ಸದಸ್ಯ:Rupeshm364/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಚಿತ್ರ:Brigitte Alice Askonas (1923-2013).tif
ಬ್ರಿಗಿಟ್ಟೆ ಅಸ್ಕೋನಾಸ್

ಬ್ರಿಗಿಟ್ಟೆ ಅಸ್ಕೋನಾಸ್ (೧ ಏಪ್ರಿಲ್ ೧೯೨೩ - ೯ ಜನವರಿ ೨೦೧೩) ಅವರು ಬ್ರಿಟಿಷ್ಸಿನ ಪ್ರತಿರಕ್ಷಾವಿಜ್ಞಾನಿಯಾಗಿದ್ದರು (Immunologist). ರೋಗನಿರೋಧಕ ಶಾಸ್ತ್ರಜ್ಞರ ಪೈಕಿ ಬ್ರಿಗಿಟ್ತೆ ಅಸ್ಕೋನಾಸ್ ಅವರು "ಇಟಾ" ಎಂದು ವ್ಯಾಪಕವಾಗಿ ಹೆಸರಾಗಿದ್ದಾರೆ. ಅವರು ೧೯೭೩ರಲ್ಲಿ ರಾಯಲ್ ಸೊಸೈಟಿಯ ಸಹ ನಿರ್ದೇಶಕರಾಗಿ ಆಯ್ಕೆಯಾದರು ಮತ್ತು ೧೯೯೫ರಿಂದ ಲಂಡನ್ನ ಇಂಪೀರಿಯಲ್ ಕಾಲೇಜಿನ ಭೇಟಿ ಪ್ರಾಧ್ಯಾಪಕರಾಗಿದ್ದರು. ಸೋಂಕಿನ ಪ್ರತಿರಕ್ಷಿತ ಪ್ರತಿಕ್ರಿಯೆಯ ಹಲವು ಮೂಲಭೂತ ಕಾರ್ಯವಿಧಾನಗಳು ಮತ್ತು ಘಟಕಗಳನ್ನು ಸ್ಥಾಪಿಸಲು ಇವರು ಸಹಾಯ ಮಾಡಿದ್ದಾರೆ.

ಕೌಟುಂಬಿಕ ಜೀವನ[ಬದಲಾಯಿಸಿ]

ಬಿಗಿಟ್ಟೆ ಅಸ್ಕೋನಾಸ್ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ೧೯೨೩ರ ಎಪ್ರಿಲ್ ೧ರಂದು ಜೆಚೊಸ್ಮೊವಾಕ್ ಪೋಷಕರಿಗೆ ಜನಿಸಿದರು (ಯಹೂದಿಗಳು ಕ್ಯಾಥೊಲಿಕ್ಗೆ ಮತಾಂತರಗಿರುವರು). ಅವಳ ತಂದೆ ಮತ್ತು ಅವಳ ಸಹೋದರ ಹೆಣೆದ ಗಿರಣಿಗಳ ಸರಪಳಿಯನ್ನು ಹಲವಾರು ಯುರೋಪಿಯನ್ ದೆಶಗಳಲ್ಲಿ ಹೊಂದಿದ್ದರು. ಅವರ ತಾಯಿ, ಲಲಿತ ಕಲೆಗಳಲ್ಲಿ ಪದವೀಧರರಾಗಿದ್ದರು ಹಾಗು ಕಲಾ ಸಂಗ್ರಾಹಕರಾಗಿದ್ದರು. ಜರ್ಮನಿ ಆಸ್ಟ್ರಿಯಾ ಸೇರಿದ ಕಾರಣ (ಅಂಶ್ಕ್ಲ್ಯಸ್), ಅಸ್ಕೋನಾಸ್ನವರ ತನ್ನ ೧೫ನೇ ವಯಸ್ಸಿನಲ್ಲಿ, ತಮ್ಮ ಕುಟುಂಬದೊಂದಿಗೆ ಮಾರ್ಚ್ ೧೯೩೮ರಲ್ಲಿ ವಿಯೆನ್ನಾದಿಂದ ಪಲಾಯನ ಮಾಡಿದರು. ತಮ್ಮ ಜೆಕ್ ಪೌರತ್ವದಿಂದ ಸಂರಕ್ಷಿಸಲ್ಪಟ್ಟು, ಅವರು ನ್ಯೂಯಾರ್ಕ್ಗೆ ಆಗಮಿಸುವ ಮೊದಲು ಯೂರೋಪೆಯನ್ನು ಸುತ್ತಿ ಬಂದರು.ಅವರು ಅಂತಿಮಮವಾಗಿ ೧೯೪೦ರಲ್ಲಿ ಕೆನಡಗೆ ಬಂದು ನೆಲೆಸಿದರು. ಅಸ್ಕೋನಾಸ್ ಅವರು ಚಿಕ್ಕವಯಸ್ಸಿನಲ್ಲಿ ಭಾಷೆ, ಕಲೆ, ಸಾಹಿತ್ಯ, ಪ್ರಕೃತಿಯ ಹಾಗೂ ಜೈವಿಕ ಪುಸ್ತಕಗಳು ಮತ್ತು ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ವಿಶ್ವವಿದ್ಯಾನಿಲಯದ ಮೂಲಕ ಮಧ್ಯಭಾಗದವರೆಗೂ ಅವರು ಮೂಂದುವರಿಸಲು ಬಯಸಿದ ವೃತ್ತಿಜೀವನದ ಬಗ್ಗೆ ಸ್ವಲ್ಪವು ಯೋಚನೆಯಿರಲಿಲ್ಲ.

