ಸದಸ್ಯ:Ranjana Reddy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಷ್ಕಾ ಶೆಟ್ಟಿ[ಬದಲಾಯಿಸಿ]

ಅನುಷ್ಕಾ ಶೆಟ್ಟಿ
Born೭ ನವೆಂಬರ್ ೧೯೮೧
ಮಂಗಳೂರು, ಬೆಂಗಳೂರು
Nationalityಭಾರತೀಯ
Other namesಸ್ವೀಟಿ ಶೆಟ್ಟಿ
Educationಬಿ.ಸಿ.ಎ
Occupation(s)ನಟಿ, ಯೊಗ ಶಿಕ್ಷಕಿ

'ಸ್ವೀಟಿ ಶೆಟ್ಟಿ', (೭ ನವೆಂಬರ್ ೧೯೮೧ರಲ್ಲಿ ಜನನ) ಇವರು ತಮ್ಮ ಸ್ಟೇಜ್ ಹೆಸರಾದ ಅನುಷ್ಕಾ ಶೆಟ್ಟಿ[೧] ಚಿರಪರಿಚಿತರಾದ ಭಾರತೀಯ ನಟಿ ಮತ್ತು ರೂಪದರ್ಶಿ ತೆಲುಗು ಮತ್ತು ತಮಿಳು ಚಲನಚಿತ್ರಗಳು ಪ್ರಧಾನವಾಗಿ ಕೆಲಸ ಮಾಡುತ್ತಾರೆ.

ಅವರು ೨೦೦೫ರಲ್ಲಿ ತೆಲುಗು ಚಿತ್ರ ಸೂಪರ್ ಮೂಲಕ ಚೊಚ್ಚಲ ನಟನೆಯನ್ನು ಮಾಡಿದರು. ಅವರು ಕ್ಯಾತ ನಟಿಯಾಗಲು ವಿಕ್ರಮಾರ್ಕುಡು (೨೦೦೬), ಅರುಂಧತಿ (೨೦೦೯), ವೇದಂ (೨೦೧೦), ರುದ್ರಮಾದೇವಿ (೨೦೧೫) ಮತ್ತು ಬಾಹುಬಲಿ: ದಿ ಬಿಗಿನಿಂಗ್ ಎಂಬ ತೆಲುಗು ಚಲಚಿತ್ರಗಳಲ್ಲಿ ನಟಿಸಲು ಹೋದರು. ಹೆಚ್ಚಿನ-ಬಜೆಟ್ ಸರಣಿಯಲ್ಲಿ ನಟಿಸಿದ ನಂತರ, ಅವರು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯರಲ್ಲಿ ಸ್ವತಃ ತನ್ನನ್ನು ತಾನೆ ಗುರುತಿಸಿಕೊಂಡಿದ್ದಾರೆ.ಅವರು ಅರುಂಧತಿ (೨೦೦೯) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿ ವಿಮರ್ಶಾತ್ಮಕ ಮೆಚ್ಚುಗೆ ಲಭಿಸಿತು, ವೆದಂ ಚಿತ್ರದಲ್ಲಿ ಸರೋಜಳಾಗಿ ಮತ್ತು ರುದ್ರಮಾದೇವಿ ಚಿತ್ರದಲ್ಲಿ ರಾಣಿಯ ಪಾತ್ರ ತನಗೆ ಮೂರು ಫಿಲ್ಮ್ಫೇರ್, ಒಂದು ನಂದಿ ಮತ್ತು ಮೂರು ಸಿನಿಮಾ ಪ್ರಶಸ್ತಿಗಳನ್ನು ಗಳಿಸಿತು. ೨೦೧೦ರಲ್ಲಿ, ಅನುಷ್ಕಾ ಯಶಸ್ಸು ತಮಿಳು ಸಿನಿಮಾದಲ್ಲಿ ಸಿಂಗಮ್ (೨೦೧೦), ಅದರ ಉತ್ತರಭಾಗ ಸಿಂಗಮ್ II (೨೦೧೩) ಮತ್ತು ಯೆನ್ನೈ ಅರಿಂಧಾಳ್ (೨೦೧೫) ಸಾಧಿಸಿತು. ವಾನಮ್ (೨೦೧೧), ದೈವ ತಿರುಮಗಳ್ (೨೦೧೧) ಮತ್ತು ಇಂಜಿ ಇಡುಪ್ಪಾಜ಼್ಹಗಿದಲ್ಲಿ ಅವರ ಸಾಧನೆಗಳಿಗಾಗಿ ಹೊಗಳಿಕೆಗಳನ್ನು ಪಡೆದರು. ಆ ಸಂದರ್ಭದಲ್ಲಿ ಆ ಮೂರು ಚಿತ್ರಗಳು ಯಶಸ್ಸನ್ನು ಕಂಡವು.

