ಸದಸ್ಯ:Nithya R 2210568

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                ನನ್ನ ಜೀವನದ ಪರಿಚಯ                                     ನನ್ನ ಹೆಸರು ನಿತ್ಯ .ನಾನು ಹುಟ್ಟಿದ್ದು  ತಿರುವಣ್ಣಾಮಲೈ ಎಂಬ ಊರಿನಲ್ಲಿ ಹುಟ್ಟಿದ್ದು. ನನ್ನ ಮಾತೃಭಾಷೆ ತಮಿಳು. ನನ್ನ ತಂದೆ ಹೆಸರು ರಾಜ ಮತ್ತು ನನ್ನ ತಾಯಿ ಹೆಸರು ಸೆಲ್ವಿ. ನನ್ನ ತಂದೆ ಮತ್ತು ತಾಯಿ ಇಬ್ಬರು ಲ್ಯಾಂಡ್ರಿ ಕೆಲಸವನ್ನು ಮಾಡುತ್ತಿದ್ದಾರೆ. ನನಗೆ ಮೂರು ಜನ ತಂಗಿಯರು. ನನ್ನ ಮೂರು ಜನ ತಂಗಿಯರು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಾನು ವಿದ್ಯಾಭ್ಯಾಸವನ್ನು ಕ್ರಿಸ್ತ ವಿದ್ಯಾಲಯ ಎಂಬ ಪ್ರೌಢಶಾಲೆಯಲ್ಲಿ ಮಾಡಿದ್ದೆ. ನನ್ನ ಶಾಲೆ ಎಂದರೆ ನನಗೆ ತುಂಬಾ ಇಷ್ಟ. ನನ್ನ ಶಾಲೆಯಲ್ಲಿ ಗೆಳತಿಯರು ತುಂಬಾ ಪ್ರೀತಿಯಿಂದ ನನ್ನ ಜೊತೆ ಇದ್ದರು. ನನ್ನ ಶಾಲೆಯಲ್ಲಿ ಗೆಳತಿಯರು ಜೊತೆ ಇದ್ದ ಎಲ್ಲವೂ ಸುಂದರವಾಗಿತ್ತು .ನನ್ನ ಶಿಕ್ಷಕರು ಕೂಡ ನನಗೆ ಇಷ್ಟ. ನನ್ನ ಶಿಕ್ಷಕರು ಹೇಳಿಕೊಡುವ ಪಾಠ ಮತ್ತು ನಮಗೆ ಕಲಿಸುವ ವಿಧಾನವು ಕೂಡ ತುಂಬಾ ಸುಂದರವಾಗಿರುತ್ತದೆ. ನನ್ನ ಶಿಕ್ಷಕರು ಮಾಡುವ ವಿಧಾನ ಕೂಡ ತುಂಬಾ ಪ್ರೀತಿಯಿಂದ  ಇರುತ್ತದೆ.    
              ನನ್ನ ವಿದ್ಯಾಭ್ಯಾಸ ಮುಗಿದ ನಂತರ ನಾನು
ಕ್ರೈಸ್ಟ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದೆ. ನನಗೆ ಕ್ರೈಸ್ಟ್ ಕಾಲೇಜು ಅಂದರೆ ಇಷ್ಟ .ನಾನು ಕ್ರೈಸ್ಟ್ ಕಾಲೇಜು ಬಂದಿದ ನಂತರ ನಾನು ಕಲಿತಿದ್ದು ಹೆಚ್ಚು .ನಾನು ಕ್ರೈಸ್ಟ್ ಕಾಲೇಜಿಗೆ ಮೊದಲು ಬಂದಿದ್ದಾಗ ನನಗೆ  ಶಿಕ್ಷಕರು ಹೇಳಿದ ಮಾತು ನೆನಪಿಗೆ ಬಂದಿದ್ದು.