಲ್ತ್ ಆಫ್ ನೇಷನ್ಸ್" ಎಂಬ ಎರಡು ಅತ್ಯುತ್ತಮ ಕೃತಿಗಳಿಗೆ ಪ್ರಸಿದ್ಧರಾಗಿದ್ದಾರೆ. ಎರಡನೆಯ ಕೃತಿ,ಇವರ ಮೇರುಕೃತಿ ಮತ್ತು ಅರ್ಥಶಾಸ್ತ್ರದ ಮೊದಲ ಆಧುನಿಕ ಕೃತಿ,"ವೆಲ್ತ್ ಆಫ್ ನೇಷನ್ಸ್" ಎಂದು ಪರಿಗಣಿಸಲಾಗಿದೆ.

ಆರಂಭಿಕ ಜೀವನ[ಬದಲಾಯಿಸಿ]

ಸ್ಮಿತ್ ಸ್ಕಾಟ್ಲೆಂಡಿನ ಫೀಫ್ ಕೌಂಟಿಯ ಕಿರ್ಕ್ಕಾಲ್ಡಿಯಲ್ಲಿ ೧೬ ಜೂನ್ ೧೭೨೩ಯಲ್ಲಿ ಜನಿಸಿದರು. ಅವರ ತಂದೆ ಕೂಡ ಆ್ಯಡಂಸ್ಮಿತ್, ಹಿರಿಯ ಸಾಲಿಸಿಟರ್, ವಕೀಲ, ಅಭಿಯೋಜಕ(ನ್ಯಾಯಾಧೀಶ ವಕೀಲ) ಹಾಗೂ ಕಿರ್ಕ್ಕಾಲ್ಡಿಯಲ್ಲಿ ಕಸ್ಟಮ್ಸ್ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದರು. ೧೭೨೦ರಲ್ಲಿ ರಾಬರ್ಟ್‌ ಡೌಗ್ಲಾಸರ ಮಗಳಾದ ಮಾರ್ಗರೆಟಳನ್ನು ಮದುವೆಯಾದರು. ಮಗ ಜನಿಸಿದ‌ ಎರಡು ತಿಂಗಳ ನಂತರ ‌ತಂದೆ ಸಾವನ್ನಪ್ಪಿದರು. ಸ್ಕಾಟ್ಲೆಂಡ್ ‌ಚರ್ಚಿನಲ್ಲಿ ೫ ಜೂನ್ ೧೭೨೩ ರನ್ನು ಸ್ಮಿತರ ದೀಕ್ಷೆಯ ದಿನವೆಂದು ಹೇಳಿದ್ದಾರೆ.ಕೆಲವರು ಈ ದಿನವೇ ಸ್ಮಿತ್ ಜನಿಸಿದ ದಿನ ಎನ್ನುತ್ತಾರೆ. ಆದರೆ ಇದರ ‌ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆತನ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳನ್ನು ಸ್ಕಾಟಿಷ್ ಪತ್ರಕರ್ತ ಮತ್ತು ಸ್ಮಿತನಆತ್ಮಚರಿತಕಾರ ಜಾನ್‌ರೇ ದಾಖಲಿಸಿದ್ದಾರೆ. ಸ್ಮಿತ್ ತಾಯಿಯ ಪ್ರೀತಿಯ ಮಗನಾಗಿದ್ದು, ತಾಯಿಯು ತನ್ನ ಮಗನ ಪಾಂಡಿತ್ಯಪೂರ್ಣ ‌ಗುರಿಗಳನ್ನು ಪೂರ್ಣಗೊಳಿಸಲು ಉತ್ತೇಜಿಸಿದರು.ಸ್ಮಿತ್ ಬರ್ಗ್ ಸ್ಕೂಲ್ ಆಫ್ ಕಿರ್ಕ್ಕಾಲ್ಡಿಯಲ್ಲಿ ೧೭೨೯ ರಿಂದ ೧೭೩೭ ರವರೆಗೆ ಲ್ಯಾಟಿನ್,ಗಣಿತ,ಇತಿಹಾಸ ಮತ್ತು ಬರವಣಿಗೆಯನ್ನು ಕಲಿತನು.

