ಸದಸ್ಯ:Prerana.minion.3lou/ಅನುಭವ ದರ್ಶನ
ಅನುಭವ ದರ್ಶನ
[ಬದಲಾಯಿಸಿ]ಅನುಭವ ದರ್ಶನ, ತತ್ವಶಾಸ್ತ್ರದ ಆಂದೋಲನವಾಗಿ, ಕೊನೆಯ ೧೮೨೦ ಮತ್ತು ೧೮೩೦ರಲ್ಲಿ ಪೂರ್ವ ಅಮೇರಿಕದಲ್ಲಿ ಪ್ರಾರಂಭವಾಯಿತು.[೧] ಈ ಆಂದೋಲನವು, ಬೌದ್ಧಿಕ ಮತ್ತು ಆಧ್ಯಾತ್ಮಕತೆ, ಪರಿಣಾಮವಾಗಿ ಅಥವ ಪ್ರತಿಭಟಿಸಲು ಪ್ರಾರಂಭವಾಯಿತು.
ಅನುಭವ ದರ್ಶನವು ಇಂಗ್ಲಿಷ್ ಮತ್ತು ಜರ್ಮನ್ ರೊಮಾನ್ಟಿಸಿಸಂ, ಹರ್ಡರ ಮತ್ತು ಶ್ಕ್ಲೈರ್ಮಾಕರಿನ ಬಿಬ್ಲಿಕಲ್ ವಿಮರ್ಶನೆ, ಹ್ಯುಮಿನ ಸ್ಕೆಪ್ಟಿಸಿಸಂ, ಇಮಾನ್ಯುಲ್ ಕ್ರಾನ್ತಿನ ಅನುಭವ ದರ್ಶನದ ತತ್ವಶಾಸ್ತ್ರ ಹಾಗು ಜರ್ಮನ್ ಐಡಿಯಲಿಸ್ಂನಿಂದ ವ್ಯಕ್ತವಾಗಿತು. ಭಾರತದ ಧರ್ಮ ಕೂಡ ಅನುಭವ ದರ್ಶನದ ಆಂದೋಲನವನ್ನು ಪ್ರಭಾವಿಸಿದೆ ಮುಖ್ಯವಾಗಿ ಉಪನಿಶತ್ತುಗಳು.[೨]
ಅನುಭವ ದರ್ಶನದ ತಿರುಳು ನಂಬಿಕೆ, ಮನುಷ್ಯನ ಸದ್ಗುಣ. ಅನುಯಾಯಿಗಳು, ಮನುಷ್ಯನ ವ್ಯಕ್ತಿತ್ವವನ್ನು ಸಮಾಜ ಕೆಡಸಿದೆಯೆಂದು ಹಾಗು ಅವನು ಸ್ವಾವಲಂಬಿತನಾಗಿದಾಗ ಅತೀ ಶ್ರೇಷ್ಠವಾಗಿರುವನು ಎಂದು ನಂಬಿಕೆ.
ಅನುಭವ ದರ್ಶಕರ ಎರಡನೆಯ ಹಂತ
[ಬದಲಾಯಿಸಿ]೧೮೪೦ಯ ಕೊನೆಯಲ್ಲಿ ಎಮರ್ಸನ್, ಅನುಭವ ದರ್ಶನದ ಆಂದೋಲನವು ಸಾಯುತಿತ್ತು ಎಂದು ಭಾವಿಸಿದರು. ಈ ನಂಬಿಕೆಯೂ ಮಾರ್ಗರೆಟ್ ಫುಲರ್ ೧೮೫೦ರಲ್ಲಿ ತೀರ್ಕೊಂಡ ಸಂದರ್ಭದಲ್ಲಿ ದೃಢವಾಯಿತು. ಆದರೆ ನುಭವ ದರ್ಶನದ ಆಂದೊಲನಕ್ಕೆ ಪುನರ ಜನ್ಮ ನೀಡಲು ಎರಡನೆಯ ಹಂತದ ಅನುಭವ ದರ್ಶಕರಾದ ಮೊನ್ಕ್ಯುರ ಕೊನ್ವೆ, ಒಕ್ಟೆವಿಯಸ್ ಬ್ರುಕ್ಸ್, ಫ್ರೊತಿಘಾಂ, ಸಾಮ್ಯುಲ್ ಲೊಂಗ್ ಫೆಲೊ, ಮತ್ತು ಫ್ರಾಕ್ಲಿನ್ ಬೆಂಜಮಿನ್ ಸಾನ್ಬೊರ್ನ್ ಬಂದರು.
