ಸದಸ್ಯ:Parvathamma c/sandbox4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾರಜನಕ ಚಕ್ರ ಪರಿಸರದಲ್ಲಿ ಅನೇಕ ಜೀವಭೂರಾಸಾಯನಿಕ ಚಕ್ರಗಳಿವೆ ಉದಾ;-ಜಲಜನಕ ಚಕ್ರ,ಆಮ್ಲಜನಕ ಚಕ್ರ,ಇಂಗಾಲದ ಚಕ್ರ,ರಂಜಕ ಚಕ್ರ,ಸಾರಜನಕ ಚಕ್ರ ಮುಂತಅದವು. ಈಚಕ್ರಗಳಿಂದ ಪರಿಸರದಲ್ಲಿ,ಜಲಜನಕ ,ಆಮ್ಲಜನಕ ,ಇಂಗಾಲದ ,ರಂಜಕ ,ಸಾರಜನಕ ಸತತವಾಗಿ ಪರಿಚಲನೆ ಹೊಂದುತ್ತವೆ ಮತ್ತು ಇದರಿಂದ ಈದಾತುಗಳು ಸದಾ ಜೀವಿಗಳಿಗೆ ಪೋಸಾರಜನಕ ಸ್ತಿರೀಕರಣ:-ಷಕಾಂಷಗಳಾಗಿ ದೊರೆಯುತ್ತವೆ, ಆದ್ದರಿಂದ ಪರಿಸರದಲ್ಲಿ ಜೀವಭೂರಾಸಾಯನಿಕ ಚಕ್ರಗಳು ಜೀವಿಗಳಿಗೆ ಪೋಷಕಾಂಷಗಳನ್ನು ಒದಗಿಸುವುದರಲ್ಲಿ ಪ್ರಮಖ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಸಾರಜನಕಚಕ್ರ ವಿಷೇಷವಾಗಿ ಸಸ್ಯ ಮತ್ತು ಪ್ರಾಣಿಗಳ ಜೀವನದಲ್ಲಿ ಹೆಚ್ಚಿನ ಪ್ರಾಮಖ್ಯತೆಯನ್ನು ಹೊಂದಿದೆ. ಪರಿಸರದಲ್ಲಿ ನಿರವಯವ ಸಾರಜನಕ ಸಾವಯವ ಸಂಯುಕ್ತವಾಗಿ ಮತ್ತು ಸಾವಯವ ಸಾವಯವ ಸಾರಜನಕ ಸಂಯುಕ್ತ ನಿರವಯವ ವಾಗಿ ಸತತ ವಾಗಿ ಚಕ್ರೀಯವಾಗಿ ಪರಿಚಲನೆ ಹೊಂದುವುದಕ್ಕೆ ಸಾರಜನಕ ಚಕ್ರ ಎನ್ನುತ್ತೇವೆ.ಈಚಕ್ರವು ಮಣ್ಣು,ನೀರು, ಮತ್ತು ಗಾಳಿ ಮೂರೂ ಪರಿಸರದಲ್ಲಿ ನೆಡೆಯುತ್ತದೆ. ಸಾರಜನಕ ಚಕ್ರವು ಪ್ರಮುಖವಾಗಿ ನಾಲ್ಕು ಹಂತಗಳನ್ನು ಒಳಗೊಂಡಿದೆ.

  • ಸ್ತೀರಿಕರಣ
  • ಅಮೋನೀಕರಣ
  • ನ್ಯೆಟ್ರೀಕರಣ
  • ಡಿ ನೈಟ್ರೀಕರಣ

ಪರಿಸರದಲ್ಲಿ ೭೮% ಸಾರಜನಕ ವಾತಾವರಣ ದಲ್ಲಿ ಇದೆ,ಆದರೆ ಈಸಾರಜನಕವು ಹೆಚ್ಚಿನ ಪ್ರಮಾಣದಲ್ಲಿ ಅಣು ರೂಪದಲ್ಲಿ ಇರುವುದರಿಂದ ನೇರವಾಗಿ ಜೀವಿಗಳು ಅಣುರೂಪದ ಸಾರಜನಕವನ್ನು ತೆಗೆದುಕೊಳ್ಳುವುದಿಲ್ಲ.ಸಂಯುಕ್ತರೂಪದಲ್ಲಿ ತೆಗೆದು ಕೊಳ್ಳುತ್ತವೆ.ಸಾರಜನಕ ಚಕ್ರವು ಸಂಯುಕ್ತ ರೂಪದಲ್ಲಿ ( ನೈಟ್ರೇಟುಗಳ ) ಜೀವಿಗಳಿಗೆ ಒದಗಿಸುತ್ತದೆ.

