ಸದಸ್ಯ:Niveditha Bhagyanathan/ನನ್ನ ಪ್ರಯೋಗಪುಟ5
ಮೇಧಾಸಕ ಲಾರೋಸಿಯಾ ಕುಟುಂಬ ವರ್ಗಕ್ಕೆ ಸೇರಿದ ನಿತ್ಯಹರಿದ್ವರ್ಣ ಮರವಾಗಿದ್ದು, ಸುಮಾರು 20-25ಮೀ ಉದ್ದ ಬೆಳೆಯುತ್ತದೆ. ಭಾರತದಲ್ಲಿ ಕಾಣಸಿಗುವ ಮೇಧಾಸಕ ಮರಗಳು 4500 ಫೀಟ್ ಎತ್ತರ ಇರುತ್ತವೆ. ಈ ಮರದ ತೊಗಟೆಯ ಹೊರಭಾಗ ತಿಳಿ ಕಂದು ಬಣ್ಣದಾಗಿದ್ದು, ಓಳ ಭಾಗ ನಸುಗೆಂಪಾಗಿರುತ್ತದೆ. ಇದರ ಎಲೆಗಳು ಸಾಮಾನ್ಯವಾಗಿ 4-6 ಇಂಚು ಉದ್ದಇರುತ್ತವೆ ಮತ್ತು ಸಣ್ಣ ಕೂದಲಿನಂಥಹ ಆಕೃತಿಯನ್ನು ಒಳಗೊಂಡಿರುತ್ತದೆ. ಇದರ ಹೂವುಗಳು ಸಣ್ಣ ಮತ್ತು ಹಳದಿ ಬಣ್ಣದಾಗಿರುತ್ತದೆ. ಇವುಗಳನ್ನು ಜೂನ್-ಜುಲೈ ತಿಂಗಳಿನಲ್ಲಿ ಕಾಣಬಹುದಾಗಿದೆ. ಇದರ ಹಣ್ಣುಗಳು ಚಿಕ್ಕದಾಗಿಯೂ, ದುಂಡು ಆಕಾರದ್ದಾಗಿಯೂ ಕಪ್ಪುಅಥವಾ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಇದನ್ನು ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಕಾಣಬಹುದು.
ಹಂಚಿಕೆ
[ಬದಲಾಯಿಸಿ]ಈ ವರ್ಗದ ಗಿಡಗಳ ಮೂಲಸ್ಥಾನ ಭಾರತ, ದಕ್ಷಿಣ ಚೀನಾದಿಂದ ಮಲೇಷಿಯಾದವರೆಗೆ ಹರಡಿಕೊಂಡಿರುವ ಪ್ರದೇಶ, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಪೆಸಿಫಿಕ್ ದ್ವೀಪಗಳಾಗಿವೆ. ಅಲ್ಲದೇ ಇವುಗಳನ್ನು ಲಾ ರೀಯುನಿಯನ್, ಮಾರಿಷಸ್ ಹಾಗೂ ಮೇಯೋಟ್ ಪ್ರದೇಶಗಳಲ್ಲೂ ಕಾಣಬಹುದು.
ರಾಸಾಯನಿಕ ಸಂಯೋಜನೆ
[ಬದಲಾಯಿಸಿ]ಮೇಧಾಸಕದ ವೈಜ್ಷಾನಿಕ ಹೆಸರು Litsea glutinosa. ಇದನ್ನು Litsea chinensis [೧] ಎಂದೂ ಗುರುತಿಸಲಾಗುತ್ತದೆ. ಮೇಧಾಸಕದ ಮರದ ತೊಗಟೆ ಲಾರೊಟೆಟಾನಿನ್, ಆಕ್ಟಿನೊಡಾಫ್ಮಿನ್, ಬೋಲ್ಡಿನ್, ನಾರ್ಬೋಲ್ಡಿನ್, ಸೆಬಿಫೆರಿನ್‍ನನ್ನು ಹೊಂದಿರುತ್ತದೆ. ಎಲೆಗಳು ಫ್ಲಾವೊನೈಡ್, ನೇರಿಂಗೈನ್, ನರಿಂಗ್ನ್ ಕ್ಯಾಮ್ಪೆರ್ಪಾಲ್, 7- ಗ್ಲುಕೋಸೈಡ್, ಕ್ವೆರ್ಸೆಟಿನ್ ಮತ್ತು ಅದರ 3-ರಾಮನಾಸೈಡ್ ಪೆಗ್ಲರಾಗೋನಿಡಿನ್ ಮತ್ತು 5-ಗ್ಲುಕೋಸೈಡ್ ಸಿಸ್ಟೈನ್, ಗ್ಲೈಸೀನ್ ಮುಂತಾದವುಗಳು.
