ಸದಸ್ಯ:Rajalakshmi Ajay K/ನನ್ನ ಪ್ರಯೋಗಪುಟ2
ಹೋರಿ ಹಬ್ಬ
[ಬದಲಾಯಿಸಿ]ಹೋರಿ ಹಬ್ಬ, ಹಟ್ಟಿ ಹಬ್ಬ, ಕೊಬ್ಬರಿ ಹೋರಿ[೧] ಸ್ಪರ್ಧೆಯು ಗ್ರಾಮೀಣ ಕ್ರೀಡೆಯಾಗಿದ್ದು, ಇದರಲ್ಲಿ ನೂರಾರು ತರಬೇತಿ ಪಡೆದ ಮತ್ತು ಅಲಂಕರಿಸಿದ ಗೂಳಿಗಳನ್ನು ಭಾರಿ ಜನಸಂದಣಿಯ ನಡುವೆ ಓಡಿಸಲಾಗುತ್ತದೆ .ಈ ಗೂಳಿಗಳ ಬೆನ್ನಲ್ಲಿ ನಗದು, ಉಡುಗೊರೆ ವಸ್ತುಗಳನ್ನು ಅವರಿಗೆ ಕಟ್ಟಲಾಗುತ್ತದೆ. ಈ ಗೂಳಿಗಳನ್ನು ಹಿಡಿಯಲು ಹಾಗೂ ಕೊಪ್ಪೆಯಂತಹ ಬಹುಮಾನಗಳನ್ನು ಕಸಿದುಕೊಳ್ಳಲು ಯುವಕರು ಪ್ರಯತ್ನಿಸುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಕ್ರೀಡೆಯನ್ನು ಮುಖ್ಯವಾಗಿ ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಏರ್ಪಡಿಸಲಾಗುತ್ತದೆ. ತಮಿಳುನಾಡಿನಲ್ಲಿನ ಜಲ್ಲಿಕಟ್ಟು ಇದೇ ರೀತಿಯ ಕ್ರೀಡೆಯಾಗಿದೆ.
ಪ್ರಕ್ರಿಯೆ
[ಬದಲಾಯಿಸಿ]ಒಂದು ಪೂರ್ವನಿರ್ಧರಿತ ಟ್ರ್ಯಾಕ್ನಲ್ಲಿ ಒಂದಾದ ನಂತರ ಒಂದರಂತೆ ರಾಸುಗಳನ್ನು ಓಡಿಸಲಾಗುತ್ತದೆ.ಈ ಹೋರಿಗಳ ಕೊರಳಿಗೆ ಕೊಪ್ಪರಗಳ ಮಾಲೆಯನ್ನು ಹಾಕಿರುತ್ತಾರೆ. ಹಾಗು ಇದನ್ನು ಕಿತ್ತುಕೊಂಡು ಗೆಲ್ಲಲು ಜನರು ಮುಗಿಬೀಳುತ್ತಿರುತ್ತಾರೆ.ಈ ಅಡೆತಡೆಗಳನ್ನೂ ಮೀರಿ ಅತಿ ಹೆಚ್ಚು ಕೊಪ್ಪರವನ್ನು ತನ್ನ ಕೊರಳಲ್ಲಿ ಇರಿಸಿಕೊಂಡ ಹೋರಿ ವಿಜಯೀ ಎನಿಸಿಕೊಳ್ಳುತ್ತದೆ.ಹಾಗೆಯೇ ಅತೀ ಹೆಚ್ಚು ಕೊಪ್ಪರ ಹಾಗು ನಗದನ್ನು ವಶಪಡಿಸಿಕೊಂಡ ವ್ಯಕ್ತಿಯೂ ವಿಜಯೀ ಆಗುತ್ತಾನೆ.
