ವಿಷಯಕ್ಕೆ ಹೋಗು

ಸದಸ್ಯ:Ranjitha171/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಬಿಮಲ್ ಗೋಸ್ವಾಮಿ

ಪರಿಚಯ

[ಬದಲಾಯಿಸಿ]

ಸುಬಿಮಲ್ ಗೋಸ್ವಾಮಿರವರು ಒಬ್ಬ ಭಾರತೀಯ ಅಂತರಾ ರಾಷ್ರ್ಟೀಯ ಫುಟ್ಬಾಲ್ ಆಟಗಾರ ಮತ್ತು ಪ್ರಥಮ ದರ್ಜೆಯ ಕ್ರಿಕೆಟಿಗರಾಗಿದ್ದಾರೆ. ಇವರು ಅವಿಭಜಿತ ಬಂಗಾಳದ ಕಿಶೋರ್ಗಂಜ್ ಜಿಲ್ಲೆಯಲ್ಲಿ(ಈಗಿನ ಬಾಂಗ್ಲಾದೇಶದಲ್ಲಿ) ಜನವರಿ ೧೯೩೮ ರಂದು ಜನಿಸಿದರು. ಸ್ಟ್ರೈಕರ್ ಆಗಿ ,ಇವರು ಐವತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.ಪ್ರಥಮ ಕ್ರಿಕೆಟಿಗರಾಗಿ ಇವರು ಬಂಗಾಳ ರಣಜಿ ಟ್ರೋಫಿಯನ್ನು ಆಡಿದ್ದಾರೆ. ಇವರ ವಿಧ್ಯಾಭ್ಯಾಸ ಕೋಲ್ಕತಾದ ಥ್ರಿಥೊಪತಿ ಇನ್ಸ್ಟಿಟ್ಯುಷನ್ ಹಾಗೂ ಕುಮಾರ್ ಅಸುಟೋಷ್ ಇನ್ಸ್ಟಿಟ್ಯುಷನಲ್ಲಿ ಆಯಿತು. ಇವರು ಫುಟ್ಬಾಲ್ ಆಟವನ್ನು ತಮ್ಮ ಶಾಲೆಯ ಕ್ರೀಡಾ ತರಬೇತುದಾರರಾದ ಸಿಬ್ದಾಸ್ ಬ್ಯಾನರ್ಜಿಯಿಂದ ಕಲಿತರು.

ಕ್ರೀಡೆ ಜೀವನ

[ಬದಲಾಯಿಸಿ]

ಇವರ ಫುಟ್ಬಾಲ್ ಜೀವನದ ಕುರಿತು ಹೇಳುವುದಾದರೆ ಇವರಿಗೆ ೮ ವರ್ಷವಿರುವಾಗ ಇವರು ಮೋಹನ್ ಬಗಾನ್ ಜೂನಿಯರ್ ತಂಡವನ್ನು ೧೯೪೬ ರಲ್ಲಿ ಸೇರಿಕೊಂಡರು. ೧೯೫೪ರ ವರೆಗೆ ಜೂನಿಯರ್ ತಂಡದಲ್ಲಿದ್ದು ನಂತರ ಮೋಹನ್ ಬಗಾನಿನ ಹಿರಿಯ ತಂಡಕ್ಕೆ ಪದವಿ ಪಡೆದರು.ಬ್ಮೋಹನ್ ಬಗಾನ್ ಕ್ಲಬ್ಗೆ ಆಡಲು ಭಾವನಾತ್ಮಕ ಮತ್ತು ಹೆಮ್ಮೆಯಿರುವುದರಿಂದ ಅವರು ಎಂದಿಗೂ ಹಣವನ್ನು ಸ್ವೀಕರಿಸಲ್ಲಿಲ್ಲವೆಂದು ಗೋಸ್ವಾಮಿ ಹೇಳಿದರು. ಕ್ಲಬ್ನಲ್ಲಿ ಅಭ್ಯಾಸದ ನಂತರ ತಾವು ಬಾಳೆಹಣ್ಣು ಮತ್ತು ಟೋಸ್ಟ್ ತುಂಡನ್ನು ಪಡೆದುಕೊಂಡಿದ್ದೇವೆ, ಅದು ತಮಗೆ ಸಾಕು ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಆಡಲು ಅವಕಾಶ ಬೇಕಾಗ್ಗಿತ್ತೆ ವಿನಹಃ ಸಂಬಳವಲ್ಲ. ಅನಂತರ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಪಡೆದು ೪೫೦ ವೇತನ ಪಡೆದರು. ಚೀನಾ ಒಲಂಪಿಕ್ ತಂಡದ ವಿರುದ್ಧ ಹೋರಾಡಿದ ಇಂಡಿಯನ್ ಫುಟ್ಬಾಲ್ ತಂಡದಲ್ಲಿ ೧೯೫೬ ರಲ್ಲಿ ಅಂತರಾಷ್ಟ್ರಿಯ ಫುಟ್ಬಾಲಿನಲ್ಲಿ ಚುನಿ ಗೋಸ್ವಾಮಿಯವರು ಪಾದಾರ್ಪಣೆ ಮಾಡಿದರು. ಅಚ್ಚುಕಟ್ಟಾದ ಡ್ರಿಬ್ಲಿಂಗ್ ಕೌಶಲ್ಯಗಳು ಹಾಗೆಯೇ ಗೋಲನ್ನು ತಲುಪಲು ಮಾಡುವ ಪ್ರಯತ್ನ ಎರಡನ್ನು ಹೊಂದಿದ ಇವರ ಸಾಮರ್ಥ್ಯ ಎದುರಾಳಿ ತಂಡಕ್ಕೆ ಕಂಡು ಹಿಡಿಯಲು ಕಷ್ಟಕರವಾಗಿತ್ತು. ಇವರ ೩೬೦ ಡಿಗ್ರಿ ತಿರುವುಗಳು ಎದುರಾಳಿ ತಂಡವನ್ನು ಹೊಡೆಯಲು ಆಯ್ಕೆಮಾಡಿದ ಆಯುಧವಾಗಿದ್ದು ಇದು ಎದುರಾಳಿ ತಂಡವನ್ನುಸಮಯಕ್ಕೆ ತಕ್ಕಂತೆ ಸೋಲಿಸಲು ಸಹಾಯಕಾರಿಯಾಗಿತ್ತು.

