ಸದಸ್ಯ:Roshita saldanha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಭಿನಂದನ್ ವರ್ತಮಾನ್

ಅಭಿನಂದನ್ ವರ್ತಮಾನ್ ಭಾರತೀಯವಾಯುಪಡೆಯಲ್ಲಿ ಒಬ್ಬ ವಿಂಗ್-ಕಮಾಂಡರ್. ೨೦೧೯ ರ ಭಾರತ-ಪಾಕಿಸ್ತಾನದ ಬಿಕ್ಕಟ್ಟಿನ ಸಂದರ್ಭದಲ್ಲಿ, ಪಾಕಿಸ್ತಾನದ ವಾಯುದಾಳಿಯಲ್ಲಿ ತನ್ನ ವಿಮಾನವನ್ನು ಹೊಡೆದ ನಂತರ ಅವರು ೬೦ ಗಂಟೆಗಳ ಕಾಲ ಪಾಕಿಸ್ತಾನದ ಸೆರೆಯಲ್ಲಿದ್ದರು.

ಆರಂಭಿಕ ಜೀವನ ಮತ್ತು ವೃತ್ತಿಜೀವನ[ಬದಲಾಯಿಸಿ]

ಅಭಿನಂದನ್ ವರ್ತಮಾನ್(೨೧ ಜೂನ್ ೧೯೮೩[೧]) ,ತಂದೆ ಸಿಂಹಕುಟ್ಟಿ ವರ್ತಮಾನ್, ಭಾರತೀಯ ವಾಯುಪಡೆಯಲ್ಲಿ ಏರ್ ಮಾರ್ಷಲ್ (ಆಫ್ -೮) ಆಗಿ ಕೆಲಸ ನಿರ್ವಹಿಸುತ್ತಿದ್ದರು , ತಾಯಿ ಶೋಭಾ ವರ್ತಮಾನ್> ವೃತ್ತಿಯಲ್ಲಿ ವೈದ್ಯರು. ಅಭಿನಂದನ್ರವರು ತನ್ವಿ ಮಾರ್ವಾಹಾರನ್ನು ಮದುವೆಯಾಗಿ ಚೆನೈನಲ್ಲಿ ವಾಸಿಸುತ್ತಿದ್ದರು.ನ್ಯಾಶನಲ್ ಡಿಫ಼ೆನ್ಸ್ ಅಕಡೆಮಿಯ ಪದವೀಧರರಾಗಿದ್ದ ಅವರು,೧೯ ಜೂನ್ ೨೦೦೪ರಂದು ಭಾರತೀಯ ವಾಯುಪಡೆಯ ಯುದ್ದ ಫ಼್ಲೈಯಿಂಗ್ ಅಧಿಕಾರಿಯಾಗಿ ನೇಮಕಗೊಂಡರು.

ಯುದ್ಧ ಖೈದಿಯ ಹಸ್ಥಾಂತರ[ಬದಲಾಯಿಸಿ]

ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪೈಲಟ್ ರವರು ಮಾಡಿದ ಭಾರತೀಯ ವಾಯುಪಡೆಯ ಮಿಗ್ -೨೧,ಪಾಕಿಸ್ತಾನ ಏರ್ ಫೋರ್ಸ್ ಎಫ್ -16 ಫೈಟರ್ ವಿಮಾನವನ್ನು ಹೊಡೆದುರುಳಿಸಿತ್ತು.ನಡೆದ ದಾಳಿಯಲ್ಲಿ ಅವರು ಪಾಕಿಸ್ತಾನದ ಭೂಪ್ರದೇಶವನ್ನು ದಾಟಿದರು, ಪಾಕಿಸ್ತಾನದ ನಿಯಂತ್ರಣ ಕಾಶ್ಮೀರದ ಹ್ರ್ರಾನ್ ಗ್ರಾಮದಲ್ಲಿ, ನಿಯಂತ್ರಣ ರೇಖೆಯಿಂದ ಸುಮಾರು 7 ಕಿ.ಮೀ. ದೂರದಲ್ಲಿ ಸುರಕ್ಷಿತವಾಗಿ ಅಭಿನಂದನ್ ಇಳಿದುಹೋದರು. ೨೮ ಫೆಬ್ರುವರಿ ೨೦೧೯ ರಂದು, ಪಾಕಿಸ್ತಾನದ ಸಂಸತ್ತಿನ ಜಂಟಿ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ "ಶಾಂತಿಯ ಸೂಚಕ[೨]" ಎಂದು ಅಭಿನಂದನ್ರವರನ್ನು ಬಿಡುಗಡೆಮಾಡುವುದ್ದಾಗಿ ಘೋಷಿಸಿದ್ದರು, ಮರುದಿನ ಮಾರ್ಚ್ ೧,೨೦೧೯ರಂದು ಅಭಿನಂದನ್ ಭಾರತ-ಪಾಕಿಸ್ತಾನ ಗಡಿಯನ್ನು ದಾಟಿದರು. ಮರಳಿದ ಅಭಿನಂದನ್ ನನ್ನು ಗೌರವಪುರ್ವಕವಾಗಿ ಭಾರತ ಸ್ವಾಗತಿಸಿತು. ಮಹಾವೀರ ಜಯಂತಿ[೩](ಎಪ್ರಿಲ್ ೧೭)ರಂದು ಅಭಿನಂದನ್ ಅವರಿಗೆ 'ಲಾಡ್೯ ಮಹಾವೀರ್ ಅಹಿಂಸಾ ಪುರಸ್ಕಾರ[೪]' ನೀಡಲಾಗುವುದು ಎಂದು ಅಖಿಲ ಭಾರತೀಯ ಡಿಜಿಂಬರ ಜೈನ್ ಮಹಾಸಮಿತಿಯಲ್ಲಿ ಘೋಷಿಸಿದ್ದರು.

ಮೀಸೆ[ಬದಲಾಯಿಸಿ]

ವರ್ತಮಾನ್ ಮೀಸೆ[೫] ಭಾರತದಲ್ಲಿ ಪ್ರವೃತ್ತಿಯಾಗಿದೆ. ಇದನ್ನು ಈಗ ವ್ಯಾಪಕವಾಗಿ ಭಾರತದಲ್ಲಿ "ಅಭಿನಂದನ್-ಕಟ್" ಎಂದು ಕರೆಯಲಾಗುತ್ತಿದೆ.ಸಿಂಗಮ್ ಚಿತ್ರ ಸರಣಿಯಲ್ಲಿ ನಟ ಸೂರ್ಯರವರ ಮೀಸೆಯನ್ನು ಹೋಲುತ್ತದೆ ಮತ್ತು ಪೆಟ್ಟಾದಲ್ಲಿ ರಜನಿಕಾಂತ್ ಮೀಸೆಯನ್ನು ಹೋಲುತ್ತದೆ. ಹಲವಾರು ಕಂಪನಿಗಳು ತಮ್ಮ ಜಾಹೀರಾತುಗಳಲ್ಲಿ ಮೀಸೆಯನ್ನು ಬಳಸಿದ್ದರು.ಟ್ವಿಟ್ಟರ್ನಲ್ಲಿ ಪೋಸ್ಟ್ ಆದ ಜಾಹೀರಾತು, ೨೪ ಗಂಟೆಗಳ ಒಳಗೆ ೧೭೦,೦೦೦ ಕ್ಕಿಂತ ಹೆಚ್ಚಿನ ವೀಕ್ಷಣೆಗಳನ್ನು ಸ್ವೀಕರಿಸಿದೆ. ಪಿಜ್ಜಾ ಹಟ್ ಮಾರ್ಚ್ ೩, ೨೦೧೯ ರಂದು ಅಭಿನಂದನ್ ಮೀಸೆಯನ್ನು ಸಹ ಟ್ವೀಟ್ ಮಾಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]