ಸದಸ್ಯ:Prajwal B Mantanavar/WEP 2019-20 sem2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ರೀಕರ ಮ್ಯೂಸಗಳು[ಬದಲಾಯಿಸಿ]

ಪರಿಚಯ[ಬದಲಾಯಿಸಿ]

thumb|ಪ್ರೇಮಗೀತೆಗಳ ದೇವತೆ ಎರಾಟೊಸ್ ಮ್ಯೂಸಗಳು ಗ್ರೀಕರ ಪುರಾಣಗಳಲ್ಲಿ ಬರುವ ಕಲೆಗಳ ಆರಾಧ್ಯ ದೇವತೆಗಳು. ಇವರನ್ನು ಗ್ರೀಕ್ ಮತ್ತು ಲ್ಯಾಟಿನ್ ಜನರು ತಮ್ಮ ಕಲಾಕೌಶಲ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ನಿತ್ಯವೂ ಪೂಜಿಸುತ್ತಿದ್ದರು ಆಂಗ್ಲ ಭಾಷೆಯ ‘ಮ್ಯೂಸಿಕ್’, ‘ಮ್ಯೂಸಿಯಂ’ ಮತ್ತು ‘ಅಮ್ಯೂಸ್ಮೆಂಟ್’ ಅಂತಹ ಹಲವಾರು ಶಬ್ಧಗಳು ಗ್ರೀಕರ ಈ ಮ್ಯೂಸಗಳಿಂದಲೇ ತಮ್ಮ ಮೂಲವನ್ನು ಪಡೆದಿರುವುವು. ಪಾಶ್ಚಾತ್ಯ ಸಾಹಿತ್ಯದಲ್ಲಿ ಈ ದೇವತೆಗಳ ಪಾತ್ರ ಗಣನೀಯವಾದುದಲ್ಲದೆ, ಇವರ ಅಸ್ತಿತ್ವ ಬಹಳ ಪ್ರಬಲವಾಗಿ ಕಂಡುಬರುತ್ತದೆ. ಗ್ರೀಕ್ ಪುರಾಣ ಕಥೆಗಳಲ್ಲಿ ಮ್ಯೂಸಗಳು ಪುನಃ ಮರುಕಳಿಸುತ್ತ, ತಮ್ಮ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಸಾಬೀತು ಫಡಿಸುತ್ತವೆ[೧].

ಮ್ಯೂಸ ದೇವತೆಗಳು ಒಟ್ಟು ಒಂಬತ್ತು ಯಕ್ಷಕನ್ಯೆಯರು. ಇವರು, ಗ್ರೀಕರ ಅಧಿದೇವತೆಯಾದ ಜಿವ್ವ್ಸ್ ಮತ್ತು ಜ್ಞಾಪಕಶಕ್ತಿಯ ದೇವತೆಯಾದ ನೇಮೊಸಿನ್ನ ಸುಪುತ್ರಿಯರು. ಇವರು ಮೌನ್ಟ್ ಹೆಲಿಕಾನ್, ಮೌನ್ಟ್ ಪರ್ಣಾಸಸ್ ಹಾಗು ಥೆಸಲ್ಲಿಯ ಪಯೇರಿಯದಲ್ಲಿ ವಾಸಿಸುತ್ತಿದ್ದರು ಎಂಬುದು ಪ್ರತೀತಿ. ಥೆಸಲ್ಲಿಯಲ್ಲಿ ಹರಿಯುತಿದ್ದ ‘ಪೆಯೇರಿಯನ್ ಸ್ಪ್ರಿಂಗ್’ ಎಂಬ ಸರೋವರವು, ಗ್ರೀಕರ ಕಲಾನೈಪುಣ್ಯವನ್ನು ಪೋಷಿಸುವ ಜೀವಜಲವಾಗಿತ್ತು. ಕವಿಗಳು, ಶಿಲ್ಪಿಗಳು, ಚಿತ್ರಗಾರರು, ನಟರು,ನರ್ತಕರು, ವಾದ್ಯ-ಸಂಗೀತಗಾರರು ಸೇರಿ ಎಲ್ಲ ಕಲಾವಿದರೂ ಇವರ ಸ್ತುತಿಯಲ್ಲಿ ಮೊಳಗಿರುತ್ತಿದ್ದರು. ವಿಲಿಯಂ ಷೇಕ್ಸ್‌ಪಿಯರ್ ತನ್ನ ‘ಹೆನ್ರಿ V’ ನಾಟಕವನ್ನು “ಓ ಹಾರುತ್ತಿರುವ ಅಗ್ನಿ ದೇವತೆಯೇ…!” ಎಂಬ ಜಯಘೋಷದೊಂದಿಗೆ ಮ್ಯೂಸ್ ದೇವತೆಗಳನ್ನು ಪಠಿಸುತ್ತಾ ಹೋಗುತ್ತಾನೆ. ಬ್ರಿಟಿಷ್ ಕವಿ ಆಡೆನ್ನ, ಮ್ಯೂಸಗಳನ್ನು ಇಚ್ಛಾಭರಿತವಾಗಿ ಹಾರಾಡುತ್ತ ಬಂದು ಕಲಾವಿದರ ಕಿವಿಯಲ್ಲಿ ಕಲಾತ್ಮಕ ರಹಸ್ಯಗಳನ್ನು ಪಿಸುಗುಟ್ಟುವ ಯಕ್ಷ-ಕಿನ್ನರಿಗಳೆಬಂತೆ ತನ್ನ ಪದಗಳಲ್ಲಿ ಚಿತ್ರಿಸುತ್ತಾನೆ[೨].

