ಸದಸ್ಯ:Pramodhini.A/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿರ್ವಹಣೆಯ ಕಾರ್ಯಭಾರಗಳು

ನಿರ್ವಹಣೆಯ ಕಾರ್ಯಭಾರಗಳು

ನಿರ್ವಹಣೆಯ ಮೂಲ ತತ್ವಗಳು[ಬದಲಾಯಿಸಿ]

[೧]ನಿರ್ವಹಣೆಯ ಕಾರ್ಯಗಳು ಸೂಕ್ಷ್ಮತೆಯನ್ನೊಳಗೊಂಡಿರುವುದರಿಂದ ಕೆಲವು ಆದರ್ಶಗಳನ್ನು ಹಾಗೂ ವಿಧಿನಿಯಮಗಳನ್ನು ಒಳಗೊಂಡಿರಬೇಕಾಗುತ್ತದೆ.ಇಂದಿನ ವ್ಯವಹಾರಗಳಲ್ಲಿ ನಿರ್ವಹಣೆಯು ಓರ್ವ ವ್ಯಕ್ತಿಯ ಒಡೆತನ ಹಾಗೂ ನಿಯಂತ್ರಣಕ್ಕೊಳಪಟ್ಟಿರುವುದ್ದಿಲ್ಲವೆಂಬುದನ್ನು ನೀವು ಅರಿತಿದ್ದೀರಿ.ಆರ್ಥಿಕತೆ ಹಾಗೂ ಸಮರ್ಥ ಕಾರ್ಯಗಳ ಉದ್ದೇಶವನ್ನು ಈಡೇರಿಸಲು ನಿರ್ವಹಣೆಯು ಯೋಗ್ಯ ಆಡಳಿತ ವ್ಯವಸ್ಥೆಯನ್ನು ರಚಿಸಬೇಕಾಗಿದೆ.

೧)ಕಾರ್ಯ ವಿಭಜನೆ[ಬದಲಾಯಿಸಿ]

ನಿರ್ವಹಣೆಯ ಪ್ರಕ್ರಿಯೆಯು ಪ್ರಾವೀಣ್ಯತೆಯ ತತ್ವವನ್ನಾಧರಿಸಿರಬೇಕು.ಯೋಜನೆಯನ್ನು ನಿರೂಪಿಸುವ,ಸಂಘಟಿಸುವ,ಸಮನ್ವತೆಯನ್ನು ಸಾಧಿಸುವ ಹಾಗೂ ನಿಯಂತ್ರಿಸುವ ಕಾರ್ಯವನ್ನು ಕೇವಲ ವ್ಯಕ್ತಿಯಾಗಲೀ ಇಲ್ಲವೇ ಕೆಲವು ಜನ ನಿರ್ದೇಶಕರಾಗಲೀ ನಿರ್ವಹಿಸಲು ಸಾಧ್ಯವಿಲ್ಲ.ವ್ಯವಹಾರವನ್ನು ಸಮಗ್ರವಾಗಿ ನಿರ್ದೇಶಿಸುವ ಸಾಮರ್ಥ್ಯವಿದ್ದವರು ವ್ಯವಹಾರದಲ್ಲಿ ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ.ಆಯಾ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಪಡೆದ ವ್ಯಕ್ತಿಗಳೇ ಅಂತಹ ಕಾರ್ಯಗಳನ್ನು ನಿರ್ವಹಿಸುವುದು ಅನಿವಾರ್ಯ.ಅಂತೆಯೇ ಯೋಜನೆಯ.ನಿರ್ದೇಶನದ ಹಾಗೂ ವ್ಯವಹಾರೋದ್ಯಮದ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ರೀತಿ ನೀತಿಗಳನ್ನು ವಿಭಜಿಸುತ್ತದೆ.ವ್ಯವಹಾರಕ್ಕೆ ಸಂಭದಿಸಿದ ವಿಷಯಗಳಲ್ಲಿ ನಿರ್ಣಯಗಳನ್ನು ಕೈಕೊಳ್ಳುವ ಕಾರ್ಯ,ನಿಲುಮೆಯನ್ನು ರೂಪಿಸುವ ಕಾರ್ಯ,ನಿರ್ದೇಶನದ ಹಾಗೂ ನಿಯಂತ್ರಣದ ಕಾರ್ಯ ಮುಂತಾದವುಗಳನ್ನು ವಿಶೇಷ ಪರಿಣಿತಿ ಪಡೆದ ವ್ಯಕ್ತಿಗಳು ಮಾತ್ರ ನಿರ್ವಹಿಸುವುದಾದರೆ ಸಮಸ್ತ ವ್ಯವಹಾರವು ಸಮರ್ಥವಾಗಿ ಹಾಗೂ ಸುವ್ಯವಸ್ಥಿತವಾಗಿ ಕಾರ್ಯಮಾಡಬಲ್ಲದು.