ನಾನು ಶಾಲೆಯಲ್ಲಿ ಓದುತ್ತಿರುವಾಗ ಶಿಕ್ಷಕರು ಒಂದು ಮಾತನ್ನು ಹೇಳಿದರು. ನಿಜವಾದ ಜೀವನ ಅಂದರೆ ಇದು ಅಲ್ಲ. ನೀವು ಯಾವಾಗ ಕಾಲೇಜು ಮೆಟ್ಟಿಲನ್ನು ಹತ್ತುತ್ತಿರೋ ಅವಾಗ ನಿಮಗೆ ನಿಜವಾದ ಜೀವನದ ಜೀವನ ಅಂದರೆ ಏನು ಅಂತ ನಿಮಗೆ  ತಿಳಿಯುತ್ತದೆ ಎಂದು ಹೇಳಿದರು. ನಾನು ಕ್ರೈಸ್ಟ್ ಕಾಲೇಜು ಮೆಟ್ಟಿಲನ್ನು ಹತ್ತುವಾಗ ನನಗೆ ಗೊತ್ತಾಯ್ತು ನಿಜವಾದ ಜೀವನ ಅಂದರೆ ಹೇಗೆ ಅಂತ ಮತ್ತು ನನ್ನ ಶಿಕ್ಷಕರು ಹೇಳಿದ್ದು ನಿಜವಾಗಿತ್ತು. ನನ್ನ ತಂದೆ ಮತ್ತು ತಾಯಿ ಇಬ್ಬರು ಇಲ್ಲವೆಂದರೆ ಈ ಕಾಲೇಜಿನ ಮೆಟ್ಟಿಲನ್ನು ಅತ್ತಲು ಸಾಧ್ಯವಾಗುವುದಿಲ್ಲ. ನನ್ನ ತಂದೆ ಮತ್ತು ತಾಯಿ ಇವರಿಬ್ಬರೂ ಅಂದರೆ ನನಗೆ ತುಂಬಾ ತುಂಬಾ ಪ್ರೀತಿಸುತ್ತೇನೆ .ನನ್ನ ತಂದೆ ತಾಯಿಗೆ ನಾವು ನಾಲ್ಕು ಜನ ಹೆಣ್ಣು ಮಕ್ಕಳು. ನಾವು ನಾಲ್ಕು ಜನ ಹೆಣ್ಣು ಮಕ್ಕಳಿಂದ ಕೂಡ ನಮ್ಮ ನಾಲ್ಕು ಜನ ವನ್ನು ನನ್ನ ತಂದೆ ಮತ್ತು ತಾಯಿ ತುಂಬಾ ಕಷ್ಟಪಟ್ಟು ಓದಿಸುತ್ತಾರೆ .ನನ್ನ ತಂದೆ ಮತ್ತು ತಾಯಿ ಅಂದರೆ ನಾವು ನಾಲ್ಕು ಜನ ಹೆಚ್ಚು ಓದಬೇಕೆಂದು ತುಂಬಾ ಆಸೆ ಮತ್ತು ಕನಸು ಕೂಡ ಇದ್ದೆ .ನನ್ನ ತಂದೆ ಮತ್ತು ತಾಯಿ ಇಲ್ಲವೆಂದರೆ ನಾವು ಇಲ್ಲಿ ತನಕ ಬರಲು ಸಾಧ್ಯವಿಲ್ಲ. ನಾನು ಬಡವರ ಕುಟುಂಬಕ್ಕೆ ಸೇರಿದವಳು .ನಾವು ನಾಲ್ಕು ಜನ ಹೆಣ್ಣು ಮಕ್ಕಳಾದರೂ ನಮ್ಮನ್ನು ಕಷ್ಟಪಟ್ಟು ಓದಿಸಿ ಮತ್ತು ನಮಗೆ ಬೇಕಾಗುವ ಎಲ್ಲವನ್ನು ಕೊಡುತ್ತಾರೆ. ಇವರಿಬ್ಬರನ್ನು ಪಡೆದ ನಾವು ನಾಲ್ಕು ಜನವು ಪುಣ್ಯ ಮಾಡಿರಬೇಕು. ನನಗೆ ನನ್ನ ಜೀವನದ ಗುರಿಯಂದರೆ ನನ್ನ ತಂದೆ ಮತ್ತು ತಾಯಿ ಇಬ್ಬರ ಕನಸನ್ನು ನಿಜ ಮಾಡಬೇಕು .ನನಗೆ ಎಷ್ಟು ಕಷ್ಟ ಬಂದರೂ ನಾನು ನನ್ನ ತಂದೆ ಮತ್ತು ತಾಯಿ ಇಬ್ಬರ ಗುರಿಯನ್ನು ನಿಜ ಮಾಡುತ್ತೇನೆ. ಇದೇ ನನ್ನ ಜೀವನದ ಪ್ರಯೋಗ.