ಕ್ಯಾಲಿಯೋಪ್[ಬದಲಾಯಿಸಿ]

ಕಾವ್ಯದ ಅಧಿದೇವತೆ. ಇವಳ ಹೆಸರು ಗ್ರೀಕ್ ಭಾಷೆಯಲ್ಲಿ ‘ಸುಂದರವಾದ ಧ್ವನಿ’ ಎಂಬ ಅರ್ಥ ಪಡೆಯುತ್ತದೆ. ಜಗತ್ಪ್ರಸಿದ್ಧ ರೋಮನ್ ಕವಿ ಓವಿಡ್ ನಿಗೆ ಕ್ಯಾಲಿಯೊಪಳೇ ಬೆರೆಲ್ಲರಿಗಿಂತ ಅತಿ ಮುಖ್ಯವಾದ ಮ್ಯೂಸ್. ಗ್ರೀಕ್ ಮತ್ತು ಲ್ಯಾಟಿನ್ನಿನ ಅನೇಕ ಕವಿಪುಂಗವರು ಈಕೆಯನ್ನು ತಮ್ಮ ಮಹಾಕಾವ್ಯಗಳ ಆದಿಯಲ್ಲಿ ಆರಾಧಿಸಿದ್ದಾರೆ. ಪ್ರಖ್ಯಾತ ‘ಇಲಿಯಡ್’ ಮತ್ತು ‘ಒಡಿಸ್ಸಿ’ಯ ಕರ್ತೃ (ಅಂಧಕವಿ) ಹೋಮರ್, ರೋಮಿನ ‘ಅನಿಯೆಡ್’ನ ಕರ್ತೃ ವರ್ಜಿಲ್ ಮತ್ತು ಇಟಲಿಯ ‘ಡಿವೈನ್ ಕಾಮಿಡಿ’ಯ ಡಾಂಟೆ ಆಲಿಘರಿ ಸೇರಿದಂತೆ, ಎಲ್ಲ ಪಾಶ್ಚಿಮಾತ್ಯ ಧಿಗ್ಗಜರೂ ಇವಳನ್ನು ತಮ್ಮ ಸಾಹಿತ್ಯದಲ್ಲಿ ಸ್ಮರಿಸಿದ್ದಾರೆ[೩].


thumb|ಗ್ರೀಕರ ಒಂಬತ್ತು ಮ್ಯೂಸಗಳು|alt=

ಕ್ಲಿಯೊ[ಬದಲಾಯಿಸಿ]

ಇತಿಹಾಸದ ಅಧಿದೇವತೆ. ಇವಳು, ಮಹಾನ್ ವ್ಯಕ್ತಿಗಳ ಹಿರಿಮೆಯನ್ನು ಸಾಮ್ರಾಜ್ಯದ ಮೊಲೆಯಿಂದ ಹಿಡಿದು ಗಡಿಯಾಚೆಯ ಜಗತ್ತಿಗೂ ಸಾರಬಲ್ಲ ನೈಪುಣ್ಯಳು. ಜಗದ ಜನರನ್ನು ಅಜರಾಮರರನ್ನಾಗಿಯೋ ಅಥವಾ ಜೀವಿತದ ಪುರಾವೆಯೂ ಸಿಗದಂತೆ ಮಾಡುವ ಶಕ್ತಿಯುಳ್ಳವಳು.

