ಸದಸ್ಯ:Sharanappa.m/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಲೆ ಫೌಂಡೇಶನ್ ಟ್ರಸ್ಟ್

ನೆಲೆ ಫೌಂಡೇಶನ್ ಟ್ರಸ್ಟ್ [ಅನಾಥ ಆಶ್ರಮ].

== ಸ್ಥಾಪನೆ== ಈ ಅನಾಥ ಆಶ್ರಮವನ್ನು ೨೦೦೦ ನೇಯ ಇಸವಿಯಲ್ಲಿ ಸ್ಥಾಪಿಸಲಾಯಿತು. ಈ ಅನಾಥ ಆಶ್ರಮವನ್ನು ಕೇವಲ ೫ ಮಕ್ಕಳಿಂದ ಶಿವಾಜಿನಗರ ದಲ್ಲಿ ಪ್ರಾರಂಭಿಸಲಾಯಿತು. ಕೇವಲ ಒಂದು ಚಿಕ್ಕ ಮನೆಯಲ್ಲಿ ಪ್ರಾರಂಭಿಸಿದರು. ಇಂದು ಈ ಅನಾಥ ಆಶ್ರಮ ಒಟ್ಟು ೨೬೫ ಮಕ್ಕಳನ್ನು ಒಂದಿದ್ದು ಬೆಂಗಳೂರಿನಲ್ಲಿ ೬ ಕೇಂದ್ರಗಳು ಸ್ಥಾಪನೆಗೊಂಡಿವೆ ಬೆಂಗಳೂರಿನಲ್ಲಿ ನಾಗವಾರ,ಜಿಗಣಿ,ತುಮಕೂರು,ಶಿವಮೊಗ್ಗದಲ್ಲಿ ಸ್ಥಾತಿಸಲಾಯಿತು.

                                                                                                                                                                ==ಸಂಸ್ಕಾರ==                                                                                                                                                                                                                                                   ಅನಾಥ ಆಶ್ರಮವೆಂದರೆ ನಮಗೆ ಸಾಮಾನ್ಯವಾಗಿ ನೆನಪಾಗುವುದು ತಂದೆತಾಯಿ ಇಲ್ಲದ ಮಕ್ಕಳು ವಾಸಿಸುವ ಸ್ಥಳವಾಗಿದೆ. ಅಷ್ಟೆ ಅಲ್ಲದೆ ಯಾವುದೇ ಬಂಧು ಬಳಗದವರನ್ನು ಹೊಂದಿಲ್ಲದ ಮಕ್ಕಳು ಸಹ ಅನಾಥರೆನಿಸಿಕೊಳ್ಳುತ್ತಾರೆ. ಆದರೆ ನಮ್ಮ ಹಿರಿಯರ ಕಾಲದಲ್ಲಿ ಹೆಚ್ಚಾಗಿ ವೃದ್ಧಾಶ್ರಮಗಳಿದ್ದವು. ಆದರೆ ಈಗಿನ ಕಾಲದಲ್ಲಿ ಹೆಚ್ಚಾಗಿ ಅನಾಥ ಆಶ್ರಮಗಳು ಹಾಗೂ ವೃದ್ಧಾಶ್ರಮಗಳು ಬೆಳೆದುಕೊಂಡಿವೆ. ಅನಾಥ ಆಶ್ರಮದಲ್ಲಿ ತಂದೆತಾಯಿ ಇಲ್ಲದ ಮಕ್ಕಳನ್ನು ಆಶ್ರಮಕ್ಕೆ ಸೇರಿಸುತ್ತಾರೆ. ಆದರೆ ವೃದ್ಧಾಶ್ರಮದಲ್ಲಿ ತಂದೆತಾಯಿಗೆ ಸ್ವಂತ ಮಕ್ಕಳಿದ್ದರೂ ಸಹ ತಂದೆತಾಯಿಯನ್ನು ಆಶ್ರಮಕ್ಕೆ ಸೇರಿಸುತ್ತಾರೆ. ಈಗಿನ ಕಾಲದಲ್ಲಿ ಅನಾಥ ಆಶ್ರಮಗಳು ಹೆಚ್ಚಾಗಿರುವುದರಿಂದ ಅನಾಥ ಮಕ್ಕಳು ಸಹ ಹೆಚ್ಚಾಗಿದ್ದಾರೆ. ಅನಾಥ ಆಶ್ರಮಗಳಿಂದ ಅನೇಕ ಮಕ್ಕಳಿಗೆ ಇಂದು ತುಂಬಾ ಸಹಾಯವಾಗುತ್ತಿದೆ. ನಿಮಗೆ ಗೊತ್ತಾ? ಈ ವಿಷಯವನ್ನು ನಾನು ಏಕೆ ತಗೊಂಡಿದ್ದೇನೆಂದರೆ ನಾನು ಸಹ ಅನಾಥ ಆಶ್ರಮದಲ್ಲಿ ಬೆಳೆದಿದ್ದೇನೆ. ಅನಾಥ ಆಶ್ರಮದಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಸಹ ವಾಸಿಸುತ್ತಾರೆ. ಈ ಅನಾಥರಿಗೆ ತಂದೆತಾಯಿಯ ಪ್ರೀತಿ ಮಮತೆಯ ಬಗ್ಗೆ ಏನು ಗೊತ್ತಿರುವುದಿಲ್ಲ. ಏಕೆಂದರೆ ಅವರು ತಂದೆ ತಾಯಿಯ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಯಾರಾದರೂ ದಾನಿಗಳು ಅನಾಥ ಆಶ್ರಮಕ್ಕೆ  ಬಂದು ಮಕ್ಕಳೊಂದಿಗೆ ಏನಾದರೂ ಕಾರ್ಯಕ್ರಮಗಳನ್ನು ಆಚರಿಸಿಕೊಂಡಾಗ ಆ ಮಕ್ಕಳಿಗೂ ಸಹ ತುಂಬಾ ಆನಂದವಾಗುತ್ತದೆ. ಏಕೆಂದರೆ ಬೇರೆಯವರು ಬಂದು ನಮ್ಮ ಜೊತೆ ಹಬ್ಬವಾಗಲಿ, ಕಾರ್ಯಕ್ರಮವಾಗಲಿ. ಹುಟ್ಟು ಹಬ್ಬವಾಗಲಿ ಆಚರಿಸಿಕೊಂಡಾಗ ತುಂಬಾ ಸಂತೋಷವಾಗುತ್ತದೆ. ಅನಾಥ ಮಕ್ಕಳನ್ನು ಕಂಡು ಎಷ್ಟೋ ಜನರು ಅವರ ಜೊತೆ ಮಾತನಾಡುವುದಕ್ಕೆ ಹಿಂಜರಿಯುತ್ತಾರೆ. ನೀವು ಸಹ ಅದೇ ಆ ಅನಾಥ ಮಕ್ಕಳ ಸ್ಥಾನದಲ್ಲಿ ನೀವೀದ್ದಿದ್ದರೆ ಆಗ ಗೊತ್ತಾಗುತ್ತಿತ್ತು. ಅನಾಥ ಮಕ್ಕಳ ನೋವಿನ ಸ್ಥಿತಿ. ನೀವು ನಿಮ್ಮ ತಂದೆ ತಾಯಿಯನ್ನು ಬಿಟ್ಟು ಸ್ವಲ್ಪ ದಿನಗಳ ಕಾಲ ದೂರವಿಡಿ. ಆಗ ತಿಳಿಯುತ್ತದೆ ತಂದೆ ತಾಯಿಯ ಪ್ರೀತಿಯ ಸ್ಥಾನದ ಮೌಲ್ಯ ಏನೆಂಬುದು.. 
