ಸದಸ್ಯ:Rswathishree/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ.

ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ 'ಲೆಪಿಡಾಪ್ಟರಿಸ್ಟ್'ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ.

ಚಿಟ್ಟೆಗಳ ದೇಹವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ:ತಲೆ,ಹೊಟ್ಟೆ ಮತ್ತು ಎದೆಗೂಡು.ಅವು ವಿಶ್ರಾಂತಿ ಪಡೆಯುವಾಗ ತಮ್ಮ ದೇಹದ ಮೇಲೆ ರೆಕ್ಕೆಗಳನ್ನು ಲಂಬವಾಗಿ ಹಿಡಿದುಕೊಳ್ಳುತ್ತವೆ.ಚಿಟ್ಟೆಗಳಿಗೆ ಕಿವಿ ಕೇಳಿಸುವುದಿಲ್ಲ, ಆದರೆ ಕಂಪನಗಳನ್ನು ಸೂಚಿಸಬಹುದು.ಇವು ತಮ್ಮ ಕಾಲಿನ ಅಡಿಯಿಂದ ರುಚಿಯನ್ನು ಗುರುತಿಸುತ್ತದೆ[೧] ಇವುಗಳ ಕಣ್ಣು ೬೦೦೦ ಮಸೂರಗಳಿಂದ ಕೂಡಿವೆ ಹಾಗೂ ಈ ಕಣ್ಣಿನಿಂದ ಇವು ನೇರಳಾತೀತ ಬೆಳಕನ್ನು ಕಾಣಬಹುದು.ಜಗತ್ತಿನ ಪ್ರತಿ ಖಂಡದಲ್ಲಿ ೧,೬೫,೦೦೦ ಜಾತಿಯ ಚಿಟ್ಟೆ ಕಂಡು ಬರುತ್ತದೆ.ಇವು ತಮ್ಮ ರೆಕ್ಕೆಗಳನ್ನು ಸಂಖ್ಯೆ ಎಂಟರ ಆಕೃತಿಯಲ್ಲಿ ಚಲಿಸುತ್ತದೆ.ಇವು ಗಂಟೆಗೆ ೮-೨೦ ಕಿಲೋಮೀಟರ್ ಹಾರಾಡುತ್ತವೆ.ಇವುಗಳಿಗೆ ಹೂವಿನ ಮೇಲೆ ಹಾರುವಾಗಲೇ ಆ ಹೂವಿನ ರುಚಿ ತಿಳಿಯುತ್ತದೆ.ಮಳೆ ಬಂದಾಗ,ಜೋರಾಗಿ ಗಾಳಿ ಬೀಸಿದಾಗ ಇವು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಎಲೆಗಳ ಹಿಂಬದಿಯಲ್ಲಿ ಅವಿತುಕೊಳ್ಳುತ್ತವೆ.


     ಇವುಗಳ ಜೀವನ ಚಕ್ರದಲ್ಲಿ ನಾಲ್ಕು ಹಂತಗಳಿವೆ: ಮೊದಲನೇ ಹಂತ-ಮೊಟ್ಟೆ ,ಎರಡನೇ ಹಂತ-ಕ್ಯಾಟರ್ಪಿಲ್ಲರ್, ಮೂರನೇ ಹಂತ-ಪೊರೆ ಹುಳು, ನಾಲ್ಕನೇ ಹಂತ-ವಯಸ್ಕ ಚಿಟ್ಟೆ.ಇದರ  ಜೀವನ  ಚಿಕ್ಕ, ಅಂಡಾಕಾರದ,ಸಿಲಿಂಡರಾಕಾರದಲ್ಲಿ ಶುರುವಾಗುತ್ತದೆ.[೨]
    ಮೊದಲು ಹೆಣ್ಣು ಚಿಟ್ಟೆ ಮೊಟ್ಟೆಗಳನ್ನು ಇಡುತ್ತವೆ. ಇವು ಎಲೆಗಳ ಮೇಲೆ ಮೊಟ್ಟೆ ಇಡುತ್ತವೆ.[೩] ಇವುಗಳ ಮೊಟ್ಟೆಯ ಆಕಾರ ಚಿಟ್ಟೆಗಳ ಮಾದರಿಯ ಮೇಲೆ ಅವಲಂಬಿಸುತ್ತದೆ.