ವಿದ್ಯಾಭ್ಯಾಸ[ಬದಲಾಯಿಸಿ]

ಅಸ್ಕೋನಾಸ್ ರವರು ಎರಡು ವರುಷ ವೆಲ್ಲೆಸ್ಲೆಯ್ ಕಾಲೇಜು, ಮ್ಯಾಸಚೂಸೆಟ್ಸ್ ನಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಮ್ಯಾಕ್ಗಿಲ್ ಯೂನಿವರ್ಸಿಟಿಯಲ್ಲಿ (ಬಿಎಸ್ಸಿ, ಎಮ್ ಎಸ್ಸಿ) ಜೀವರಸಾಯನಶಾಸ್ತ್ರವನ್ನು ಅಧ್ಯಾಯನ ಮಾಡಿದರು. ಹಾಗೂ ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ (ಪಿಎಚ್ಡಿ) ಬಯೋಕೆಮಿಸ್ಟ್ರಿ (ಜಿವರಸಾಯನಶಾಸ್ತ್ರ) ಶಾಲೆಯಲ್ಲಿ ತಮ್ಮ ಸ್ನಾತಕೋತ್ತರ ಕೆಲಸವನ್ನು ಕೈಗೊಂಡರು.ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ ಜೀವರಸಾಯನಶಾಸ್ತ್ರದ ಇಲಾಖೆಯಲ್ಲಿ ಅಸ್ಕೋನಾಸ್ಗೆ ಮಾದರಿಯಾಗಿ ಎರಡು ಪ್ರಮುಖ ವಿಜ್ಞಾನಗಳಾದ, 'ಮಾರ್ಗರೇಟ್ ಸ್ಪೀಫನ್ನನ್' ಮತ್ತು 'ಡೊರೊತಿ ನಿಧಾಮ್' ಇವರಿಬ್ಬರೂ ರಾಯಲ್ ಸೊಸೈಎಟಿಗೆ ಚುನಾಯಿತರಾದ ಮೊದಲ ಮಹಿಳೆಯರಾಗಿದ್ದಾರೆ. ಇವರಿಬ್ಬರು ಅಸ್ಕೋನಾಸ್ ಅವರಿಗೆ "ಉತ್ತಮ ವಿಜ್ಞಾನವು ವಿಜ್ಞಾನಿಗಳ ಲೈಂಗಿಕತೆಯ ಬಗ್ಗೆ ಯಾವುದೇ ಮಾನ್ಯತೆಯನ್ನು ಪಡೆಯುವುದಿಲ್ಲ" ಎಂದು ಹೇಳಿ ಕೊಟ್ಟರಂತೆ. ಅವರ ಪಿಎಚ್ಡಿ ಮೇಲ್ವಿಚಾರಕ 'ಮಾಲ್ಕಮ್ ಡಿಕ್ಸನ್'.

