ಸದಸ್ಯ:Prerana.minion.3lou

ವಿಕಿಪೀಡಿಯ ಇಂದ
Jump to navigation Jump to search
Prerana.M.Krishna

ನನ್ನ ಹೆಸರು ಪ್ರೇರಣ.ಎಂ.ಕೃಷ್ಣ, ವಯಸು ೧೯, ಹುಟ್ಟಿದ್ದು ನೈವೇಲಿ ತಮಿಳು ನಾಡಿನಲ್ಲಿ. ನಾನು ಕೋಲಾರ್ ಸ್ಥಳೀಯಳಾಗಿದ್ದರೂ ಬೆಳೆದ್ದಿದು ಬೆಂಗಳೂರಿನಲ್ಲಿ. ನನ್ನ ತಾಯಿಯ ಹೆಸರು ಹೆಚ್.ಮಮತಾ, ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆಯ ಹೆಸರು ಡಾ|ಬಿ.ವಿ.ಮುರಳಿ ಕೃಷ್ಣ, ಸರ್ಕಾರಿ ಸೇವಕರಾಗಿ ಕೆಲಸಮಾಡುತ್ತಿದ್ದಾರೆ.ನನಗೆ ಒಬ್ಬಳು ಅಕ್ಕ ಇದ್ದಾಳೆ, ಅವಳ ಹೆಸರು ಪ್ರಕೃತಿ.

ಶಿಕ್ಷಣ[ಬದಲಾಯಿಸಿ]

ನಾನು ಪ್ರಾಥಮಿಕ, ಮಧ್ಯ ಮತ್ತು ಪ್ರೌಢ ಶಾಲೆಯನ್ನು ಬೆಥನಿ ಪ್ರೌಢ ಶಾಲೆಯಲ್ಲಿ ಮಾಡಿ, ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ೧೧ನೇ ಮತ್ತು ೧೨ನೇ ತರಗತಿಯಲ್ಲಿ ಓದಿ, ಸಧ್ಯಕ್ಕೆ ನಾನು ಬೆಂಗಳೂರಿನ ಅತೀ ಪ್ರಸಿದ್ಧ ಸಂಸ್ಥೆಯಾದ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎ, ಮಾರ್ಗವನ್ನು ಪತ್ರಿಕೋದ್ಯಮ, ಮನಃಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳಲ್ಲಿ, ವ್ಯಾಸಂಗ ಮಾಡುತ್ತಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

ಉರುಳು ಹಾವುಗೆ(ಸ್ಕೇಟಿಂಗ್), ಬ್ಯಾಲೆ, ಮತ್ತು ಭರತನಾಟ್ಯಂ ನನ್ನ ಹವ್ಯಾಸಗಳು. ನಾನು ೮ನೇ ವಯಸ್ಸಿನಲ್ಲಿ ಉರುಳು ಹಾವುಗೆಯನ್ನು ಮತ್ತು ೯ನೇ ವಯಸ್ಸಿನಲ್ಲಿ ಬ್ಯಾಲೆ, ಭರತನಾಟ್ಯಂ ಕಲಿಯಲು ಪ್ರಾರಂಭಿಸಿದೆ. ನನ್ನ ಎಲ್ಲಾ ಹವ್ಯಾಸಗಳಲ್ಲಿ ಸ್ಕೇಟಿಂಗ್ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ; ಏಕೆಂದರೆ ನಾನು ಸ್ಕೇಟ್ ಮಾಡುವಾಗ ಗಾಳಿಯೂ ರಭಸವಾಗಿ ನನ್ನೆದುರು ಸಾಗುತ್ತದೆ ಮತ್ತು ನಾನು ಗಾಳಿಯಲ್ಲಿ ತೇಲುತ್ತಿರುವ ಹಾಗೆ ಅನುಭವಿಸಿ ಮನಸ್ಸು ಹಗುರವಾಗುತ್ತದೆ. ನನ್ನ ಜೀವನದಲ್ಲಿ ಇಲ್ಲಿವರೆಗೆ ನಡೆದ ಅನುಭವಗಳಲ್ಲಿ ಇದೆ ಅತೀ ಶ್ರೇಷ್ಠವಾದದ್ದು. ವ್ಯಾಸಂಗಕ್ಕಾಗಿ ಕೆಲವು ವರ್ಷಗಳು ನಾನು ಸ್ಕೇಟಿಂಗ್ ಮಾಡುವುದನ್ನು ನಿಲ್ಲಿಸಿದೆ. ಈ ಆಟದಿಂದ ನಮ್ಮ ಮನಸ್ಸು ಶಮನವಾಗದಲ್ಲದೆ, ದೇಹಕ್ಕೂ ಒಳ್ಳೆಯದು. ನನ್ನ ಸ್ಕೇಟಿಂಗ್ ಶಿಕ್ಷಕಿಯ ಹೆಸರು ಎಸ್ತರ್ ಪ್ರಸನ್ನ. ಅವರು ಮೈಸೂರು ಜಿಲ್ಲೆಯವರು. ಅವರು ಮೈಸೂರಲ್ಲಿ ಪ್ರಾಖ್ಯತರಾಗ್ಗಿದ್ದಾರೆ. ಅವರು ೧೧ ಬಾರಿ ಸ್ಕೇಟಿಂಗ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು; ೩ ಸಲ ಏಷ್ಯನ್ ಸ್ಪರ್ಧೆಯಲ್ಲಿ ಗೆದ್ದು ರಾಷ್ಟ್ರಕ್ಕೆ ಹಿರಿಮಯನ್ನು ತಂದುಕೊಟ್ಟಿದ್ದಾರೆ. ಸ್ಕೇಟಿಂಗ್ ಆಟದಲ್ಲಿ ನನಗಿರುವ ಆಸಕ್ತಿಯ ಕಾರಣ ನನ್ನ ಶಿಕ್ಷಕಿಯೇ.

