ವಿಷಯಕ್ಕೆ ಹೋಗು

ಸದಸ್ಯ:PRADEEP KUMAR B,1510351,Pradeep.doodh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರದೀಪ್ ಕುಮಾರ್ ಬಿ
Recent photograph of Pradeep Kumar,2016
Recent photograph of Pradeep Kumar,2016
ಜನನ
ಪ್ರದೀಪ್ ಕುಮಾರ್ ಬಿ

೦೧/೦೧/೧೯೯೮
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
ವೃತ್ತಿವಿದ್ಯಾರ್ಥಿ
ಎತ್ತರ೫.೧ ಅಡಿ
ಸಂಗಾತಿ-ಮದುವೆಯಾಗಿಲ್ಲ-
ಪೋಷಕಭಾಸ್ಕರನ್ ಹಾಗು ಸುಶೀಲ
Signature
Pradeep Kumar signature, 2016

ಪರಿಚಯ

[ಬದಲಾಯಿಸಿ]

ಬೆಂಗಳೂರಿನ ನಿವಾಸಿಯಾದ ನಾನು, ಪ್ರದೀಪ್ ಕುಮಾರ್, ಹದಿನೆಂಟು ವರ್ಷದ ಯುವಕ.ಡಿಸೆಂಬರ್ ತಿಂಗಳ ಇಪ್ಪತ್ತೊಂಬತ್ತನೇಯ ದಿನ ನನ್ನ ಜನ್ಮದಿನವಾಗಿದೆ.ನನ್ನ ತಂದೆಯ ಹೆಸರು ಭಾಸ್ಕರನ್,ತಾಯಿ ಸುಶೀಲ.

ತರಬೇತಿ

[ಬದಲಾಯಿಸಿ]

ನಾನು ನನ್ನ ಶಾಲಾ ತರಬೇತಿಯನ್ನು ಶ್ರೀ ಚೆನ್ನಕೇಶವ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಮಾಡಿ, ಹತ್ತನೇಯ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಮುಂದಿನ ಪಿ.ಯು. ಶಿಕ್ಷಣಕ್ಕಾಗಿ ಕ್ರೈಸ್ಟ್ ಜೂನಿಯರ್ ಕಾಲೇಜ್ ಗೆ ಸೇರಿದ್ದೆನು. ಶಿಕ್ಷಣ, ಕಾಲ, ವಯಸ್ಸುಗಳೆಲ್ಲವೂ ಬದಲಾದಂತೆಯೇ ಶಾಲೆಯಿಂದ ಕಾಲೇಜಿಗೆ ಹೋದ ನಾನೂ ಸಹ ಅದಕ್ಕೆ ತಕ್ಕಂತೆ ಬದಲಾಗಲೇ ಬೇಕಾದ ಅನಿವಾರ್ಯ! ಇದು ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಕರ ಸನ್ನಿವೇಶವೇ ಹೌದು. ಕಾರಣ ಬದಲಾವಣೆಗಳು ಪ್ರಕೃತಿಯ ನಿಯಮ ಹಾಗು ಪ್ರಗತಿಯ ಸಂಕೇತವಾಗಿರುತ್ತದೆ. ಪಿ.ಯು ಕಾಲೇಜಿನ ಶಿಕ್ಷಣ ವ್ಯವಸ್ಥೆಗಳು, ಹಾಗು ಅದರ ಸಂಸ್ಕೃತಿ ಮೊದಲು ನನಗೆ ಹಿತವಾಗಿ ಕಂಡಿಲ್ಲ. ದಿನ ಕಳೆದಂತೆ ಅದು ನನಗೆ ಹಿಡಿಸಲು ಶುರುವಾಯಿತು. ಕಾರಣ ನಾನೀಗ ಮುಗ್ಧತೆಯಿಂದ ಮೆಲ್ಲಮೆಲ್ಲ ಹೊರಬರುತ್ತ ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಸಿದ್ಧನಾಗಿದ್ದೇನೆ. ನಂತರ ೨೦೧೫ ರಲ್ಲಿ ಕ್ರೈಸ್ತ ಜೂನಿಯರ್ ಕಾಲೇಜಿನಿಂದ ಉತ್ತೀರ್ಣವಾಗಿ, ನನ್ನ ಡಿಗ್ರಿಗಾಗಿ ಅದೇ ಕ್ರೈಸ್ಟ್ ಯೂನಿವರ್ಸಿಟಿ ಗೆ ಸೇರಿದೆನು. ಹೆಜ್ಜೆಯಿಂದ ಹೆಜ್ಜೆಗೆ, ಹಂತದಿಂದ ಹಂತಕ್ಕೆ ಮುಂದುವರೆದಾಗ ಮಾತ್ರ ನಮ್ಮಲ್ಲಿ ತಿಳುವಳಿಕೆ ಹೆಚ್ಚಾಗುವುದು. ನಮ್ಮ ವಿಶ್ವವಿದ್ಯಾಲಯವು ನನಗೆ ಜ್ಞಾನದ ಭಂಡಾರವಾಗಿ ಕಂಡು ಬಂದಿತು. ಪಠ್ಯ, ಶಿಕ್ಷಣ ಹಾಗು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುವ ಕಾಲೇಜಿನ ವ್ಯವಸ್ಥೆಗಳೆಲ್ಲವೂ ನನಗೆ ಈಗೀಗ ಆಸಕ್ತಿಯ ವಿಚಾರವಾಗುತ್ತಿದೆ. ಅದರಿಂದ ಕಲಿಯಲು ಮುಂದಾಗಿದ್ದೇನೆ! ನನಗೆ ಕ್ರೀಡೆಗಳಲ್ಲಿ ಭಾಗವಹಿಸುವುದು, ಮಹಾಭಾರತ ಹಾಗು ರಾಮಾಯಣ ಕತೆಗಳನ್ನು ಕೇಳುವುದು, ಗಾನ, ಚಿತ್ರಕಲೆ, ಕವನ ರಚನೆ, ಛಾಯಾಚಿತ್ರ ತೆಗೆಯುವುದು, ಅಡಿಗೆ ಮಾಡುವುದು, ಯೋಗಾ ಮುಂತಾದವಲ್ಲಿ ಆಸಕ್ತಿಯಿದೆ. ಇವುಗಳು ನನ್ನ ಹವ್ಯಾಸಗಳಾಗಿಯೇ ರೂಪುಗೊಂಡಿದೆ.