ವೃತ್ತಿ ಜೀವನ[ಬದಲಾಯಿಸಿ]

ಸ್ಮಿತ್‌‌ ಅವರು ಸಾಮಾಜಿಕ ಅರ್ಥಶಾಸ್ತ್ರವನ್ನು ಗ್ಲ್ಯಾಸ್ಗೋ‌‌ ವಿಶ್ವವಿದ್ಯಾಲಯ, ಬಾಲಿಯೋಲ್ ಕಾಲೇಜ್ ಮತ್ತು ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಸ್ಕಾಟ್ ಮತ್ತು ಜಾನ್ ಸ್ನೆಲ್‌ ಆರಂಭಿಸಿದ ವಿದ್ಯಾರ್ಥಿವೇತನದ ಉಪಯೋಗ ಪಡೆದವರಲ್ಲಿ ‌ಇವರು ಮೊದಲಿಗರಾಗಿದ್ದರು.[ಪದವೀಧರ]]ರಾದ ನಂತರ ಇವರು ಡೇವಿಡ್ ಹ್ಯೂಮ್ ‌ಅವರ ಸಹಯೋಗದಲ್ಲಿ ಅನೇಕ ಸಾರ್ವಜನಿಕ ‌ಉಪನ್ಯಾಸಗಳನ್ನು ನಡೆಸಿ‌ ಸ್ಕಾಟಿಷ್ ಜ್ಞಾನೋದಯಕ್ಕೆ ಕಾರಣರಾದರು. ನಂತರ ಸ್ಮಿತ್‌ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಲ್ಲಿ ನೈತಿಕ ಅರ್ಥಶಾಸ್ತ್ರದ ಉಪನ್ಯಾಸಕರಾದರು.ನಂತರದ ಜೀವನದಲ್ಲಿ ಈತ ಯುರೋಪಿನಲ್ಲಿ ಪ್ರಯಾಣಿಸಿ‌ ತನ್ನ ಸಮಕಾಲೀನರಾದ ಇತರ ಧೀಮಂತ ನಾಯಕರನ್ನು ಭೇಟಿಯಾಗುವ ಅವಕಾಶ‌ ಪಡೆದನು.೧೭೬೬ ರಲ್ಲಿ ಹೆನ್ರಿ ಸ್ಕಾಟ್ ರ ಕಿರಿಯ ಸಹೋದರ ಪ್ಯಾರಿಸ್ ನಲ್ಲಿ ನಿಧನರಾದರು. ಅಲ್ಲಿಗೆ ಬೋಧಕನಾಗಿ ಸ್ಮಿತರ ಪ್ರವಾಸ ಮುಗಿಯಿತು.ಸ್ಮಿತ್ ಆ ವರ್ಷ ತನ್ನ ಕಿರ್ಕ್ಕಾಲ್ಡಿಯ ಮನೆಗೆ ಹಿಂದಿರುಗಿದನು ಮತ್ತು ತನ್ನ ಮೇರುಕೃತಿಗೆ ಮುಂದಿನ ಹತ್ತು ವರ್ಷಗಳನ್ನು ಮುಡಿಪಾಗಿಟ್ಟರು.