೨)ಪ್ರಭುತ್ವ ಹಾಗೂ ಹೊಣೆಗಾರಿಕೆ[ಬದಲಾಯಿಸಿ]

[೨]ಇತರರಿಂದ ಸರಿಯಾಗಿ ಕಾರ್ಯ ಮಾಡಿಸುವುದೇ ನಿರ್ವಹಣೆಯ ಅಂತಃಸತ್ವವೆಂಬುದನ್ನು ಹೇಳಲಾಗಿದೆ.ಕಾರಣ ವಿವಿಧ ಕಾರ್ಯಗಳನ್ನು ಇತರರಿಂದ ಸರಿಯಾಗಿ ಮಾಡಿಸಲು ನಿರ್ವಾಹಕರು ಆದೇಶ ನೀಡುವುದು ಮಹತ್ವದ ಕಾರ್ಯವಾಗಿದೆ.ಅಂದರೆ ಕುಶಲ ಕಾರ್ಮಿಕರು ಹಾಗೂ ಕೆಲಸಗಾರರ ಮೇಲೆ ನಿರ್ವಹಣೆಯು ಪ್ರಭುತ್ವವನ್ನು ಹೊಂದಿರುತ್ತದೆ ಎಂಬುದು ಸ್ಪಷ್ಟವಾಗಿದೆ.ಕೆಲಸಗಾರರನ್ನು ನಿರ್ದೇಶಿಸಿ,ಅವರು ನಿಷ್ಠೆ ಹಾಗೂ ಪ್ರಮಾಣಿಕತನದಿಂದ ಕಾರ್ಯ ಮಾಡುವಂತೆ ಅಧಿಕಾರ ಚಲಾಯಿಸುವ ಹಕ್ಕು ನಿರ್ವಹಕರಿಗೆ ಕೊಡ ಮಾಡಲಾಗಿರುತ್ತದೆ.ಕಾರಣ,ಅಧಿಕಾರಿ ವ್ಯಾಪ್ತಿಯ ಬಾಹುಳ್ಯವನ್ನಾಧರಿಸಿ ನಿರ್ವಹಣೆಯ ಕಾರ್ಯವು ಸಮರ್ಥ ಹಾಗೂ ದಕ್ಷವಾಗುತ್ತದೆ.ಅಧಿಕಾರದೊಂದಿಗೆ ಹೊಣೆಗಾರಿಕೆಯೂ ಇರುತ್ತದೆ ಎಂಬುದನ್ನು ಮರೆಯಲಾಗದು.ಹೊಣೆಗಾರಿಕೆಯನ್ನು ಜಾಣ್ಮೆಯಿಂದ ನಿಭಾಯಿಸುವುದಕ್ಕೋಸ್ಕರವೇ ಅಧಿಕಾರವನ್ನು ನೀಡಲಾಗಿರುತ್ತದೆ.ಹೊಣೆಗಾರಿಕೆಯನ್ನು ಜಾಣ್ಮೆಯಿಂದ ನಿಭಾಯಿಸುವ ನಿರ್ವಹಕನು ತನ್ನ ಅಧಿಕಾರವನ್ನು ಅತ್ಯಂತ ಚೆನ್ನಾದ ರೀತಿಯಲ್ಲಿ ಉಪಯೋಗಿಸಿಕೊಂಡು,ವ್ಯವಹಾರದ ಯಶಸ್ಸಿಗೆ ಕಾರಣನಾಗಬಲ್ಲನು.

೩)ಶಿಸ್ತು[ಬದಲಾಯಿಸಿ]