ಅನುಭವ ದರ್ಶನವು ಸುಸಂಭದ ಆಂದೋಲನವಾಗಿ, 'ಅನುಭವ ದರ್ಶದ ಕ್ಲಬ್' ಕೇಂಬ್ರಿಡ್ಜ್, ಮಾಸಚುಸೆಟ್ಸನಲ್ಲಿ ಸೆಪ್ಟೆಂಬರ್ ೮ ೧೮೩೬ರಲ್ಲಿ ಪ್ರಮುಖ ಬೌಧಿಕರಾದ ಎಮರ್ಸನ್, ಫ್ರೆಡ್ರಿಕ್ ಹೆಡ್ಜರವರು ಸ್ಥಾಪಿಸಿದರು. ೧೮೪೦ನಿಂದ, ಈ ಗುಂಪು 'ದಿ ಡೈಲ್' ಎಂಬುವ ಪತ್ರಿಕೆಯನ್ನು ನಿತ್ಯಗಟ್ಟಳೆ ಪ್ರಕಟಿಸಿದರು.
ಅನುಭವ ದರ್ಶನದ ಅರಿವು
[ಬದಲಾಯಿಸಿ]ಅನುಭವ ದರ್ಶಕರು, ತಮ್ಮ ಧರ್ಮ ಮತ್ತು ತತ್ವಶಾಸ್ತ್ರವನ್ನು ದೈಹಿಕದ ಅನುಭವಗಳದೆ, ಆತ್ಮ ಸಾರಾಂಶದಿಂದ ಅವರು ಅನುಭವ ದರ್ಶನದ ಮೂಲತತ್ವಗಳನ್ನು ಆಯ್ಕೆಮಾಡಿಕೊಂಡಿದ್ದಾರೆ.
ಅನುಭವ ದರ್ಶನವು, ಇಂಗ್ಲಿಷ್ ಮತ್ತು ಜರ್ಮನ್ ರೊಮಾನ್ಟಿಸಿಸಂ, ಹರ್ಡರ ಮತ್ತು ಶ್ಕ್ಲೈರ್ಮಾಕರಿನ ಬಿಬ್ಲಿಕಲ್ ವಿಮರ್ಶನೆ, ಹ್ಯುಮಿನ ಸ್ಕೆಪ್ಟಿಸಿಸಂ, ಹಾಗು ಇಮಾನ್ಯುಲ್ ಕ್ರಾನ್ತಿನ ಅನುಭವ ದರ್ಶನದ ತತ್ವಶಾಸ್ತ್ರವನ್ನು ಒಂದು ಮಾಡಿತ್ತು.ಮುಂಚಿನ ಅನುಭವ ದರ್ಶಕರಿಗೆ ಜರ್ಮನ್ ತತ್ವಶಾಸ್ತ್ರದ ಮೂಲದ ಪರಿಚಯವಿರಲಿಲ್ಲ.ಆದುದರಿಂದ ಈ ಅನುಭವ ದರ್ಶಕರು ಮುಖ್ಯವಾಗಿ ತೊಮಸ್ ಕಾರ್ಲಾಯಲ್, ಸಾಮ್ಯುಲ್ ಟೆಯ್ಲರ ಕೊಲ್ರಿಡ್ಜ್, ವಿಕ್ಟೊರ ಕಸಿನ್ ಲೇಖನಗಳು ಹಾಗು ಇತರ ಫ್ರೆಂಚ್ ಮತ್ತು ಇಂಗ್ಲಿಷ್ ಟಿಪಣಿಗಳ ಸಹಾಯದಿಂದ ಅನುಭವ ದರ್ಶನದ ಬಗ್ಗೆ ತಿಳಿದುಕೋಂಡರು. ಅನುಭವ ದರ್ಶಕರು ನೆಜವಾದ ಸಾಮಾಜವನ್ನು ನಿಜವಾದ ವೈಯಕ್ತಿಕನಾದವರೆ ಕಟ್ಟಬಹುದೆಂದು ನಂಬಿದ್ದರು.
