ಸದಸ್ಯ:Sahanajain365

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಬಾಲ್ಯ: ಸಹನೆ ಎಂಬುದು ಮಾನವನ ಜೀವನದಲ್ಲಿ ಇರಬೇಕಾದ ಅತೀ ಮುಖ್ಯವಾದ ಅಂಶ. ಆ ಸಹನೆಯನ್ನೆ ಹೆಸರಾಗಿಸಿಕೊಂಡಿರುವ ನನ್ನಲ್ಲಿ ಆ ಅಂಶವಿರುವುದು ತುಂಬಾ ಕಡಿಮೆ ಎಂಬುದು ನನ್ನ ಆಪ್ತರ ಅಭಿಪ್ರಾಯ. ನನ್ನ ತಂದೆ ಜಿನದತ್ತ ಹಾವಣಗಿ ಮೂಲತಹ ಹಾವೇರಿಯವರಾಗಿದ್ದು. ನನ್ನ ತಾಯಿ ಸುಜಾತ ಹುಬ್ಬಳ್ಳಿಯವರಾಗಿರುತ್ತಾರೆ. ಇವರ ಮೊದಲ ಪುತ್ರಿಯಾಗಿ ನಾನು ಏಪ್ರಿಲ್ ೨ ೨೦೦೦ ರಲ್ಲಿ ಜನಿಸಿರುವೆ. ನಮ್ಮ ಪದ್ದತಿಯ ಪ್ರಕಾರ ೨ ವಾರದಲ್ಲಿ ನನಗೆ "ಸಹನ ಹಾವಣಗಿ" ಎಂದು ಹೆಸರಿಸುತ್ತಾರೆ.ನನ್ನ ಬಾಲ್ಯದ ಮೊದಲ ೩ ವರ್ಷಗಳನ್ನು ಹುಬ್ಬಳ್ಳಿಯಲ್ಲೆ ಕಳೆದೆ. ನಂತರ ವಿದ್ಯಾಭ್ಯಾಸಕ್ಕಾಗಿ ಮಹಾನಗರಿ ಬೆಂಗಳೂರಿಗೆ ಬಂದೆವು.ನನಗಿಂತ ೫ ವರ್ಷ ಚಿಕ್ಕವಳಾದ ತಂಗಿ ಇದ್ದಾಳೆ.

ಶಾಲಾ ದಿನಗಳು: ನಾನು ನನ್ನ ವಿದ್ಯಾಭ್ಯಾಸವನ್ನು ಪೋಲಿಸ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದೆ.ನನ್ನ ಶಾಲಾ ದಿನಗಳನ್ನು ನನ್ನ ಸಹಪಾಟಿಗಳನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ.ನನ್ನ ಶಾಲೆ ಕೇವಲ ನನ್ನ ಉದಯೊನ್ಮುಖ ಬೆಳವಣಿಗೆ ಅಷ್ಟೆ ಅಲ್ಲದೆ ಸಕಲ ರೀತಿಯಲ್ಲಿ ನನಗೆ ನೆರವು ನೀಡಿ ನನ್ನನ್ನು ಒಂದು ಒಳ್ಳೇ ವ್ಯಕ್ತಿಯಾಗಿ ಪರಿಗಮಿಸಲು ಸಾಧ್ಯವಾಯಿತು.ನನ್ನ ಶಾಲೆ ನನಗೆ ಎಂದು ಯಾವ ಪರಿಸ್ಥಿತಿಯಲ್ಲೂ ಸಹ ನನೊಂದಿಗೆ ಸದಾ ಇರುವ ೨ ಆತ್ಮೀಯ ಗೆಳೆತಿಯರಾದ ಭಾವನ ಹಾಗೂ ತಸ್ಮಿಯಾರನ್ನು ನೀಡಿದೆ . ಅಣ್ಣನಿಲ್ಲ ಎಂಬ ಕೊರಗನ್ನು ತನ್ನ ಒಡಹುಟ್ಟಿದ ತಂಗಿಗಿಂತ ಹೆಚ್ಚು ಪ್ರೀತಿಯಿಂದ ನನ್ನನ್ನು ಕಾಣುವ ಓಲುಮೆಯಿಂದ ನೋಡಿಕೊಳ್ಳುವ ನನ್ನ ಚೇತನ್ ಅಣ್ಣ ನೀಗಿಸಿದ್ದಾನೆ. ಇಂತಹ ಅತ್ಯಮೂಲ್ಯ ರತ್ನಗಳನ್ನು ನನಗೆ ಕೊಡುಗೆ ಯಾಗಿ ನೀಡಿದ ಶಾಲೆಗೆ ನನ್ನ ಕೋಟಿ ಕೋಟಿ ವಂದನೆಗಳು.

