ಸದಸ್ಯ:Ranjana Reddy

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂಜನ.ಆರ್
Born
ಬೆಂಗಳೂರು
Nationalityಭಾರತೀಯರು
Other namesರಂಜು
Educationಬಿ.ಕಾಂ
Occupationವಿದ್ಯಾಭ್ಯಾಸ

ಪರಿಚಯ[ಬದಲಾಯಿಸಿ]

ರಾಜೇಂದ್ರ ಮತ್ತು ಸವಿತ ಎಂಬ ದಂಪತಿಗೆ ಜೇಷ್ಥ ಪುತ್ರಿಯಾದ ನಾನು ರಂಜನ. ನಾನು ಬೆಂಗಳೂರಿನಲ್ಲಿ ೧೯೯೭ ರಲ್ಲಿ ೨೩ನೇ ತಾರೀಖಿನಂದು ಆಗಡಿ ಆಸ್ಪತ್ರೆಯಲ್ಲಿ ಜನಿಸಿದೆ. ನನಗೆ ಒಬ್ಬಳೇ ತಂಗಿ. ನನ್ನ ಪ್ರೀತಿಯ ತಂಗಿಯ ಹೆಸರು ನಯನ. ನಮ್ಮದು ಚಿಕ್ಕ ಕುಟುಂಬ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಓದಿದ್ದು ಸಂತ ಫ್ರಾನ್ಸಿಸ್ ಶಾಲೆಯಲ್ಲಿ ಮತ್ತು ಪಿ.ಯು.ಸಿ ಯನ್ನು ಕ್ರೈಸ್ಟ್ ಜುನಿಯರ್ ಕಾಲೇಜಿನಲ್ಲಿ ಮಾಡಿದೆ. ಈಗ ಕ್ರೈಸ್ಟ್ ವಿಶ್ವವಿಧ್ಯಾಲಯದಲ್ಲಿ ಬಿ.ಕಾಂ ಪದವಿ ಪಡೆಯುತ್ತಿದ್ದೆನೇ.ನನಗೆ ಬಾಲ್ಯದಿಂದಲೇ ನೃತ್ಯ ಹಾಗು ಸಂಗೀತದಲ್ಲಿ ಆಸಕ್ತಿ. ನಾನು ಭರತನಾಟ್ಯವನ್ನು ಕಲಿತಿದ್ದೇನೆ. ನನಗೆ ಓದುವುದರಲ್ಲಿ ಬಹಳ ಆಸಕ್ತಿ. ಹತ್ತನೇ ತರಗತಿಯಲ್ಲಿ ೮೩.೮೪% ಮತ್ತು ಪಿ.ಯು.ಸಿ ನಲ್ಲಿ ೯೨.೧೬% ಪಡೆದಿದ್ದೇನೆ. ಐ.ಎ.ಎಸ್ ಮಾಡುವುದು ನನ್ನ ಗುರಿ.

ಹವ್ಯಾಸಗಳು[ಬದಲಾಯಿಸಿ]

ಪುಸ್ತಕ ಓದುವುದು, ಅಡುಗೆ ಮಡುವುದು, ಹಾಡುವುದು, ನೃತ್ಯ, ಚಿತ್ರ ಬಿಡಿಸುವುದು, ಸಿನಿಮಾ ನೋಡುವುದೆಲ್ಲವು ನನ್ನ ಹವ್ಯಾಸಗಳು. ನನ್ನ ಅತ್ಯುತ್ತಮ ಗಾಯಕಿಯೆಂದರೆ ಶ್ರೆಯ ಗೋಶಾಲ್. ನನಗೆ ಇಷ್ಟವಾದ ತಿಂಡಿ ಯಾವುದೆಂದರೆ ಬಿರಿಯಾನಿ. ನನಗೆ ಗಿಡಗಳನ್ನು ಬೆಳೆಸುವುದೆಂದರೆ ತುಂಬ ಪ್ರೀತಿ. ಹಸಿರು ಪರಿಸರವೆಂದರೆ ನನಗೆ ಬಹಳ ಇಷ್ಟ. ನಾನು ಅನೇಕ ಸ್ಪರ್ದೆಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಪೈಟಿಂಗ್, ರನ್ನಿಂಗ್ ರೇಸ್, ಹೂ ಅಲಂಕರಿಸುವುದು(ಫ್ಲವರ್ ಅರೇಂಜ್ಮೆಂಟ್), ತರ್ಕಾರಿ ಕೆತ್ತನೆ(ವೆಜಿಟೇಬಲ್ ಕಾರ್ವಿಂಗ್) , ರಂಗೋಲಿ(ಕಲರ್ ಕಾರ್ಪೆಟ್), ೧೦೦% ಅಟೆಂಡೆನ್ಸ್, ಇತ್ಯಾದಿ ಸ್ಪರ್ದೆಗಳಲ್ಲಿ ಬಹುಮಾನ ಗೆದ್ದಿದೇನೆ.