   ಎರಡನೇ ಹಂತದಲ್ಲಿ ಮೊಟ್ಟೆ ಹೊಡೆದು ಮರಿ  ಹೊರಬಂದಾಗ ,ಈ ಮರಿಯನ್ನು ಕ್ಯಾಟರ್ಪಿಲ್ಲರ್ ಎಂದು ಕರೆಯುತ್ತಾರೆ.ಮೊಟ್ಟೆ ಒಡೆದು ಹೊರಬರಲು ಐದು ದಿನಗಳು ತೆಗೆದುಕೊಳ್ಳುತ್ತವೆ.ಈ ಹ‌ಂತದಲ್ಲಿ ಕ್ಯಾಟರ್ಪಿಲ್ಲರ್ ಗಳು ಯಾವಾಗಳು ತಿನ್ನುತ್ತಿರುತ್ತವೆ. ಈ ಮರಿ ಹುಳುಗಳು ಈ ಹಂತದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ,ಅವು ಈ ಹಂತದಲ್ಲಿ ಹೆಚ್ಚು ತಿನ್ನುತ್ತವೆ.ಇವು ಈ ಹಂತದಲ್ಲಿ ನಿಜವಾಗಿಯು ತುಂಬಾ ಬೇಗನೆ ಬೆಳೆಯುತ್ತವೆ. ಅವು ಹುಟ್ಟಿದ ಎಲೆಯನ್ನು ತಿನ್ನಲು ಆರಂಭಿಸುತ್ತವೆ.ಈ ಹಂತದಲ್ಲಿ ಅವು ಹೆಚ್ಛಾಗಿ ತಿನ್ನಬೇಕು,ಹೀಗೆ ತಿನ್ನುವುದರಿಂದ ಇವು ಬೇಗನೆ ಬೆಳೆಯುತ್ತವೆ.ತಿನ್ನುವುದನ್ನು ಪ್ರಾರಂಭಿಸಿದಾಗ ಇವು ತಕ್ಷಣ ಬೆಳೆಯಲು ಆರಂಭಿಸುತ್ತವೆ ಹಾಗು ಇವುಗಳ ದೇಹ ವಿಸ್ತರಿಸುತ್ತದೆ.
    ಮೂರನೆಯ ಹಂತದಲ್ಲಿ ,ಈ ಹಂತವನ್ನು ಕ್ರಿಸಾಲಿಸ್ ಹಂತ ಎನ್ನುತ್ತಾರೆ.  ಇವುಗಳ ಪೊರೆ ವಿಸ್ತಾರಗೊಳ್ಳುವುದಿಲ್ಲ ಆದ್ದರಿಂದ ಇವು ತಮ್ಮ ಕವಚವನ್ನು ಹಲವಾರು ಬಾರಿ ಕಳಚುತ್ತಾ ಬೆಳೆಯುತ್ತವೆ.ಈ ಮರಿ ಹುಳುಗಳು ಬೆಳೆದ ನಂತರ ಇವು ಪೊರೆ ಹುಳುಗಳಾಗಿ ಮಾರ್ಪಾಡಾಗುತ್ತವೆ.ಹೊರಗಡೆಯಿಂದ ಈ ಪೊರೆ ಒಳಗಡೆ ಮರಿಹುಳು ವಿಶ್ರಾಂತಿಸುತ್ತಿರುವಂತೆ ಕಾಣುತ್ತದೆ ಆದರೆ ಒಳಗಡೆ ಮರಿ ಹುಳು ಕ್ಷಿಪ್ರ ಬದಲಾವಣೆಯನ್ನು ಒಳಗೊಂಡಿರುತ್ತದೆ.ಹೆಚ್ಚಿನ ಜನರಿಗೆ  ತಿಳಿದಿರುವಂತೆ ಮರಿ ಹುಳುಗಳು ದಪ್ಪನೆಯ ಸಣ್ಣ ಮತ್ತು ಯಾವುದೇ ರೆಕ್ಕೆಗಳನ್ನು  ಹೊಂದಿರುವುದಿಲ್ಲ.