ಸಾಧನೆಗಳು: ನಾನು ನನ್ನ ಜೀವನದಲ್ಲಿ ಮಾಡಿದ ಅತೀ ದೊಡ್ಡ ಸಾಧನೆ. ನನ್ನ ಹೆಸರನ್ನು ಇಂಡಿಯ ಬುಕ್ ಆಫ್ ರೆಕಾರ್ಡ್ಸ ನಲ್ಲಿ "fastest tables multiplication" ಕ್ಯಾಟೇಗರಿಯಲ್ಲಿ ನನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದೆನೆ.

ನನ್ನ ಆಸಕ್ತಿ ಮತ್ತು ಹವ್ಯಾಸಗಳು: ನನಗೆ ಮಾತಾಡುವುದು ಬಹಳ ಇಷ್ಟ ಹಾಗಾಗಿಯೆ ನಾನು ಮುಂದೆ ಆರ್.ಜೆ ಆಗಬೇಕು ಎಂದಿದ್ದೇನೆ. ಬಿಡುವಿನ ವೇಳೆಯಲ್ಲಿ ಸಂಗೀತ ಕೇಳಿ ಆನಂದಿಸುತ್ತೇನೆ. ಅರ್ಜಿತ್ ಸಿಂಗ್ ನನ್ನ ಬಹು ಮೆಚ್ಚಿನ ಗಾಯಕರಾಗಿರುತ್ತಾರೆ.

ಕಾಲೇಜು ದಿನಗಳು: ನಾನು ನನ್ನ ಪಿ.ಯು ವ್ಯಾಸಂಗವನ್ನು "ಸೇಂಟ್ ಫ್ರಾನ್ಸಿಸ್ ಕಾಲೇಜು" ನಲ್ಲಿ ಮುಗಿಸಿದೆ.ಅಲ್ಲಿ ನನಗೆ ನನ್ನ ಆಪ್ತ ಸಲಹೆಗಾರ ಉತ್ತಮ ಗೆಳೆಯನಾದ ಜಿಷ್ಣು ಪರಿಚಯವಾದ.ನನ್ನ ಪಿ.ಯು ದಿನಗಳಲ್ಲಿ ನನಗೆ ನನ್ನನ್ನು ನನಗಿಂತ ಹೆಚ್ಚಾಗಿ ಪ್ರೀತಿಸುವ ನನಗೆ ಈಗ ತುಂಬ ಆತ್ಮೀಯವಾಗಿರುವ ನನ್ನ ಜೀವನದ ಅತೀ ದೊಡ್ಡ ಭಾಗವಾಗಿರುವ ಅತೀ ಮುಖ್ಯ ವ್ಯಕ್ತಿಯಾಗಿರುವ ಗುರು ಅಮೀತ್ ನ ಪರಿಚಯವಾಯಿತು.ಪಿ.ಯು ನಂತರ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ನನ್ನ ಬಿ.ಎಸ್ಸಿ ಪದವಿಯನ್ನು ಓದುತ್ತಿದ್ದೇನೆ.ಇಲ್ಲಿ ಸಹ ನನಗೆ ನಿಶಾ ಕಾವ್ಯ ವಿಜಯ್ ಗೌತಮ್ ಎಂಬ ೪ ಉತ್ತಮ ಗೆಳೆಯರಿದ್ದಾರೆ.ನಂತರ ಸಮಾಜಿಕ ಜಾಲತಾಣದಲ್ಲಿ ನನಗೆ ಪರಿಚಯವಾದ ರಾಹುಲ್ ನನಗೆ ಕೆವಲ ಆಪ್ತ ಗೆಳೆಯ ಅಷ್ಟೆ ಅಲ್ಲದೆ ನನ್ನನ್ನು ತನ್ನ ಸ್ವಂತ ತಂಗಿಯಂತೆ ನೋಡಿಕೊಳ್ಳುತಾನೆ. ನನಗೆ ಯಾವುದೆ ಕಷ್ಟ ಬರದಂತೆ ಸದಾ ನನಗೆ ಬೆನೆಲುಬಾಗುವ ನನ್ನ ಚೇತನ್ ಅಣ್, ರಾಹುಲ್ ಅಣ್ಣ್. ನೋವು ನಲಿವಿನಲ್ಲಿ ನನ್ನ ಜೊತೆಗಿರುವ ನಿಶಾ ಕಾವ್ಯ ಭಾವನ ತಸ್ಮಿಯ ಹಾಗು ನನ್ನನ್ನು ಸದಾ ಪ್ರೀತಿಯಿಂದ ಕಾಣುವ ಗುರು.ಹೀಗೆ ಜೀವನದ ಪ್ರತಿ ಹಂತದಲ್ಲಿಯೂ ನನಗೆ ಇಂತಹ ಅತ್ಯಮೂಲ್ಯ ರತ್ನಗಳನ್ನು ನೀಡಿದ ದೇವರಿಗೆ ನನ್ನ ವಂದನೆಗಳು.ಹಾಗು ಈ ಬದುಕನ್ನು ಕಲ್ಪಿಸಿಕೊಟ್ಟ ನನ್ನ ಪೋಷಕರಿಗೆ ನಾನು ಸದಾ ಚಿರ ಋಣಿಯಾಗಿರುವೆ.