ವಿಧಾನ- ವಾತಾವರಣದಲ್ಲಿ ಸಾರಜನಕವು ಅಮೋನಿಯಾ (NH4), ನೈಟ್ರೇಟ್ ( NO3) ನೈಟ್ರಸ್ ಆಕ್ಸೈಡ್ ( NO2)ನೈಟ್ರಿಕ್ ಆಕ್ಸೈಡ್ ( NO) ಮುಂದಾದವುಗಳ ರೂಪದಲ್ಲಿ ಇರುತ್ತದೆ. ಸಾರಜನಕ ಚಕ್ರದ ಪ್ರಕ್ರಿಯೆಯಲ್ಲಿ ಸಾವಯವ ನಾರಜನಕ ಸಂಯುಕ್ತಗಳು ನಿರವಯವ ಸಂಯುಕ್ತಗಳಾಗಿ, ನಿರವಯವ ಸಾರಜನಕ ಸಂಕ್ತಗಳು ಸಾವಯವ ಸಂಕ್ತಗಳಾಗಿ ನಿರಂತರವಾಗಿ ಬದಲಾಗುತ್ತಿರುತ್ತವೆ,ಈಪ್ರಕ್ರಿಯೆಯಲ್ಲಿ ಸೂಕ್ಷ್ಮಾಣುಜೀವಿಗಳು ಪ್ರಮುಖಪಾತ್ರವನ್ನು ವಹಿಸುತ್ತವೆ.

ಸಾರಜನಕ ಸ್ತಿರೀಕರಣ:-

ವಾತಾವರಣದಲ್ಲಿರುವ ಅಣು ರೂಪದ ಸಾರಜನಕವು ( N2 ) ಮಿಂಚಿನ ಹೊಡೆತ ದಿಂದ ಅಮೋನಿಯಾವಾಗಿ ಪರಿವರ್ತಿಸಲ್ಪಡುತ್ತದೆ ( NH4 ).ಸಹಜೀವನ ಬಾಕ್ಟೀರಿಯಾಗಳು ಸಾರಜನಕ ವನ್ನು ಜಲಜನಕ ದೊಂದಿಗೆ ಸಂಯೋಜಿಸಿ ಅಮೋನಿಯಾವಾಗಿ ಪರಿವರ್ತಿಸುತ್ತವೆ,ಇದನ್ನು ಸಾರಜನಕ ಸ್ತಿರೀಕರಣ ಎನ್ನುತ್ತಾರೆ. ಉದಾ:-ರೈಜೋಬಿಯಂ ಬಾಕ್ಟೀರಿಯಗಳು ಲೆಗ್ಯುಮಿನೇಸಿ ಜಾತಿಗೆ ಸೇರಿದ ಸಸ್ಯಗಳಾದ ಶೇಂಗ,ಬಟಾಣಿ ಮುಂತಾದ ಸಸೈಗಳ ಬೇರುಗಲ್ಲಿ ಸಾರಜನಿಕ ಸ್ತಿರೀಕರಣವನ್ನು ನೆಡೆಸುತ್ತವೆ. ಕೈಗಾರಿಕೆಗಳಲ್ಲಿ ಹೇಬರ್-ಬೋಷ್ ವಿಧಾನದಿಂದ ಸಾರಜನಕ ಮತ್ತು ಜಲಜನಕ ವನ್ನು ಸಂಯೋಜಿಸಿ ೩೦% ಅಮೋನಿಯಾವನ್ನು ಉತ್ಪತ್ತಿ ಮಾಡಲಾಗುತ್ತದೆ