ಎರಾಟೊಸ್[ಬದಲಾಯಿಸಿ]

ಭಾವಗೀತೆ ಮತ್ತು ಪ್ರೇಮಕವಿತೆಗಳ ದೇವತೆ. ಮನಶ್ಶಾಸ್ತ್ರದ ‘ಈರೋಸ್’ ಈಕೆಗೆ ಸಂಬಂಧ ಪಟ್ಟದ್ದು. ಇವಳನ್ನು  ಹೊನ್ನಿನ ಬಾಣಗಳನ್ನು ಹಿಡಿದು ಸಿದ್ಧವಾಗಿರುವ ಭಂಗಿಯಲ್ಲಿ ಚಿತ್ರಿಸಲಾಗಿದೆ. ಲೂಟ್ ವಾದ್ಯ ಮತ್ತು ಪಾರಿವಾಳ ಇವಳ ಸಂಕೇತಗಳು.

ಯೂಟರ್ಪ್[ಬದಲಾಯಿಸಿ]

ಮಧುರ ಸಂಗೀತದ ಅಧಿದೇವತೆ. ಇತೆ ನದಿ-ದೇವತೆ ಸ್ಟ್ರೇಮೊನನಿಂದ ಟ್ರೋಜನ್ ಸಮರದಲ್ಲಿ ಬಹುಮುಖ್ಯ ಪಾತ್ರವಾಹಿಸುವ ರೆಸ್ಸ್ಸ್ ನಿಗೆ ಜನ್ಮ ನೀಡುತ್ತಾಳೆ. ಇವಳ ಪ್ರಾರ್ಥಿಸಿದವರಿಗೆ ಗಂಧರ್ವ ಗಾಯನ ಸುಲಭವಾಗಿ ವರ್ಧಿಸುತ್ತದೆ.

thumb|ಕ್ಯಾಲಿಯೋಪ್|alt=

ಮೆಲ್ಪೋಮೀನ್[ಬದಲಾಯಿಸಿ]

ದುರಂತ ನಾಟಕಗಳ ದೇವತೆ. ಗ್ರೀಕ್ ದುರಂತ ನಾಟಕಗಳು ಸಂಗೀತ, ಕಾವ್ಯ, ಅಭಿನಯ, ನೃತ್ಯ, ಮುಖವಾಡ ಮತ್ತು ಧಾರ್ಮಿಕ ಆಚರಣೆಗಳನ್ನು ಒಳಗೊಂಡಿರುವ ಕಥಾ ನಿರೂಪಣೆಯ ಬಗೆ. ಈಕೆಯನ್ನು ಆರಾಧಿಸುವವರು ರಂಗಸ್ಥಳದ ಮೇಲೆ ದಪ್ಪನೆಯ ತೊಗಲಿನ ಬೂಟುಗಳನ್ನು ಧರಿಸುತ್ತಿದ್ದರು. ಇದರಿಂದ ಅವರು ಎತ್ತರವಾದ ವ್ಯಕ್ತಿಗಳಂತೆ ಕಾಣುತ್ತಿದ್ದರು. ಈಕೆಯ ಸಂಕೇತ ದುಃಖತಪ್ತ, ಕೆಳಕ್ಕೆ ತುಟಿಮಾಡಿದ ಮುಖವಾಡ.

ಪಾಲಿಹಿಂನಿಯ[ಬದಲಾಯಿಸಿ]

ಗ್ರೀಕರ ಸ್ತೋತ್ರಗಳ ದೇವತೆ. ಗ್ರೀಕ್ ಭಾಷೆಯಲ್ಲಿ ‘ಹೈಮನೊಸ್’ ಎಂದರೆ ಹೊಗಳಿಕೆ ಎಂದರ್ಥ. ಇವಳು ಸ್ತೋತ್ರಗಳಲ್ಲದೆ, ಕೃಷಿ, ರಂಗಕರ್ಮ, ಜ್ಯಾಮಿತಿ ಮತ್ತು ಜಪ-ತಪ-ಧ್ಯಾನದ ಒಡತಿ ಆಗಿದ್ದಳು. ಇವಳು ಎಂದಿಗೂ ಸಮಚಿತ್ತದಲ್ಲಿ ಇರುವ ರೂಪದಲ್ಲಿ ಚಿತ್ರಿಸಲಾಗುತ್ತದೆ[೪]. 

