ಸದಸ್ಯ:Prabhakara.R/Colaba Observatory

Coordinates: 18°38′44″N 72°52′11″E / 18.645513°N 72.869611°E / 18.645513; 72.869611
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

18°38′44″N 72°52′11″E / 18.645513°N 72.869611°E / 18.645513; 72.86961118°38′44″N 72°52′11″E / 18.645513°N 72.869611°E / 18.645513; 72.869611{{#coordinates:}}: cannot have more than one primary tag per page Colaba Observatory, also known as the Bombay Observatory,[೧] was an astronomical, timekeeping, geomagnetic and meteorological observatory located on the Island of Colaba, Mumbai (Bombay), India.

ಇತಿಹಾಸ[ಬದಲಾಯಿಸಿ]

ಕೊಲಾಬಾ ವೀಕ್ಷಣಾಲಯವನ್ನು ಈಸ್ಟ್ ಇಂಡಿಯಾ ಕಂಪನಿಯು 1826 ರಲ್ಲಿ ಖಗೋಳ ವೀಕ್ಷಣೆ ಮತ್ತು ಸಮಯ ಪಾಲನೆಗಾಗಿ ನಿರ್ಮಿಸಿತು, ಬ್ರಿಟಿಷ್ ಮತ್ತು ಇತರ ಹಡಗುಗಳಿಗೆ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಆಗಿನ ಹೆಸರಿನ ಬಾಂಬೆ ಬಂದರನ್ನು ಬಳಸಲಾಯಿತು. [೨] 165 ವರ್ಷಗಳಷ್ಟು ಹಳೆಯದಾದ ಕಟ್ಟಡವು ಭಾರತೀಯ ಭೂಕಾಂತೀಯ ಸಂಸ್ಥೆಯ ಕಚೇರಿಯಾಗಿ ಬಳಸಲಾಗಿದೆ. ಭೂಕಾಂತೀಯತೆ ಮತ್ತು ಹವಾಮಾನ ವೀಕ್ಷಣೆಗಳ ದಾಖಲೆಗಳನ್ನು 1841 ರಲ್ಲಿ ಬಾಂಬೆಯ ಎಲ್ಫಿನ್ ಸ್ಟನ್ ಕಾಲೇಜಿನಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಆರ್ಥರ್ ಬೆಡ್ ಫೋರ್ಡ್ ಒರ್ಲೆಬಾರ್ ರವರು ಪ್ರಾರಂಭಿಸಿದರು. 1841 ಮತ್ತು 1845 ರ ನಡುವಿನ ಆಯಸ್ಕಾಂತೀಯ ಅಳತೆಗಳು ಅನಿಯಮಿತವಾಗಿ ಇರುತ್ತಿತ್ತು. 1845 ರ ನಂತರ ಅವರು ಎರಡು ಗಂಟೆಗೊಮ್ಮೆ, ನಂತರ ಪ್ರತಿ ಗಂಟೆಗೆ ಒಮ್ಮೆ ಆಯಿತು.