ವ್ಯಕ್ತಿತ್ವತೆ
[ಬದಲಾಯಿಸಿ]ಅನುಭವ ದರ್ಶಕರು ಸಾಮಾಜ ಮತ್ತು ಅದರ ಸಂಸ್ಥೆಗಳು- ಸಂಘಟಿಸಿರುವ ಧರ್ಮ ಮತ್ತು ರಾಜಕೀಯ ಪಕ್ಷಗಳು- ಮನುಷ್ಯನ ಶುದ್ಧವಾದ ವ್ಯಕ್ತಿತ್ವತೆಯನ್ನು ಅಪ್ರಮಾಣಮಾಡಿದೆಯೆಂದು ನಂಬುತ್ತಾರೆ. ಮನುಷ್ಯನು ಸ್ವಾವಲಂಬನಾಗ್ಗಿದ್ದರೆ ಅವನು ಪ್ರಮುಖನಾಗಿರುವನೆಂದು ಅನುಭವ ದರ್ಶಕರ ನಂಬಿಕೆ. ಇಂತಹ ವ್ಯಕ್ತಿಗಳೊಡನೆಯೇ ನೆಜವಾದ ಸಮುದಾಯ ಪ್ರಾರಂಭವಾಗುತದೆ. ಈ ವ್ಯಕ್ತಿತ್ವವವಲ್ಲದೆ, ಅನುಭವ ದರ್ಶತಕರು, ಎಲ್ಲಾ ಮನುಷ್ಯನಲ್ಲೂ ದೇವರ ಒಂದು ಭಾಗವಿದೆ, ಇಂತಹ ಭಾಗವೂ ಎಲ್ಲಾ ಮನುಷ್ಯರನ್ನು ಒಂದುಗೂಡಿಸಿ, ಒಂದೇ ಅಸ್ತಿತ್ವವವನ್ನಾಗಿ ಮಾಡುತ್ತದೆ ಎಂದು ಅನುಭವದರ್ಶಕರು ನಂಬುತ್ತಾರೆ.
ನಂಬಿಕೆ
[ಬದಲಾಯಿಸಿ]ಅನುಭವ ದರ್ಶಕರು ವೈಯಕ್ತಿಕದ ಶಕ್ತಿಯಲ್ಲಿ ದೃಢವಾಗಿ ನಂಬುತ್ತಿದ್ದರು. ಅನುಭವ ದರ್ಶಕರ ನಂಬಿಕೆ ಮತ್ತು ರೊಮಾನ್ಟಿಕ್ಸ್ ರವರ ನೊಂಬಿಕೆಗಳು ಅನ್ಯೋನವಾಗಿದರೂ ಅನುಭವ ದರ್ಶನವು ವಿಜ್ಞಾನವನ್ನು ಎದುರಿಸದೆ ಹಾಗು ಒಪ್ಪಿಕೊಳದೆ, ರೊಮಾನ್ಟಿಕ್ಸ್ ನಿಂದ ವ್ಯತ್ಯಾಸವಾಗಿದೆ.
