ವಿಷಯಕ್ಕೆ ಹೋಗು

ಸದಸ್ಯ:Shubhada Sudarshan/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಇತಿಹಾಸ

[ಬದಲಾಯಿಸಿ]

ನಟನೆ ಎಂಬುದು ಒಂದು ಕಲೆ. ಅದನ್ನು ಕೆಲವು ಶಾಲೆ ಕಾಲೇಜುಗಳಲ್ಲಿ ಹೇಳಿಕೊಡುತ್ತಾರೆ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಇದನ್ನು ಓದುತ್ತಿದ್ದೇನೆ. ನಟನೆ ಎಂಬ ಕಲೆ ಗ್ರೀಕ್ ಭಾಷೆಯಲ್ಲಿ ಪ್ರಾರಂಭವಾಯಿತು. ಸುಮಾರು ೪೦೦೦ ವರ್ಷಕ್ಕೂ ಮುನ್ನ ಪ್ರಾರಂಭವಾಯಿತು. ಅವರು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. [೧]ಸೂಸ್, ಪೊಸೈಡಾನ್ , ಹೇಡೀಸ್ ಇಂಥ ಪಾತ್ರಗಳನ್ನು ಕುರಿತು ನಾಟಕ ಮಾಡುತ್ತಿದ್ದರು. ಖಾಲಿ ಮೈದಾನಗಲ್ಲಿ ಸಾವಿರಾರು ಜನರ ಮುಂದೆ ೬ ರಿಂದ ೧೦ ತಾಸುಗಳುದ್ದ ನಾಟಕಗಳಾಗಿದ್ದವು ಇವು. ಸುಡು ಬಿಸಿಲಿನಲ್ಲಿ ಪ್ರದರ್ಶಿಸುತ್ತಿದ್ದರು.

ಪರಿಚಯ

[ಬದಲಾಯಿಸಿ]

ನಾಟಕಗಳನ್ನು ಸುಮಾರು ಕಾರಣಕ್ಕೆ ಜನರು ಉಳಿಸಲು ನೋಡುತ್ತಿದ್ದರೆ. ಕಥೆಗಳನ್ನು ಜನರೊಡನೆ ಸಂವಹನೆ ಮಾಡಲು ಒಂದು ದಾರಿ ನಟನೆ. ನಟನೆಯನ್ನು ರಂಗ ಸಂಗೀತೆ ಹಾಗೂ ರಂಗ ನಾಟ್ಯದ ಜೊತೆಗೆ ಮಾಡಬಹುದು. ಕೆಲವರಿಗೆ ನಟನೆಯು ಮನೋರಂಜನೆ ಆಗಿರಬಹದು. ಇನ್ನು ಕೆಲವರಿಗೆ ಅದು ಹೊಟ್ಟೆ ಪಾಡು. ನಾಟಕಗಳ ಪ್ರಸಿದ್ಧತೆ ಕಡಿಮೆಯಾಗಲು ಸಿನಮಾಗಳೊಂದೇ ಕಾರಣವಲ್ಲ. ಜನರ ಜೀವನ ಓಟದಂತೆ ಆಗಿದೆ. ಈ ಕಲೆಗೆ ಸಮಯ ಮತ್ತು ಪೈಸೆ ಕೊಡುವುದರ ಅರ್ಥ ಸುಮಾರು ಜನರು ಕಾಣುವುದಿಲ್ಲ. ನಟನೆಯು ನಮಗೆಲ್ಲರಿಗೂ ಸ್ವಾಭಾವಿಕವಾಗಿ ಬರುವ ಒಂದು ಗುಣ . ಆದರೆ ಕೆಲವೇ ಜನರು ಅದನ್ನು ಬೆಳೆಸಿ ಕಲೆಯಾಗಿಸುತ್ತಾರೆ .

ಕನ್ನಡ ಮತ್ತು ನಟನೆ

[ಬದಲಾಯಿಸಿ]

ಕರ್ನಾಟಕದ ಯಕ್ಷಗಾನವು ನಾಟಕದ ಒಂದು ರೂಪ. ಯಕ್ಷಗಾನದಲ್ಲಿ ನಾಟ್ಯದ ಉಪಯೋಗವಿದ್ದರೂ ಕೂಡ ಅಭಿನಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅಂದರೆ ಬರೀ ಮುಖದಲ್ಲಿ ಅಲ್ಲ , ವಾಚಿಕ ಅಭಿನಯಕ್ಕೂ ಪ್ರಾಮುಖ್ಯತೆ ಇದೆ. ಭಾಗವತ ಹಾಡುತ್ತಾನೆ ಮತ್ತೂ ಚೆಂಡೆಯನ್ನು ಬಳಸುತ್ತಾರೆ. ಯಕ್ಷಗಾನದ ಮೂಲ ಪೌರಾಣಿಕ ಕಥೆಗಳನ್ನು ಹೇಳುವುದಾದರೂ ಅದನ್ನು ಆಧುನಿಕ ವ್ಯಕ್ತಿಗಳಿಗೆ ಅರ್ಥವಾಗಿಸುವಂತೆ ಮತ್ತು ಸಂಬಂಧಿಸುವಂತೆ ತೋರಿಸಬಹುದು. ಇದು ಯಕ್ಷಗಾನದ ವಿಶೇಷತೆ. ಒಂದು ಚೌಕಟ್ಟಿನ ಒಳಗೆ ಎಷ್ಟು ಬೇಕಾದರೂ ಪ್ರಯೋಗ ಮಾಡುವ ಸ್ವಾತಂತ್ರ್ಯವಿದೆ. ಕನ್ನಡ ಸಿನಿಮಾ ಮಾತ್ರವಲ್ಲ ಸುಮಾರು ಕಡೆ ನಟನೆಯನ್ನು ಉಪಯೋಗಿಸುತ್ತಾರೆ. ನಟನೆಯನ್ನು ಉಳಿಸಲು ನೀಲಕಂಠೇಶ್ವರ ನಾಟ್ಯಸೇವಾ ಸಂಘ ಎಂಬ ಒಂದು ಗುರುಕುಲವನ್ನು ಸರ್ಕಾರವು ೧೯೪೯ರಲ್ಲಿ ತೆರೆಯಿತು . [೨]ಕೆ.ವಿ ಸುಬ್ಬಣ್ಣ ಅವರ ಮಾರ್ಗದರ್ಶನದಿಂದ ಯಕ್ಷಗಾನದಿಂದ ಹಿಡಿದು ಆಧುನಿಕ ವೆಸ್ಟೆರ್ನ್ ನಟನೆಯ ಶೈಲಿಯನ್ನು ಕಲಿಸುವ ಒಂದು ಸ್ಥಾಪನೆ ಶುರುವಾಯಿತು. ೨೦೧೮ ರಲ್ಲಿ ಕರ್ನಾಟಕ ಸರ್ಕಾರವು ರಾಮಾಯಣ ದರ್ಶನಂ ಎಂಬ ನಾಟಕಕ್ಕೆ ಅನುವೊದನೆಯನ್ನು ನೀಡಿತು. ಪೋಷಕರಿಲ್ಲದೆ ನಟನೆ ಎಂಬ ಕಲೆ ಉಳಿಯುವುದು ಅಸಾಧ್ಯ .