ಅವರು ೨೦೧೫ನ ಹೈದರಾಬಾದ್ ಅತ್ಯಂತ ಅಪೇಕ್ಷಣೀಯ ವುಮನ್ ಎಂದು ಮತ ಪಡೆದರು.

ಆರಂಭಿಕ ಜೀವನ[ಬದಲಾಯಿಸಿ]

ಮಂಗಳೂರು, ಕರ್ನಾಟಕದಲ್ಲಿ ಜನಿಸಿದ ಅನುಷ್ಕಾ, ಜನಾಂಗ ತುಳುವ ಬಂದಿಳಿದ ಬೆಳ್ಳಿಪದಿ ಉರಮಲು ಗುತು ಕುಟುಂಬದಿಂದ ಬಂದಿದ್ದಾರೆ. ಆಕೆಯ ಪೋಷಕರ ಹೆಸರು ಪ್ರಫುಲ್ಲ ಮತ್ತು ಎ.ಎನ್. ವಿಠಲ ಶೆಟ್ಟಿ. ಆಕೆಗೆ ಇಬ್ಬರು ಸಹೋದರರು, ಗುಣರಂಜನ್ ಶೆಟ್ಟಿ ಮತ್ತು ಸಾಯಿ ರಮೇಶ್ ಶೆಟ್ಟಿ. ಸಾಯಿ ರಮೇಶ್ ಒಬ್ಬ ಕಾಸ್ಮೆಟಿಕ್ ಸರ್ಜನ್. ಅನುಷ್ಕಾ ಬೆಂಗಳೂರಿನಲ್ಲಿ ಶಾಲಾ ವ್ಯಾಸಂಗವನ್ನು ಮತ್ತು ಸ್ನಾತಕ ಕಂಪ್ಯುಟರ್ ಅಪ್ಲಿಕೆಷನ್ಸನ್ನು ಮೌಂಟ್ ಕಾರ್ಮೆಲ್ ಕಾಲೆಜ್ನಲ್ಲಿ ಮಾಡಿದರು. ಅವರು ಭಾರತ್ ತಾಕುರ್ ಅಡಿಯಲ್ಲಿ ತರಬೇತಿ ಪಡೆದ ಯೊಗಾ ಬೊಧಕಿಯೂ ಆಗಿದ್ದರು.

ಚಲನಚಿತ್ರ ವೃತ್ತಿಜೀವನ[ಬದಲಾಯಿಸಿ]

ಮೊದಲ ಸಿನಿಮಾ ಮತ್ತು ತೆಲುಗುನಲ್ಲಿ ಖ್ಯಾತಿ: ೨೦೦೫-೨೦೦೮

ಅನುಷ್ಕಾ ತನ್ನ ಚೊಚ್ಚಲ ನಟನೆಯನ್ನು ಪುರಿ ಜಗನ್ನಾಥನವರ ಸೂಪರ್ (೨೦೦೫) ಎಂಬ ತೆಲುಗು ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಮತ್ತು ಆಯೆಷಾ ಟಾಕಿಯ ಜೊತೆ ಮಾಡಿದರು. ೨೦೦೬ರಲ್ಲಿ ಅವರ ನಾಲ್ಕು ಚಲನಚಿತ್ರಗಳು ಬಿಡುಗಡೆಯಾದವು, ಮೊದಲನೆಯದು ಎಸ್.ಎಸ್.ರಾಜಮೌಲಿಯವರ ವಿಕ್ರಮಾರ್ಕುಡು ಎಂಬ ಚಿತ್ರದಲ್ಲಿ ರವಿ ಟೇಜ ಜೊತೆಯಲ್ಲಿ ನಟಿಸಿದರು. ಆ ಚಿತ್ರ ಯಶಸ್ವಿ ಗಳಿಸಿತು ಮತ್ತು ಅನುಷ್ಕಾಳಿಗೆ ಆಂಧ್ರಾಪ್ರದೇಶದಲ್ಲಿ ಜನಪ್ರೀಯತೆ ಮತ್ತು ಮನ್ನಣೆ ಪಡೆದು ಕೊಟ್ಟಿತು. ಅವರು ಮುಂದಿನ ಚಿತ್ರ ಅಸ್ತ್ರಂನಲ್ಲಿ ನಟಿಸಿದರು, ಸರ್ಫರೋಶ್ ಎಂಬ ಹಿಂದಿ ಚಿತ್ರದ ರಿಮೇಕ್. ತದನಂತರ ತಮಿಳು ಚಲನಚಿತ್ರದ ಉದ್ಯಮದಲ್ಲಿ ನಟನೆ ಪ್ರಾರಂಭವಾಯಿತು, ಸುಂದರ್.ಸಿ ನಿರ್ದೇಶಣದ ಆಕ್ಷನ್ ಚಿತ್ರ 'ರೆಂಡು'ನಲ್ಲಿ ಆರ್.ಮಾಧವನ್ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡರು. ಎ.ಆರ್.ಮುರುಗದಾಸ್ರವರ ಚೊಚ್ಚಲ ನಿರ್ದೇಶನದಲ್ಲಿ ಬಂದ 'ಸ್ಟಾಲಿನ್' ಎಂಬ ತೆಲುಗು ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆಗೆ ಸ್ಪೆಶಲ್ ಅಪಿಯರೆನ್ಸಾಗಿ ಕಾಣಿಸಿಕೊಂಡರು.