ನಿರ್ವಹಣೆಯ ಪ್ರಭುತ್ವಕ್ಕೆ ಶಿಸ್ತು ವಿಶೇಷ ಅರ್ಥವನ್ನು ನೀಡಿದೆ.ಸಿಬ್ಬಂದಿ ವರ್ಗದಿಂದ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿಸಿ,ಅವರೆಲ್ಲರ ಕೆಲಸಗಳಲ್ಲಿ ಸಮನ್ವಯತೆಯನ್ನುಂಟು ಮಾಡುವುದು ಶಿಸ್ತಿನಿಂದಲೇ ಸಾಧ್ಯ.ಯಾವುದೇ ಕಾರ್ಯದಲ್ಲಾದರೂ ಒಂದು ತರಹದ ಅಂತರಿಕ ಶಿಸ್ತು ಇರದಿದ್ದರೆ ಸರಿಯಾದ ರೀತಿಯಲ್ಲಿ ಕಾರ್ಯವಾಗಲಾರದು.ಆಡಳಿತದ ಕೆಲಸಗಳು ಸುಗಮವಾಗಿ ನಡೆಯಬೇಕಿದ್ದರೆ ಶಿಸ್ತನ್ನು ರೂಢಿಸಬೇಕಾಗುತ್ತದೆ.ನಿರ್ವಾಹಕರು ಕೆಲಸಗಾರರಿಗೆ ಸರಿಯಾಗಿ ನಿರ್ದೇಶನ ನೀಡುತ್ತಾ ಅವರ ಚಟುವಟಿಕೆಗಳನ್ನು ಸದಾ ಕಾಲವೂ ಗಮನಿಸುತ್ತ,ತಪ್ಪಿದಾಗಲೆಲ್ಲ ಸರಿಯಾಗಿ ತಿಳಿ ಹೇಳಬೇಕಾಗುತ್ತದೆ.ಸೌಜನ್ಯ ಶೀಲತೆಯನ್ನು ಕೆಲಸಗಾರರು ರೂಢಿಸಿಸಿಕೊಳ್ಳುವಂತೆ ಲಕ್ಷವಹಿಸಬೇಕು.ಅಶಿಸ್ತು,ಅಧಿಕಾರಿಗಳಿಗೆ ಅನಾದರ,ಅಗೌರವ ತೋರುವ ಪ್ರವೃತ್ತಿ ಕೆಲಸಗಾರರಲ್ಲಿ ಪ್ರವರ್ಧಿಸಿದರೆ ವ್ಯವಹಾರವು ಯಶಸ್ಸನ್ನು ಪಡೆಯಲಾರದು.ಸಿಬ್ಬಂದಿ ವರ್ಗದಲ್ಲಿ ಶಿಸ್ತನ್ನು ಮೂಡಿಸುವ ನಿರ್ವಾಹಕರು ಅತ್ಯಂತ ಜಾಗರೂಕರಾಗಿ ಕರ್ತವ್ಯ ನಿಷ್ಠೆಯಿಂದ,ಸೌಜನ್ಯಪೂರ್ವಕವಾಗಿ ವರ್ತಿಸಬೇಕಾದುದು ಅವಶ್ಯ.ಅನೇಕ ಜನರಿಂದ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಸಬೇಕಾದುದರಿಂದ ನಿರ್ವಹಣೆಯ ಕಾರ್ಯವು ಸೂಕ್ಷ್ಮ ಸ್ವರೂಪದ್ದಾಗಿದೆ.ಶಿಸ್ತು ಇಲ್ಲಾವಾದರೆ ಇಂತಹ ಸೂಕ್ಷ್ಮಕಾರ್ಯಗಳು ಸುಲಭವಾಗಿ ಹಾಗೂ ಸರಾಗವಾಗಿ ನೆರವೇರಲಾರವು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

೪)ಆಜ್ನೆ ಹಾಗೂ ಆದೇಶಗಳಲ್ಲಿ ಏಕತೆ[ಬದಲಾಯಿಸಿ]

ತಮ್ಮ ನಿರ್ದಿಷ್ಟ ಮೇಲಧಿಕಾರಿಯಿಂದ ಮಾತ್ರವೇ ಕೆಲಸಗಾರರು ಆದೇಶವನ್ನು ಪಡೆಯುವಂತಾಗಬೇಕು.ಇವರು ಹೆಚ್ಚು ಮೇಲ್ವಿಚಾರಕರ ಅಧೀನದಲ್ಲಿ ಕಾರ್ಯ ಮಾಡುವ ಜನರು ಆದೇಶಗಳಲ್ಲಿ ಇರದಿದ್ದರೆ ಸರಿಯಾಗಿ ಕಾರ್ಯ ಮಾಡಲಾರರು.ಕೆಲಸಗಾರರಿಗೆ ವಿಧಿಸುವ ನಿಯಮಗಳು ಹಾಗೂ ಆದೇಶಗಳಲ್ಲಿ ಈ ಬಗೆಯಾದರೆ ಕೆಲಸವೆಲ್ಲ ಹಾಳಾಗುತ್ತದೆ ಅವ್ಯವಸ್ಥೆ ತಲೆದೋರುತ್ತದೆ.ವಿವಿಧ ಹುದ್ದೆಯ ಮೇಲಧಿಕಾರಿಗಳೊಂದಿಗೆ ಕೆಲಸಗಾರರು ಸಂಪರ್ಕವಿರಿಸಿಕೊಳ್ಳಬೇಕಾದುದು ಅನಿವಾರ್ಯವಾಗಿರುತ್ತದೆ.ಕೆಲಸ ಮಾಡುವವರು ಸಹ ತಮ್ಮ ಇಲಾಖೆಯ ಮುಖ್ಯಸ್ಥನ ಆದೇಶದಂತೆ ನಡೆದುಕೊಂಡರೂ ಇತರ ಅಧಿಕಾರಿಗಳಿಗೆ ನಿಷ್ಠೆ ತೋರಬೇಕಾಗುತ್ತದೆ.ಒಟ್ಟಿನಲ್ಲಿ ಕೆಲಸಗಾರರಿಗೆ ನೀಡಲಾಗುವ ಆದೇಶ ಆಜ್ನೆಗಳಲ್ಲಿ ಏಕತೆ ಇದ್ದರೆ ಮಾತ್ರ ಶಿಸ್ತು ಸರಿಯಾಗಿ ಮೂಡಿಬಂದು ವ್ಯವಹಾರದ ಸಕಲ ಕಾರ್ಯಗಳು ಸುಗಮವಾಗಿ ಸಾಗಬಲ್ಲವು.