ಪ್ರಶಸ್ತಿಗಳು

[ಬದಲಾಯಿಸಿ]

ಮೋಹನ್ ಬಗಾನಿನ ಕ್ಬಬ್ ನಲ್ಲಿ ೧೫ ವರ್ಷಗಳವರೆಗೆ ಸತತವಾಗಿ ಇವರ ತಂಡವು ೧೦ ಕಲ್ಕತ್ತಾ ಲೀಗ್ ಪ್ರಶಸ್ತಿಗಳನ್ನು ಗೆದ್ದು ೭ ಡ್ಯುರಾಂಡ್ ಕಪ್ ಫೈನಲ್ ತಲುಪಿತು. ಈ ಸಂದರ್ಭದಲ್ಲಿ ಭಾರತ ತಂಡವು ಚೀನಾದ ವಿರುದ್ಧ ೧-೦ ಅಂತರದಲ್ಲಿ ಜಯಗಳಿಸಿತು. ಇದಲ್ಲದೆ,ಸುಮಾರು ಐವತ್ತು ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ ಇವರು ಫುಟ್ಬಾಲ್ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದರು.ಈ ಪಂದ್ಯಗಳಲ್ಲಿ ಒಲಂಪಿಕ್ಸ್, ಮೆರ್ಡೆಕಾ ಕಪ್, ಏಷ್ಯನ್ ಗೇಮ್ಸ್, ಏಷ್ಯಾ ಕಪ್ ಸೇರಿವೆ. ಜರ್ಕಾಟದಲ್ಲಿ ನಡೆದ ಏಷ್ಯನ್ ನ ಗೇಮ್ಸ್ ನ ಫುಟ್ಬಾಲ್ ತಂಡವನ್ನು ಚಿನ್ನದ ಪದಕ ಗೆಲ್ಲುವಂತೆ ಮಾಡಿ ಹಾಗೆಯೆ ೧೯೬೪ ರಲ್ಲಿ ಇಸ್ರೇಲ್ನಲ್ಲಿ ನಡೆದ ಏಷ್ಯಾ ಕಪ್ ಸೊಕರ್ ಪಂದ್ಯಾವಳಿಯಲ್ಲಿ ಸಿಲ್ವರ್ ಪದಕವನ್ನು ಗೆಲ್ಲುವಂತೆ ಮಾಡಿದ ಗೌರವ ಇವರಿಗೆ ಸಲ್ಲಿದೆ.

ಕೊಡುಗೆಗಳು

[ಬದಲಾಯಿಸಿ]