ನನ್ನ ಸಾಧನೆಗಳು[ಬದಲಾಯಿಸಿ]

ನಾನು ಸಹ ಇತರ ಉರುಳು ಹಾವುಗೆ ಸ್ಪರ್ಧೆಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ಪಡೆದಿದ್ದೇನೆ, ಅವು ಬೆಂಗಳೂರು ಜಿಲ್ಲೆಯ ಸ್ಪರ್ಧೆ, ಕರ್ನಾಟಕ ರಾಜ್ಯ ಸ್ಪರ್ಧೆಗಳಲ್ಲಿ ಗೆದ್ದು, ಮುಂಬೈ ವಿರಾರಿನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ೨೦೧೫ರಲ್ಲಿ ನಡೆದ ಬೆಲ್ಜಿಯಂ ರಾಷ್ಟ್ರದಲ್ಲಿ ನಡೆದ ಉರುಳು ಹಾವುಗೆ ಸ್ಪರ್ಧೆಗೆ ಆಯ್ಕೆಯಾದೆ.

ಸ್ಕೇಟಿಂಗ್ ವರ್ಗಗಳು ಮತ್ತು ಯೋಗಕ್ಷೇಮ[ಬದಲಾಯಿಸಿ]

ಸ್ಕೇಟಿಂಗ್ ಆಟದಲ್ಲಿ ಇತರ ವಾರ್ಗಗಳಿವೆ, ಅವು; ಫಿಗರ್ ಸ್ಕೇಟಿಂಗ್, ಐಸ್ ಸ್ಕೇಟಿಂಗ್, ಸ್ಕೇಟ್ ಬೋರ್ಡಿಂಗ್, ಉರುಳು ಹಾವುಗೆ ಮತ್ತು ಇತರ ತರಗಳು.ಸ್ಕೇಟಿಂಗ್ ಆಟವು ದೇಹ ಇಳಿಸಲು, ವ್ಯಾಸಂಗಕ್ಕೆ, ಕೇಂದ್ರಿಕರಿಸಲು ಸಹಾಯವಾಗುತ್ತದೆ.

ಸ್ಕೇಟಿಂಗ್ ಒಂದು ಕ್ರೀಡವಾಗಿ ಈ ರಾಷ್ಟ್ರದಲ್ಲಿ ನಿಧಾನವಾಗಿ ಪ್ರಚಾರಕ್ಕೆ ಬರುವುದಲ್ಲದೆ ಪ್ರಾಮುಖ್ಯತೆಯನ್ನು ಪಡೆದು ಬೆಳೆಯುತ್ತಿದೆ.

Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Prerana.minion.3lou