ವಿವಿಧ ಭಾಷೆಗಳಲ್ಲಿ ಮೇಧಾಸಕದ ಹೆಸರು
[ಬದಲಾಯಿಸಿ]ಹಿಂದಿ - ಮೈದಾ ಲಖಡಿ ಆಂಗ್ಲ - ಕಾಮನ್‍ಟಾಲೋ ಲೌರಿಫೋಲಿಯಾ ಅರೇಬಿಕ್ - ಮ್ಯಾಗಸೇ ಬೆಂಗಾಲಿ - ಕುಕುರಚಿತೆ ಗುಜರಾತಿ - ಮೇಧಾ ಲಖಡಿ ಮಲಯಾಳಂ - ಕರ್ಕಮೇಧಾ ಪ್ಯಾರಿಸ್ - ಕಿಲ್ಜ್ ಪಂಜಾಬಿ - ಮೇಧಾಸಕ ತಮಿಳು - ಮೇಧಾಲ ಕವಿ ತೆಲುಗು - ಮೇಧಾ ಲ್ಯಾಟಿನ್ - ಲಿಟ್ಸಿಯಾಚಿನೆನ್ಸಿಸ್ ಲೌರ್
ಉಪಯೋಗಗಳು
[ಬದಲಾಯಿಸಿ]- ಮೇಧಾಸಕದ ತೊಗಟೆಯ ಪುಡಿಯನ್ನು ಜಿಗ್ಗತ್ ಎಂದು ಹೇಳಲಾಗುತ್ತದೆ. ಇದನ್ನು ಧೂಪದ್ರವ್ಯಗಳ ತಯಾರಿಕೆಯಲ್ಲಿ ಅಂಟುಪಟ್ಟಿಯಾಗಿ ಬಳಸಲಾಗುತ್ತದೆ.
- ಇದರ ತೊಗಟೆಯ ಪುಡಿಯನ್ನು ಉಳುಕು, ಸಂಧಿವಾತ ಮತ್ತು ಸಂದುಗಳ ನೋವಿಗೆ ಮುಲಾಂ ರೀತಿಯಲ್ಲಿ ಬಳಸಲಾಗುತ್ತದೆ. ಇದನ್ನು ಗಾಯಗಳಿಗೂ ಉಪಯೋಗಿಸಲಾಗುತ್ತದೆ.
- ಮೇಧಾಸಕದ ರುಚಿ ಕಟುವಾಗಿಯೂ ಹಾಗೂ ಕಹಿಯಾಗಿಯೂ ಇರುತ್ತದೆ. ಇದು ಜೀರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಸಹಾಯಕವಾಗಿದೆ. ದೇಹದಲ್ಲಿ ಉಷ್ಟೋತ್ಪತ್ತಿ ಹೆಚ್ಚಿಸಲು ಇದು ಉಪಯುಕ್ತ.
- ಬೇಧಿ ಮತ್ತು ರಕ್ತಸ್ರಾವಯುಕ್ತ ಮೂಲವ್ಯಾಧಿಯನ್ನು ನಿವಾರಿಸಲು 15-20 ಮಿಲಿಯಷ್ಟು ತೊಗಟೆಯ ಕಷಾಯವನ್ನು ಉಪಯೋಗಿಸಲಾಗುತ್ತದೆ.