ವೃತ್ತಿಜೀವನ[ಬದಲಾಯಿಸಿ]

ಅಸ್ಕೋನಾಸ್ ಅವರ ಮೊದಲ ಸ್ಥಾನವು ಅಲ್ಯಾನ್ ಮೆಮೋರಿಯಲ್ ಇನ್ಸ್ವೆಟ್ಯಾಟ್ ಆಫ್ ಸೈಕಿಯಾಟ್ರಿಯಲ್ಲಿತ್ತು (ಮ್ಯಾಕ್ಗಿಲ್ ಯೂನಿವರ್ಸಿಟಿಗೆ ಸಂಬಂಧಿಸಿದೆ). ೧೯೫೨ರಲ್ಲಿ ಅವರು ನ್ಯಾಷನಲ್ ಇನ್ಸ್ವೆಟ್ಯಾಟ್ ಫಾರ್ ಮೆಡಿಕಲ್ ರಿಸರ್ಚ್ (NIMR) ಸಿಬ್ಬಂದಿಯಾಗಿ ಸೇರಿದರು, ಅಲ್ಲಿ ಅವರು ೧೯೭೬ರಲ್ಲಿ ಇಮ್ಯೂನಾಲಜಿ (ಪ್ರತಿರಕ್ಷಾಶಾಸ್ತ್ರ) ವಿಭಾಗದ ಮೂಖ್ಯಸ್ಥರಾದರು. ಅವರು ೩೬ ವರ್ಷ್ಗಳ ಕಾಲ NIMRನಲ್ಲಿ ಸೇವೆ ಸಲ್ಲಿಸಿದ್ದರು. ೧೯೮೮ರಲ್ಲಿ ರಾಜೀನಾಮೆ ನೀಡಿದರು. ಆ ಸಮಯದಲ್ಲಿ, ಪ್ರತಿರಕ್ಷಾಶಾಸ್ತ್ರ ವಿಭಾಗಗಳನ್ನು ಸ್ಥಾಪಿಸಲು ಸಹ ಪ್ರತಿರಕ್ಷಾವಿಜ್ಞಾನಿಯಾದ ಜೌನ್ ಎಚ್. ಹಂಫ್ರೆಯೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದರು.

ಇನ್ಸ್ವೆಟ್ಯಾಟ್ನಲ್ಲಿ ಅವರ ಆರಂಭಿಕ ಕೆಲಸವು ಹಾಲಿನ ಪ್ರೊಟೀನ್ಗಳ ಜೈವಿಕ ಸಂಶ್ಲೇಷಣೆಯಲ್ಲಿತ್ತು. ಈ ಕೆಲಸವು ಪ್ರತಿಕಾಯಗಳ ಮೂಲ ಮತ್ತು ಸಂಶ್ಲೇಷಣೆಯಬ್ಗ್ಗೆ ತನಿಖೆ ಮಾಡಲು ಮತ್ತು ಮ್ಯಾಕ್ರೋಫೇಜ್ಗಳ ಪಾತ್ರವನ್ನು ಅಧ್ಯಯನ ಮಾಡಲು ಪ್ರೇರೇಪಿಸಿತು. ಅವರು ಟಿ-ಲಿಂಫೋಸೈಟ್ಸ್ನ ಎಂಬ ಸೋಂಕಿನ ಬಗ್ಗೆ ಕೂಡ ಪಾತ್ರವನ್ನು ನಿರ್ವಹಿಸಿದರು. ಆದರಲ್ಲೂ ವಿಶೇಷವಾಗಿ ಶಿಶುಗಳಿಗೆ ಬಾಧಿಸುವ ಕಾಯಿಲೆ ಇನ್ಫ್ಲುಯೆಂಜಾ ಮತ್ತು ಉಸಿರಾಟದ ಸಿನ್ನಿಟಿಯಾಲ್ ವೈರಸ್ಗಳ ಬಗ್ಗೆ ಅಧ್ಯಯನ ಮಾಡಿದರು.