೫)ಏಕರೂಪ ನಿರ್ದೇಶನ[ಬದಲಾಯಿಸಿ]

ಒಂದೇ ತರನಾದ ಧ್ಯೇಯವನ್ನುಳ್ಳ ಪ್ರತಿಯೊಂದು ಕೆಲಸದ ಗುಂಪಿನ ಚಟುವಟಿಕೆಗಳನ್ನೇ ನಿರ್ವಹಿಸುವ ವ್ಯಕ್ತಿ ಹಾಗೂ ಯೋಜನೆ ಒಂದೇ ಆಗಿರಬೇಕು ಎಂಬುದು ಈ ತತ್ವದ ಅರ್ಥವಾಗಿದೆ ಆದೇಶಗಳಲ್ಲಿ ಏಕತೆಯು ಸಿಬ್ಬಂದಿ ವರ್ಗಕ್ಕೆ ಅನ್ವಯಿಸಿದರೆ ಏಕರೂಪ ನಿರ್ದೇಶನ ತತ್ವವು ವ್ಯವಹಾರದ ವಿವಿಧ ಇಲಾಖೆಗಳು ಹಾಗೂ ಅವುಗಳ ಉಪ ವಿಭಾಗಗಳಿಗೆ ಅನ್ವಯಿಸುತ್ತದೆ ಪ್ರತಿಯೊಂದು ವಿಧವಾದ ಕೆಲಸಕ್ಕೆ ನಿರ್ದಿಷ್ಟವಾದ ಯೋಜನೆ ಇರಬೇಕಾದುದು ಅತ್ಯವಶ್ಯ.ಉನ್ನತ ಮಟ್ಟದ ಅಧಿಕಾರಿಗಳು ಸಮರ್ಪಕವಾದ ರೀತಿಯಲ್ಲಿ ಯೋಜನೆ ನಿರೂಪಿಸಿ,ಅದನ್ನು ಸರಿಯಾಗಿ ಹಾಗೂ ಸುವ್ಯಸ್ಥಿತವದ ರೀತಿಯಲ್ಲಿ ಕಾರ್ಯಗತಗೊಳಿಸಿದರೆ ಉತ್ಪಾದನೆಯ ಮೊತ್ತ ಹಾಗೂ ಅದರ ಗುಣಮಟ್ಟಗಳಲ್ಲಿ ನಿರೀಕ್ಷಿಸಿದ ರೀತಿಯಲ್ಲಿ ಫಲವನ್ನು ಪಡೆಯಲಾಗುತ್ತದೆ.

೬)ಸಾಮಾನ್ಯ ಆಸ್ಥೆಗೆ ವ್ಯಕ್ತಿನಿಷ್ಠೆ ತೋರಬೇಕು[ಬದಲಾಯಿಸಿ]

ಕೆಲಸಗಾರರ ಮಧ್ಯೆ ಇರುವ ಭಿನ್ನ ಭಿಪ್ರಾಯಗಳನ್ನು ಹೋಗಲಾಡಿಸಿ,ಅದರಿಂದ ವ್ಯವಹಾರದ ಸಾಮಾನ್ಯ ಆಸ್ಥೆಗೆ ದಕ್ಕೆಯಾಗದಂತೆ ನೋಡಿಕೊಳ್ಳುವುದು ನಿರ್ವಹಣೆಯ ಆದ್ಯ ಕಾರ್ಯವಾಗೆದೆ.ಇವರು ಅಧಿಕಾರಿಗಳ ಮಧ್ಯೆ ತಲೆದೋರುವ ಭಿನ್ನಾಭಿಪ್ರಾಯಗಳು ಕೆಲಸಕ್ಕೆ ಸಂಬಂಧಿಸಿದವುಗಳಾಗಿದ್ದರೆ ವ್ಯವಹಾರದ ಸಾಮಾನ್ಯ ನಿಲುಮೆಗೆ ಅನುಗುಣವಾಗುವ ರೀತಿಯಲ್ಲಿ ಅವುಗಳನ್ನು ಪರಿಹರಿಸಿ,ಅವರಲ್ಲಿ ಒಪ್ಪಂದವುಂಟಾಗುವಂತೆ ನೋಡಿಕೊಳ್ಳಬೇಕು.ಒಟ್ಟಿನಲ್ಲಿ ವ್ಯವಹಾರದ ಸಾಮಾನ್ಯ ಆಸ್ಥೆಯನ್ನು ಈಡೇರಿಸುವ ಕಾರ್ಯದಲ್ಲಿ ಎಲ್ಲರೂ ಶ್ರದ್ಧೆವಹಿಸಿ ತಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವಂತೆ ನಿರ್ವಹಕರು ಪ್ರೇರಣೆ ನೀಡಬೇಕು.ವ್ಯಕ್ತಿಗಿಂತ ಸಂಸ್ಥೆ ಅಥವಾ ಉದ್ದಿಮೆ ಹೆಚ್ಚಿನದಾಗಬೇಕು.