                
        
      ಬಾಲ್ಯದ ಆ ಸುಂದರ ದಿನಗಳು
                   ಬಾಲ್ಯ ಎಂದರೆ ಎಷ್ಟು ಸುಂದರ ಅಲ್ವಾ. ಯಾವುದೇ ಜವಾಬ್ದಾರಿಗಳು ಹೆಗಲಾತಿರುವುದಿಲ್ಲ. ನಮ್ಮದೇ ಆದ ಪ್ರಪಂಚ .ಕಾಳಜಿ ಮಾಡಲು ಅಪ್ಪ, ಅಮ್ಮ ,ಅಜ್ಜ ,ಅಜ್ಜಿ ಎಲ್ಲರೂ ಇರುತ್ತಾರೆ. ಪ್ರೀತಿಯಿಂದ ಊಟ ಕೃಷಿಯಾಗಿ ಆಟ, ಸುಖವಾದ ನಿದ್ರೆ, ಇದರ ಹೊರತಾಗಿ ಏನೂ ಇಲ್ಲ, ಎಲ್ಲಾ ವಿಷಯಗಳಲ್ಲಿಯೂ ಖುಷಿಪಡುವ ಮನಸ್ಸು .ಸ್ವಾರ್ಥಕ್ಕೆ ಸಾಲವಿಲ್ಲ .ನಾಳೆಯ ಬಗ್ಗೆ ಯೋಚನೆ ಇಲ್ಲ. ತಿನ್ನಕ್ಕೆ ಸಿಗಲಿಲ್ಲ ಎಂದರೆ ದುಃಖ ಬಿದ್ದಾಗ ಪೆಟ್ಟುಗಳಾದ ನೋವು, ಅಷ್ಟೇ ನೋವು ದುಃಖಗಳು ಒಂದು ಅಳುವಿ ನಂತರ ಮಾಯವಾಗುತ್ತವೆ. ಮತ್ತೆ ಅವುಗಳ ನೆನಪೇ ಆಗುವುದಿಲ್ಲ. ಮನಸ್ಸಿನಲ್ಲಿ ಅವುಗಳಿಗೆ ಪ್ರವೇಶವು ಇಲ್ಲ .ಚಿಂತೆ ಎಂಬ ಪದ ಹತ್ತಿರ ಸುಳಿಯುವುದು ಇಲ್ಲ .ಆತಂಕಕ್ಕೆ ಅರ್ಥ ಇಲ್ಲ ದೊಡ್ಡ ಭಯ ಎಂದರೆ ಅಮ್ಮನು ಅಪ್ಪನು ಬಯಬಹುದು ಎಂಬುವುದೇ ಆಗಿರುತ್ತದೆ. ನನ್ನ ಬಾಲ್ಯವು ತುಂಬಾ ಚೆನ್ನಾಗಿತ್ತು .ಅಲ್ಲಿಯ ಹಸಿರು ಪರಿಸರ ಸುತ್ತಮುತ್ತಲು , ಅಪ್ಪ-ಅಮ್ಮನ ಮುಂದಿನ ನಾನು ಮೊದಲನೆಯ ಮಗಳು. ನನಗೆ ಮೂರು ತಂಗಿಯರು ಅಕ್ಕಪಕ್ಕದ ಎಲ್ಲಾ ಮಕ್ಕಳು ಸೇರಿದಂತೆ ಎಂಟರಿಂದ ಹತ್ತು ಬೇರೆ ಬೇರೆ ವಯಸ್ಸಿನ ಮಕ್ಕಳು ಮನಸ್ಸಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಆಟ ಆಡುವದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇವೆಲ್ಲವೂ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನ ಬಾಲ್ಯದ ನೆನಪುಗಳು.