ಅವರು ರಾಘವ ಲಾರೆನ್ಸ್ ಡಾನ್ ವಿರುದ್ದ ನಾಗಾರ್ಜುನ ಜೊತೆ ನಟಿಸಿದ ಲಕ್ಷ್ಯಂ ಚಿತ್ರ ೨೦೦೭ರಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಸಾಧಿಸಿತು. ೨೦೦೮ರಲ್ಲಿ ಅವರು ಆರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆ ವರ್ಷದಲ್ಲಿ ಒಕ ಮಗಾಡು ಮೊದಲು ತೆರೆಕಂಡಿತು. ಆ ಚಿತ್ರದಲ್ಲಿ ಮೂರು ಮುಖ್ಯ ಸ್ತೀ ಪಾತ್ರಗಳಲ್ಲಿ ಒಂದು ಅವರದಾಗಿತ್ತು. ಒಕ ಮಗಾಡು ಚಿತ್ರದಲ್ಲಿ ನಂದಮುರಿ ಬಾಲಕೃಷ್ಣ ವಿರುದ್ಧ ನಟಿಸಿದರು. ಮುಂದಿನ ಚಿತ್ರಗಳು ಜಗಪತಿ ಬಾಬು ಮತ್ತು ಭೂಮಿಕಾ ಚೌಲ ಜೊತೆ ನಟಿಸಿದ 'ಸ್ವಾಗತಂ' ಹಾಗು ರವಿ ಟೇಜ ಜೊತೆ 'ಬಲದುರ್' ಕಳಪೆ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನು ಗಳಿಕೆ ಮಾಡಲಿಲ್ಲ. ನಂತರ ಅವರ ಮುಂದಿನ ಚಿತ್ರದಲ್ಲಿ ಗೋಪಿಚಂದ್ ಜೊತೆ ನಟಿಸಿದ ಸೌರ್ಯಂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು.

ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು: ೨೦೦೯-೨೦೧೦[ಬದಲಾಯಿಸಿ]

೨೦೦೯ರಲ್ಲಿ ಅನುಷ್ಕಾ ಮೊದಲ ಬ್ಲಾಕ್ಬರ್ಸ್ಟ ಹಿಟ್ ಕಾಲ್ಪನಿಕ ಚಲನಚಿತ್ರ 'ಅರುಂಧತಿ'ಯಲ್ಲಿ ನಟಿಸಿದರು. ಈ ನಾಯಕಿ ಕೇಂದ್ರಿತ ಚಿತ್ರದಲ್ಲಿ, ಅವರು ಮೊದಲ ಬಾರಿಗೆ ಎರಡು ಪಾತ್ರಗಳನ್ನು ನಿರ್ವಹಿಸಿದರು. ಇದು ವಿಮರ್ಶಾತ್ಮಕವಾಗಿ ಹಾಗು ವಾಣಿಜ್ಯವಾಗಿ ಯಶಸ್ಸನ್ನು ಕಂಡಿತು. ನಂತರ ಅವರು ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಮತ್ತು ಫಿಲ್ಮ್ಫೇರತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಅವರ ಮುಂದಿನ ಚಿತ್ರ 'ಬಿಲ್ಲಾ', ಅದೇ ಹೆಸರಿದ್ದ ೨೦೦೭ನ ತಮಿಳು ಚಿತ್ರದ ರಿಮೇಕ್. ಆ ಚಿತ್ರಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದವು. ೨೦೦೯ರಲ್ಲಿ ಕೊನೆಯ ಬಿಡುಗಡೆಯೆಂದರೆ ತನ್ನ ಎರಡನೇ ತಮಿಳು ಚಲನಚಿತ್ರ ಆಕ್ಷನ್ ಮಸಾಲ 'ವೆಟ್ಟೈಕರಣ್' ನಟ ವಿಜಯ್ ಜೊತೆ.