ಹೊಂದಾಣಿಕೆ:- ಸಸ್ಯಗಳು ಸಾರಜನಕವನ್ನು ಮಣ್ಣಿನಿಂದ ನೈಟ್ರೇಟುಗಳ ರೂಪದಲ್ಲಿ ಪಡೆಯುತ್ತವೆ.ಪ್ರಾಣಿಗಳು ಆಹಾರ ಸರಪಳಿ ಮೂಲಕ ಸಾರಜನಕವನ್ನು , ಸಸಾರಜನಕಗಳ ರೂಪದಲ್ಲಿ ಸಸ್ಯಗಳಿಂದ ಪಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ನಿರವಯವ ರೂಪದ ಸಾರಜನಕ ಸಾವಯವ ರೂಪದ ಸಾರಜನಕ ವಾಗಿ ಪರಿವರ್ತಿಸಲ್ಪಡುತ್ತದೆ. ಅಮೋನೀಕರಣ:- ಸಸ್ಯಗಳಲ್ಲಿ ಸಾವಯವ ರೂಪದಲ್ಲಿರುವ (ಸಸಾಜನಕಗಳು ) ಸಾರಜನಕ ನಿರವಯವ ಲವಣವಾಗಿ (ಅಮೋನಿಯ) ಪರಿವರ್ತಿಸಲ್ಪಡುತ್ತದೆ,ಇದನ್ನು ಅಮೋನೀಕರಣ ಎನ್ನುತ್ತಾರೆ.ಈ ಪ್ರಕ್ರಯೆ ಬಾಕ್ಟೀರಿಯಾ ಗಳ ಸಹಾಯದಿಂದ ನೆಡೆಯುತ್ತದೆ.

ನೈಟ್ರೀಕರಣ:- ಅಮೋನಿಯಾ ರೂಪದಲ್ಲಿರುವ (NH4) ಸಾರಜನಕ ವನ್ನು ನೈಟ್ರೇಟುಗಳಾಗಿ ಪರಿವರ್ತಿಸುವ ಕ್ರಿಯೆಗೆ ನೈಟ್ರೀಕರಣ ಎನ್ನುತ್ತಾರೆ. ನೈಟ್ರೋಸೋಮೋನಅಸ್ ಮತ್ತು ನೈಟ್ರೊ ಬಾಕ್ಟರ್ ಬಾಕ್ಟೀರಿಯಾಗಳು ನೈಟ್ರೀಕರಣ ದಲ್ಲಿ ಪಾಲ್ಗೊಳ್ಳುತ್ತವೆ. ನೈಟ್ರೇಟುಗಳು ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಕರಗುವುದರಿಂದ ನಂತರ ಮಣ್ಣಿಗೆ ಸೇರಿ ಮಣ್ಣಿನಿಂದ ಪುನಃ ಅಂತರ್ ಜಲಕ್ಕೆ ಸೇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿರುವ ನೈಟ್ರೇಟುಗಳನ್ನು ಒಳಗೊಂಡಿರುವ ನೀರನ್ನು ಸೇವಿಸುವುದರಿಂದ ಚಿಕ್ಕ ಮಕ್ಕಳಿಗೆ ಮಿಥೆಮೋಗ್ಲೋಬಿನೇಮಿಯ (Methemoglobinemia ) ಅಥವಾ ನೀಲಿ ಮಗು ( blue baby syndrome ) ಖಾಯಿಲೆ ಉಂಟಾಗುತ್ತದೆ.

ಡಿನೈಟ್ರೀಕರಣ:- ನೈಟ್ರೇಟುಗಳ ಅಪಕರ್ಷಣೆ ಯಿಂದ ಅನಿಲ ರೂಪದ ನಾರಜನಕ ವಾಗಿ ( N2 ) ಪರಿವರ್ತನೆ ಆಗುವ ಕ್ರಿಯೆಗೆ ಡಿನೈಟ್ರೀಕರಣ ಎನ್ನುತ್ತಾರೆ. ಈಪ್ರಕ್ರಿಯೆಯಲ್ಲಿ ಸೂಡೂಮೋನಾಸ್ ಮತ್ತು ಕ್ಲಾಸ್ಟ್ರೀಡಿಯಮ್ ಬಾಕ್ಟೀರಿಯಾಗಳು ವಾಯು ರಹಿತ ಉಸಿರಾಟದ ಮೂಲಕ ನೈಟ್ರೇಟುಗಳನ್ನು ಅನಿಲ ರೂಪದ ಸಾರಜನಕವಾಗಿ ಪರಿವರ್ತಿಸುತ್ತವೆ.ಈಪಕ್ರಿಯೆಯಿಂದ ಸಾರಜನಕ ಚಕ್ರ ಪೂರ್ಣ ಗೊಳ್ಣುತ್ತದೆ