ಕ್ಯೂ ವೀಕ್ಷಣಾಲಯದ ಗೌರವ ನಿರ್ದೇಶಕರಾದ ಹಾಗು ಅತ್ಯಾಧುನಿಕ ಉಪಕರಣಗಳನ್ನು ಕಂಡುಹಿಡಿದ ಫ್ರಾನ್ಸಿಸ್ ರೊನಾಲ್ಡ್ಸ್ರವರನ್ನು ಮುಂದಿನ ವರ್ಷಗಳಲ್ಲಿ ನಿಯೋಜಿಸಲಾಯಿತು. . 1846 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ವಾಯುಮಂಡಲದ ವಿದ್ಯುತ್ ಸಂಗ್ರಹಣೆ ಮತ್ತು ಮಾಪನ ಮಾಡುವ ಉಪಕರಣವನ್ನು ತನ್ನ ವೀಕ್ಷಣಾಲಯಕ್ಕೆ ಸರಬರಾಜು ಮಾಡಲು ತಿಳಸಿತು. [೩] ನಂತರದ ಅಧೀಕ್ಷಕರಾದ ಚಾರ್ಲ್ಸ್ ಮಾಂಟ್ರಿಯೊ ಮತ್ತು ಎಡ್ವರ್ಡ್ ಫ್ರಾನ್ಸಿಸ್ ಫರ್ಗುಸನ್ ರವರು ರೊನಾಲ್ಡ್ ಕ್ಯೂ ರೊಂದಿಗೆ ಸಂಪಕ‌ಸಿದರು. ಮತ್ತು ಅವರನ್ನು ಕ್ಯೂ ನಲ್ಲಿ ಭೇಟಿಯಾಗಿ ನೇರವಾಗಿ ಸೂಚನೆಗಳನ್ನು ಪಡೆದರು. . ಕ್ಯೂ ಫೋಟೊ-ರೆಕಾರ್ಡಿಂಗ್ ಯಂತ್ರಗಳನ್ನು ಪೂರೈಸಲು 1867 ರಲ್ಲಿ ತಿಳಿಸಲಾಯಿತು. ಇದರಿಂದ ವಾತಾವರಣದ ಒತ್ತಡ, ತಾಪಮಾನ ಮತ್ತು ಭೂಕಾಂತೀಯ ತೀವ್ರತೆಯ ನಿರಂತರ ಅವಲೋಕನವು ಸ್ವಯಂಚಾಲಿತವಾಗಿ ನೆರವೇರುತ್ತದೆ. [೪] ಹೊಸ ಯಂತ್ರಗಳನ್ನು ಸ್ಥಾಪನೆಯಾದಾಗ ಚಾರ್ಲ್ಸ್ ಚೇಂಬರ್ಸ್ (ನಂತರ ರಾಯಲ್ ಸೊಸೈಟಿಯ ಫೆಲೋ ಆದ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಕೋಲಾಬಾ ವೀಕ್ಷಣಾಲಯವು ಭೂಕಾಂತೀಯ ಮಾಪನಗಳ ಪರೀಕ್ಷೆ ಮತ್ತು ವ್ಯಾಖ್ಯಾನದ ಮೂಲಕ ಮತ್ತು ಈ ವಿದ್ಯಮಾನಗಳ ಹಿಂದಿನ ಭೌತಶಾಸ್ತ್ರದ ವ್ಯಾಖ್ಯಾನದ ಮೂಲಕ ಹೆಚ್ಚು ಪ್ರಸಿದ್ಧವಾಯಿತು.  ಫೆಬ್ರವರಿ 1896 ರಲ್ಲಿ ಅವರ ಅಕಾಲಿಕ ಮರಣದ ನಂತರ, ನಿರ್ದೇಶಕತ್ವದ ಭಾರವು ಈ ಸ್ಥಾನವನ್ನು ಹೊಂದಿದ ಮೊದಲ ಭಾರತೀಯನಾದ ನಾನಭೋಯ್ ಅರ್ದೇಶಿರ್ ಫ್ರಾಮ್ಜಿ ಮೂಸ್ ಅವರ ಹೆಗಲ ಮೇಲೆ ಬಿದ್ದಿತು.

ಪೂನಾದಿಂದ ಎಂಜಿನಿಯರಿಂಗ್ ಪದವಿ ಮತ್ತು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಿಂದ ವಿಜ್ಞಾನದಲ್ಲಿ ಉನ್ನತ ಪದವಿಧರರಾದ ಮೂಸ್ ರವರು ಕೋಲಾಬ ವೀಕ್ಷಣಾಲಯದ ದಕ್ಷ ಕಾರ್ಯನಿರ್ವಹಣೆ, ನಿಯಮಿತ ವಿಶ್ಲೇಷಣೆ ಮತ್ತು ಅಳತೆಗಳ ವ್ಯಾಖ್ಯಾನ ಮತ್ತು ಭೂಕಂಪನ ಅವಲೋಕನನ್ನು ಪ್ರಾರಂಭಿಸಿದರು.. 1900 ರಲ್ಲಿ ಬಾಂಬೆಯು ಸಾಜ‌ನಿಕರಿಗಾಗಿ ಕುದುರೆಯಿಂದ ಎಳೆಯುವ ಟ್ರಾಮ್ ಗಾಡಿಗಳನ್ನು ವಿದ್ಯುತ್ ಶಕ್ತಿಯಿಂದ ಚಲಿಸುವ ಟ್ರಾಮ್ ಗಳಾಗಿ ಪರಿವ‍ತಿ‌‍ಸಲು ನಿರ್ಧರಿಸಿತು. ಎಲೆಕ್ಟ್ರಿಕ್ ಟ್ರಾಮ್‌ಗಳು ವಿದ್ಯುತ್ಕಾಂತೀಯ ಮಾಲಿನ್ಯವನ್ನು ಉತ್ಪಾದಿಸುವ ಮೂಲಕ ಕೊಲಾಬ ಮ್ಯಾಗ್ನೆಟಿಕ್ ಅಬ್ಸರ್ವೇಟರಿಯಿಂದ ಡೇಟಾವನ್ನು ಹೊರಹಾಕಬಹುದಾಗಿತ್ತು. ಹೊರಹಾಕುತ್ತವೆ. 