    ಕೊನೆಯ ಹಂತ ,ಮರಿ ಹುಳುಗಳ ಹಳೆಯ ದೇಹದ ಭಾಗಗಳು ಗಮನಾರ್ಹ ಬದಲಾವಣೆಗಳನ್ನು ಒಳಗೊಂಡು ಚಿಟ್ಟೆಯ ಸುಂದರ ಭಾಗಗಳಾಗಿ ಹೊರಹೊಮ್ಮುತ್ತವೆ.ಟಿಶ್ಯೂ,ಕಾಲುಗಳು ಮತ್ತು ಅದರ ಅಂಗಗಳು ಪೂರ್ತಿಯಾಗಿ ಬದಲಾಗಿ ಚಿಟ್ಟಯ ಕೊನೆಯ ಹಂತವಾದ ಜೀವನ ಚಕ್ರಕ್ಕೆ ಸಿದ್ದವಾಗಿರುತ್ತದೆ. ಅಂತಿಮವಾಗಿ ಎಲ್ಲಾ ರೂಪದ ಬದಲಾವಣೆಗಳ ನಂತರ ಅದು ಪೊರೆಯ ಹೊರಗೆ ಬರುತ್ತದೆ.ಪೊರೆಯ ಒಳಗೆ ತಮ್ಮ ಇಡೀ ದೇಹವನ್ನು ಬಿಗಿಯಾಗಿ ಹೊದಿಕೆಯಾಗಿರುವುದರಿಂದ,ಅದು ಪೊರೆಯ ಆಚೆ ಬಂದಾಗ ಅದರ ಮೃದುವಾದ ರೆಕ್ಕೆಗಳು ಮೈಗೆ ಅಂಟಿಕೊಂಡಿರುತ್ತದೆ.ಹೊರಬಂದ ಮೂರು ಅಥವ ನಾಲ್ಕು ಗಂಟೆಯ ಒಳಗೆ ಚಿಟ್ಟೆ ಹಾರುವುದನ್ನು ಕಲಿತು,ತನ್ನ ಜೀವನ ಸಂಗಾತಿಯನ್ನು ಹುಡುಕಿ ಪುನರುತ್ಪಾದಿಸುತ್ತದೆ.ನಂತರ ಹೆಣ್ಣು ಚಿಟ್ಟೆಗಳು ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ.ಮತ್ತೆ ಮೊದಲಿನಿಂದ ಚಿಟ್ಟೆಯ ಜೀವನ ಚಕ್ರ ಪ್ರಾರಂಭವಾಗುತ್ತದೆ.
ಚಿಟ್ಟೆ
   ಚಿಟ್ಟೆಗಳ ಆಹಾರ-ಇವು ನೀರಿನಲ್ಲಿ ಕರಗುವ ಪದಾರ್ಥಗಳನ್ನು  ತಿನ್ನುತ್ತವೆ.ಇವು ಹೆಚ್ಚು ಮಕರಂದವನ್ನು ಹೂವು,ಸಗಣಿ,ಪರಾಗ ಅಥವ ಕೊಳೆತಿರುವ ಹಣ್ಣಿನಿಂದ ಹೀರುತ್ತವೆ.ಸಿಹಿಯಾದ ಮಕರಂದವನ್ನು ಹೀರುವುದರಿಂದ ,ಇವುಗಳಿಗೆ ಶಕ್ತಿ ಹಾಗು ಹಾರವುದಕ್ಕೆ ಸಹಾಯ ಮಾಡುತ್ತವೆ. ಇವು ಉಪ್ಪು ಮತ್ತು ಬೆವರಿನಲ್ಲಿ ಕಂಡುಬರುವ ಸೋಡಿಯಂಗೆ ಆಕರ್ಷಿಸಲ್ಪಡುತ್ತವೆ.ಚಿಟ್ಟೆಗಳನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಂಡಿರುವ ಹಲವಾರು ಜೀವಿಗಳಿವೆ.ತಮ್ಮ ದಿನ ನಿತ್ಯದ ಊಟಕ್ಕೆ ಚಿಟ್ಟೆಗಳನ್ನೇ ಅವಲಂಬಿಸಿ ಬದುಕುತ್ತಿರುವ ಹಲವಾರು ಪ್ರಾಣಿಗಳಿವೆ.