ಸದಸ್ಯ:Sharanappa.m

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರಣಪ್ಪ.ಎಂ
ಶರಣಪ್ಪ.
Nationalityಭಾರತೀಯ
Other namesಶರಣ್
Educationಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
Occupationವಿದ್ಯಾರ್ಥಿ
Spouse-ಮದುವೆಯಾಗಿಲ್ಲ-

ಪರಿಚಯ: ‍‍ ನನ್ನ ಹೆಸರು ಶರಣಪ್ಪ. ಎಂ ನಾನು ಈಗ ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಎರಡನೇ ಬಿಕಾಂ ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇನೆ.

                                                                                                               ==ಜನನ==                                                                                                                                                                                                                                                       ನಾನು ೧೯೯೬ ಆಗಸ್ಟ್ ೧೫ ರಂದು ಕರ್ನಾಟಕ ರಾಜ್ಯದ ಗುಲ್ಭರ್ಗ ಜಿಲ್ಲೆಯಲ್ಲಿರುವ ಕೋಡ್ಲ ಎಂಬ ಹಳ್ಳಿಯಲ್ಲಿ ಜನಿಸಿದ್ದೇನೆ. ಈಗ ನಾನು ಬೆಂಗಳೂರು ಜಿಲ್ಲೆಯ ತಾವರೆಕೆರೆ ನಲ್ಲಿ ವಾಸವಾಗಿದ್ದೇನೆ. ನನ್ನ ತಂದೆಯ ಹೆಸರು ಮಾದಯ್ಯ ಹಾಗೂ ತಾಯಿಯ ಹೆಸರು ನಾಗಮ್ಮ. ನನಗೆ ಇಬ್ಬರು ಅಣ್ಣಂದಿರು ಹಾಗೂ ಒಬ್ಬಳು ತಂಗಿ ಇದ್ದಾಳೆ. ನನ್ನ ಕುಟುಂಬದವರೆಲ್ಲರು ಸಹ ಬೆಂಗಳೂರಿನ ಜಾಲಹಳ್ಳಿಕ್ರಾಸ್ ನಲ್ಲಿ ವಾಸವಾಗಿದ್ದಾರೆ. ನಾನು ಜನಿಸಿದ್ದು ಗುಲ್ಭರ್ಗ ಆದರೆ ಬೆಳೆದದ್ದು ಬೆಂಗಳೂರು.  
                                                                                                                                                                                                                                         ==ಬಾಲ್ಯ==                                                                                                                                                                                                                                                         ನಾನು ನನ್ನ ಬಾಲ್ಯವನ್ನೆಲ್ಲಾ ನನ್ನ ಹುಟ್ಟೂರು ಗುಲ್ಬರ್ಗ ದಲ್ಲಿ  ಕಳೆದಿದ್ದೇನೆ. ನಾನು ಗುಲ್ಭರ್ಗದಲ್ಲಿ ಒಂದು ಹಳ್ಳಿಯಲ್ಲಿ ವಾಸವಾಗಿದ್ದೆ. ನನ್ನ ತಂದೆ ತಾಯಿ ಇಬ್ಬರೂ ಅಶೀಕ್ಷಿತರು. ನನ್ನ ತಂದೆ ತಾಯಿಗೆ ಬೇಸಾಯ ಬಿಟ್ಟರೆ ಬೇರೆ ಕೆಲಸ ಬರುತ್ತಿರಲಿಲ್ಲ. ಅದರಲ್ಲೂ ನಮ್ಮ ಊರಿನಲ್ಲಿ ವಿದ್ಯಾಭ್ಯಾಸ ಅನ್ನೋದು ಬಹಳ ಕಡಿಮೆ. ಊರಿನ ಜನ ನನ್ನ ತಂದೆಗೆ ಹೇಳುತ್ತಿದ್ದರು ನಿಮ್ಮ ಮಕ್ಕಳನ್ನು ಬೇರೆಯವರ ಮನೆಯಲ್ಲಿ ಜೀತಕ್ಕೆ ಇಟ್ಟುಬಿಡಿ ಇದರಿಂದ ನಿಮ್ಮ ಸಾಲವಾದರೂ ತೀರುತ್ತದೆ ಎಂದು ಹೇಳುತ್ತಿದ್ದರು. ನಾನು ನನ್ನ ಅಣ್ಣಂದಿರು ಬಾಲ್ಯದಲ್ಲಿ ಹಸುಗಳನ್ನು ಮೇಹಿಸಲು ಬೆಟ್ಟಗುಡ್ಡ ಕೆರೆ ಕೊಳ ಎಲ್ಲಾಕಡೆ ಹೋಗುತ್ತಿದ್ದೆವು.  ಹಸು ಮೇಹಿಸಲು ಹೋದಾಗ ಮರಕ್ಕೆ ಹತ್ತಿ ಹಣ್ಣುಗಳನ್ನು ತಿನ್ನುತ್ತಿದ್ದೆವು. ಮರಕೋತಿ ಆಟವನ್ನು ಆಡುತ್ತಿದ್ದೆವು. ಕೆರೆನಲ್ಲಿ ಈಜುತಿದ್ದೆವು. ಬೆಟ್ಟಗುಡ್ಡವನ್ನು ಹತ್ತುತ್ತಿದ್ದೆವು. ನಾನು ನನ್ನ ಬಾಲ್ಯವನ್ನು ನೆನೆಸಿಕೊಂಡರೆ ನನಗೆ ರೋಮಾಂಚನವಾಗುತ್ತದೆ. ಅನಂತರ ನನ್ನ ತಾಯಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸಬೇಕೆಂದು ಬೆಂಗಳೂರಿಗೆ ಕರೆದುಕೊಂಡು ಬಂದರು. ಬೆಂಗಳೂರಿಗೆ ಬಂದಾಗ ನಾವು ಚಿಕ್ಕವಯಸ್ಸಿನವರಿದ್ದೆವು. ನನ್ನ ತಂದೆ ತಾಯಿ ಇಬ್ಬರು ಹಾಲೋಬ್ಲಾಕ್ ಸಿಮೆಂಟ್ ಇಟ್ಟಿಗೆಯನ್ನು ಮಾಡುವ ಕೆಲಸವನ್ನು ಮಾಡುತ್ತಿದ್ದರು. ನಾನು ನನ್ನ ಅಣ್ಣಂದಿರು ಅಪ್ಪ ಅಮ್ಮ ಕೆಲಸ ಮಾಡುತ್ತಿರುವಾಗ ಮರಳಿನಲ್ಲಿ ಆಟವನ್ನು ಆಡುತ್ತಿದ್ದೆವು. ಕೆಲವು ದಿನಗಳ ನಂತರ ಶಾಲೆಯ ಶಿಕ್ಷಕರು ಮನೆಗಳಿಗೆ ಬಂದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೂ ಸಹ ನಾವು ಶಾಲೆಯಿಂದ ಮಧ್ಯಾಹ್ನದ ವೇಳೆಗೆ ಮನೆಗೆ ಓಡಿ ಬರುತ್ತಿದ್ದೆವು. ಶಿಕ್ಷಕರು ಮತ್ತೆ ಮತ್ತೆ ಮನೆಗೆ ಬಂದು ನಮ್ಮನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಅನಂತರ ನನಗೆ ಓದಿನಲ್ಲಿ ಆಸಕ್ತಿ ಬಂತು. ಆಮೇಲೆ ನಾನು ಚೆನ್ನಾಗಿ ಓದಲು ಪ್ರಾರಂಭ ಮಾಡಿದೆ. ನಾನು ಚೆನ್ನಾಗಿ ಓದಿದ್ದರಿಂದ ನಾನು ಇಂದು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನಾನು ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿಗಿಂತ ನನ್ನ ಹುಟ್ಟೂರಿನಲ್ಲೇ ತುಂಬಾ ಚೆನ್ನಾಗಿ ಕಳೆದಿದ್ದೇನೆ.                             
                                                                                           

