ಸದಸ್ಯ:SIMREN CHRISTILLA,1510567,Simren Christilla
ಸಿಮ್ರೆನ್ ಛ್ರಿಸ್ತಿಲ್ಲ | |
---|---|
Nationality | ಭಾರತೀಯ |
Other names | ಸಿಮ್ರೆನ್ |
Education | ಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ |
Occupation | ವಿದ್ಯಾರ್ಥಿ |
Spouse | -ಮದುವೆಯಾಗಿಲ್ಲ- |
ನನ್ನ ಹೆಸರು ಸಿಮ್ರೆನ್
ಜನನ
[ಬದಲಾಯಿಸಿ]ನನ್ನ ಹೆಸರು ಸಿಮ್ರೆನ್ ಕ್ರಿಸ್ಱಿಲ್ಲ.ನಾನು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ೧೮-೧೨-೧೯೯೬ ರಂದು ಹುಟ್ಟಿದೆ.ಕೊಡಗು ಜಿಲ್ಲೆ ತುಂಬಾ ಪ್ರಸಿದ್ದವಾದ ಸ್ತಳ.ನನ್ನ ತಂದೆಯ ಹೆಸರು ಎ. ಜಯರಾಜ್, ತಾಯಿಯ ಹೆಸರು ಶಿನ್ಯ್ ಜಯರಾಜ್.
ವಿದ್ಯಾಭ್ಯಾಸ
[ಬದಲಾಯಿಸಿ]ನನ್ನ ಶಾಲೆಯ ಶಿಕ್ಷಣ ಹಾಗೂ ಪಿ.ಯು.ಸಿ ಮಡಿಕೇರಿಯಲ್ಲೇ ಮುಗಿಸಿದ್ದೇನೆ.ನಾನು ಸಂತ ಜೋಸೆಫ್ ಶಾಲೆಯಲ್ಲಿ ನನ್ನ ಶಾಲಾ ಶಿಕಣವನ್ನು ಮುಗಿಸಿದ್ದೇನೆ. ನನ್ನ ಶಾಲಾ ಅನುಭವ ತುಂಬಾ ಸುಂದರವಾಗಿತು.ಮುಂದೆ ನಾನು ನನ್ನ ಪಿ.ಯು.ಸಿ. ವಿದ್ಯಾಭ್ಯಾಸವನ್ನು ಸಂತ ಮೈಕಲ್ ಕಾಲೇಜಿನಲ್ಲಿ ಮಾಡಿದ್ದೇನೆ. ಧ್ವಿತೀಯ 'ಪಿ.ಯು.ಸಿ'ಯಲ್ಲಿ ೯೦% ಲಬಿಸಿತ್ತು. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ೨ನೇ ಬಿ.ಕಾಂ ಓದುತ್ತಿದ್ದೇನೆ. ಕ್ರೈಸ್ಟ್ ಯೂನಿವರ್ಸಿಟಿ ಕಾಮರ್ಸ್ ಡಿಪಾಱ್ಮೆಂಱ್ ನಮ್ಮ ಭಾರತದಲ್ಲಿ ೪ನೇ ಸ್ಥಾನವನ್ನು ಹೊಂದಿದೆ.ಕ್ರೈಸ್ಟ್ ಯೂನಿವರ್ಸಿಟಿಯ ವಾತವರಣ ನನಗೆ ತುಂಬಾ ಇಷ್ಟವಾಗಿದೆ. ಸುತಮುತ್ತಲೂ ಗಿಡ ಮರಗಳಿಂದ ಕೂಡಿವೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಕೂಡ ತುಂಬಾ ಚೆನಾಗಿದೆ.
ಹವ್ಯಸಗಳು
[ಬದಲಾಯಿಸಿ]ಹಾಡುವುದು, ಅಡುಗೆ ಮಾಡುವುದು, ಟಿ.ವಿ ನೋಡುವುದು ಮುಂತಾದವು.ನನಗೆ ಫುಟ್ಬಾಲ್ ಆಟ ತುಂಬಾ ಇಷ್ಟ.