ಚಿಟ್ಟೆಗಳ ಪರಭಕ್ಷಕರಲ್ಲಿ ಇರುವೆ,ಕಪ್ಪೆ,ನೆಲಗಪ್ಪೆಗಳು,ಇಲಿಗಳು,ಹಾವುಗಳು,ಹಲ್ಲಿಗಳು ಮತ್ತು ಕೋತಿಗಳು ಸೇರಿವೆ.ಚಿಟ್ಟೆಗಳ ಪ್ರಾಮುಖ್ಯತೆ-ಅವರು ಕನಿಷ್ಠ ೫೦ ದಶಲಕ್ಷ ವರ್ಷಗಳಿಂದಲು ಇವೆ ಮತ್ತು ಸುಮಾರು ೧೫೦ ಮಿಲಿಯನ್ ವರ್ಷಗಳ ಹಿಂದೆ ವಿಕಸನ ಹೊಂದಿದೆ.ಇವುಗಳಲ್ಲಿ ೨೫೦೦೦೦ಕ್ಕೂ ಅತ್ಯಂತ ಹೆಚ್ಚು ಹಾಗೂ ವಿಭಿನ್ನ ಜಾತಿಗಳಿವೆ.ಇವುಗಳನ್ನು ಪರಿಸರ ಸ್ನೇಹಿಯಾಗಿ ಜಾಹಿರಾತುಗಳಲ್ಲಿ ಬಳಸಲಾಗುತ್ತದೆ.ಇವು ಸ್ವಾತಂತ್ರ್ಯ,ಸೌಂದರ್ಯ ಹಾಗು ಶಾಂತಿಯನ್ನು ಬಿಂಬಿಸುತ್ತವೆ.ಚಿಟ್ಟೆಗಳು ಗಾಳಿ ಹಾಗು ಸುಗಂಧಗಳನ್ನು ಗ್ರಹಿಸಲು ತಮ್ಮ ಆಂಟೆನಾಗಳನ್ನು ಬಳಸುತ್ತವೆ.ಬೆಚ್ಚನೆಯ ತಾಪಮಾನವು ಚಿಟ್ಟೆಗಳ ಮೇಲೆ ಒಳ್ಳೆಯ ಹಾಗು ಕೆಟ್ಟೆನೆಯ ಪರಿಣಾಮವನ್ನು ಬೀರುತ್ತವೆ.ಚಿಟ್ಟೆಗಳ ಮೇಲೆ ಅಧ್ಯಾಯನ ನಡೆಸುವ ವ್ಯಕ್ತಿಯನ್ನು ಲಿಪಿಡಾಪ್ಟರ್ ಎಂದು ಕರೆಯಲಾಗುತ್ತದೆ.ಈ  ಲಿಪಿಡಾಪ್ಟರ್ ಇವುಗಳ ಮೇಲೆ ಸಂಶೋಧನೆ ನಡೆಸುಯತ್ತಾರೆ.ಈ ಸಂಶೋಧನೆಯನ್ನು ಲೆಪಿಡೊಪ್ಟೆರಾ ಎಂದು ಕರೆಯುತ್ತಾರೆ.ದುಃಖಕರವೆಂದರೆ,ನಾಲ್ಕು ಚಿಟ್ಟೆಗಳ ಜಾತಿ ಕಳೆದ ಶತಮಾನದಲ್ಲಿ ಗತಿಸಿದೆ.ಬ್ರಿಟಿಷ್ ಚಿಟ್ಟೆಗಳು ಸುಮಾರು ಮುಕ್ಕಾಲಷ್ಟು ಇಳಿಮುಖಗೊಳ್ಳುತ್ತಿವೆ ಹಾಗು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿವೆ.೫೬ ಜಾತಿಗಳ ಚಿಟ್ಟೆಗಳು ,ಬ್ರಿಟನ್ ಹಾಗು ಐರ್ಲೆಂಡ್ನಲ್ಲಿ ಕ್ಷೀಣಿಸುತ್ತಿವೆ.ಇವು ಅಭೂತಪೂರ್ಣ ಪರಿಸರ ಬದಲಾವಣೆಯಿಂದ  ಕ್ಷೀಣಿಸುತ್ತಿವೆ.ಸರ್ಕಾರವು  ಚಿಟ್ಟೆಗಳನ್ನು ಜೀವವೈವಿಧ್ಯಮದ ಸೂಚಕ ಎಂದು ಗುರುತಿಸಲಾಗಿದೆ. ಚಿಟ್ಟೆಗಳು ಕ್ಷೀಣಿಸುತ್ತಿವೆ,ಅವು ಬದಕಲು ಹೋರಾಡುತ್ತಿವೆ.