ಇವರಿಗೆ ಅನೇಕ ಕ್ಲಬ್ ಗಳಿಂದ ಕರೆಬಂದರು ಕೂಡ ೧೯೬೮ಲ್ಲಿ ನೀವೃತ್ತಿಯಾಗುವವರೆಗು ಮೋಹನ್ ಬಗಾನ್ ಪರವಾಗಿ ಆಡುತ್ತಿದ್ದರು. ಫುಟ್ಬಾಲ್ ಅಡುವುದಷ್ಟೆ ಅಲ್ಲದೆ ಕ್ರಿಕೆಟಿನಲ್ಲು ಗೋಸ್ವಾಮಿಯವರು ಸಮರ್ಥ ಆಟಗಾಗಾರನಾಗಿದ್ದು ಫೈನಲ್ ಕ್ಲಾಸ್ನ ೪೬ ಪಂದ್ಯಗಳಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದರು. ಚುನಿಬಿಯಲ್ಲಿ ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್ ವ್ರತ್ತಿಜೀವನವನ್ನು ಆರಂಭಿಸಿದ್ದು ೧೯೬೨ರ ಬಂಗಾಳದ ರಣಜಿ ಟ್ರೋಫಿಯಲ್ಲಿ. ಇವರು ಬಲಗೈ ಬ್ಯಾಟ್ಸ್ ಮನ್ ಮತ್ತು ಬಲಗೈ ಮಧ್ಯಮ ಪಾಸರ್ ಆಗಿದ್ದರು. ಕಾಲಕಲಕ್ಕೆ ಬಂಗಾಳ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದರು ಮತ್ತು ತಂಡವನ್ನು ರಣಜಿ ಟ್ರೋಫಿಯಲ್ಲಿ ಎರಡು ಬಾರಿ ಅಂತಿಮ ಹಂತಕ್ಕೆ ತಲುಪುವಂತೆ ಮಾಡಿದರು. ಒಟ್ಟಾರೆ ಫಸ್ಟ್ ಕ್ಲಾಸ್ ಕ್ರಿಕೆಟ್ ವ್ರತ್ತಿಜೀವನದಲ್ಲಿ ಗೋಸ್ವಮಿಯವರು ೪೬ ಪಂದ್ಯಗಳನ್ನು ಆಡಿದ್ದು ,ಅದರಲ್ಲಿ ಒಂದು ಶತಕವನ್ನು ಒಳಗೊಂಡಂತೆ ೧೫೯೨ ಓಟಗಳನ್ನು ಗಳಿಸಿದರು,ಬ್ಯಾಟಿಂಗ್ ಸರಾಸರಿ ೨೮.೪೨ ರನ್ಗಳು ಮತ್ತು ಅತ್ಯುನ್ನತ ೧೦೩ ರನ್ಗಳನ್ನು ಗಳಿಸಿದರು. ಚುನಿ ಗೋಸ್ವಾಮಿಯವರದ್ದು ಒಂದು ಬಹುಮುಖ ವ್ಯಕ್ತಿತ್ವ. ಇವರು ಪ್ರಥೋಮ್ ಪ್ರೇಮ್ ಎಂಬ ಬಂಗಾಳಿ ಚಲನಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನು ನಟಿಸಿದ್ದಾರೆ. ೨೦೦೫ರಲ್ಲಿ ಇವರು ಕೋಲ್ಕತ್ತಾದ ಶರೀಫ್ ಆಗಿದ್ದರು. ಹಾಕಿಯಲ್ಲೂ ಕೂಡ ಆಸಕ್ತಿಹೊಂದಿದ ಇವರು ದಕ್ಷಿಣ ಕ್ಲಬ್ನಲ್ಲಿ ಲಾನ್ ಟೆನ್ನಿಸ್ ಆಡಿದ್ದಾರೆ. ೧೯೮೬ರಿಂದ ೧೯೮೯ ರವರೆಗೆ ಜಾರ್ಖಂಡ್ ರಾಜ್ಯದ ಟಾಟಾ ಫುಟ್ಬಾಲ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ಚುನಿ ಗೋಸ್ವಾಮಿಯವರು ತಮ್ಮ ವ್ರತ್ತಿಜೀವನದ ಸಮಯದಲ್ಲಿ ಮತ್ತು ಭಾರತೀಯ ಫುಟ್ಬಾಲ್ಗೆ ನೀಡಿದ ಕೋಡುಗೆಗಾಗಿ ನಿವ್ರತ್ತಿಯ ನಂತರ ಹಲವಾರು ಪ್ರಶಸ್ತಿಗಳನ್ನು ಗೆದ್ದರು.ಇವರಿಗೆ ಜಯಗಳಿಸಿದ ಪ್ರಮುಖ ಪ್ರಶಸ್ತಿಗಳೆಂದರೆ ೧೯೬೨ರಲ್ಲಿ ಏಷ್ಯಾದ ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿ, ೧೯೬೩ರಲ್ಲಿ ಅರ್ಜುನ ಪ್ರಶಸ್ತಿ, ೧೯೮೩ ರಲ್ಲಿ ಪದ್ಮಶ್ರಿ ಪ್ರಶಸ್ತಿ ಹಾಗೂ ೨೦೦೫ರಲ್ಲಿ ಮೋಹನ್ ಬಗಾನ್ ರತ್ನ ಲಭಿಸಿದೆ. ಏಷ್ಯಾದ ಫುಟ್ಬಾಲ್ ತಂಡದ ವೇಳಾಪಟ್ಟಿಯಲ್ಲಿ ಭಾರತದ ಫುಟ್ಬಾಲ್ ತಂಡವನ್ಣು ಸೇರ್ಪಡೆ ಆಗುವಂತೆ ಮಾಡಿದ ಹೆಮ್ಮೆಯ ಫುಟ್ಬಾಲ್ ಆಟಗಾರ.

ಉಲ್ಲೇಖಗಳು

[ಬದಲಾಯಿಸಿ]

[] [] []

  1. https://en.wikipedia.org/wiki/Chuni_Goswami
  2. https://www.sportskeeda.com/.../when-indian-football-legend-chuni-goswami-rejected...
  3. https://www.thehindu.com › Today's Paper › SPORT