                        
==ಧಾನಿಗಳು==                                                                                                                                                                                                                                               ಅನೇಕ ಜನರು ಅನಾಥ ಆಶ್ರಮಗಳಿಗೆ ಅನ್ನದಾನವನ್ನು ಮಾಡುತ್ತಾರೆ. ಈ ರೀತಿಯ ದಾನವನ್ನು ಮಾಡುವುದರಿಂದ ಅನೇಕ ಅನಾಥ ಮಕ್ಕಳ ಹೊಟ್ಟೆಯನ್ನು ತುಂಬಿಸಬಹುದು. ಅಷ್ಟೇ ಅಲ್ಲದೆ ಆ ಅನಾಥ ಮಕ್ಕಳು ಅವರನ್ನು ನೆನೆಸಿಕೊಳ್ಳುತ್ತಾರೆ. ಇದರಿಂದ ಅನಾಥ ಮಕ್ಕಳಿಗೂ ಹಾಗೂ ಅನ್ನದಾನ ಮಾಡಿದವರಿಗೂ ಸಹ ತುಂಬಾ ಸಂತೋಷವಾಗುತ್ತದೆ. ಅನೇಕ ಜನರು ಅನ್ನದಾನವಷ್ಟೇ ಅಲ್ಲ್ಲ, ಅವರಿಗೆ ಉಡುಪುಗಳ್ನ್ನು, ಅವರ ವಿದ್ಯಾಭ್ಯಾಸಕ್ಕಾಗಿ ಹಣಕಾಸನ್ನು ಹಾಗೂ ಪುಸ್ತಕಗಳನ್ನ್ನು ಸಹ ಕೊಡಿಸುತ್ತಾರೆ. ಈ ರೀತಿ ಸಹಾಯವನ್ನು ಪಡೆದು ಅನಾಥ ಮಕ್ಕಳು ಮುಂದೊಂದು ದಿನ ಚೆನ್ನಾಗಿ ಓದಿ ವಿದ್ಯಾವಂತರಾಗುತ್ತಾರೆ. ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ಸಾಗಿಸುತ್ತಾರೆ.

ಬೆಂಗಳೂರಿನಲ್ಲಿ ಅನೇಕ ಅನಾಥ ಆಶ್ರಮಗಳು ಬೆಳೆದುಕೊಂಡಿವೆ. ಈ ಅನಾಥ ಆಶ್ರಮಗಳು ಪ್ರಾರಂಭವಾದಾಗ ಕೇವಲ ಮೂರು ನಾಲ್ಕು ಮಕ್ಕಳಿಂದ ಸ್ಥಾಪನೆಗೊಂಡಿದ್ದವು. ಆದರೆ ಈಗ ಅನೇಕ ಮಕ್ಕಳನ್ನು ಹೊಂದಿರುವ ಆಶ್ರಯ ತಾಣವಾಗಿದೆ. ನಾನು ಸಹ ಒಂದು ಆಶ್ರಮದಲ್ಲಿ ಚಿಕ್ಕ ವಯಸ್ಸಿನಿಂದ ಬೆಳೆದುಕೊಂಡು ಬಂದಿದ್ದೇನೆ. ನಮ್ಮ ಅನಾಥ ಆಶ್ರಮದಲ್ಲಿ ೨೫ ಮಕ್ಕಳಿದ್ದೆವು. ನಮ್ಮ ಆಶ್ರಮದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ೧೨ನೇ ತರಗತಿಯ ವರೆಗಿನ ಮಕ್ಕಳಿದ್ದಾರೆ. ನಮ್ಮ ಆಶ್ರಮದಲ್ಲಿ ಕೆಲವು ಮಕ್ಕಳಿಗೆ ತಂದೆ ಇದ್ದರೆ ತಾಯಿ ಇರಲಿಲ್ಲ. ಕೆಲವರಿಗೆ ತಾಯಿ ಇದ್ದು ತಂದೆ ಇರಲಿಲ್ಲ, ಇನ್ನೂ ಕೆಲವರಿಗೆ ತಂದೆತಾಯಿ ಇಬ್ಬರೂ ಇರಲಿಲ್ಲ. ಆದರೆ ನನಗೆ ಎಲ್ಲರೂ ಇದ್ದರೂ ಸಹ ನಾನು ಆಶ್ರಮದಲ್ಲಿ ಬೆಳೆದಿದ್ದೇನೆ ಕಾರಣ ನನ್ನ ಮನೆಯಲ್ಲಿ ತುಂಬಾ ಬಡತನವಿತ್ತು. ನನ್ನ ತಂದೆ ತಾಯಿಗೆ ನನಗೆ ಶಾಲೆಗೆ ಸೇರಿಸಲು ಕಷ್ಟವಾದ್ದರಿಂದ ನನ್ನನ್ನು ಆಶ್ರಮಕ್ಕೆ ಸೇರಿಸಿದರು. ಈ ಆಶ್ರಮದಿಂದ ನಾನು ಹೆಚ್ಚು ವಿಷಯಗಳನ್ನು ತಿಳಿದುಕೊಂಡನು. ನಾನು ಆಶ್ರಮಕ್ಕೆ ಸೇರುವಾಗ ನನ್ನ ತಂದೆತಾಯಿಯನ್ನು ಬಿಟ್ಟು ಇರಬೇಕೆಂದು ತುಂಬಾ ದುಖ: ಪಟ್ಟಿದ್ದೆನು. ಆದರೆ ಆಮೇಲೆ ನನಗೆ ಅನ್ನಿಸ್ಸಿತು ನಾನು ತಂದೆತಾಯಿಯನ್ನು ಕೆಲವು ದಿನಗಳವರೆಗೆ ಬಿಟ್ಟಿರುವುದಕ್ಕೆ ತುಂಬಾ ದುಖ: ಪಟ್ಟಿದ್ದೆ ಆದರೆ ಆಶ್ರಮದಲ್ಲಿ ಅನೇಕ ಮಕ್ಕಳಿಗೆ ತಂದೆತಾಯಿಯೇ ಇರಲಿಲ್ಲ. ಅವರು ತಂದೆತಾಯಿಯ ಪ್ರೀತಿಯೆಂದರೆ ಏನೆಂಬುದು ಅವರಿಗೆ ಗೊತ್ತಿರಲಿಲ್ಲ. ನನ್ನ ತ್ಂದೆತಾಯಿ ನನ್ನನ್ನು ನೋಡಲು ಬಂದಾಗ ಆ ಮಕ್ಕಳು ಮನಸ್ಸಿನಲ್ಲೇ ನಮಗೂ ತಂದೆತಾಯಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿಕೊಳ್ಳುತ್ತಿದ್ದರು. ಈ ಮಕ್ಕಳು ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದರು. ಒಬ್ಬೊಬ್ಬರ ಭಾಷೆಯು ಬೇರೆ ಬೇರೆ ಕನ್ನಡವನ್ನು ಮಾತನಾಡುತ್ತಿದ್ದರು.