ಅನುಭವ ದರ್ಶಕರು ವ್ಯಕ್ತಿತ್ವದ ಶಕ್ತಿಯಲ್ಲಿ ದೃಢವಾಗಿ ನಂಬುತ್ತಾರೆ.
ಪ್ರಸಿದ್ಧವಾದ ಅನುಭವ ದರ್ಶಕರು
[ಬದಲಾಯಿಸಿ]ಅನುಭವ ದರ್ಶನದ ಆಂದೋಲನದಲ್ಲಿ ಪ್ರಸಿದ್ಧವಾದ ಅನುಭವ ದರ್ಶಕರು, ರಾಲ್ಫ್ ವಾಲ್ಡೊ ಎಮರ್ಸನ್, ಹೆನ್ರಿ ಡೆವಿಡ್ ತೊರೊ, ಮಾರ್ಗರೆಟ್ ಫುಲರ, ಮತ್ತು ಎಮೊಸ್ ಬ್ರೊಂನ್ಸನ್ ಆಲ್ಕೊಟ್. ಇತರ ಪ್ರಮುಖ ಅನುಭವ ದರ್ಶಕರು ಲುಯಿಸ ಮೇ ಆಲ್ಕೊಟ್, ಚಾರ್ಲ್ಸ್ ಟಿಮೊತಿ ಬ್ರುಕ್ಸ್, ಒರೆಸ್ಟೆಸ್ ಬ್ರೌನ್ಸನ್, ವಿಲ್ಯಂ ಎಲರಿ ಚ್ಯಾನಿಂಗ್, ವಿಲ್ಯಂ ಹೆನ್ರಿ ಚ್ಯಾನಿಂಗ್, ಜೆಮ್ಸ ಫ್ರೀಮನ್ ಕ್ಲಾರ್ಕ್, ಕ್ರಿಸ್ಟೊಫರ್ ಪಿಯರ್ಸ್ ಕ್ರಾನ್ಚ್, ಜಾನ್ ಸುಲಿವನ್ ಡ್ವೈಟ್, ಕೊನ್ವರ್ಸ್ ಫ್ರಾನ್ಸೆಸ್, ವಿಲ್ಯಮ್ ಹೆನ್ರಿ ಫ್ರರ್ನ್ಸೆ, ಫೆಡರಿಕ್ ಹೆನ್ರಿ ಹೆಡ್ಜ್, ಸಿಲ್ವಿಸ್ಟರ್ ಜಡ್, ತಿಯಡೊರ್ ಪಾರ್ಕರ, ಎಲಿಸಬೆತ್ ಪೆಬೊಡಿ, ಜೊರ್ಜ್ ರಿಪ್ಲಿ, ತೊಮಸ್ ಟ್ರೆಡ್ವೆಲ್ ಸ್ಟೊನ್, ಜೊನ್ಸ್ ವೆರಿ ಮತ್ತು ವಾಲ್ಟ್ ವಿಟ್ಮಾನ್.
ವಿಮರ್ಶನೆ
[ಬದಲಾಯಿಸಿ]ಆಂದೂಲನದ ಮುಂಚಿನ ಸಾಹಿತ್ಯದಲ್ಲಿ, 'ಅನುಭವ ದರ್ಶಕರು' ಎಂಬುವ ಪದಗಳನ್ನು ವಿಮರ್ಶೆಗಾರರು ತಿರಸ್ಕಾರದ ಶಬ್ಧಗಳಾಗಿ ಉಪಯೋಗಿಸಿದರು. ಈ ವಿಮರ್ಶಕರು, ಅನುಭವ ದರ್ಶಕರವರು ಬುದ್ಧಿವಿಕಲ್ಪದವರೆಂದು ಸೂಚಿಸಿದರು.
ನೆತೆನಿಯಲ್ ಹಾತೊರ್ನ್ ಈ ಆಂದೋಲನವನು ವಿಡಂಬನಾತ್ಮಕವಾಗಿ ಅವರ ಕಾದಂಬರಿಯಾದ 'ದಿ ಬ್ಲಿತ್ಡೆಲ್ ರೊಮಾನ್ಸ್' ಎಂದು ಬರೆದರು.