ಅಸ್ಕೋನಾಸ್ ನವರು 'ಬಿ' ಜೀವಕೋಶಗಳ ಮೇಲೆ ಕೇಂದ್ರೀಕರಿಸಿ ಹಾಗೂ ಪ್ರತಿರಕ್ಷಾಣಾ ಪ್ರತಿಕ್ರಿಯೆಯ ಭಾಗವಾಗಿ ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಅವರು ಮುಖ್ಯ ಪಾತ್ರವನ್ನು ವಯಿಸಿದಾರೆ. ೨೦೦೭ರಲ್ಲಿ ಅವರು ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಆಕಾಡೆಮಿ ಆಫ್ ಸೈನ್ಸಸ್ಗೆ ವಿದೇಶಿ ಸಹಾಯಕರಾಗಿದ್ದರು.

ಸಂಶೋಧನೆ[ಬದಲಾಯಿಸಿ]

ಅಸ್ಕೋನಾಸ್ ನವರು NIMRನಲ್ಲಿ ಅವರು ಮೇಕೆವಿನ ಹಾಲಿನ ಪೋಲಿಪೆಪ್ಟಿಡೆಗಳ ಜೈವಿಕ ಸಂಯೋಜನೆಯನ್ನು ಸಂಶೋಧಿಸಲು ಪ್ರಾರಂಭಿಸಿದರು. ೧೯೫೫-೫೯ರವರೆಗೆ ಅವರು ವಿಕಿರಣಶೀಲತೆಯ ಮೂಲಕ ಪ್ರತಿಕಾಯ (ಆಂಟಿಬಾಡಿ) ರಚನೆಯ ಬಗ್ಗೆ ಅಧ್ಯಯನ ಮಾಡಿದ ನಂತರ ರೋಗನಿರೋಧಕ ವ್ಯವಸ್ಥೆಯ ಜಿವಕೋಶಗಳ ಬಗ್ಗೆ ಸಾಮಾನ್ಯಜನರಿಗೆ ಅರ್ಥಹಾಗುವ ಹಾಗೆ ತಿಳುವಳಿಕೆಯನ್ನು ನೀಡಿದ್ದರು (ಪ್ರತಿಕಾಯಗಳು ಪ್ರೋಟೀನ್ಗಳಾಗಿದು, ಇದನ್ನು ಬ್ಯಾಕ್ಟೀರಿಯಾ ಮತ್ತು ವೈರಸ್ಗಳಂತಹ ವಿದೇಶಿ ವಸ್ತುಗಳನ್ನು ಗುರುತಿಸಿ ಮತ್ತು ತಟಸ್ಥಗೊಳಿಸಲು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬಳಸುತ್ತದೆ.

೧೯೫೧-೬೧ರವರೆಗೆ ಅವರು ಪ್ಲಾಸ್ಮಾದ ಜೀವಕೋಶದ ಗೆಡ್ಡೆಗಳನ್ನು ಪ್ರತಿಕಾಯ ರಚನೆಗೆ ಮಾದರಿಗಳಾಗಿ ಅಧ್ಯಯನ ಮಾಡಿದರು. ೧೯೬೨-೧೯೬೮ರವರೆಗೆ ಅವರು ಮ್ಯಾಕ್ರೋಫೇಜ್ಗಗಳನ್ನು ಮತ್ತು ಪ್ರತಿಜನಕದಲ್ಲಿ ಅದರ ಪಾತ್ರ ಏನ್ನು ಎಂಬ ಬಗ್ಗೆ ತನಿಖೆ ನಡೆಸಿದರು. ೧೯೬೩-೬೬ರವರೆಗೆ ಅಸ್ಕೋನಾಸ್ರವರುಪ್ರತಿಕಾಯದ ರಚನೆಗೆ ಸಂಬಂಧಿಸಿದಂತೆ ಪ್ರತಿಜನಕದ ಅದೃಷ್ಟವನ್ನು ಅಧ್ಯಯನ ಮಾಡಿದರು, ನಂತರ ೧೯೬೫-೭೦ರವರೆಗೆ 'ಬಿ' ಜೀವಕೋಶಗಳ ಅಧ್ಯಯನವನ್ನು ಮುಂದುವರೆಸಿದರು.