೭)ಸಂಭಾವನೆ[ಬದಲಾಯಿಸಿ]

ಸಿಬ್ಬಂದಿ ವರ್ಗಕ್ಕೆ,ಪರಿಶ್ರಮಕ್ಕೆ ತಕ್ಕ ರೀತಿಯಲ್ಲಿ ಸಂಭಾವನೆ ನೀಡದಿದ್ದರೆ ಕಾರ್ಯಗಳು ನಿರೀಕ್ಷಿಸಿದ ಮಟ್ಟದಲ್ಲಿ ಆಗಲಾರವು.ಕೆಲಸಗಾರರು ಮನಃಪೂರ್ವಕವಾಗಿ ಸೇವೆ ಸಲ್ಲಿಸುವಂತೆ ಪ್ರೋತ್ಸಾಹನದಾಯಕವಾದ ರೀತಿಯಲ್ಲಿ ಸಂಭಾವನೆ ನೀಡುವಂತೆ ನಿರ್ವಹಣೆಯು ವ್ಯವಸ್ಥೆ ಮಾಡಬೇಕು.ವ್ಯವಹಾರದ ಕಾರ್ಯಗಳು ಶ್ರೇಷ್ಠ ಮಟ್ಟದಲ್ಲಿ ನಿರಂತರವಾಗಿ ಸಾಗಬೇಕಾದರೆ ಸಂಭಾವನೆಯು ಅತ್ಯಂತ ತೀವ್ರ ಪ್ರಚೋದಕ ಶಕ್ತಿ ಎಂಬುದು ನಿರ್ವಿವಾದ ಸಿಬ್ಬಂದ ವರ್ಗದವರಿಗೆ ತೃಪ್ತಿಕರವಾದ ರೀತಿಯಲ್ಲಿ ಸಂಭಾವನೆ ನೀಡಿ ಅವರಿಗೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಿಕೊಡುವುದೇ ಉತ್ತಮ ನಿರ್ವಹಣೆಯ ಗುಟ್ಟು ಎಂದು ಹೇಳಬಹುದು.ಸಂತೃಪ್ತಿ ನೌಕರ ವರ್ಗವು ವ್ಯವಹಾರದ ಬಹು ಮುಖ್ಯ ಹಾಗೂ ಬೆಲೆಯುಳ್ಳ ಆಸ್ತಿ ಎಂದೇ ಹೇಳಬೇಕಾಗಿದೆ.ಹೆಚ್ಚು ಆಸ್ತೆವಹಿಸಿ ದುಡಿಯುವವರಿಗೆ ವಿಶೇಷ ಹಣದ ನೆರವನ್ನು ನೀಡಬೇಕು.

೮)ಕೇಂದ್ರೀಕರಣ[ಬದಲಾಯಿಸಿ]

ವ್ಯವಹಾರದ ವಿಷಯಗಳಲ್ಲಿ ಮಹತ್ತರ ನಿರ್ಣಯ ಕೈಕೊಳ್ಳುವ ವಿಷಯದಲ್ಲಿ ಅಧಿಕಾರವು ಎಷ್ಟರ ಮಟ್ಟಿಗೆ ಕೇಂದ್ರೀಕೃತವಾಗಿರಬೇಕು.ಸನ್ನಿವೇಶಗಳ ಸ್ವರೂಪ,ಉದ್ದಿಮೆಯ ಗಾತ್ರದ ವ್ಯಾಪ್ತಿ,ಚಟುವಟಿಕೆಗಳ ರೀತಿ ನೀತಿಗಳು ಇತ್ಯಾದಿಗಳನ್ನಾಧರಿಸಿ ನಿರ್ಣಯ ಕೈಕೊಳ್ಳುವ ಅಧಿಕಾರ ಹಾಗೂ ನಿರ್ದೇಶನ ನೀಡುವ ಹಾಗೂ ನಿಯಂತ್ರಿಸುವ ಅಧಿಕಾರವನ್ನು ಕೆಲವು ಅಧಿಕಾರಿಗಳಿಗೆ ಕೊಡಬೇಕು.ಇಲ್ಲವೇ ವಿವಿಧ ಆಡಳಿತಾಧಿಕಾರಿಗಳಿಗೆ ಅಂತಹ ಅಧಿಕಾರವನ್ನು ಕೊಡಮಾಡುವುದು ಅಧಿಕಾರದ ವಿಕೇಂದ್ರೀಕರಣವಿನಿಸಿಕೊಳ್ಳುತ್ತದೆ.ಸಿಬ್ಬಂದಿ ವರ್ಗದ ಕಾರ್ಯಗಳು ಒಟ್ಟು ವ್ಯವಹಾರವನ್ನು ಫಲಪ್ರದಗೊಳಿಸುವಂತೆ ನಿರ್ವಹಣೆಯ ವ್ಯವಸ್ಥೆ ಮಾಡಬೇಕು.