   
  ಚಿಟ್ಟೆಗಳ  ಬಗ್ಗೆ ತಿಳಿಯದಿರುವ ಸತ್ಯ-

ಚಿಟ್ಟೆಗಳು ತಮ್ಮ ಪಾದದ ಸಹಾಯದಿಂದ ರುಚಿ ನೋಡುತ್ತವೆ.ಚಿಟ್ಟೆಗಳಿಗೆ ಬಾಯಿ ಇಲ್ಲಾ.ಇವು ಹಾರಬೇಕಾದರೆ ಇವುಗಳಿಗೆ ಸೂರ್ಯನ ಬೆಳಕು ಅಗತ್ಯವಿದೆ.ಇವು ಹಗಲಿನಲ್ಲಿ ಮಾತ್ರ ಹಾರುತ್ತವೆ,ಕತ್ತಲಾದ ಮೇಲೆ ಹಾರುವುದಿಲ್ಲಾ.ಇವು ಕೆಲವು ಬಣ್ಣಗಳ್ಳನ್ನು ಮಾತ್ರ ನೋಡಬಲ್ಲವು.ಇವು ಕೆಂಪು,ಹಳದಿ ಮತ್ತು ಹಸಿರು ಬಣ್ಣವನ್ನು ಮಾತ್ರಾ ನೋಡಬಲ್ಲವು.ಇವು ತುಂಬಾ ತಂಪು ವೇಳೆಯಲ್ಲಿ ಹಾರಲು ಆಗುವುದಿಲ್ಲಾ,ಇವುಗಳು ಹಾರಲು ಬೆಚ್ಚಗಿನ ವಾತಾವರಣ ಬೇಕು.ಇವು ತಮ್ಮ ದೇಹದ ಹೊರಗೆ ತಮ್ಮ ಅಸ್ಥಿಪಂಜರ ಹೊಂದಿವೆ,ಇದು ಅದರ ದೇಹವನ್ನು ರಕ್ಷಿಸುತ್ತವೆ.ಇದರಿಂದ ಅದರ ದೇಹದಲ್ಲಿರುವ ನೀರಿನ ಅಂಶ ಒಳಗಡೆ ಇರುತ್ತವೆ.ಇದರಿಂದ ಇದರ ದೇಹದಲ್ಲಿ ಸದಾ ನೀರಿನ ಅಂಶ ಇರುತ್ತವೆ.ತೇವಾಂಶ ಎಂದೂ ಒಣಗುವುದಿಲ್ಲಾ. ಚಿಟ್ಟೆಗಳು ಹಾಗು ಪತಂಗಗಳ ಜೀವ ಚಕ್ರದ ಬಗ್ಗೆ ನೈಸರ್ಗಿಕ ವಿಶ್ವದ ಕುರಿತು ಮಕ್ಕ/ಲಿಗೆ ಕಳಿಸಲು ಬಳಸಲಾಗುತ್ತಿದೆ.ಚಿಟ್ಟೆಗಳು ಹಾಗು ಪತಂಗಗಳ ನಮ್ಮ ನೈಸರ್ಗಿಕ ಪರಂಪರೆಯ ಭಾಗವಾಗಿದೆ ಮತ್ತು ೩೦೦ ವರ್ಷಗಳ ಕಾಲ ಅಧ್ಯಾಯನ ನಡೆಸಲಾಗಿದೆ.

  1. http://www.wafdc.org.au/kids/amazing-facts-about-butterflies
  2. http://www.kidsbutterfly.org/life-cycle
  3. http://www3.canisius.edu/~grandem/butterflylifecycle/The_Lifecycle_of_a_Butterfly_print.html