ಸಾಧನೆಗಳು[ಬದಲಾಯಿಸಿ]

೧೯೭೩ರಲ್ಲಿ ಅಸ್ಕೋನಾಸ್ ಅವರು ಪ್ರತಿಕಾಯಗಳ ಮೂಲ ಮತ್ತು ಸಂಶ್ಲೇಣೆಯ ಬಗ್ಗೆ ತಿಳಿಸಿದ ಕೊಶುಗೆಗಳ ಆಧಾರದ ಮೇಲೆ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆಯಾದರು. ಅವರ ಪ್ರಮುಖ ಸಾಧನೆಗಳಲ್ಲಿ ಒಂದಾದ ಬ್ರಿಯಾನ್ ರೈಟ್ ಮತ್ತು ಅಲನ್ ವಿಲಿಯಮ್ಸನ್ ಅವರೊಂದಿಗೆ ಜೀವಂತವಾಗಿ 'ಬಿ' ಜೀವಕೋಶಗಳ ಅಬೀಜ ಸಂತಾನೋತ್ಪತ್ತಿ ಮಾಡಿದ್ದರು. ಈ ಜೀವಕೋಶಗಳು ಹಿಂದೆಂದೂ ಉತ್ಪತಿಯಾದ ಕೆಲವು ಮೊದಲ್ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಪ್ರತಿನಿಧಿಸುತ್ತವೆ. ಅವರ ಕೆಲಸವು ಸೋಂಕುಗಳ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯ ರಕ್ಷಣೆಗೆ ಮ್ಯಾಕ್ರೋಫೇಜ್ಗಳು ಮತ್ತು ಟಿ ಕೋಶಗಳ ಪಾತ್ರವನ್ನು ಸ್ಪಷ್ಟಪಡಿಸಿದರು. ಟಿ-ಲಿಂಫೋಸೈಟ್ಸ್ ದೇಹದಲ್ಲಿ ವಿದೇಶಿ ಆಕ್ರಮಣಕಾರಗಳನ್ನು ಹೇಗೆ ಪತ್ತೆ ಮಾಡುತ್ತದೆ ಎಂಬುದನ್ಜು ಅರ್ಥಮಾಡಿಕೊಳ್ಳಲು ಅಡಿಪಾಯವನ್ನು ಹಾಕಿದ್ದರು.

ಅಸ್ಕೋನಾಸ್ ರವರ ಸೈಟೊಲಿಟಿಕ್ ಟಿ ಕೋಶದ ತತ್ವವನ್ನು ಸಂಶೋಧನೆಯ ಮೂಲಕ ಹೇಗೆ ಈ ಟಿ ಕೋಶಗಳು ವೈರಸ್ಗಳಿಂದ ಸೋಂಕಿತ ಕೋಶಗಳನ್ನು ಕೊಲ್ಲುತ್ತವೆ ಎಂದು ತಿಳಿಸಿದ್ದಾರೆ. ಹಾಗೂ ಈ ಟಿ ಕೋಶಗಳು ಆನೇಕ ಉಪವಿಧಗಳ ವೈರಸ್ಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವೈರಸ್ ಉಪವಿಭಾಗವನ್ನು ಗುರುತಿಸುವ ಪ್ರತಿಕಾಯಗಳು ಇದಕ್ಕೆ ವ್ಯತಿರಿಕ್ತವಾಗಿವೆ.