೯)ಅಧಿಕಾರಿ ಶ್ರೇಣೆಯ ಚಕ್ರ[ಬದಲಾಯಿಸಿ]

ಅಧಿಕಾರಿ ವರ್ಗವನ್ನು ಆಯಾ ಕಾರ್ಯಗಳ ಸ್ವರೂಪವನ್ನಾಧರಿಸಿ ಶ್ರೇಣಿಯ ರೂಪದಲ್ಲಿ ನಿಗದಿ ಪಡಿಸಬೇಕು.ಮೇಲು ದರ್ಜೆಯಿಂದ ಕೆಳದರ್ಜೆಯವರೆಗಿನ ಅಧಿಕಾರ ಸ್ತಾನಗಳನ್ನು ನಿರ್ಧರಿಸಿ,ಹೊಣೆಗಾರಿಕೆಯನ್ನು ಸಿಬ್ಬಂದಿ ವರ್ಗದಲ್ಲಿ ಸರಿಯಾಗಿ ಹಂಚಿಕೊಡಬೇಕು.ಸಂಘಟನೆಯ ರಚನೆಯ ರೂಪುರೇಷೆಗಳನ್ನು ತಯಾರಿಸಿ ,ಪ್ರಭುತ್ವದ ಶ್ರೇಣಿಯನ್ನು ಸಿದ್ದಪಡಿಸಿ,ಮೇಲಾಧಿಕಾರಿ ಹಾಗೂ ಆತನ ಅನುಚರರ ಭಾಂಧವ್ಯಗಳನ್ನು ಕುರಿತಾದ ನಿಯಮಾವಳಿಗಳನ್ನು ರಚಿಸಬೇಕು.

೧೦)ಸುವ್ಯವಸ್ಥೆ[ಬದಲಾಯಿಸಿ]

ಕೆಲಸಗಾರರ ಹಾಗೂ ಸಾಧನ ಸಾಮಗ್ರಿಗಳ ಸುವ್ಯವಸ್ಥಿತ ಸಂಘಟನೆಯ ಮೂಲಕ ನಿರ್ವಹಣೆಯು ಕಾರ್ಯರಂಗದಲ್ಲಿ ಸುವ್ಯವಸ್ಥೆಯನ್ನುಂಟು ಮಾಡಬಹುದಾಗಿದೆ.ಉಪಲಬ್ದವಿದ್ದ ಮೂಲ ಸಂಪತ್ತು,ಸಾಧನೋಪಾಯಗಳನ್ನು ಒದಗಿಸುದು,ಸಿಬ್ಬಂದಿ ವರ್ಗದ ಸಾಮರ್ಥ್ಯ ಹಾಗೂ ಕೌಶಲಗಳನ್ನು ಗುರುತಿಸಿ ಅವರನ್ನು ಸರಿಯಾದ ಸ್ಥಾನದಲ್ಲಿರಿಸುವುದು ನಿರ್ವಾಹಣೆಯ ಪ್ರಮುಖ ಕಾರ್ಯವಾಗಿದ್ದ,ಆ ಕಾರ್ಯದಲ್ಲಿ ಲೋಪದೋಷಗಳುಂಟಾದರೆ ವ್ಯವಹಾರವು ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ.ಸಾಧನೋಪಾಯಗಳು,ಸೂಕ್ಷ್ಮಯಂತ್ರೋಪ ಕಾರಣಗಳು ಸರಿಯಾದ ವ್ಯಕ್ತಿಗಳ ಕಡೆಗೆ ಸಿಕ್ಕಿಬಿದಿದ್ದರೆ ಕೆಟ್ಟುಹೋಗುತ್ತವೆ.ಅವುಗಳಿಂದಾಗುವ ಹೆಚ್ಚಾಗಿ  ವ್ಯವಹಾರದ  ಉತ್ಪಾದನೆಗೆ ಪೆಟ್ಟು ತಾಕುವುದಷ್ಟೇ ಅಲ್ಲದೆ ರಿಪೇರಿ ಹಾಗೂ ಸವಕಳಿಯ ಖರ್ಚು ಹೆಚ್ಚಾಗುತ್ತದೆ.