ಅವರು ಅಲ್ಲಿ ಚುರುಕು ಯೋಗ್ಯತಾ ತೋರಿಸಿದ ಯುವಕುರುಡ ಹೆನ್ರಿ ಮೋಯಿಸನ ಗೆಳೆಯರಾದರು.ಮೋಯಿಸನಿಗೆ ಕಲಿಸುವುದಕ್ಕೆ ಸ್ಮಿತರು ಡೇವಿಡ್ ಹ್ಯೂಮ್ ಮತ್ತು ಥಾಮಸ್ ರೀಡರ ಪ್ರೋತ್ಸಾಹ ಪಡೆದುಕೊಂಡರು. ೧೭೭೩ರ ಮೇನಲ್ಲಿ ಸ್ಮಿತ್ ರಾಯಲ್‌ ಸೊಸೈಟಿ ಆಫ್ ಲಂಡನ್ ಗೆ ಆಯ್ಕೆಯಾದರು ಮತ್ತು ಲಿಟರರಿ ಕ್ಲಬ್ ಸದಸ್ಯರಾಗಿ ೧೭೭೫ ರಲ್ಲಿ ಆಯ್ಕೆಯಾದರು. ೧೭೭೬ ರಲ್ಲಿ "ದ ವೆಲ್ತ್ ಆಫ್ ನೇಷನ್ಸ್" ಪ್ರಕಟಗೊಂಡಿತು ಹಾಗು ಮೊದಲ ಆವೃತ್ತಿಯ ಪುಸ್ತಕಗಳು ಕೇವಲ ಆರು ತಿಂಗಳಲ್ಲಿ ಮಾರಾಟವಾಯಿತು. ಈ ಪುಸ್ತಕವು ಅವರಿಗೆ ಅದ್ಭುತ ಯಶಸ್ಸನ್ನು ತಂದುಕೊಟ್ಟಿತು. ೧೭೭೮ರಲ್ಲಿ ಸ್ಮಿತ್ ಸ್ಕಾಟ್ಲೆಂಡಿನ ಕಸ್ಟಮ್ಸ್ ಆಯುಕ್ತ ಹುದ್ದೆಗೆ ಆಯ್ಕೆಯಾದರು ಮತ್ತು ತನ್ನ ತಾಯಿಯ ಜೊತೆ ಜೀವನ ನಡೆಸಲು ಈತ ಎಡಿನ್‌ಬರ್ಗ್‌‌ನ ಕ್ಯಾನನ್ಗೇಟ್ ನಲ್ಲಿರುವ ಪನ್ಮೂರ್ ಮನೆಗೆ ತೆರಳಿದರು. ಐದು ವರ್ಷಗಳ ನಂತರ ಫಿಲಾಸಫಿಕಲ್ ಸೊಸೈಟಿ ಆಫ್ ಎಡಿನ್‌ಬರ್ಗ್‌‌ ಸದಸ್ಯರಾಗಿ, ರಾಯಲ್ ಸೊಸೈಟಿ ಆಫ್ ಎಡಿನ್‌ಬರ್ಗ್‌‌ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಸ್ಥಾನ ಪಡೆದರು. ೧೭೮೭ರಿಂದ ೧೭೮೯ರವರೆಗೆ ಇವರು ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಲಾರ್ಡ್ ರೆಕ್ಟರ್ ಸ್ಥಾನವನ್ನು ಅಲಂಕರಿಸಿದ್ದರು.