ಟರ್ಪ್ಸಿಕೋರ್[ಬದಲಾಯಿಸಿ]

ಗ್ರೀಕರ ನಾಟ್ಯ ದೇವತೆ. ಹಲವಾರು ಭಂಗಿ ಮುಖಭಾವಗಳನ್ನು ತಿಳಿದಿರುವ ಈಕೆ, ಎಲ್ಲರನ್ನು ರಂಜಿಸುವ ಅಮೋಘ ಶಕ್ತಿಯುಳ್ಳವಳು. ಗ್ರೀಕ್ ಮತ್ತು ರೋಮನ್ ಅವರ ಕಾಲದಲ್ಲಿ ಎಲ್ಲ ಶುಭ ಸಮಾರಂಭದಳಲ್ಲಿ ಇಕೆಯೆನ್ನು ಸ್ತುತಿಸಿಯೇ ಜನರು ಸರದೌತನವನ್ನು ಸವಿಸುತ್ತ, ಕುಣಿದು ಕುಪ್ಪಳಿಸುತ್ತಿದ್ದರು.

ಥ್ಯಾಲಿಯಾ[ಬದಲಾಯಿಸಿ]

thumb|ಯೂಟರ್ಪ್, ಮದುರ ಗಾಯನದ ದೇವತೆ

ಗ್ರೀಕ್ ಹಾಸ್ಯದ ದೇವತೆ. ‘ಪ್ರಗತಿ’ ಈಕೆಯಹೆಸರಿನ ಅರ್ಥ. ಮೆಲ್ಪೋಮೀನ್ನ ಅನುಯಾಯಿಗಳಂತೆ ಈಕೆಯ ಆರಾಧಕರೂ ಎತ್ತರದ ತೊಗಲಿನ ಬೂಟುಗಳನ್ನು ಧರಿಸುತ್ತಿದ್ದರು. ಇವಳ ಸಂಕೇತ ನಗುತ್ತ, ಮೆಲ್ಲಕೆ ತುಟಿಮಾಡಿರು ಮುಖವಾಡ. ಥ್ಯಾಲಿಯಾ ಮತ್ತು ಮೆಲ್ಪೋಮೀನ್ನ ಸಂಕೇತಗಳಾದ ಸುಖ-ದುಃಖದ ಎರಡು ಮುಖವಾಡಗಳು ಇಂದಿಗೂ ಜಗತ್ಪ್ರಸಿದ್ಧವಾಗಿವೆ.

ಯುರೇನಿಯ[ಬದಲಾಯಿಸಿ]

ಜ್ಯೋತಿಷ್ಯ, ಖಗೋಳಶಾಸ್ತ್ರ ಮತ್ತು ನಕ್ಷತ್ರಗಳ ಯಕ್ಷಕನ್ಯೆ. ಈಕೆಯ ಹೆಸರು ಅವಳ ಮುತ್ತಾತನಾದ ಓರಣೊಸ್ನ ನಿಂದ ಪಡೆಯಲಾಗಿದೆ. ಇವಳು ಜಗತ್ತಿನಾದ್ಯಂತ ಪ್ರೀತಿ ಪಸರಿಸುವಂತೆ ಮಾಡುವ ಗಂಧರ್ವಸ್ತ್ರೀ. ಕೈಯಲ್ಲಿ ತನ್ನ ಮುದ್ರೆ ಹಿಡಿದು, ಆಕಶಕಾಯಗಳನ್ನು ನಿಯಂತ್ರಿಸುತ್ತ ಭವಿಷ್ಯವನ್ನು ನುಡಿಯುವುದೇ ಯುರೇನಿಯಳ ಮುಖ್ಯ ಜವಾಬ್ದಾರಿ. ಹಿಂದೆ ಆಗಿರುವ, ಮುಂದೆ ಆಗುವ ಎಲ್ಲ ಸಂಗತಿಗಳನ್ನು ಅರಿತಿರುವ ಈಕೆ, ಗ್ರೀಕ್ ಸಮಾಜದಲ್ಲಿ ಅತಿ ಉನ್ನತ ಗೌರವಕ್ಕೆ ಪಾತ್ರಳಾಗಿದ್ದಳು.


ಉಲ್ಲೇಖಗಳು[ಬದಲಾಯಿಸಿ]

  1. https://https://www.greekmyths-greekmythology.com/nine-muses-in-greek-mythology/
  2. https://https://owlcation.com/humanities/The-Muses-The-Nine-Muses-Goddesses-of-Greek-Mythology
  3. https://https://chs.harvard.edu/CHS/article/display/6274.3-homer-and-the-muses-oral-traditional-poetics-a-mythic-episode-and-arming-scenes-in-the-iliad
  4. https://https://www.britannica.com/topic/Polymnia