ಭಾಗವತ


ಪಾಸ್ಚಾತ್ಯದ ನಟನೆಯ ಪ್ರಭಾವ

[ಬದಲಾಯಿಸಿ]

ವೆಸ್ಟೆರ್ನ್ ನಟನೆಶೈಲಿಯಲ್ಲಿ ಅತ್ಯಂತ ಪ್ರಸಿಡದ್ಧವಾದದ್ದು [೩]ಮೆಥಡ್ ಆಕ್ಟಿಂಗ್. ಪಾತ್ರಗಳನ್ನು ತನ್ನೊಳಗೆ ಆಹ್ವಾನಿಸಿ ನಟಿಸುವುದಕ್ಕೆ ಮೆಥಡ್ ಶೈಲಿ ಎನ್ನುತ್ತಾರೆ . ಇದರ ಪ್ರವರ್ತಕ ಒಬ್ಬ ರಶಿಯನ್ ನಟ , ಸ್ಟ್ಯಾನಿಸ್ ಲಾವಿಸ್ಕಿ . ಇವರು ನಾಟಕಕ್ಕೆ ಒಂದು ಹೊಸ ತಳಪಾಯವನ್ನು ನೀಡಿದ್ದಾರೆ. ನಮ್ಮ ದೇಶದ ಇತಿಹಾಸದಲ್ಲಿ ಕಂಡ ನಾಟಕಗಳಿಗೂ ಈ ಶೈಲಿಯ ನಾಟಕಗಳಿಗೂ ಬಹಳ ವ್ಯತ್ಯಾಸವಿದೆ. ನಮ್ಮ [೪]ಲೋಕಧರ್ಮಿ ಶೈಲೀಕೃತವಾಗಿರುತ್ತದೆ. ಭರತ ಮುನಿಯ ನಾಟ್ಯಶಾಸ್ತ್ರದ ಕೊಡುಗೆ ಇದು. ಆದರೆ ಮೆಥಡ್ ಅಕ್ಟಿನ್ಗ್ನಲ್ಲಿ ವಾಸ್ತವಿಕವಾಗಿ ನಾಟಕವನ್ನು ರೂಪಿಸುತ್ತಾರೆ.

ಮುಕ್ತಾಯ

[ಬದಲಾಯಿಸಿ]

ನಾಟಕಗಳನ್ನು ಸುಮಾರು ಕಾರಣಕ್ಕೆ ಜನರು ಉಳಿಸಲು ನೋಡುತ್ತಿದ್ದಾರೆ. ಕಥೆಗಳನ್ನು ಜನರೊಡನೆ ಸಂವಹನೆ ಮಾಡಲು ಒಂದು ದಾರಿ ನಟನೆ. ನಟನೆಯನ್ನು ರಂಗ ಸಂಗೀತೆ ಹಾಗೂ ರಂಗ ನಾಟ್ಯದ ಜೊತೆಗೆ ಮಾಡಬಹುದು. ಕೆಲವರಿಗೆ ನಟನೆಯು ಮನೋರಂಜನೆ ಆಗಿರಬಹದು. ಇನ್ನು ಕೆಲವರಿಗೆ ಅದು ಹೊಟ್ಟೆ ಪಾಡು. ನಾಟಕಗಳ ಪ್ರಸಿದ್ಧತೆ ಕಡಿಮೆಯಾಗಲು ಸಿನಿಮಾಗಳೊಂದೇ ಕಾರಣವಲ್ಲ. ಜನರ ಜೀವನ ಓಟದಂತೆ ಆಗಿದೆ. ಈ ಕಲೆಗೆ ಸಮಯ ಮತ್ತು ಪೈಸೆ ಕೊಡುವುದರ ಅರ್ಥ ಸುಮಾರು ಜನರು ಕಾಣುವುದಿಲ್ಲ. ನಟನೆಯು ನಮಗೆಲ್ಲರಿಗೂ ಸ್ವಾಭಾವಿಕವಾಗಿ ಬರುವ ಒಂದು ಗುಣ . ಆದರೆ ಕೆಲವೇ ಜನರು ಅದನ್ನು ಬೆಳೆಸಿ ಕಲೆಯಾಗಿಸುತ್ತಾರೆ .