ಕೊಡುಗೆ[ಬದಲಾಯಿಸಿ]

ಇವರು ಮುಕ್ತ ಮಾರುಕಟ್ಟೆ ಎಂಬ ಆರ್ಥಿಕ ಸಿದ್ಧಾಂತಕ್ಕೆ ಅಡಿಪಾಯ ಹಾಕಿದರು. ವೆಲ್ತ್ ಆಫ್ ನೇಷನ್ಸ್ ಅರ್ಥಶಾಸ್ತ್ರದ ಆಧುನಿಕ ಶೈಕ್ಷಣಿಕ ಬೋಧನೆಗೆ ದಾರಿಮಾಡಿಕೊಟ್ಟಿತು. ಈತನ ಸಾಮಾನ್ಯವಾದ ವಿಧಾನ ಮತ್ತು ಬರವಣಿಗೆಯ ಶೈಲಿಯನ್ನು ಟೋರಿ ಬರಹಗಾರರಾದ ವಿಲಿಯಂ ಹೊಗಾರ್ಥ್ ಮತ್ತು ಜೊನಾಥನ್ ಸ್ವಿಫ್ಟ್ ವಿಡಂಬನೆ ಮಾಡಿದರು. ೨೦೦೫ ರಲ್ಲಿ "ದ ವೆಲ್ತ್ ಆಫ್ ನೇಷನ್ಸ್" ಸಾರ್ವಕಾಲಿಕ ೧೦೦ ಅತ್ಯುತ್ತಮ ಸ್ಕಾಟಿಷ್ ಪುಸ್ತಕಗಳ ನಡುವೆ ಹೆಸರಿಸಲಾಯಿತು.ಒಂದು ನೋವಿನ ಕಾಯಿಲೆಯಿಂದ ಬಳಲಿದ ನಂತರ ೧೭ ಜುಲೈ ೧೭೯೦ ರಲ್ಲಿ ಎಡಿನ್‌ಬರ್ಗ್‌ನ ಪನ್ಮೂರ್ ಮನೆಯ ಉತ್ತರ ವಿಭಾಗದಲ್ಲಿ ನಿಧನರಾದರು. ಕ್ಯಾನನ್ ಗೇಟಿನ ಕಿಕ್ ಯಾರ್ಡಿನಲ್ಲಿ ಇವರನ್ನು ಸಮಾಧಿ ಮಾಡಲಾಯಿತು. ಸಾವಿನ ಹಾಸಿಗೆಯಲ್ಲಿ ಸ್ಮಿತ್ ಅವರು ಹೆಚ್ಚಿನ ಸಾಧನೆಯನ್ನು ಮಾಡಲಿಲ್ಲವೆಂದು ನಿರಾಸೆ ವ್ಯಕ್ತಪಡಿಸಿದ್ದರು.ಇನ್ನು ಇವರ ವೈಯಕ್ತಿಕ ದೃಷ್ಟಿಕೋನಗಳ ಬಗ್ಗೆ ಹೇಳುವುದಾದರೆ ಇವರು ಪ್ರಕಟಿಸಿದ ಲೇಖನಗಳು ಇವರ ಬಗ್ಗೆ ಹೆಚ್ಚು ಮಾಹಿತಿ ನೀಡುವುದಿಲ್ಲ. ಅವರ ವೈಯಕ್ತಿಕ ಪತ್ರಗಳನ್ನು ಅವರ ಕೋರಿಕೆಯ ಮೇರೆಗೆ ಅವರ ಮರಣದ ನಂತರ ನಾಶಪಡಿಸಲಾಯಿತು.ಇವರು ಮದುವೆಯಾಗದೆ, ಬ್ರಹ್ಮಚಾರಿಯಾಗಿದ್ದರು.ಫ್ರಾನ್ಸ್ ನಿಂದ ಹಿಂದಿರುಗಿದ ನಂತರ ತನ್ನ ತಾಯಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.ಅವರ ತಾಯಿಯು ಇವರ ಮರಣಕ್ಕೆ ಆರು ವರ್ಷಗಳ ಮುಂಚೆ ಸಾವನ್ನಪ್ಪಿದರು.ಈತನ ಸಮಕಾಲೀನರು ಮತ್ತು ಜೀವನಚರಿತ್ರೆಕಾರರು ಸ್ಮಿತರ ಮಾತು,ನಡಿಗೆ ಮತ್ತು ಅವಚನೀಯ ದಯಾಳುತನವನ್ನು ಹಾಸ್ಯಾಸ್ಪದವಾಗಿಯೂ ಅನ್ಯಮನಸ್ಕನೆಂದು ಈತನನ್ನು ವಿಶ್ಲೇಷಣೆ ಮಾಡಿದ್ದಾರೆ. ಈತ ಒಬ್ಬನೇ ತನ್ನ ಮನಸ್ಸಿನೊಂದಿಗೆ ಮಾತನಾಡಿಕೊಳ್ಳುತ್ತಿದ್ದನು.ಅವನ ಕಾಣದ ಸಹಚರರ ಜೊತೆಯ ಮಗ್ನ ಸಂಭಾಷಣೆಯಲ್ಲಿನ ಕಿರುನಗೆಯನ್ನು ಅವರು ಬಾಲ್ಯದಿಂದಲೇ ಬೆಳೆಸಿಕೊಂಡಿದ್ದ ಅಭ್ಯಾಸವಾಗಿತ್ತು.ಇವರು ಕಾಲ್ಪನಿಕ ಅನಾರೋಗ್ಯದ ಸಾಂದರ್ಭಿಕ ಸ್ಪೆಲ್ ಗಳನ್ನು ಹೊಂದಿದ್ದರು ಮತ್ತು ಅಧ್ಯಯನದ ಎತ್ತರದ ಪುಸ್ತಕಗಳ ರಾಶಿಯನ್ನು ಇರಿಸಿದ್ದರೆಂದು ವರದಿಯಾಗಿದೆ.

Reference[ಬದಲಾಯಿಸಿ]

<http://www.econlib.org/library/Enc/bios/Smith.html/> <https://en.m.wikipedia.org/wiki/Adam_Smith/>