ಶಿಕ್ಷಣ[ಬದಲಾಯಿಸಿ]

ನಾನು ಮೊದಲ ಬಾರಿಗೆ ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಬಸವೇಶ್ವರನಗರ ದಲ್ಲಿ ಸಾಣೆ ಗೊರವನಹಳ್ಳಿ ಎಂಬ ಶಾಲೆಯಲ್ಲಿ ವಿದ್ಯಾಭಾಸವನ್ನು ಪ್ರಾರಂಭ ಮಾಡಿದೆ. ನಾನು ಒಂದನೇ ತರಗತಿಯಲ್ಲಿ ಓದುತ್ತಿರುವಾಗ ಎಲ್ಲಾ ವಿದ್ಯಾರ್ಥಿಗಳಲ್ಲಿ ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ ಆದ್ದರಿಂದ ನನ್ನನ್ನು ಕಂಡರೆ ಶಿಕ್ಷಕರಿಗೆ ತುಂಬಾ ಇಷ್ಟವಾಗಿದ್ದೆ. ಅನಂತರ ಅಲ್ಲಿ ನನ್ನ ತಂದೆ ತಾಯಿಗೆ ಕೆಲಸವಿಲ್ಲದ ಕಾರಣ ಕೆಲಸವನ್ನು ಹುಡುಕಿಕೊಂಡು ಬೇರೆ ಕಡೆ ಹೋಗುವ ಪರಿಸ್ಥಿತಿ ಬಂದಿತು. ನಾವು ಆ ಊರನ್ನು ಬಿಟ್ಟು ಚಿಕ್ಕಬಿದರುಕಲ್ಲು ಎಂಬ ಊರಿಗೆ ಬರಬೇಕಾಯಿತು. ನಾನು ಚಿಕ್ಕಬಿದರುಕಲ್ಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ೨ನೇ ತರಗತಿಗೆ ಸೇರಿಕೊಂಡೆನು. ನಾನು ಚಿಕ್ಕಬಿದರುಕಲ್ಲಿನಲ್ಲಿ ೫ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದೆ. ಅನಂತರ ಮನೆಯಲ್ಲಿ ಬಡತನವಿದ್ದ ಕಾರಣ ನಾನು ಆಶ್ರಮಕ್ಕ್ಕೆ ಸೇರಿಕೊಳ್ಳಬೇಕಾಯಿತು. ನಾನು ಆಶ್ರಮದಲ್ಲಿ ಬಾಪುಜಿನಗರದಲ್ಲಿರುವ ಪಟೇಲ್ ಗುಳ್ಳಪ್ಪ ಎಂಬ ಶಾಲೆಗೆ ೬ನೇ ತರಗತಿಗೆ ಸೆರಿಕೊಂಡೆನು. ಮತ್ತೆ ೭ನೇ ತರಗತಿ ಮುಗಿದ ನಂತರ ರಾಮಮೂರ್ತಿನಗರದಲ್ಲಿರುವ ವಿಕಾಸ ವಿದ್ಯಾಕೇಂದ್ರ ಎಂಬ ಶಾಲೆಗೆ ೮ನೇ ತರಗತಿಗೆ ಸೇರಿಕೊಂಡೆನು. ನಾನು ೧೦ನೇ ತರಗತಿಯಲ್ಲಿ ಚೆನ್ನಾಗಿ ಓದಿ ಶೇ.೭೧ ಅನ್ನು ಪಡೆದುಕೊಂಡೆನು. ಅನಂತರ ನೆಲಮಂಗಲದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ನಲ್ಲಿ ಶೇ.೮೩ ಯನ್ನು ಪಡೆದುಕೊಂಡು ಅನಂತರ ಕ್ರೈಸ್ಟ್ ಯೂನಿವರ್ಸಿಗೆ ಸೇರಿಕೊಂಡೆನು.