ಸಿಧ್ಧತೆ ಮತ್ತು ತರಬೇತಿ
[ಬದಲಾಯಿಸಿ]ಮೊದಲಿಗೆ ಸ್ಥಳೀಯರು ಸಂಘಟನಾ ಸಮಿತಿಯನ್ನು ರಚಿಸುತ್ತಾರೆ. ಈ ಸಮಿತಿಯು ಹೋರಿ ಹಬ್ಬದ ದಿನಾಂಕಗಳನ್ನು ನಿರ್ಧರಿಸುತ್ತದೆ, ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸುತ್ತದೆ. ಮತ್ತು ಪ್ರಶಸ್ತಿಗಳನ್ನು ಅಂತಿಮಗೊಳಿಸುತ್ತದೆ. ನಂತರ ಈ ಕುರಿತಾದ ಮಾಹಿತಿಯನ್ನು ಕರಪತ್ರಗಳು, ಸಾಮಾಜಿಕ ಮಾಧ್ಯಮ (ಫೇಸ್‌ಬುಕ್, ವಾಟ್ಸಾಪ್) ಇತ್ಯಾದಿಗಳ ಮೂಲಕ ಸಾರ್ವಜನಿಕರಿಗೆ ಪ್ರಸಾರ ಮಾಡಲಾಗುತ್ತದೆ. ಓಟಕ್ಕೆ ಗ್ರಾಮ ಮತ್ತು ಸುತ್ತಮುತ್ತ ಸೂಕ್ತವಾದ ಪ್ರದೇಶವನ್ನು ಆಯ್ಕೆ ಮಾಡಲಾಗುತ್ತದೆ. ಬ್ಯಾರಿಕೇಡ್‌ಗಳು, ಟ್ರ್ಯಾಕ್ಟರ್ ಟ್ರಾಲಿಗಳು ಇತ್ಯಾದಿಗಳನ್ನು ಬಳಸಿ ಟ್ರ್ಯಾಕ್ ನ ಎರಡೂ ಬದಿಗಳಲ್ಲಿ ಭದ್ರಪಡಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಕುಳಿತುಕೊಳ್ಳಲು, ವೀಕ್ಷಿಸಲು ಮತ್ತು ಗೂಳಿಗಳನ್ನು ಮತ್ತು ಭಾಗವಹಿಸುವವರನ್ನು ಹುರಿದುಂಬಿಸಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಪಕ್ಕದ ಮರಗಳು, ಕಾಂಪೌಂಡ್ ಗೋಡೆಗಳು ಮತ್ತು ಟೆರೇಸ್‌ಗಳು ಪ್ರೇಕ್ಷಕರ ಗ್ಯಾಲರಿಗಳಾಗುತ್ತದೆ.
ಹೋರಿಗಳನ್ನು ಸಾಕುವ ರೀತಿ
[ಬದಲಾಯಿಸಿ]ಹೋರಿಗಳ ಮಾಲೀಕರು ಋತುವಿನ ಮುಂಚೆಯೇ ಅವುಗಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಅವುಗಳನ್ನು ಈ ಆಟಕ್ಕಾಗಿ ತಯಾರಿಸುತ್ತಾರೆ. ಅವರು ಅವುಗಳನ್ನು ಮುದ್ದಿಸುತ್ತಾರೆ. ಅವುಗಳನ್ನು ತಂಪಾಗಿರಿಸಲು ನಿಯಮಿತ ಸ್ನಾನವನ್ನು ಮಾಡಿಸುತ್ತಾರೆ. ಹಾಗಾಗಿ ನಿಸ್ಸಂದೇಹವಾಗಿ ಹೋರಿಗಳು ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ. ಹತ್ತಿರದ ಪ್ರದೇಶಗಳ ಮಾಲೀಕರು ಎತ್ತುಗಳನ್ನು ನಿಯಮಿತವಾಗಿ ಓಡಿಸುವ ಮೂಲಕ ನಿಜವಾದ ಟ್ರ್ಯಾಕ್‌ಗೆ ತರಬೇತಿ ನೀಡತ್ತಾರೆ.