ನೈಟ್ರೋಜನ್ ಚಕ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೋಟೀನ್ಗಳ ಮತ್ತು ನ್ಯೂಕ್ಲಿಕ್ ಆಮ್ಲಗಳಂತ ಜೈವಿಕ ಅಣುಗಣ ಒಂದು ಅತ್ಯವಶ್ಯ ಘಟಕ ನೈಟ್ರೋಜನ್. ವಾತಾವರಣದಲ್ಲಿ ನೈಟ್ರೋಜನ್ ಅತ್ಯಧಿಕ ಪ್ರಮಾಣದಲ್ಲಿ(೭೯%) ದೊರಕುವ ಅನಿಲ. ಆದರೆ ಅನಿಲ ರೂಪದ ಈ ನೈಟ್ರೋಜನ್ ವಿನಿಮಯ ಮೂಲಕ್ಕೆ ನೇರವಾಗಿ ಸ್ಥಿರೀಕರಣಗೊಳ್ಳುವುದು ಸಾಧ್ಯವಿಲ್ಲ. ವಾತಾವರಣದಲ್ಲಿ ಮುಕ್ತವಾಗಿರುವ ನೈಟ್ರೋಜನ್ ಅನಿಲವನ್ನು ಉಪಯುಕ್ತವಾದ ನೈಟ್ರೋಜನ್ ಸಂಯುಕ್ತಗಳ ರೂಪಕ್ಕೆ ಪರಿವರ್ತಿಸುವ ಕ್ರಿಯೆಗೆ ನೈಟ್ರೋಜನ ಸ್ಥಿರೀಕರಣ ಎಂದು ಹೆಸರು. ಇದು ನೈಸರ್ಗಿಕ ಸ್ಥಿರೀಕರಣ ಹಾಗೂ ಕೃತಕ ಸ್ಥಿರೀಕರಣ ಎಂಬ ಎರಡು ಭಾಗಗಳಲ್ಲಿ ಉಂಟಾಗುತ್ತದೆ. ನೈಸರ್ಗಿಕ ಸ್ಥರಿರೀಕರಣವು ಈ ಕೆಳಗಿನ ಪ್ರಕ್ರಿಯೆಗಳಿಂf ಉಂಟಾಗುತ್ತದೆ.

ಜೈವಿಕ ಸ್ಥಿರೀಕರಣ[ಬದಲಾಯಿಸಿ]

ಇದು ಬ್ಯಾಕ್ಟಿರಿಯಾ ಹಾಗೂ ನೀಲಿ ಹಸಿರು ಶೈವಲಗಳಂಥ ಜೀವಿಗಳ ಮೂಲಕ ನೇರವಾಗಿ ನೈಟ್ರೋಜನ್ ಸ್ಥಿರೀಕರಣಗೊಳ್ಳುವ ಒಂದು ಕ್ರಿಯೆ. ರೈಜೋಬಿಯಂ ಮುಂತಾದ ಬ್ಯಾಕ್ಟೀರಿಯಗಳು ಲೆಗ್ಯುಮಿನಸ್ ಸಸ್ಸಗಳ ಬೇರುಗಳಲ್ಲಿ ಸೇರಿಕೊಂಡಿರುತ್ತದೆ. ಇವು ವಾತಾವರಣದಲ್ಲಿ ನೈಟ್ರೋಜನ್ ಅನ್ನು ನೇರವಾಗಿ ಸ್ಥಿರೀಕರಿಸಿ ಬೇರು ಗಂಟುಗಳ ರೂಪದಲ್ಲಿ ಸಂಗ್ರಹಿಸಿಡುತ್ತವೆ.ಲೆಗ್ಯುಮಿನಸ್ ಸಸ್ಯಗಳು ದ್ಯುತಿ ಸಂಶ್ಲೇಷಣೆಯ ಮೂಲಕ ಪ್ರೋಟೀನ್ ಉತ್ಪಾದನೆಗೆ ಈ ನೈಟ್ರೋಜನ್ ಅನ್ನು ಬಳಸಿಕೊಳ್ಳುತ್ತವೆ. ಈ ರೀತಿ ಜೀವಿಗಳು ಸ್ಥಿರೀಕರಿಸಿದ ನೈಟ್ರೋಜನ್ ಕ್ರಮೇಣ ಮಣ್ಣಿನಲ್ಲಿ ಸೇರಿಹೋಗುತ್ತದೆ.