ಎಡ್ಗರ್ ಆಲನ್ ಪೊ ರವರು 'ನೆವರ ಬೆಟ್ ದಿಡೆವಿಲ್ ಯುರ್ ಹೆಡ್'ಎಂಬ ಕಥೆಯಲ್ಲಿ ಅನುಭವ ದರ್ಶನದ ಮೇಲೆ ಇದ್ದ ವಿಪ್ರೀತ ದುರಾಸೆಯನ್ನು ವ್ಯಕ್ತಪಡೆಸಿದ್ದಾರೆ. ಈ ಆಂದೋಲನವನ್ನು ಪೊರವರು ಒಂದು ಕಾಯಿಲೆ ಎಂದು ಕರೆದರು.
ರಾಲ್ಫ್ ವಾಲ್ಡೊ ಎಮರ್ಸನ್ ಮತ್ತು ಅನುಭವ ದರ್ಶನ
[ಬದಲಾಯಿಸಿ]ಎಮರ್ಸನ್ರವರು ಅನಾಮಿಕರಾಗಿ ಅವರ ಮೊದಲ ಪ್ರಭಂಧವಾದ 'ನೇಚರ್' ರನ್ನು ಸೆಪ್ಟೆಂಬರ್ ೯, ೧೮೩೬ರಲ್ಲಿ ಪ್ರಕಟಿಸಿದರು. ಒಂದು ವರ್ಶದ ನಂತರ ಆಗಸ್ಟ್ ೩೧, ೧೮೩೭ರಲ್ಲಿ ಅವರು, ಈ ಕಾಲದಲ್ಲಿ ಪ್ರಸಿದ್ಧವಾದ ಅವರ 'ಫೈ ಬೆಟ ಕಪ್ಪಾ' ಭಾಷಣವನ್ನು ನೀಡಿದರು. ಈ ಭಾಷಣವು ಇವಾಗ 'ದಿ ಅಮೇರಿಕನ್ ಸ್ಕೊಲರ್' ಎಂದು ಕರೆಯಲ್ಲಾಗಿದೆ. ಈ ಭಾಷಣವನ್ನು ಎಮರ್ಸನ್ರವರು ಕೇಂಬ್ರಿಡ್ಜ್, ಮಾಸಚುಸೆಟ್ಸನಲ್ಲಿ ನೀಡಿದರು. ಏಮರ್ಸನ್ರವರು ಈ ಭಾಷಣದ ಮೂಲಕ ಅಮೇರಿಕನ್ಸನನ್ನು ಅವರದೇಯಾದ ಬರಹದ ಶೈಲಿಯನ್ನು ಉಪಯೋಗಿಸಲು ಪ್ರೇರಣೆ ನೀಡಿ, ಯುನೈಟಡ್ ಸ್ಟೇಟ್ಸಿನಲ್ಲಿ ಸಾಹಿತ್ಯದ ಸ್ವತಂತ್ರ್ಯವನ್ನು ಘೋಷಿಸಿದರು.
೧೮೪೧ರಲ್ಲಿ ಎಮರ್ಸನ್ ತಮ್ಮ ಎರಡನೆಯ ಪುಸ್ತಕ 'ಎಸ್ಸೇಸ್' ಪ್ರಕಟಿಸಿದರು. 'ಸ್ವಯಂ ಅಬವಲಂಬನೆ' ಎಂಬುವ ಪ್ರಬಂಧವು ಈ ಪುಸ್ತಕದಲ್ಲಿದೆ. ಈ ಪುಸ್ತಕದ ಮೂಲಕ ಎಮರ್ಸನ್ ಅಂತರಾಷ್ಟ್ರಿಯ ಪ್ರಸಿದ್ಧತೆ ಪಡೆದರು.