ಮೂಸ್ ರವರು ಬಾಂಬೆಗೆ ದಕ್ಷಿಣ-ಪೂವ‍ದಲ್ಲಿ ಸುಮಾರು 30 km (19 mi) ದೂರ ಇರುವ ಅಲಿಬಾಗ್‌ನಲ್ಲಿ ಪರ್ಯಾಯ ನಿವೇಶನವನ್ನು ಆಯ್ಕೆ ಮಾಡಿಕೊಂಡರು. . ಅಲಿಬ್ಯಾಗ್ "ಬಾಂಬೆಯಿಂದ ಸಾಕಷ್ಟು ದೂರದಲ್ಲಿರುವ ವಿದ್ಯುತ್ಕಾಂತೀಯ ಮಾಲಿನ್ಯದಿಂದ ಮುಕ್ತವಾದ ಹಾಗೂ ಅದೇ ಭೂಕಾಂತೀಯ ಗುಣಲಕ್ಷಣಗಳನ್ನು ಉಳಿಸಿಕೊಂಡಿದೆ". ಈ ಅಂಶಗಳನ್ನು 1904 ರಿಂದ 1906, 2 ವರ್ಷಗಳ ಅವಧಿಯಲ್ಲಿ ಎಚ್ಚರಿಕೆಯಿಂದ ಪರಿಶೀಲಿಸಲಾಯಿತು ಇದಾದ ನಂತರವೇ ಕೊಲಾಬದಲ್ಲಿ ರೆಕಾರ್ಡಿಂಗ್ ನಿಲ್ಲಿಸಲಾಯಿತು, ಮತ್ತು ಎಲೆಕ್ಟ್ರಿಕ್ ಟ್ರಾಮ್ ಸೇವೆಯನ್ನು ಬಾಂಬೆಯಲ್ಲಿ ಆರಂಭಿಸಲಾಯಿತು. ಇಡೀ ಕಟ್ಟಡವನ್ನು ಕೈಯಿಂದ ಆರಿಸಿದ, ಅಯಸ್ಕಾಂತೀಯವಲ್ಲದ, ಪೋರ್ಬಂದರ್ ಮರಳುಗಲ್ಲಿನಿಂದ ಮಾಡಲಾಗಿತ್ತು ಮತ್ತು ಇಡೀ ದಿನದ ತಾಪಮಾನ ವ್ಯತ್ಯಾಸವು ಕೇವಲ 10 ° ಸಿ. ಆಗಿರುವ ವಂತ ಉತ್ತಮ ನಿರೋಧಹೊಂದಿರುವ ಕೊಠಡಿಯಲ್ಲಿ ಆಯಸ್ಕಾಂತೀಯ ದಾಖಲೆಗಳನ್ನು ಮಾಡಲಾಯಿತು.

ಸಂಪೂರ್ಣ ಕೊಲಾಬಾ-ಅಲಿಬ್ಯಾಗ್ ದತ್ತಾಂಶದ ಬಗ್ಗೆ ಫ್ರೆಂಚ್ ಭೂಕಾಂತಶಾಸ್ತ್ರಜ್ಞ ಪಿಯರೆ ನೋಯೆಲ್ ಮಾಯೌಡ್, 1973 ರಲ್ಲಿ ಈ ಕೆಳಗಿನಂತೆ ಹೇಳಿದರು.

ಅಂತಿಮವಾಗಿ, ಕೊಲಾಬಾ ಮತ್ತು ಅಲಿಬಾಗ್‌ನ (ಮ್ಯಾಗ್ನೆಟಿಕ್) ದಾಖಲೆಗಳು 1871 ರಿಂದ ಆರಂಭಗೊಂಡು, ಬಹುಶಃ ವಿಶ್ವದ ಅತ್ಯಂತ ಸಂಪೂರ್ಣವಾದ ದಾಖಲೆಗಳ ಸುಂದರ ಸರಣಿಯನ್ನು ಸಂಗ್ರಹವನ್ನು ಹೊಂದಿದೆ. ಕ್ಯೂ ಮತ್ತು ಮೆಲ್ಬೋರ್ನ್ ದಾಖಲೆಗಳಿಗೆ ಹೋಲಿಸಿದರೆ ಅವುಗಳ ಗುಣಮಟ್ಟವು ಮುಖ್ಯವಾಗಿ ಅವುಗಳ ಕ್ರಮಬದ್ಧತೆಯು ನಿದಿ‌‍ಷ್ಟವಾಗಿ ಪ್ರಭಾವಶಾಲಿಯಾಗಿತ್ತು.