೧೧)ನಿಷ್ಪಕ್ಷಪಾತತೆ ಹಾಗೂ ಸಮದರ್ಶಿತ್ವ[ಬದಲಾಯಿಸಿ]

ವ್ಯವಹಾರಕ್ಕೆ ಸಂಬಂಧಿಸಿದ ಸಿಬ್ಬಂದಿ ವರ್ಗದೊಡನೆ ವ್ಯವಹಾರಿಸುವ ರೀತಿ ನೀತಿಗಳಲ್ಲಿ ನಿಷ್ಪಕ್ಷಪಾತದ ದೃಷ್ಟಿಕೋನ ಹಾಗೂ ಸಮದರ್ಶಿತ್ವದ ಭಾವ ನಿರ್ವಹಣೆಯ ಕಾರ್ಯವಾಗಿರಬೇಕು.ವ್ಯಾವಹಾರದ ಕಾನೂನು ಹಾಗೂ ನೀತಿನಿಯಮಗಳಲ್ಲಿ ಬಿಟ್ಟು ಹೋಗಿರುವುದನ್ನು ಸೇರಿಸಿ ಹಾಗೂ ತಪ್ಪಿ ಹೋಗಿರುವುದನ್ನು ತಿದ್ದಿಕೊಂಡು ನಡೆಸುವ ನ್ಯಾಯದೃಷ್ಟಿ ಇರಬೇಕು.ಹಕ್ಕುಬಾಧ್ಯತೆ ಮೊದಲಾದ ವಿಷಯಗಳಲ್ಲಿ ಕಾನೂನಿಗೆ,ನಿಯಮಾವಳಿಗಳಿಗೆ ಸರಿ ಹೊಂದಿದ್ದರೂ ನೀತಿ ದೃಷ್ಟಿಯಿಂದ ಅಂಗೀಕರಿಸಬಹುದಾದ ಧರ್ಮ ಹಾಗೂ ನ್ಯಾಯ ಸಮ್ಮತವಾದ ನಿಲುಮೆ ನಿರ್ವಹಣೆಕಾರನ ಉಸಿರಾಗಿರಬೇಕು.ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ,ಸರಿಯಾದ ರೀತಿಯಲ್ಲಿ ನಿರ್ಣಯ ಕೈಕೊಳ್ಳುವ ನ್ಯಾಯ ಬುದ್ಧಿ ಅವರಲ್ಲಿರಬೇಕು.

೧೨)ಸಿಬ್ಬಂದಿ ವರ್ಗದ ಸೇವಾವಧಿಯ ದೃಡತೆ[ಬದಲಾಯಿಸಿ]

ಸಿಬ್ಬಂದಿ ವರ್ಗಕ್ಕೆ ನೌಕರಿ ಅಥವಾ ಕೆಲಸದಲ್ಲಿ ನಿಶ್ಚಿತತೆಯನ್ನು ನಿರ್ವಹಣೆಯು ಒದಗಿಸಿಕೊಡಬೇಕು.ಅಂದರೆ ಕಾಯಂ ನೌಕರಿಯನ್ನು ಕೊಡಬೇಕೂ ಎಂದರ್ಥ.ಕೆಲಸ ಕಾಯಂ ಆಗಲಾರದೆಂಬ ಭೀತಿಯಿರುವಾಗ ಕೆಲಸಗಾರರು ಭೀತಿಗೊಂಡು ಕಾರ್ಯತತ್ಪರರಾಗಲಾರರು. ನಿಶ್ಚಿತತೆ ಹಾಗೂ ಸುರಕ್ಷಿತತೆಗಿಂತ ನಿಶ್ಚಿತತೆಯ ಹಾಗೂ ಸುರಕ್ಷಿತತೆಯ ಭಾವವು ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಮನೋವಿಜ್ಣಾನವು ಸಾರಿ ಹೇಳುತ್ತದೆ.ಸೇವಾವಧಿಯ ದೃಢತೆಯ ಅಶ್ವಾಸನೆ ಸಿಕ್ಕಾಗ ಕೆಲಸಗಾರರು ನಿಶ್ಚಿಂತೆಯಿಂದ ತಮ್ಮೆಲ್ಲ ಗಮನವನ್ನು ಕೆಲಸದಲ್ಲಿ ಕ್ರೋಢೀಕರಿಸಿ ಕಾರ್ಯ ಮಾಡಬಲ್ಲರು.ಕೆಲಸದ ನಿಶ್ಚಿತತೆ ಅವರಲ್ಲಿ ಕಾರ್ಯವನ್ನು ಸರಿಯಾಗಿ, ನಿಷ್ಠೆಯಿಂದ ಮಾಡುವಂತೆ ಪ್ರಚೋದಿಸುವ ಮೂಲ ಪ್ರೇರಶಕ್ತಿ ಎಂದು ಹೇಳಬಹುದಾಗಿದೆ.