೨೦೧೦ರಲ್ಲಿ ಅವರ ಕೆಲವು ತೆಲುಗು ಚಿತ್ರಗಲು ಬಿಡುಗದೆಯಾದವು. ವೇದಂ ಚಿತ್ರದಲ್ಲಿ ಅವರು ವೇಶ್ಯೆ ಪಾತ್ರ ಮಾಡಿ ಕ್ರಿಶ್ ಅವರ ವಿರ್ಮಶಾತ್ಮಕ ಮೆಚ್ಚುಗೆ ಗಳಿಸಿದರು. ಅವರ ನಟನೆಯಿಂದ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ಅದು ತನ್ನ ಎರಡನೇ ಫಿಲ್ಮ್ಫೇರ್ ಪ್ರಶಸ್ತಿಯಾಗಿತ್ತು. ಮುಂದಿನ ತೆಲುಗು ಚಿತ್ರ 'ಪಂಚಾಕ್ಷರಿ' ಮತ್ತೆ ಅದು ನಾಯಕಿ ಕೇಂದ್ರಿತ ಚಿತ್ರವಾಗಿತ್ತು ಹಾಗು ಅವರು ಎರಡು ಪಾತ್ರಗಳ ಪ್ರರ್ದಶನ ಮಾಡಿದರು. ಅನಂತರ ಆಕ್ಷನ್-ಹಾಸ್ಯ ಚಿತ್ರ 'ಖಲೇಜಾ'ದಲ್ಲಿ ಮಹೇಶ್ ಬಾಬು ಜೊತೆ ಮೊಟ್ಟ ಮೊದಲ ಬಾರಿಗೆ ನಟಿಸಿದರು. ಅನಂತರ ಕನ್ನಡ ಚಿತ್ರ ಅಪ್ತರಕ್ಷಕದ ತೆಲುಗು ರಿಮೇಕ್ 'ನಾಗವಲ್ಲಿ'ಯಲ್ಲಿ ಚಂದ್ರಮುಖಿ ಪಾತ್ರವನ್ನು ಮಾಡಿದರು. 'ಕೇಡಿ' ಮತ್ತು 'ತಕಿತ ತಕಿತ' ಚಿತ್ರದಲ್ಲಿ ವಿಶೇಷ ಪಾತ್ರವನ್ನು ಅನುಷ್ಕಾ ಮಾಡಿದ್ದಾರೆ. ಆದರೂ ೨೦೧೦ನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಆಕೆಯ ೨೦೧೦ನ ಏಕೈಕ ತಮಿಳು ಬಿಡುಗಡೆ, ಸಹನಟನಾಗಿ ಸೂರ್ಯ ಪೊಲೀಸ್ ಸ್ಟೋರಿ ಸಿಂಗಮ್ ಹೆಚ್ಚಿನ ಯಶಸ್ವಿಯಾಯಿತು.

ಯಶಸ್ಸು:೨೦೧೧-ಪ್ರಸ್ತುತ[ಬದಲಾಯಿಸಿ]