ಮೆಚ್ಚಿನ ಪುಸ್ತಕ[ಬದಲಾಯಿಸಿ]

ನಾನು ಚೇತನ್ ಭಗತ್ ಅವರ ಅಭಿಮಾನಿ. ಇವರ ಪುಸ್ತಕದ ಶೈಲಿ ಮನಸೆಳೆಯುವಂತ್ತಿರುತ್ತದೆ. ನಾನು ಇವರು ಬರೆದಿರುವ ' ವನ್ ನೈಟ್ ಅಟ್ ಕಾಲ್ಸೆಂಟರ್', 'ಟು ಸ್ಟೇಟ್ಸ್', 'ಹಾಫ್ ಗರ್ಲ್ ಫ್ರೆಂಡ್', ಇತ್ಯಾದಿ ಪುಸ್ತಕಗಳನ್ನು ಓದಿದ್ದೇನೆ.

ಪ್ರವಾಸ[ಬದಲಾಯಿಸಿ]

ನನಗೆ ಪ್ರವಾಸಕ್ಕೆ ಹೋಗುವುದೆಂದರೆ ತುಂಬ ಇಷ್ಟ. ಕರ್ನಾಟಕದಲ್ಲಿ ನನ್ನ ಅಚ್ಚುಮೆಚ್ಚಿನ ಪ್ರವಾಸ ಸ್ಥಳ ಮಡಿಕೇರಿ. ಅಲ್ಲಿನ ಪ್ರಕೃತಿ ಮನವನ್ನು ಆಕರ್ಷಿಸುತ್ತದೆ. ಅಲ್ಲಿನ ಹಚ್ಚು ಹಸಿರಿನ ಪರಿಸರ ನೋಡುವುದೊಂದು ಮಜ. ಬಹಳ ತಂಪಾದ ವಾತಾವರ್ಣ ಹೊಂದಿರುವ ಈ ಸ್ಥಳ ನನಗೆ ಇಷ್ಟ. ಮೈಸೂರ್ ಅರಮನೆ, ಹಂಪಿ, ಬಂಡಿಪುರ, ಕುದ್ರೆಮುಖ್, ಇಸ್ಕಾನ್ ದೇವಸ್ಥಾನ, ಇತ್ಯಾದಿ ಸ್ಥಳಗಳು ನೋಡಳು ಅದ್ಭುತ.

ನನ್ನ ಕರ್ತವ್ಯ[ಬದಲಾಯಿಸಿ]

ನನಗೆ ಬಹಳ ಸ್ನೇಹಿತರಿದ್ದಾರೆ. ನನ್ನ ಸ್ನೇಹಿತರೊಂದಿಗೆ ಕಾಲ ಕಳೆಯಲು ನನಗೆ ಇಷ್ಟ. ನನ್ನ ತಂದೆ ತಾಯಿ ನನಗೆ ಎಲ್ಲರೊಂದಿಗೆ ಚೆನ್ನಾಗಿ ಬೆರೆದುಕೊಂಡು, ಒಳ್ಳೆ ಭಾಂಧವ್ಯವನ್ನು ಹೊನ್ನುವ ಬುದ್ದಿ, ಹಿರಿಯರಿಗೆ ಗೌರವಕೊಡುವುದು, ಕಿರಿಯರನ್ನು ಪ್ರೀತಿಯಿಂದ ಮಾತನಾಡಿಸುವುದೆಲ್ಲ ಕಲಿಸಿದ್ದಾರೆ. ಅವರು ನನಗೆ ಚಿಕ್ಕ ವಯಸ್ಸಿನಿಂದಲು ಎಲ್ಲ ರೀತಿಯ ಸೌಕಾರ್ಯಗಳನ್ನು ಕೊಟ್ಟು ಪ್ರೀತಿಯಿಂದ ಬೆಳೆಸಿದ್ದಾರೆ. ಅವರು ನನ್ನ ಬೇಕು ಬೇಡಗಳನ್ನು ಚೆನ್ನಾಗಿ ತಿಳಿದುಕೊಡಿದ್ದಾರೆ. ನನಗೆ ಬೇಕಿದ್ದಾಗೆಲ್ಲ ನನ್ನ ತಾಯಿಯವರು ಬಹಳ ಸಹಾಯ ಮಾಡುತ್ತಾರೆ. ಅವರು ನನ್ನ ಮೇಲೆ ಬಹಳ ಕನಸುಗಳನ್ನು ಕಟ್ಟಿಕೊಂಡಿದ್ದಾರೆ, ಅವುಗಳನ್ನು ನೆರವೇರಿಸುವುದು ನನ್ನ ಕರ್ತವ್ಯ.

https://commons.wikimedia.org/wiki/File:Selfie287.JPG

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Ranjana Reddy