ಕೊಲಾಬಾ-ಅಲಿಬಾಗ್ ವೀಕ್ಷಣಾಲಯಗಳನ್ನು ವಿಶ್ವಾದ್ಯಂತ ಖ್ಯಾತಿಗೆ ತಂದು ಮೂಸ್ 1919 ರಲ್ಲಿ ನಿವೃತ್ತರಾದರು. 1910 ರಲ್ಲಿ ಅವರು 1846-1905ರ ಕೋಲಾಬ-ಅಲಿಬಾಗ್ ವೀಕ್ಷಣಾಲಯದ 50 ವರ್ಷಗಳ ಭೂಕಾಂತೀಯ ಅಳತೆಯ ಮುಖ್ಯ ಸಂಶೋಧನೆಗಳ ಸಾರಾಂಶವಂವನ್ನು "1846-1905 ರ ಅವಧಿಯ ಸರ್ಕಾರಿ ವೀಕ್ಷಣಾಲಯದಲ್ಲಿ ಮಾಡಿದ ಕಾಂತೀಯ ಅವಲೋಕನಗಳು. ಭಾಗಗಳು I. ಮತ್ತು II.ಎರಡು ಸಂಪುಟಗಳಲ್ಲಿ ಪ್ರಕಟಿಸಿದರು. " ಈ ಸಂಪುಟಗಳಲ್ಲಿ ಮತ್ತು ಕೋಲಾಬಾ-ಅಲಿಬಾಗ್‌ನ ಭೂಕಾಂತೀಯ ವೀಕ್ಷಣಾಲಯವಾಗಿ, ಜೆಎ ಫ್ಲೆಮಿಂಗ್, ಟೆರೆಸ್ಟ್ರಿಯಲ್ ಮ್ಯಾಗ್ನೆಟಿಸಮ್ ಮತ್ತು ಎಲೆಕ್ಟ್ರಿಟಿಯಲ್ಲಿ ಪ್ರವರ್ತಕರಾದವರು, 1954 ರಲ್ಲಿ ಈ ಕೆಳಗಿನವುಗಳನ್ನು ಹೇಳಿದ್ದರು: 

ಅಲಿಬಾಗ್ ( ಮುಂಬೈ ) ನಲ್ಲಿನ ಮ್ಯಾಗ್ನೆಟಿಕ್ ಅಬ್ಸರ್ವೇಟರಿಯ ಅಡಿಪಾಯದ ಸುವರ್ಣ ಮಹೋತ್ಸವವು ಭೂಕಾಂತೀಯ ಕ್ಷೇತ್ರದಲ್ಲಿ ಒಂದು ಐತಿಹಾಸಿಕವಾಗಿದೆ, ಮತ್ತು ವಿದ್ಯಮಾನಗಳ ಕಾಂತೀಯ ರೆಕಾರ್ಡಿಂಗ್ ಮತ್ತು ವ್ಯಾಖ್ಯಾನಾತ್ಮಕ ಚರ್ಚೆಗಳ ಪ್ರಕಟಣೆಯಲ್ಲಿ ಭಾರತದ ಸಾಟಿಯಿಲ್ಲದ ಅಪ್ಲಿಕೇಶನ್ ಅನ್ನು ಗುರುತಿಸಲಾಗಿದೆ. ಭಾರತದ ಅಗ್ರಗಣ್ಯ ತನಿಖಾಧಿಕಾರಿಯ (NAF Moos) ನಿರ್ದೇಶನದಲ್ಲಿ ಎರಡು ದೊಡ್ಡ ಸಂಪುಟಗಳಲ್ಲಿ ಸಂಗ್ರಹಿಸಿದ ಮಾಹಿತಿ ಸಂಗ್ರಹವಾಗಿದೆ.</br></br> ಭೂಕಾಂತೀಯ ಸಂಶೋಧನಾ ಕ್ಷೇತ್ರದಲ್ಲಿ 1500 ಕ್ಕೂ ಹೆಚ್ಚು ಆಯ್ದ ಉಲ್ಲೇಖಗಳ ಹೊರತಾಗಿಯೂ, ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಸಂಶೋಧನಾ ಮಂಡಳಿಯ ಭೌತಶಾಸ್ತ್ರದ ಭೂಮಿಯ ಸರಣಿಯ ಸಂಪುಟ 3, ಎಲ್ಲ ಭೂಕಾಂತೀಯ ಸಮಸ್ಯೆಗಳ ವ್ಯಾಪಕ ಮತ್ತು ವೈವಿಧ್ಯಮಯ ಮತ್ತು ತೀವ್ರವಾದ ವ್ಯಾಪ್ತಿಯನ್ನು ಪ್ರದರ್ಶಿಸುವ ಯಾವುದೂ ಇಲ್ಲ 20 ನೇ ಶತಮಾನದ ಆರಂಭ.

  1. "Colaba (Bombay) Observatory Yearbooks". BGS Geomagnetism. Retrieved 13 January 2021.
  2. Charles Chambers (of Colaba observ.) (1878). The meteorology of the Bombay presidency. [With] Diagrams and maps. Dangerfield.
  3. Ronalds, B.F. (2016). Sir Francis Ronalds: Father of the Electric Telegraph. London: Imperial College Press. ISBN 978-1-78326-917-4.
  4. Bryden, D.J. (2006). "Quality Control in the Making of Scientific Instruments". Bulletin of the Scientific Instrument Society.