==ಹವ್ಯಾಸಗಳು== ನನಗೆ ಇಷ್ತವಾದ ಹವ್ಯಾಸಗಳೆಂದರೆ ಓದುವುದು, ಆಟ ಆಡುವುದು, ಸ್ನೇಹಿತರ ಜೊತೆ ಬೆರೆಯುವುದು ಮುಂತಾದ ಹವ್ಯಾಸಗಳು ನನ್ನಲ್ಲಿವೆ, ನನಗೆ ಒದುವುದೆಂದರೆ ತುಂಬಾ ಇಷ್ಟ ಹಾಗೂ ನನಗೆ ಕವನ ಬರೆಯುವುದೆಂದರೆ ತುಂಬಾ ಇಷ್ಟ. ನಾನು ತುಂಬಾ ಕವನಗಳನ್ನು ಕನ್ನಡದಲ್ಲಿ ಬರೆದಿದ್ದೇನೆ. ನನಗೆ ಇನ್ನೊಂದು ಹವ್ಯಾಸವೆಂದರೆ ಸ್ನೇಹಿತರ ಜೊತೆ ಬೆರೆಯುವುದು. ನನಗೆ ದಿನಾಗಲೂ ಯೋಗ ಮಾಡುವ ಹವ್ಯಾಸವಿದೆ. ಇದನ್ನು ನಾನು ಚಿಕ್ಕ ವಯಸ್ಸಿನಿಂದಲೂ ಹವ್ಯಾಸವಾಗಿ ಬೆಳೆಸಿಕೊಂಡು ಬಂದಿದ್ದೇನೆ. ==ಕ್ರೀಡೆ== ನನಗೆ ಕ್ರೀಡೆ ಎಂದರೆ ತುಂಬಾ ಇಷ್ಟ. ಕಾರಣ ನಾನು ಕ್ರೀಡೆನಲ್ಲಿ ಹೆಚ್ಚಾಗಿ ಭಾಗವಹಿಸುತ್ತೇನೆ. ನಾನು ಚಿಕ್ಕ ವಯಸ್ಸಿನಿಂದಲೂ ಕ್ರೀಡೆನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದೇನೆ. ನಾನು ಖೋಖೋ, ಕಬಡ್ಡಿ ಆಟವನ್ನು ಹೆಚ್ಚಾಗಿ ಆಡುತ್ತೇನೆ. ನಾನು ಕಬಡ್ಡಿ ಕ್ರೀಡೆನಲ್ಲಿ ಎರಡು ಬಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿದ್ದೇನೆ. ನಾನು ಇಂದಿಗೂ ಸಹ ಕಬಡ್ಡಿ ಆತವನ್ನು ಆಡುತ್ತೇನೆ.

                                                                               ==ಪುಸ್ತಕಗಳು==                                                                                                                                                                                                                                                        ನನಗೆ ಪುಸ್ತಕಗಳನ್ನು ಓದುವುದೆಂದರೆ ತುಂಬಾ ಇಷ್ಟ. ನಾನು ಹೆಚ್ಚಾಗಿ ರಾಮಾಯಣ ಹಾಗೂ ಮಹಾಭಾರತ ಪುಸ್ತಕಗಳನ್ನು ಓದಲು ಇಷ್ಟ ಪಡುತ್ತ್ತೇನೆ. ಜೊತೆಗೆ ನಮ್ಮ ದೇಶದ ಮಹಾ ಪುರುಷರ ಕಥೆಗಳನ್ನು ಓದುತ್ತೇನೆ. ಏಕೆಂದರೆ ನಾನು ಓದಿರುವ ಶಾಲೆಗಳಲ್ಲಿ ಹೆಚ್ಚಾಗಿ ಇತಿಹಾಸದ ಕಥೆಗಳನ್ನು ಹೇಳುತ್ತಿದ್ದರು ಹಾಗಾಗಿ ನನಗೆ ಶಾಲೆಯಲ್ಲಿ ಓದುತ್ತಿರುವಾಗಲೇ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಬೆಳೆಸಿಕೊಂದಿದ್ದೆನು.
This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sharanappa.m