ಸದಸ್ಯ:Sharanappa.m/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sharanappa.m/ನನ್ನ ಪ್ರಯೋಗಪುಟ
Business
Titleವ್ಯವಹಾರ ಸೇವೆಗಳು

ವ್ಯವಹಾರದ ಸೇವೆಗಳು ಪೀಠಿಕೆ ನಾವೆಲ್ಲರೂ ಒಂದು ಪೆಟ್ರೋಲ್ ಪಂಪನ್ನು ನೋಡಿದ್ದೇವೆ ತಾನೇ! ಒಬ್ಬ ಪೆಟ್ರೋಲ್ ಬಂಕ್ ಮಾಲೀಕ ಒಂದು ಗ್ರಾಮೀಣ ಪ್ರದೇಶದಲ್ಲಿ ತನ್ನ ವ್ಯವಹಾರವನ್ನು ಹೇಗೆ ನಡೆಸುತ್ತಿದ್ದಾನೆಂಬುದರ ಬಗ್ಗೆ ನಾವೆಂದಾದರು ಯೋಚಿಸಿದ್ದೇವೆಯೇ? ತೀರ ಹಲ್ಲಿ ಪ್ರದೇಶದಲ್ಲಿರುವ ತನ್ನ ಪೆಟ್ರೋಲ್ ಪಂಪ್ ಗೆ ಅವನು ಹೇಗೆ ಪೆಟ್ರೋಲ್ ಮತ್ತು ದೀಸಿಲ್ ನ್ನು ಪಡೆಯುತ್ತಾನೆ? ಅಷ್ಟೊಂದು ಬೃಹತ್ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ದೀಸಿಲ್ ನ್ನು ಖರೀದಿಸಲು ಅವಱ್ನಿಗೆ ಹಣ ಎಲ್ಲಿಂದ ಸಿಗುತ್ತದೆ? ತನಗೆ ಅಗತ್ಯವಿರುವ ಪೆಟ್ರೋಲ್ ಉತ್ಪನ್ನಗಳನ್ನು ಪೂರೈಸಲು ಪೆಟ್ರೋಲ್ ದಿಪೋಗಳಿಗೆ ಮತ್ತು ತನ್ನಲ್ಲಿ ಲಭ್ಯವಿರುವ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅವನು ಹೇಗೆ ತಿಳಿಯಪಡಿಸುತ್ತಾನೆ? ಈ ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅಪಾಯಗಳಿಂದ ಗಂಡಾಂತರಗಳಿಂದ ಎದುರಾಗಬಹುದಾದ ನಷ್ಟದ ಭಯವನ್ನು ಎದುರಿಸಿ ಅದು ಹೇಗೆ ಅವನು ತನ್ನನ್ನು ರಕ್ಷಿಸಿಕೊಳ್ಳುತ್ತಾನೆ? ಇವೇ ಮುಂತಾದ ಹಲವು ಪ್ರಶ್ನೆಗಳಿಗೆ "ವ್ಯವಹಾರ ಸೇವೆ"ಗಳನ್ನು ಅರ್ಥೈಸಿಕೊಳ್ಳುವ ಮೂಲಕ ನಾವು ಉತ್ತರವನ್ನು ಕಂಡುಕೊಳ್ಳಬಹುದು.

ಉದೇಶಗಳು[ಬದಲಾಯಿಸಿ]

ತೈಲ ಸಂಸ್ಕರಣ ಕೇಂದ್ರಗಳಿಂದ ಪೆಟ್ರೋಲ್ ಪಂಪ್ ಗಳಿಗೆ ಡೀಸಿಲ್ ಮತ್ತು ಪೆಟ್ರೋಲ್ ಉತ್ಪನ್ನಗಳನ್ನು ರೈಲುಬಂಡಿ ಮತ್ತು ಟ್ಯಾಂಕರುಗಳ ಮೂಲಕ ಸಾಗಾಟ ಮಾಡಲಾಗುತ್ತದೆ(ಸಾರಿಗೆ ಸೇವೆಗಳು). ದೇಶದಾದ್ಯಂತವಿರುವ ದೊಡ್ಡ ದೊಡ್ಡ ನಗರಗಳಲ್ಲಿ ನೆಲೆಸಿರುವ ತೈಲ ಕಂಪನಿಗಳ ದಿಪೋಗಳಲ್ಲಿ ತೈಲ ಉತ್ಪನ್ನಗಳನ್ನು ಸಂಗ್ರಹಿಸಿಡಲಾಗುತ್ತದೆ. (ದಾಸ್ತಾನುಗಾರಿಕೆ) ಪೆಟ್ರೋಲ್ ಪಂಪ್ ಮಾಲೀಕರು ಅಂಚೆ, ಮೈಲ್, ದೂರವಾಣಿ ಮುಂತಾದ ಸಂಪರ್ಕ ಸಾಧನಗಳನ್ನು ಬಳಸಿ ತಮ್ಮ ಗ್ರಾಹಕರೊಡನೆ, ಬ್ಯಾಂಕ್ ಗಳೊಂದಿಗೆ ಮತ್ತು ದಿಪೋಗಳೊಂದಿಗೆ ಸಂಪರ್ಕವನ್ನಿರಿಸಿಕೊಂಡು ತಮಗೆ ನಿರಂತರವಾಗಿ ತೈಲ ಉತ್ಪನ್ನಗಳು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಸಂಪರ್ಕ ಸೇವೆಗಳು ಮುಂಗಡ ಹಣ ಪಾವತಿಸಿದಲ್ಲಿ ಮಾತ್ರ ತೈಲ ಕಂಪನಿಗಳು ಡೀಸಿಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ, ಪಂಪ್ ಮಾಲಿಕರು ತಮ್ಮ ಖರೀದಿಗಾಗಿ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಬ್ಯಾಂಕ್ ಗಳಿಂದ ಸಾಲ ಅಥವಾ ಮುಂಗಡ ಹಣವನ್ನು ಪಡೆಯಬೇಕಾಗುತ್ತದೆ. (ಬ್ಯಾಂಕಿಂಗ್ ಸೇವೆ) ಡೀಸಿಲ್ ಮತ್ತು ಪೆಟ್ರೋಲ್ ಉತ್ಪನ್ನಗಳು ತುಂಬಾ ಅಪಾಯಕಾರಿ ಉತ್ಪನ್ನಗಳಾಗಿರುವುದರಿಂದ ಪಂಪ್ ಮಾಲಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗುತ್ತದೆ. ಅದಕ್ಕೋಸ್ಕರ ತಮ್ಮ ವ್ಯವಹಾರವನ್ನು, ಉತ್ಪನ್ನಗಳನ್ನು, ತಮ್ಮ ವ್ಯವಹಾರ ಕೇಂದ್ರದಲ್ಲಿರುವ ಜನರಱ್ ಜೀವವನ್ನು ನಾನಾ ಬಗೆಯ ಅಪಾಯಗಳಿಂದ ರಕ್ಷಿಸಿಕೊಳ್ಳಲು ವಿಮೆಯ ಮೊರೆ ಹೋಗಬೇಕಾಗುತ್ತದೆ.

ಪರಿಚಯ[ಬದಲಾಯಿಸಿ]

ವಿಮೆಯ ಸೇವೆಗಳು ಈ ರೀತಿಯಾಗಿ, ಡೀಸಿಲ್ ಮತ್ತು ಪೆಟ್ರೋಲ್ ಉತ್ಪನ್ನಗಳನ್ನು ಮಾರಾಟ ಮಾಡುವ ಒಂದು ಪೆಟ್ರೋಲ್ ಪಂಪು ಮೇಲ್ನೋಟಕ್ಕೆ ಏಕೆ ವ್ಯವಹಾರದಂತೆ ಗೋಚರಿಸಿದರೂ, ಅದು ನಿಜವಾಗಿ ಹಲವು ಸೇವೆಗಳನ್ನೊಳಗೊಂಡ ಒಂದು ವ್ಯವಹಾರ ಸಂಸ್ಥೆಯಾಗಿದೆ. ತೈಲ ಸಂಸ್ಕರಣ ಕೇಂದ್ರಗಳಿಂದ ಡಿಸಿಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹಡಗು, ರೈಲು ಮತ್ತು ಟ್ಯಾಂಕರುಗಳಿಗೆ ತುಂಬಿಸುವ ಕಾಯಕದಿಂದ ಪ್ರಾರಂಭಿಸಿ, ಪೆಟ್ರೋಲ್ ಪಂಪುಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವವರೆಗಿನ ಇಡೀ ಪ್ರಕ್ರಿಯೆಯಲ್ಲಿ ಈ ಎಲ್ಲಾ ಸೇವೆಗಳನ್ನು ಭಾರತ ದೇಶದಾದ್ಯಂತ ಬಳಸಿಕೊಳ್ಳಲಾಗಿದೆ. ಸರಕುಗಳ ಉತ್ಪಾದನೆ ಮತ್ತು ಮಾರಟ ನಿರಂತರವಾಗಿ ನಡೆಯಲು ಅವಶ್ಯಕವಾಗಿರುವ ಅಥವಾ ಸಹಾಯ ಮಾಡುವ ವಾಣಿಜ್ಯದ ಕಾರ್ಯಗಳಿಗೆ "ವ್ಯವಹಾರದ ಸೇವೆಗಳು" ಎಂದು ಕರೆಯುತ್ತಾರೆ. ಈ ರೀತಿಯ್ ಸೇವೆಗಳು ವಾಸ್ತವದಲ್ಲಿ ಸರಕನ್ನು ಉತ್ಪಾದಿಸದಿದ್ದರೂ ಸಂಪತ್ತಿನ ಉತ್ಪಾದನೆಗೆ ಬೇಕು ಬೇಕಾದ ಸೇವೆಗಳನ್ನು ಒದಗಿಸುತ್ತದೆ. ಸೇವೆಗಳನ್ನು ಒದಗಿಸುವ ಆರ್ಥಿಕ ಚಟುವಟಿಕೆಗಳಿಂದ ಬ್ಯಾಂಕಿಂಗ್, ವಿಮೆ, ಉಗ್ರಾಣ, ಸಾರಿಗೆ, ಸಂಪರ್ಕ, ಸಮಾಲೋಚನೆ, ಶಿಕ್ಷಣ, ಆರೋಗ್ಯ, ಜಾಹಿರಾತು ಇತ್ಯಾದಿ ಕಾರ್ಯಗಳನ್ನು ಸೇವಾ ವಲಯವೂ ಒಳಗೊಂಡಿದೆ.

ವ್ಯಾಖ್ಯಾನ[ಬದಲಾಯಿಸಿ]

'ಫಿಲಿಪ್ ಕೋಟ್ಲರ್ ರವರ ಪ್ರಕಾರ, 'ಸೇವೆ' ಎಂದರೆ "ಕಣ್ಣಿಗೆ ಕಾಣದ ಹಾಗೂ ಯಾರ ಸೊತ್ತಿಗೂ ಒಳಗಾಗದ, ಯಾವುದೇ ಶ್ರಮ ಅಥವಾ ಕೆಲಸವನ್ನು ಒಬ್ಬನು ಮತ್ತೊಬ್ಬನಿಗಾಗಿ ವಹಿಸಿಕೊಂಡು ಮಾಡುವುದಾಗಿದೆ" "ಒಂದು ನಿರ್ದಿಷ್ಟ ವೇಳೆಯಲ್ಲಿ ಮತ್ತು ನಿರ್ದಿಷ್ಟ ಸ್ಥಳದಲ್ಲಿರುವ ಗ್ರಾಹಕನಲ್ಲಿ ಅವಶ್ಯಕ ಮತ್ತು ನಿಗದಿತ ಬದಲಾವಣೆಯನ್ನು ತಂಡು ಅವನಿಗೆ ಪ್ರಯೋಜನವಾಗುವ ಹಾಗೆ ಮೌಲ್ಯವನ್ನು ಸೃಷ್ಟಿಸುವ ಯಾವುದೇ ಒಂದು ಆರ್ಥಿಕ ಚಟುವಟಿಕೆಯನ್ನು ಸೇವೆ"ಯೆಂದು ಕರೆಯಬಹುದು. ಸೇವೆಯನ್ನು ಉತ್ಪನ್ನದಂತೆ ಕಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಆದರೆ ಅದರ ಉಪಸ್ಥಿತಿಯನ್ನು ನಾವು ಗ್ರಹಿಸಬಹುದು. ಅದರ ಬೆಲೆ ಪೂರೈಕೆದಾರನಿಂದ ಪೂರೈಕೆದಾರನಿಗೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. ಒಂದು ಭೌತಿಕ ಉತ್ಪನ್ನವನ್ನು ಮರು ಬಳಕೆ ಮಾಡಿದಂತೆ ಸೇವೆಯನ್ನು ಮರುಬಳಕೆ ಮಾಡುವುದು ಕೂಡ ಸಾಧ್ಯವಿಲ್ಲ.