- ಮೇಧಾಸಕದ ತೊಗಟೆಯ ತೈಲವನ್ನು ನೋವು ಹಾಗೂ ಕೀಲುಗಳ ಉರಿಯೂತ ನಿವಾರಿಸಲು ಬಾಹ್ಯವಾಗಿ ಹಚ್ಚಲಾಗುತ್ತದೆ.
- ಈ ಮರದ ತೊಗಟೆಯ ಮಿಶ್ರಣವನ್ನು ಮೂಳೆ ಮುರಿತ ಶೀಘ್ರ ಗುಣಮುಖವಾಗಲು, ಅದರ ಮೇಲೆ ಹಚ್ಚಿ ಬಟ್ಟೆಯಿಂದ ಮುಚ್ಚಲಾಗುತ್ತದೆ.
- ಒಣ ಚರ್ಮದಿಂದ ಮುಕ್ತಿ ಪಡೆಯಲು ಇದರ ತೈಲವನ್ನು ಮೃದುವಾಗಿ ಚರ್ಮದ ಮೇಲೆ ಹಚ್ಚಲಾಗುತ್ತದೆ.
- ಮೇಧಾಸಕದ ಎಲೆಗಳಿಂದ ತಯಾರಿಸಿದ ಮಿಶ್ರಣವನ್ನು ಕೆಮ್ಮು[೨] ಹಾಗೂ ಬೆನ್ನು ನೋವನ್ನು ನಿವಾರಿಸಲು 25-30ಮಿಲಿಯಷ್ಟು ಪ್ರಮಾಣದಲ್ಲಿ ಸೇವಿಸಲಾಗುತ್ತದೆ.
- ಮೇಧಾಸಕದ ಸೇವನೆ ಅಥವಾ ಬಳಕೆಯಿಂದ ದೇಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮಗಳು ಉಂಟಾಗುವುದಿಲ್ಲ.
ಮೇಧಾಸಕವನ್ನು ಹೊಂದಿರುವ ಆಯುರ್ವೇದ ಔಷಧಿಗಳು
[ಬದಲಾಯಿಸಿ]- ಅಸ್ತಿ ಸಂದಾನಕ ಲೇಪ: ಈ ಆಯುರ್ವೇಧ ಔಷಧಿಯಲ್ಲಿ ಮೇಧಾಸಕವನ್ನು ಬಳಸಲಾಗಿದ್ದು, ಇದನ್ನು ಮೂಳೆ ಮುರಿತ ಹಾಗೂ ಕೀಲುಗಳ ಅಪಸ್ಥಾನಗಳನ್ನು ಸರಿಪಡಿಸಲು ಉಪಯೋಗಿಸುತ್ತಾರೆ.
- ಬೋಂಟೋನ್ ಕ್ಯಾಪ್ಸ್ಯೂಲ್: ಈ ಆಯುರ್ವೇಧ ಮೂಲಿಕೆಯಲ್ಲೂ ಮೇಧಾಸಕದ ಉಪಯೋಗವಿದ್ದು, ಇದು ಮೂಳೆ ಮುರಿತದ ಆರಂಭಿಕ ಹಂತದಲ್ಲಿ ಜೋಡುವಿಕೆಯನ್ನು ಉತ್ತೇಜಿಸುತ್ತದೆ. ಮುರಿತವಾಗಿರುವ ಜಾಗದಲ್ಲಿ ರಕ್ತ ಪೂರೈಕೆಯನ್ನು ಸುಧಾರಿಸುತ್ತದೆ. ಸಂಧಿವಾತ ಮತ್ತು ಉರಿಯೂತವನ್ನು ಕಡಿಮೆಗೊಳಿಸುತ್ತದೆ ಹಾಗೂ ಮೂಳೆಯ ದ್ರವ್ಯ ರಾಶಿ ಸಾಂದ್ರತೆಯನ್ನು ಉತ್ತಮಗೊಳಿಸುತ್ತದೆ.