ಸಾರಜನಕ ಚಕ್ರದ ಪ್ರಾಮುಖ್ಯತೆ:-

  • ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆಗೆ ಸಾರಜನಕದ ಅಗತ್ಯವಿದೆ .
  • ಜೀವಕೋಶಗಳ DNA ದಲ್ಲಿ ಅಮಿನೋಆಮ್ಲ ಮತ್ತು ಪ್ರೊಟೀನ್ ಗಳ ರೂಪದಲ್ಲಿ ಇದೆ.
  • ವಾತಾವರಣದಲ್ಲಿರುವ ಅನಿಲ ರೂಪದ ಸಾರಜನಕ ವನ್ನು ಉಪಯೋಗಿಸ ಬಹುದಾದ ಸಂಯುಕ್ತವಾಗಿ ಪರಿವರ್ತಿಸುತ್ತದೆ.
  • ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಸಾರಜನಕ ನ್ಯೆಟ್ತೇಟುಗಳ ರೂಪದಲ್ಲಿ ಅಗತ್ಯವಿದೆ.

ಸ್ವಾರಸ್ಯಕರವಾದ ವಿಷಯಗಳು:-

  • ನಮ್ಮ ದೇಹದ ೩% ತೂಕ ಸಾರಜನಕ ದಿಂದ ಕೂಡಿದೆ. *
*   ಬಹಳಷ್ಟುಸ್ಪೋಟಗಳ ತಯಾರಿಕೆಯಲ್ಲಿ ಸಾರಜನಕ ವನ್ನು ಉಪಯೋಗಿಸುತ್ತಾರೆ.  
  • ವಾತಾವರಣದಲ್ಲಿ ಸಂಯುಕ್ತದ ರೂಪದಲ್ಲಿರುವ ಸಾರಜನಕ ಮಳೆ ನೀರಿನಲ್ಲಿ ಕರಗಿ ಆಮ್ಲ ಮಳೆಯಾಗಿ ಭೂಮಿಗೆ ಸುರಿಯುತ್ತದೆ;
  • ವಾತಾವರಣದಲ್ಲಿ ೭೮% ಸಾರಜನಕ ಇದ್ದರೂ ಜೀವಿಗಳು ನೇರವಾಗಿ ಅದನ್ನು ತೆಗೆದು ಕೊಳ್ಳುವುದಿಲ್ಲ.ಏಕೆಂದರೆ ಅದು ಅನಿಲ ರೂಪದಲ್ಲಿರುತ್ತದೆ. ( N2 )
  • ಸಾರಜನಕವು ವಾಸನೆ, ಬಣ್ಣ , ಮತ್ತು ರುಚಿಯನ್ನು ಹೊಂದಿರುವುದಿಲ್ಲ.
  • ಸಾರಜನಕದ ಹೆಚ್ಚನ ಬಳಕೆಯಿಮಂದ ಸಸ್ಯಗಳು ಶೀಘ್ರವಾಗಿ ಎತ್ತರ ವಾಗಿ ಬೆಳೆಉತ್ತವೆ.
  • ಮಾನವನು ಹೆಚ್ಚು ಸಾರಜನಕ ಗೊಬ್ಬರಗಳನ್ನು ಉಪಯೋಗಿಸುವುದರಿಂದ ಪರಿಸರದಲ್ಲಿ ಸಾರಜನಕದ ಪರಿಮಾಣ ಹೆಚ್ಚಾಗುತ್ತದೆ.
==ಉಲ್ಲೇಖಗಳು==

[೧]











































 ಅಥವಾ ನೀಲಿ ಮಗು (  blue baby syndrome ) ಖಾಯಿಲೆ ಉಂಟಾಗುತ್ತದೆ.
  1. "Nitrogen Study Could 'Rock' A Plant's World". 2011-09-06. Retrieved 2011-10-22.