ಸೇವಾವಲಯದ ವರ್ಗೀಕರಣಗಳು[ಬದಲಾಯಿಸಿ]

೧:'ಬ್ಯಾಂಕೋದ್ಯಮ'

ಬ್ಯಾಂಕುಗಳು ಉದ್ದಿಮೆ, ವ್ಯಾಪಾರ ಹಾಗೂ ವ್ಯವಹಾರ ವಹಿವಾಟುಗಳ ನರನಾಡಿಗಳೆಂದು ಹೇಳಲಾಗುತ್ತಿದೆ. ಬ್ಯಾಂಕಿಂಗ್ ಪ್ರಾಚೀನ ಕಾಲದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿತ್ತು. ಕ್ರಿ.ಶ.೧೬೦೦ ರ ಸುಮಾರಿಗೆ ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರು ಜನರ ಠೇವಣಿಗಳನ್ನು ಪಡೆದುಕೊಂಡು ಅದಕ್ಕೆ  ಪ್ರತಿಯಾಗಿ ರಶೀದಿಗಳನ್ನು ಕೊಡುತ್ತಿದ್ದರಂತೆ. ಈ ರಶೀದಿಗಳೇ ವ್ಯವಹಾರದಲ್ಲಿ ಚಲಾವಣೆಗೆ ಬಂದು, ಅವೇ "ಬ್ಯಾಂಕರ್ಸ್ ನೋಟ್"ಗಳಾದವೆಂದು ಹೇಳಲಾಗುತ್ತಿದೆ.                                                                                                        

ಬ್ಯಾಂಕ್ ಖಾತೆಯ ವಿಧಗಳು[ಬದಲಾಯಿಸಿ]

೧:ಉಳಿತಾಯ ಖಾತೆ: ಸಾಮಾನ್ಯವಾಗಿ ಬಡ ಜನರು ಮತ್ತು ಮದ್ಯಮ ವರ್ಗದ ಜನರು ಈ ಖಾತೆಯನ್ನು ತೆರೆಯುತ್ತಾರೆ.                                                                            
೨:ಚಾಲ್ತಿ ಖಾತೆ:ಅಸಂಖ್ಯಾತ ಮತ್ತು ಪದೇ ಪದೇ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವ ದೊಡ್ಡ ದೊಡ್ಡ ವ್ಯಾಪಾರಸ್ತರು, ಉದ್ದಿಮೆದಾರರು, ಸಂಸ್ಥೆಗಳು ತಮ್ಮ ವ್ಯಾಪಾರದ ಅನುಕೂಲಕ್ಕಾಗಿ ಚಾಲ್ತಿ ಖಾತೆಯನ್ನು ಬ್ಯಾಂಕ್ ಗಳಲ್ಲಿತೆರೆಯುತ್ತಾರೆ.                                                                                                                                                                                             
೩:ಸ್ಥಿರ ಠೇವಣಿ ಖಾತೆ: ಈ ಖಾತೆಯು ಪ್ರಮುಖವಾದ ಬ್ಯಾಂಕಿನ ಖಾತೆಗಳಲ್ಲಿ ಬಂದಾಗಿವೆ.                                                                                                                                                                                        
೪:ಆವರ್ತನ ಠೇವಣಿ: ಇದು ಮಾಷಿಕ ವೇತನ ಪಡೆಯುವವರಿಗೆ ಮತ್ತು ನಿರ್ದಿಷ್ಟ ಮಾಸಿಕ ಆದಾಯವಿರುವವರಿಗೆಉತ್ತಮ ಉಳಿತಾಯ ಯೋಜನೆಯಾಗಿದೆ.    
                                                            

೨:'ವಿಮೆ: ಮನುಷ್ಯನ ಜೀವ ಮತ್ತು ಸ್ವತ್ತುಗಳು ಹಲವು ಬಗೆಯ ಅನಿಶ್ಚಿತಗಳಿಗೆ ಒಳಪಟ್ಟಿವೆ.