ತಮಿಳು ಚಿತ್ರ ವಾನಂ ರಿಮೇಕ್ 'ವೇದಂ'ನಲ್ಲಿ ಮಾಡಿದ ಪಾತ್ರದಿಂದ ಮೆಚ್ಚುಗೆ ಪಡೆದರು. ಅವರು ತಮಿಳು ವರ್ಗದಲ್ಲಿ ತಮ್ಮ ಮೊದಲ ಫಿಲ್ಮ್ಫೇರ್[೨] ನಾಮನಿರ್ದೇಶನವನ್ನು ಪಡೆದರು. ೨೦೧೦ರಲ್ಲಿ ಎ.ಎಲ್.ವಿಜಯ್ ಮತ್ತು ವಿಕ್ರಮ್ ಜೊತೆ ಆಕ್ಷನ್-ಡ್ರಾಮ 'ತಾಂಡವಮ್'ನಲ್ಲಿ ನಟಿಸಿದರು. ಎರಡು ವರ್ಷಗಳ ನಂತರ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ ತನ್ನ ಮೊದಲ ತೆಲುಗು ಕಾಲ್ಪನಿಕ ಚಿತ್ರ 'ಧಮರುಕಂ' ಬಿಡುಗಡೆಯಾಯಿತು. ೨೦೧೩ನ ಅವರ ಮೊದಲ ಚಿತ್ರ ಅಲೆಕ್ಸ್ ಪಾಂಡಿಯನ್, ಸೂರಜ್ ನಿರ್ದೇಶನದಲ್ಲಿ, ಸಹನಟ ಕಾರ್ತಿ ಜೊತೆ ತೆರಗೆ ಬಂತು. ಈ ಚಿತ್ರ ವಿಮರ್ಶಾತ್ಮಕವಾಗಿ ವಿಫಲವಾಯಿತು. ಅವರ ಏರಡನೇ ಚಿತ್ರ ಕೊರಾಟಲ ಸಿವಾರವರ 'ಮಿರ್ಚಿ', ಪ್ರಭಾಸ್ ಜೊತೆ ನಟಿಸಿದರು. ನಂತರ 'ಸಿಂಗಮ್ II'ನಲ್ಲಿ ಕಾಣಿಸಿಕೊಂಡರು. ಅವರ ಜೀವನದಲ್ಲಿ ಮೂರನೆ ಬಾರಿಗೆ ಉಭಯ ಪಾತ್ರದಲ್ಲಿ ಸೆಲ್ವರಾಗವನ್ ರವರ ಇರಾಂಡಮ್ ಉಳಗಂ ಚಿತ್ರದಲ್ಲಿ ಆರ್ಯ ಜೊತೆ ನಟಿಸಿದರು. ಅನುಷ್ಕಾ ಅತ್ಯುತ್ತಮವಾಗಿ ವಿವಿಧ ಭಾವನೆಗಳನ್ನು ಪ್ರದರ್ಶಿಸುವುದರಲ್ಲಿ ಅತ್ಯುತ್ತಮ. ಆಕೆಯ ಇತ್ತೀಚಿನ ತಮಿಳು ಚಿತ್ರ 'ಲಿಂಗಾ'ದಲ್ಲಿ ರಜನಿಕಾಂತ್ ಜೊತೆ ನಟಿಸಿದರು.

೨೦೧೫ರಲ್ಲಿ ಅಜಿತ್ ಜೊತೆ ನಟಿಸಿದ ಯೆನ್ನೈ ಅರಿನ್ಧಾಳ್ ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆಯಿತು. ಅದೇ ವರ್ಷದಲ್ಲಿ ಅವರ ಎರಡನೆಯ ಚಿತ್ರ, ಎಸ್.ಎಸ್.ರಾಜಮೌಲಿ ನಿರ್ದೇಶನದ ಬಾಹುಬಲಿ ಮೊದಲನೆ ಭಾಗ, ಭಾರತದ ಆದಾಯ ಚಿತ್ರಗಳಲ್ಲಿ ಒಂದೆನಿಸಿಕೊಂಡಿತು. ೨೦೧೫ರಲ್ಲಿ ಬಿಡುಗಡೆಯಾದ ಅವರ ಮೂರನೆ ಚಿತ್ರ ರುಧ್ರಮಾದೇವಿ ಬಿಡುಗಡೆಯಾಯಿತು. ಆ ಚಿತ್ರದಲ್ಲಿ ರಾಣಿಯ ಪಾತ್ರವನ್ನು ರಾನ ಡಗ್ಗುಬತಿ ಮತ್ತು ಅಲ್ಲು ಅರ್ಜುನ್ ವಿರುದ್ಧ ನಟಿಸಿದರ. ಆ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಚಿತ್ರ ಸೈಜ್ ಜೀರೊ. ಅದರಲ್ಲಿ ದಪ್ಪ್ಪ ಗಾತ್ರದ ಹೆಣ್ಣಿನ ಪಾತ್ರವನ್ನು ಮಾಡಿದರು. ಅದರಲ್ಲು ಸಹ ಒಳ್ಳೆಯ ನಟನೆ ಮಾಡಿದ್ದರು.

ಉಲ್ಲೇಖನಗಳು[ಬದಲಾಯಿಸಿ]


https://commons.wikimedia.org/wiki/