                              ==ಉದ್ದೇಶ==                                                                                                                                                                                                                                             ಅನೇಕ ಮಕ್ಕಳಿಗೆ ಸಂಸ್ಕಾರವೆಂಬುದು ಇರಲಿಲ್ಲ. ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿದ್ದರು. ಇಂತಹ ಮಕ್ಕಳ ಜೊತೆ ನಾನು ಹೊಂದಿಕೊಳ್ಳಲು ತುಂಬಾ ಸಮಯಾವಕಾಸವನ್ನು ತೆಗೆದುಕೊಂಡೆನು. ಅನಂತರ ಆಶ್ರಮದಲ್ಲಿ ಎಲ್ಲರು ಸಹ ಒಳ್ಳೆಯ ಸಂಸ್ಕಾರವನ್ನು ಕಲಿತರು. ಶಾಲೆಯಲ್ಲಿ ಎಲ್ಲಾ ಮಕ್ಕಳಿಗಿಂತ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಆಶ್ರಮದಲ್ಲಿ ಓದಿದ ಅನೇಕ ಮಕ್ಕಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ನಾನು ಇಂದು ಈ ಆಶ್ರಮದಿಂದ ಒಬ್ಬ ವ್ಯಕ್ತಿಗೆ ಬೇಕಾದಂತಹ ಅನೇಕ ವಿಷಯಗಳನ್ನು ಕಲಿತುಕೊಂಡೆನು. ನನಗೆ ಈ ಆಶ್ರಮದಲ್ಲಿ ಓದುದಕ್ಕೆ ಸಾರ್ಥಕವೆನಿಸಿದೆ. ಇಂಥ ಅನೇಕ ಆಶ್ರಮಗಳು ಈಂದು ಅನೇಕ ಮಕ್ಕಳಿಗೆ ತುಂಬಾ ಉಪಯೋಗವಾಗಿದೆ. ಹಾಗು ಇಂದಿಗೂ ಸಹ ಅನೇಕ ಜನರಿಗೆ ಉಪಯೋಗವಾಗುತ್ತಿದೆ. ನಾನು ಎಲ್ಲರನ್ನು ಕೇಳಿಕೊಳ್ಳುವುದಿಷ್ಟೆ  ನೀವು ಆಗಾಗ ಅನಾಥ ಆಶ್ರಮಗಳಿಗೆ ಹೋಗಿ ಮಕ್ಕಳೊಂದಿಗೆ ಕಷ್ಟ ಸುಖಗಳನ್ನು ಹಂಚಿಕೊಳ್ಳಬೇಕೆಂದು ನನ್ನ ಆಪೇಕ್ಷೆ. ಅನಾಥ ಮಕ್ಕಳನ್ನು ಒಳ್ಳೆಯ ಮನಸ್ಸಿನಿಂದ ನೋಡಿ, ಹಾಗೂ ಒಳ್ಳೆಯ ಮನಸ್ಸಿನಿಂದ ಪ್ರೀತಿಸಿ ಮಾತಾಡಿಸಿ ಅವರಿಗೂ ಸಹ ತುಂಬಾ ಆನಂದವಾಗುತ್ತದೆ. ಅವರ ಮನಸ್ಸಿನಲ್ಲಿರುವ ಅನಾಥರು ಎಂಬ ಕೆಟ್ಟ ಯೋಚನೆಯನ್ನು  ಹೋಗಲಾಡಿಸಿ. ನಿಮಗೆ ಸಮಯವಿದ್ದಾಗ ಅನಾಥ ಆಶ್ರಮಗಳಿಗೆ ಹೋಗಿ ಅವರನ್ನು ಭೇಟಿಯಾಗಿ ನಿಮ್ಮ ಕೈಲಾದಷ್ಟು  ಸಹಾಯವನ್ನು ಮಾಡಿ ಇದರಿಂದ ಆ ಮಕ್ಕಳಿಗೂ ಸಂತೋಷವಾಗುತ್ತದೆ ಹಾಗೂ ನಿಮ್ಮ ಮನಸ್ಸಿಗೂ ಸಹ ತುಂಬಾ ಆನಂದವಾಗುತ್ತದೆ. ಅನಾಥ ಮಕ್ಕಳಿಗೆ ಸಹಾಯವನ್ನು ಮಾಡುವುದರಿಂದ ನಿಮ್ಮ ಮಕ್ಕಳಿಗು ಸಹ ಮುಂದೊಂದು ದಿನ ಒಳ್ಳೆಯದಾಗಬಹುದು. ನನಗೆ ತಿಳಿದಿರುವ ಹಾಗೆ ಬೆಂಗಳೂರಿನಲ್ಲಿ ಅನೇಕ ಅನಾಥ ಆಶ್ರಮಗಳಿವೆ. ನಿಮಗೆ ತುಂಬಾ ಹತ್ತಿರವಿರುವ ಅನಾಥ ಆಶ್ರಮಗಳಿಗೆ ಹೋಗಿ ನಿಮಗೆ ಇನ್ನು ಸಮಯವನ್ನು ಹೆಚ್ಚು ಉಪಯೋಗ ಮಾಡಿಕೊಳ್ಳಬಹುದು. ನಾನು ಸಹ ಇಂದು ಅನಾಥ ಆಶ್ರಮದಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ನಾನು ಅನಾಥ ಆಶ್ರಮಕ್ಕೆ ಯಾವಗಲೂ ಸಹ ಚಿರಋಣಿಯಾಗಿರುತ್ತೇನೆ. ಇಂದು ಅನೇಕ ಮಕ್ಕಳು ಸಹ ಈ ಆಶ್ರಮದಿಂದ ಜೀವನದಲ್ಲಿ ಉತ್ತಮವಾಗಿ ಸಂಸಾರವನ್ನು ಮಾಡುತ್ತಿದ್ದಾರೆ. ನಮಗೆ ಗೊತ್ತಿರುವ ಆಶ್ರಮಕ್ಕೆ ಹೋಗಿ ಭೇಟಿಯನ್ನು ಕೊಡಿ ಎಂಬುದು ನನ್ನ ನಿರೀಕ್ಷೆ.            
==ಹವ್ಯಾಸಗಳು==                                                                                                                                                                                                                                            ಈ ಅನಾಥ ಮಕ್ಕಳಿಗೆ ಮೊದಲಿಗೆ ಬಂದಾಗ ಅವರಿಗೆ ಏನೂ ಸಹ ಗೊತ್ತಿರುವುದಿಲ್ಲ. ಆದರೆ ನೆಲೆಗೆ ಬಂದ ಮೇಲೆ ಈ ಮಕ್ಕಳು ಎಲ್ಲಾ ರೀತಿಯ ಸಂಸ್ಕಾರವನ್ನು ಕಲಿಯುತ್ತಾರೆ.  ವೇಧ ಮಂತ್ರಗಳನ್ನು ಪಟಿಸುತ್ತಾರೆ. ಯೋಗಶಾನವನ್ನು ಮಾಡುತ್ತಾರೆ. ಹಾಗೂ ವಿವಿಧ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಯೋಗವನ್ನು ಹೇಳಿಕೊಡುತ್ತಾರೆ. ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಮಕ್ಕಳು ಇಂದು ಅನೇಕ ಕಲೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಈ ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.

==ಕ್ರೀಡೆಗಳು== ಈ ಅನಾಥ ಆಶ್ರಮದ ಮಕ್ಕಳು ಕಬ್ಬಡ್ಡಿ ಹಾಗೂ ಖೋಖೋ ಆಟವನ್ನು ತುಂಬಾ ಚೆನ್ನಾಗಿ ಆಡುತ್ತಾರೆ. ಈ ಮಕ್ಕಳು ಕಬ್ಬಡ್ಡಿ ಕ್ರೀಡೆಯಲ್ಲಿ ೬ ಬಾರಿ ರಾಜ್ಯಮಟ್ಟದಲ್ಲಿ ಹಾಗೂ ೩ ಬಾರಿ ರಾಷ್ಟ್ರಿಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಇಂದಿಗೂ ಸಹ ಈ ಮಕ್ಕಳು ಕ್ರೀಡೆಗಳನ್ನು ಆಡುತ್ತಿದ್ದಾರೆ. ಇಂದು ಈ ಮಕ್ಕಳು ಅವರು ಓದುವ ಶಾಲೆಗಳಲ್ಲಿ ಹೆಸರುಗಳನ್ನು ಗಳಿಸಿದ್ದಾರೆ.https://donfdn.org/gift-planning/charitable-trusts/