ನನ್ನ ಹಾಗು ವಿಕಿಪೀಡಿಯಾದ ಸಂಬಂಧ

[ಬದಲಾಯಿಸಿ]

ಹಲವು ಬಾರಿ ವಿದ್ಯಾರ್ಥಿಗಳಾದ ನಮಗೆ ಎಷ್ಟೋ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವಾದ ಕೆಲಸ ಹೌದು. ಆದರೆ ವಿಕಿಪೀಡಿಯಾ ಎಷ್ಟೋ ಕಷ್ಟವಾದ ವಿಷಯವನ್ನೂ ಸಹ ಸುಲಭವಾದ, ಸಹಜವಾದ ರೀತಿಯಲ್ಲಿ ತಿಳಿಸಿಕೊಡಬಹುದಾದ ಅತ್ಯುನ್ನತ ಸಾಧನವಾಗಿದೆ. ಇದೇ ಕಾರಣಕ್ಕಾಗಿಯೇ ನಾನು ವಿಕಿಪೀಡಿಯಾದಲ್ಲಿ ಖಾತೆಯನ್ನು ತೆರೆದದ್ದು. ವಿಕಿಪೀಡಿಯಾದಲ್ಲಿ ಪ್ರತಿಯೊಂದು ವಿಷಯ, ಪ್ರತಿಯೊಂದು ವಿಚಾರಗಳೂ ಕಾಲಕ್ರಮೇಣವಾಗಿ, ನಿಯಮಾನುಸಾರ ವಿವರಿಸಿ ಎಲ್ಲರಿಗೂ ಅರ್ಥವಾಗುವಂತಹ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಅದಕ್ಕಾಗಿ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಹಾಗು ವಿಕಿಪೀಡಿಯಾದ ಒಂದು ಅಂಗವಾದ ವಿಕಿಸೋರ್ಸ್ ಬಳಕೆದಾರರಿಗೆ ವಿವಿಧ ಭಾಷೆಗಳ ಟೈಪಿಂಗ್ ಅಭ್ಯಾಸ ಮಾಡಲು ಒಂದು ಅವಕಾಶವಾಗಿ ನಿಂತಿದೆ. ಆದರೆ ಟೈಪಿಂಗ್ ಜೊತೆಗೆ, ಬಳಕೆದಾರರಲ್ಲಿ ಸಮಯಬದ್ಧತೆಯನ್ನೂ ಕಲಿಸಬೇಕೆಂದು ನನ್ನನ್ನು ಆಲೋಚನೆಗಳು ಆಗಾಗ ತಾಗಿದ್ದುಂಟು. ಏಕೆಂದರೆ ಬಳಕೆದಾರರು ಟೈಪಿಂಗ್ ಮಾಡಲು ತೆಗೆದುಕೊಂಡ ಸಮಯ, ಹಾಗು ಅದರ ಮೇಲೆ ಅವರ ಅಂಕಗಳನ್ನು ತೀರ್ಮಾನಿಸುವುದು ಉಚಿತವೆಂಬುದು ನನ್ನ ಅಭಿಪ್ರಾಯವಾಗಿದೆ. ಇತ್ತೀಚೆಗೆ ನಾನು ವಿಕಿಪೀಡಿಯಾದಲ್ಲಿ ಇಂಟರ್ನ್ ಶಿಪ್ ಮಾಡಲು ಹೊರಟಿದ್ದೇನೆಂಬುದು ಸಂತಸದ ವಿಷಯವಾಗಿದೆ !