ಅವರು ಸ್ಥಾಪಿಸಿದ ತತ್ವ ಇಂದು ಎಚ್ಐವಿ/ಏಡ್ಸ್, ಮಲೇರಿಯಾ, ಟಿಬಿ ಮತ್ತು ಸಾಂಕ್ರಾಮಿಕ ಜ್ವರಕ್ಕೆ ಕಾರಣವಾಗುವ ಸೋಂಕೊಗಳ ವಿರುದ್ಧ ಹೊಸ ಲಸಿಕೆಗಳ ಬೆಳವಣಿಗೆಗೆ ಪ್ರಮುಖವಾಗಿದೆ. ಅಸ್ಕೋನಾಸ್ ರವರ ಹಲವಾರು ಉನ್ನತ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಅದರ್ಲ್ಲಿ ಪ್ರಮುಖವಾದದ್ದು 'ನೀಲ್ಸ್ ಕಾಜ್ ಜೇರ್ನ್', 'ಸೆಸರ್ ಮಿಲ್ಸ್ಟೀಸ್' ಮತ್ತು 'ಜಾನ್ ಹರ್ಬರ್ಟ್ ಹಂಫ್ರೆ'.

ಸಾರಾಂಶ[ಬದಲಾಯಿಸಿ]

ಇಟಾರವರನ್ನು ಅನೇಕವರಿಂದ 'ಮದರ್ ಫಿಗರ್' ಅಥವಾ 'ಗ್ರಾಂಡ್ ಡೇಮಾ ಆಫ್ ಇಮ್ಯುನೊಲಾಜಿ' ಎಂದು ಉಲ್ಲೇಖಿಸಲಾಗಿದೆ. ಅವರು ಇಮ್ಯುನೊಲಾಜಿ (ಪ್ರತಿರಕ್ಷಾಶಾಸ್ತ್ರವಿಗೆ) ಹೆಚ್ಚಿನ ಸಮಯವನ್ನು ಉದಾರವಾಗಿ ನೀಡುವ ಮೂಲಕ ಇಟಾರವರು ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರಿಂದ, ಇಂದು ಆ ವಿದ್ಯಾರ್ಥಿಗಳು ವಿಶ್ವದಾದ್ಯಂತ ಶ್ರೇಷ್ಠ ವಿಜ್ಞಾನಿಗಳಾಗಿದ್ದರೆ. ಆವರ ಜೀವನ ಉದ್ದಕ್ಕೂ ಶೋಧನೆ ಎಂಬುದು ಅವರಲ್ಲಿ ಉಳಿದುಕೊಂಡಿತು. ಸಂಸ್ಕೃತಿ ಮತ್ತು ಕಲೆಗಳು ಅವರ ಕುಟುಂಬದಲ್ಲಿ ಆಳವಾಗಿ ಹುದುಗಿಸಲ್ಪಟ್ಟವು ಮತ್ತು ಅವರು ವಿಜ್ಞಾನಿಯಾಗಿದ್ದರೂ ಸಹ ಅವರು ಸಂಗೀತ ಮತ್ತು ಕಲಾಕೃತಿಗಳನ್ನು ಪ್ರೀತಿಸುತ್ತಿದ್ದರು, ಆಕೆಯು ತನ್ನ ಹಲವಾರು ವೈಜ್ಞಾನಿಕ ಸ್ನೇಹಿತರೊಂದಿಗೆ ಕಲಾ ಗ್ಯಾಲರಿಗಳಿಗೆ ಹೊಗುತ್ತಿದ್ದರು. NIMR ಪ್ರತಿರಕ್ಷಾಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಯ ನಂತರ ಅನೇಕ ಅಧ್ಯಯನಗಳು ಅವರು ಮುಂದುವರೆಸಿದ್ದರು.

ರೋಗನಿರೋಧಕ ಶಾಸ್ತ್ರಜ್ಞರಿಗೆ ಇಟಾ (ಬ್ರಿಗಿಟ್ಟೆ ಅಸ್ಕೋನಾಸ್) ಇಲ್ಲದ ಜಗತ್ತನ್ನು ಯೋಚಿಸುವುದಕ್ಕೆ ಕಷ್ಟವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. [೧]
  2. [೨]
  3. [೩]
  4. [೪]
  1. https://en.wikipedia.org/wiki/Brigitte_Askonas
  2. https://www.immunology.org/famous-immunologists
  3. https://www.theguardian.com/science/2013/jan/10/brigitte-askonas-obituary
  4. http://www.telegraph.co.uk/news/obituaries/medicine-obituaries/9970276/Professor-Brigitte-Askonas.html