ವಿಮೆಯ ಸಾಮನ್ಯ ತತ್ವಗಳು[ಬದಲಾಯಿಸಿ]

೧:ಅತ್ಯಧಿಕ ವಿಶ್ವಾಸರ್ಹತೆ ೨:ವಿಮಾ ಯೋಗ್ಯ ಆಸಕ್ತಿ ೩:ನಷ್ಟ ಪರಿಹಾರ ತತ್ವ ೪:ಪ್ರತ್ಯಾಧಿಕಾರ ತತ್ವ ೫: ಜೋಡು ವಿಮಾ ಮತ್ತು ವಂತಿಕೆ ತತ್ವ ೬:ನಷ್ಟ ಸಮನ ತತ್ವ ೭:ಸಾಮಿಪ್ಯ ಕಾರಣದ ತತ್ವ 

೩:'ಹಣಕಾಸು ಸೌಲಭ್ಯಗಳು'; ಅಂಚೆ ಕಛೇರಿ ನಡೆಸುವ ಬ್ಯಾಂಕ್ ವ್ಯವಹಾರಗಳಾದ ಮಾಷಿಕ ಉಳಿತಾಯ ವರಮಾನ ಯೋಜನೆ, ಆವರ್ತಕ ಠೇವಣಿ ಖಾತೆ, ನಿಗದಿತ ಠೇವಣಿ ಖಾತೆ, ಹಿರಿಯ ನಾಗರಿಕ ಉಳಿತಾಯ ಖಾತೆ ಮತು ಹಣ ವರ್ಗಾವಣೆ ಸೌಲಭ್ಯಗಳಿಗೆ ಹೆಚ್ಚುವರಿಯಾಗಿ ತಮ್ಮ ಉಳಿತಾಯ ಯೋಜನೆಗಳಾದ ಸಾರ್ವಜನಿಕ ಭವಿಷ್ಯ ನಿಧಿ, ಕಿಸಾನ್ ವಿಕಾಸ ಪತ್ರ ಮತ್ತು ರಾಷ್ಟ್ರೀಯ ಉಳಿತಾಯ ಪತ್ರಗಳ ಮೂಲಕ ಹಣಕಾಸು ಸೌಲಭ್ಯಗಳನ್ನು ನೀಡುತ್ತದೆ.

೪: 'ಇ-ಮೇಲ್': ವಿದ್ಯುತ್ಮಾನ ಅಂಚೆಯು ಸಂಕ್ಷಿಪ್ತ ರೂಪವೇ ಇ-ಮೇಲ್. ವಿಶ್ವದಾದ್ಯಂತ ಜನರಿಗೆ ಸಂದೇಶವನ್ನು ಕಳಿಸುವ ವಿಧಾನವನ್ನು ಇ-ಮೇಲ್ ಎಂದು ಕರೆಯುತ್ತಾರೆ. ಇ-ಮೇಲ್ ನಲ್ಲಿ ಪತ್ರವನ್ನು ಗಣಕಯಂತ್ರದಲ್ಲಿ ಬರೆದು ಅಂತ್ರಜಾಲದಲ್ಲಿ ಕಳುಹಿಸಲಾಗುತ್ತದೆ. ಸಾಮನ್ಯ ಅಂಚೆಯಂತೆಯೇ ಇ-ಮೇಲ್ ನಲ್ಲಿಯೂ ಪತ್ರವನ್ನು ಸ್ವಿಕರಿಸುವವನ ವಿಳಾಸವನ್ನು ಬರೆಯಲಾಗುತ್ತದೆ. ಇ-ಮೇಲ್ ಸೇವೆಯು ಬಹಳ ಮಿತವ್ಯಯಕಾರಿಯಾಗಿದೆ. ಮತ್ತು ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ..

ಉಲ್ಲೇಖ[ಬದಲಾಯಿಸಿ]