ಸದಸ್ಯ:Sharon.serrao/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನಸಂಖ್ಯೆ[ಬದಲಾಯಿಸಿ]

a temple at puttur

ಪುತ್ತೂರು , ಕರ್ನಾಟಕ ರಾಜ್ಯದ , ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕಿನಲ್ಲಿ ಒಂದು. ಪುತ್ತೂರು ಈ ತಾಲ್ಲೂಕಿನ ಪ್ರದಾನ ಕಚೇರಿ. ೨೦೧೧ನೇ ಜನ ಗಣತಿ ಪ್ರಕಾರ ಪುತ್ತೂರು ತಾಲ್ಲೂಕಿನ ಜನಸಂಖ್ಯೆ ೪೮೦೦೬೩. ಇದರಲ್ಲಿ ೫೦% ಪುರುಷರು ಮತ್ತು ೫೦% ಮಹಿಳೆಯರು. ಈ ಸಮೀಕ್ಷೆಯ ಪ್ರಕಾರ ೬೫% ಹಿಂದೂಗಳು , ೨೨% ಮುಸ್ಲಿಮರು , ೬% ಕ್ರಿಶ್ಚಿಯನರು ಮತ್ತು ೭% ಬೇರೆ ಧರ್ಮಕ್ಕೆ ಒಳಪಟ್ಟವರು ಈ ತಾಲ್ಲೂಕಿನಲ್ಲಿ ವಾಸಿಸುತ್ತಿದ್ದಾರೆ. ಈ ತಾಲ್ಲೂಕಿನ ಸಾಕ್ಷರತೆ ೭೯% ಇದ್ದು , ಇದು ದೇಶದ ಸಾಕ್ಷರತೆ ೫೯.೫% ಗಿಂತ ತುಂಬಾ ಮೇಲೇರುತ್ತದೆ. ಇದರಲ್ಲಿ ೮೩ % ಪುರುಷರು ಹಾಗು ೭೫% ಮಹಿಳೆಯರು ಸಾಕ್ಷರತೆಯನ್ನು ಹೊಂದಿರುತ್ತಾರೆ . ೧೧% ಜನಸಂಖ್ಯೆ ಯು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ.

ಪುತ್ತೂರು ಒಂದು ವಿಧಾನ ಸಭೆಯ ಕ್ಷೇತ್ರವಾಗಿರುತ್ತದೆ ,ಹಾಗು ಇಲ್ಲಿನ ಜನಸಂಖ್ಯೆಯ ೧೯೭೯೮೯ ಜನರು ಮತದಾನ ಮಾಡಲು ಅರ್ಹರಾಗಿರುತ್ತಾರೆ. ಇದರಲ್ಲಿ ಸಾಮಾನ್ಯ ನಾಗರಿಕರು, ಸೆರ್ವಿಸಿನಲ್ಲಿ ಇರುವವರು ಹಾಗು ಹೊರದೇಶದಲ್ಲಿ ನೆಲೆಸಿರುವವರು ಆಗಿದ್ದಾರೆ. ಸಾಮಾನ್ಯ ನಾಗರಿಕರಲ್ಲಿ ೯೮೯೨೮ಪುರುಷರು ಹಾಗು ೯೮೯೨೪ ಮಹಿಳೆಯರು ಇದ್ದಾರೆ.

ಆದುದರಿಂದ ಮತದಾರರಲ್ಲಿ ೧೦೦%  ಲಿಂಗ ಸಮಬೇಧವಿರುತ್ತದೆ ಹಾಗು ಇದರಲ್ಲಿ ೮೭% ಮತದಾರರು ಸಿಕ್ಷಿತರಾಗಿರುತ್ತಾರೆ.

ಚುನಾವಣೆಗಳು[ಬದಲಾಯಿಸಿ]

ಮೇ ೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಜೀವ ಮಾತಂದೂರ್ ೧೯೪೭೭ಮತಗಳಿಂದ ಬಿಜೆಪಿ ಪಕ್ಷದಿಂದ ಗೆದ್ದು ಬಂದಿರುತ್ತಾರೆ. ಹಿಂದಿನ ೫ ವರ್ಷಗಳ ಕಾಲ ೨೦೦೪-೨೦೦೮ ಕ್ಷೇತ್ರವನ್ನು ಪ್ರತಿನಿಧಿಸಿದ ಶ್ರೀಮತಿ ಶಾಕುಂತಲ ಶೆಟ್ಟಿ ಯವರು ಎರಡನೇ ಸ್ತಾನ ಪಡೆದರು.

ಬಿಜೆಪಿಯಾ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ಬಿ ಎಸ್ ಯೆಡ್ಯೂರಪ್ಪ ನವರು ಸಂಜೀವ ರವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ ಸೆಕ್ರೆಟರಿ ಯಾಗಿ ನೇಮಕ ಮಾಡಿದ್ದಾರೆ. ಇವರು ಭಾರತ ದೇಶದ ಕಾನೂನು ಮಂತ್ರಿಗಳಾದ ಡಿ ವಿ ಸದಾನಂದ ಗೌಡ ರವರ ಸಂಬಂದಿಕರು ಹಾಗು ೧೯೮೮ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.

ಉಪ್ಪಿನಂಗಡಿ ಮಂಡಲ ಪಂಚಾಯತ್ ಸದಸ್ಯರು ಆಗಿ ಬಿಜೆಪಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಉದ್ದೇಗಳನ್ನು ಅಲಂಕರಿಸಿರುತ್ತಾರೆ .

೫೨ ವರ್ಷದ ಸಂಜೀವ ರವರು ಕೃಷಿಕ ಕುಟುಂಬದಲ್ಲಿ ಹುಟ್ಟಿ, ತಾವು ಕೂಡ ಒಬ್ಬ ಕ್ರಷಿಕರಾಗಿರುತ್ತಾರೆ. ಅವರು, ಪುತ್ತೂರು ತಾಲ್ಲೂಕಿನ ಬಿಜೆಪಿ ಯಾ ಜನರಲ್ ಸೆಕ್ರೆಟರಿ ಕೂಡ ಆಗಿದ್ದರು, ಹಾಗು ಹಲವು ಸಹಕಾರಿ ಸಂಘ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸದಸ್ಯರು ಆಗಿದ್ದರು

ದಕ್ಷಿಣ ಕನ್ನಡ ಜೆಲ್ಲೆಯು ಕಳೆದ ಚುನಾವಣೆಯಲ್ಲಿ ೭೭.೬೩% ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಇದೆ ಸಮಯದಲ್ಲಿ ೮೩% ರಷ್ಟು ಮತದಾನವಾಗಿದೆ .