ಅನುಭವ
[ಬದಲಾಯಿಸಿ]"ನಾನು ನಮ್ಮ ಊರಿನಲ್ಲಿ ನಡೆದ ಒಂದು ಘಟನೆಯನ್ನು ನಿಮಗೆ ಹೇಳುತ್ತೇನೆ" ನಿಮಗೆ ಗೊತ್ತಾ? ಸತ್ತವರ ಆತ್ಮಕ್ಕೆ ನೆಮ್ಮದಿ ಶಾಂತಿ ದೊರೆತ್ತಿಲ್ಲವೆಂದರೆ ಅವರ ಆತ್ಮ ಭೂಮಿಯ ಮೇಲೆಯೇ ಇರುತ್ತದೆ ಎಂಬ ಮೂಢನಂಬಿಕೆ ಇಂದಿಗೂ ಇದೆ. ಒಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜನರು ಕುರಿಗಳನ್ನು ಮೇಯಿಸಲು ಕಾಡು, ಹಳ್ಳ, ಕೆರೆ, ಬೆಟ್ಟಗುಡ್ಡಗಳ ಕಡೆಗೆ ಹೊಡೆದುಕೊಂಡು ಹೋಗುತ್ತಾರೆ. ಇದೇ ರೀತಿ ಒಬ್ಬ ರಾಮಣ್ಣ ಎಂಬುವವನು ತನ್ನ ಕುರಿಗಳನ್ನು ಹೊಡ್ಕೊಂಡು ಬೆಟ್ಟಗುಡ್ಡದ ಕಡೆಗೆ ಹೋಗುತ್ತಾನೆ. ಕುರಿಗಳನ್ನು ಮೇಯಿಸಿ ಸಾಯಂಕಾಲ ಮನೆಗೆ ಹೊಡ್ಕೊಂಡು ಬರುತ್ತಾನೆ. ಆದರೆ ಕುರಿಯ ಮರಿಯೊಂದು ಕಾಣೆಯಾಗಿರುತ್ತದೆ. ಅದನ್ನು ಹುಡುಕಿಕೊಂಡು ಬರಲು ಕುರಿಗಳನ್ನು ಮೇಯಿಸಿದ ಬೆಟ್ಟದ ಹತ್ತಿರ ಹೋಗಿ ಕೂಗಿ ಕರೆಯುತ್ತಾನೆ. ಆಗ ಆಕಡೆಯಿಂದ ಕುರಿಮರಿ ಕೂಗುತ್ತಾ ಬರುತ್ತದೆ. ರಾಮಣ್ಣ ಕುರಿಮರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಹೊರಡುತ್ತಾನೆ. ಕುರಿಯನ್ನು ಹೊತ್ತುಕೊಂಡು ದಾರಿಯಲ್ಲಿ ಹೋಗುವಾಗ ಸ್ವಲ್ಪ ಭಾರ ಎನಿಸುತ್ತದೆ. ಆದರೂ ಇನ್ನೂ ಮುಂದೆ ಮುಂದೆ ಹೋಗುತ್ತಾನೆ. ಆಗ ಕುರಿ ತುಂಬಾ ಭಾರವೆನಿಸುತ್ತದೆ. ಆಗ ರಾಮಣ್ಣ ಕುರಿ ಯಾಕೆ ಇಷ್ಟೊಂದು ಭಾರವಾಗುತ್ತಿದೆ ಎಂದು ತನಗೆತಾನೇ ಮಾತಾಡಿಕೊಳ್ಳುವನು. ಆಗ ಕುರಿ ಹೆಳುತ್ತದೆಯಂತೆ "ಅಣ್ಣಾ ನನ್ನನ್ನು ನಿಧಾನವಾಗಿ ಹೊತ್ತುಕೊಂಡು ಹೋಗು ನಾನು ಬಸುರಿ ಹೆಂಗಸು" ಎಂದು, ಹೀಗೆ ಹೇಳಿದ ತಕ್ಷಣ ರಾಮಣ್ಣ ಕುರಿಯನ್ನು ಜೋರಾಗಿ ನೆಲದ ಮೇಲೆ ಬೀಳಿಸಿ ಅದನ್ನು ನೋಡದೆ ನೇರವಾಗಿ ಮನೆಗೆ ಬಂದನು. ನಿಮಗೆ ಗೊತ್ತಾ? ಯಾರೋ ಕೆಟ್ಟ ವ್ಯಕ್ತಿಗಳು ಬಸುರಿ ಹೆಂಗಸನ್ನು ಬೆಟ್ಟದ ಬಳಿ ಕೊಲೆ ಮಾಡಿದ್ದರು. ಆ ಬಸುರಿ ಹೆಂಗಸು ಆತ್ಮಕ್ಕೆ ನೆಮ್ಮದಿ ಸಿಗದೇ ಅಲೆದಾಡುತ್ತಿತ್ತು. ಇದೇ ರೀತಿ ಸತ್ತವರ ಆತ್ಮ ಕುರಿಗಳ ದೇಹದಲ್ಲಿ ಮಾತ್ರ ಬರುವುದಿಲ್ಲ ಯಾವುದೇ ಪ್ರಾಣಿಯಾಗಿರಬಹುದು ಅಥವಾ ಯಾವುದೇ ವ್ಯಕ್ತಿಯಾಗಿರಬಹುದು.