(೧೩)ಮೂಂದಾಗಿ ಕೆಲಸ ಮಾಡುವ ಪ್ರವ್ರುತ್ತಿ[ಬದಲಾಯಿಸಿ]

ವ್ಯವಹಾರದ ಮೂಲ ಯೋಜನೆಗಳನ್ನು ಸ್ವತಂತ್ರವಾಗಿ ರೂಪಸಿ ಅದಕ್ಕನುಗುಣವಾಗಿ ಕಾರ್ಯಗಳನ್ನು ಅನುಷ್ಠಾನಕ್ಕೆ ಕೆಲಸ ಮಾಡುವ ಪ್ರವ್ರುತ್ತಿ ಎಂದು ಹೇಳಬಹುದು.ವ್ಯಕ್ತಿಗಳಲ್ಲಿರುವ ಇಂತಹ ಮನೋಭಾವವು ಅಭಿವ್ಯಕ್ತವಾಗಲು ನಿರ್ವಹಣೆಯು ಅವಕಾಶ ಕಲ್ಪಿಸಿ ಕೊಡಬೇಕು.ಕೆಲಸಗಾರರಿಗೆ ವಹಿಸಿಕೊಟ್ಟ ಕಾರ್ಯ ವ್ಯಾಪ್ತಿಯಲ್ಲಿ ಅವರು ಸ್ವತಂತ್ರ್ಯವಾಗಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಿಕೊಟ್ಟರೆ ಅವರಿಗೆ ಅದಮ್ಯ ಪ್ರೇರಣೆ ದೊರಕುತ್ತದೆ.ವ್ಯವಹಾರದ ಉತ್ತರೋತ್ತರ ಅಭಿವ್ರಿದ್ಧಿಯಲ್ಲಿ ತಮ್ಮ ಪಾಲೂ ಇದೆಯೆಂಬ ಅಭಿಮಾನ,ಸ್ವಪ್ರತಿಷ್ಠೆ ಅವರಲ್ಲಿ ಮೂಢಿ ಬರುತ್ತದೆ.ಪ್ರತಿಭಾವಂತ ವ್ಯಕ್ತಿಗಳಿಗೆ ಇಂತಹ ಅವಕಾಶವು ಹೆಚ್ಚಿನ ಕಾರ್ಯ ತ್ರಿಪ್ತಿಯನ್ನು ನೀಡುತ್ತದೆ.

(೧೪)ನಿರ್ವಹಣೆಯು ಕೆಲಸಗಾರರಿಗೆ ಪ್ರೇರಕ ಶಕ್ತಿಯಾಗಬೇಕು ಹಾಗು ಸ್ಪೂಉರ್ತಿಯ ಸೆಲೆಯಾಗಬೇಕು[ಬದಲಾಯಿಸಿ]

ಕೆಲಸಗಾರರತಂಡವು ಯಶಸ್ವಿಯಾಗಿ ಕರ್ಯ ನಿರ್ವಹಿಸದಿದ್ದರೆ ನಿರ್ವಹಣೆಯ ಆಟವು ಫಲದಾಯಕವಾಗಲಾರದು.ನಿರ್ವಹಣೆ ಹಾಗೂ ಸಿಬಂಧಿ ವರ್ಗದ ಮಧ್ಯೆ ಸಹಕಾರ,ಸ್ನೇಹಪರತೆ ಒಕ್ಕಟ್ಟು ಇರದಿದ್ದರೆ ವ್ಯವಹಾರದ ಧ್ಯೇಯಗಳು ಗಗನ ಕುಸುಮಗಳಾಗಿಯೇ ಉಳಿಯುತ್ತದೆ.ಕೆಲಸಗಾರರ ಮಧ್ಯೆ ತಿಳುವಳಿಕೆ, ಸಹಾನುಭೂತಿ,ಸಹಕಾರಿ ಮನೋಭಾವ ,ಏಕತೆ ಅತ್ಯವಶ್ಯವಾಗಿರಬೇಕು.ಇವುಗಳಿಲ್ಲವಾದರೆ ಎಂತಹ ಸುಸಜ್ಜಿತ ಉದ್ದಿಮೆಯೂ ಯಶಸ್ವಿಯಾಗಲಾರದು.ನಿರ್ವಾಹಕರು ತಾತ್ಕಾಲಿಕ ಲಾಭದಾಸೆ ಹಾಗೂ ಪ್ರಯೋಜನಗಳಿಗೋಸ್ಕರ ವಿಭಜಿಸಿ ಆಳುವ ನೀತಿಯನ್ನು ಪಾಲಿಸುವುದು ವ್ಯವಹಾರದ ಭವಿಷ್ಯಕ್ಕೆ ಮಾರಕ ವಾಗುವುದರಲ್ಲಿ ಸಂದೇಹವಿಲ್ಲ.

ಉಲ್ಲೇಖಾ[ಬದಲಾಯಿಸಿ]

  1. http://www.toolshero.com/management/14-principles-of-management/
  2. https://en.wikiversity.org/wiki/Principles_of_Management