ವಿದ್ಯುತ್ ರಾಸಾಯನಿಕ ಸ್ಥಿರೀಕರಣ[ಬದಲಾಯಿಸಿ]

ಇದು ಅಜೈವಿಕವಾದ ಆದರೆ ನೈಸರ್ಗಿಕವಾಗಿ ನಡೆಯುವ ನೈಟ್ರೋಜನ್ ಸ್ಥಿರೀಕರಣ ಕ್ರಿಯೆ. ಆಕಾಶದಲ್ಲಿ ಗುಡುಗು ಉಂಟಾದಾಗ ಈ ಪ್ರಕ್ರಿಯೆ ನಡೆಯುತ್ತದೆ. ಆಗ ಉಂಟಾಗುವ ಅತಿ ಹೆಚ್ಚು ತಾಪಮಾನದಿಂದಾಗಿ ನೈಟ್ರೋಜನ್ , ಆಕ್ಸಿಜನ್ ನ ಜೊತೆಗೆ ಸೇರಿ ನೈಟ್ರೋಜನ್ ಆಕ್ಸೈಡುಗಳಾಗಿ ಪರಿವರ್ತನೆ ಹೊಂದುತ್ತವೆ. ಈ ಆಕ್ಸೈಡುಗಳು ನೀರಿನೊಡನೆ ಬೆರೆತು ನೈಟ್ರಿಕ್ ಆಮ್ಲದ ನಿಸ್ಸತ್ವಗೊಂಡ ದ್ರಾವಣವಾಗಿ ಮಳೆಹನೆಗಳ ರೂಪದಲ್ಲಿ ಭೂಮಿಯ ಮೇಲೆ ಬೀಳೂತ್ತವೆ. ಮಣ್ಣಿನಲ್ಲಿರುವ ಕ್ಷಾರೀಯ ಪದಾರ್ಥಗಳ ಜೊತೆ ಸೇರಿ ನೈಟ್ರಿಕ್ ಆಮ್ಲವು ನೈಟ್ರೇಟುಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ನೈಟ್ರೇಟುಗಳನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಕೃತಕ ಸ್ಥಿರೀಕಣ ಕ್ರಿಯೆಯಲ್ಲಿ ವಾತಾವರಣದಲ್ಲಿರುವ ನೈಟ್ರೀಜನ್, ಹೈಡ್ರೋಜನ್ ಅನಿಲದ ಜೊತೆ ಸೇರಿ ಅಮೋನಿಯಾ ಆಗಿ ಪರಿವರ್ತನೆಗೊಳ್ಳುತ್ತದೆ. ಅಮೋನಿಯಾ ಉತ್ಕರ್ಷಣೆ ಕ್ರಿಯೆಗೆ ಒಳಪಟ್ಟು ನೈಟ್ರೇಟುಗಳಾಗಿ ಪರಿವರ್ತನೆ ಹೊಂದಬಹುದು ಇಲ್ಲವೇ, ಆಮ್ಲೀಯ ಪದಾರ್ಥಗಳ ಜೊತೆ ಸೇರಿ ಅಮೋನಿಯಂ ಲವಣಗಳಾಗಿ ಪರಿವರ್ತನೆಗೊಳ್ಳಬಹುದು. ಈ ರೀತಿ ಉಂಟಾಗುವ ನೈಟ್ರೇಟುಗಳಲ್ಲಿ ಮತ್ತು ಅಮೋನಿಯಂ ಲವಣಗಳಲ್ಲಿ, ಕೃತಕವಾಗಿ ಸ್ಥಿರೀಕರಣಗೊಂಡ ನೈಟ್ರೋಜನ್ ಇದನ್ನು ಸಸ್ಯಗಳು ಬಳಸಿಕೊಳ್ಳುತ್ತವೆ.