       ೨. ನನ್ನ ಕುಟುಂಬದ ಪರಿಚಯ
                       ಮನುಷ್ಯರು ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಕುಟುಂಬವು ದೇವರ ಶ್ರೇಷ್ಠ ಕೊಡುಗೆಯಾಗಿದೆ. ಕುಟುಂಬ ಮತ್ತು ಅದರ ಪ್ರೀತಿ ಇಲ್ಲದ ವ್ಯಕ್ತಿಯು ಎಂದಿಗೂ ಸಂಪೂರ್ಣ ಮತ್ತು ಸಂತೋಷ ವಾಗುವುದಿಲ್ಲ. ಜೀವನ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಕುಟುಂಬವು ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ .ಕುಟುಂಬವು ನಮಗೆ ಬೇರಿನಲ್ಲಿಯೂ ಸಿಗದ ಉಷ್ಣತೆ ಮತ್ತು ಪ್ರೀತಿಯನ್ನು ನೀಡುತ್ತದೆ .ಅಂತಹ ಕುಟುಂಬದಿಂದ ನಾನು ಕೂಡ ಆಶೀರ್ವದಿಸಿದ್ದೇನೆ. ನನ್ನ ಕುಟುಂಬ ಯಾವಾಗಲೂ ನನ್ನ ಶಕ್ತಿಯಾಗಿದೆ. ನನ್ನ ತಾಯಿ ,ತಂದೆ ,ಸಹೋದರಿ ಮತ್ತು ನಾನು ನನ್ನ ಕುಟುಂಬವನ್ನು ಪೂರ್ಣಗೊಳಿಸುತ್ತೇನೆ.
        
          ನನ್ನ ತಾಯಿ 
                ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಶಕ್ತಿಶಾಲಿ ಮಹಿಳೆ ನನ್ನ ತಾಯಿ  ನನ್ನನ್ನು ಪ್ರಮುಖ ಮೌಲ್ಯಗಳೊಂದಿಗೆ ನಮ್ಮನ್ನು ಬೆಳೆಸಿದ್ದಾರೆ .ಪ್ರೀತಿ ಮತ್ತು ಸಹಾನುಭೂತಿಯ ನಿಜವಾದ ಸಾರವನ್ನು ಅವರು ನಮಗೆ ವಿವರಿಸಿದರು. ಅತ್ಯಾತ್ಮದ ಮಹತ್ವವನ್ನು ಹೇಳುತ್ತಾಳೆ. ನನ್ನ ಅಮ್ಮ ನನ್ನ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.ನನ್ನ ತಾಯಿ ಅದ್ಭುತ ಅಡಿಕೆಯವರು ಮತ್ತು ನಾವು ತಿನ್ನಲು ಇಷ್ಟಪಡುವುದನ್ನು ಮಾಡಿಕೊಡುತ್ತಾರೆ .ಆಕೆ ನಮಗೆಲ್ಲ ಸ್ಪೂರ್ತಿ.
      
           ನನ್ನ ತಂದೆ
                 ನನ್ನ ತಂದೆ ಬಲವಾದ ತತ್ವಗಳನ್ನು ಹೊಂದಿರುವ ವ್ಯಕ್ತಿ. ಮನೆಯಲ್ಲಿ ಅವರ ಉಪಸ್ಥಿತಿಯು ನಮಗೆ ಭದ್ರತೆ ಮತ್ತು ಭರವಸೆಯ ಭಾವನೆಯನ್ನು ನೀಡುತ್ತದೆ .ಅವರು ತುಂಬಾ ಸೌಮ್ಯ ಶಿಸ್ತು ಮತ್ತು ಕಟ್ಟುನಿಟ್ಟಾದವರು. ನಾನು ನನ್ನ ತಂದೆಯಿಂದ ಅತ್ಯಂತ ಮುಖ್ಯವಾದ ಮತ್ತು ಮೌಲ್ಯವಾದ ಪಾಠವನ್ನು ಕಲಿತಿದ್ದೇನೆ. ಅದು ನನ್ನ ಬಳಿ ಇರುವುದರೊಂದಿಗೆ ಜೀವನದಲ್ಲಿ ತೃಪ್ತಿವಾಗಿರುತ್ತದೆ. ನನ್ನ ತಂದೆ ಇರುವಾಗ ನಮ್ಮ ಮನೆ ವಾತಾವರಣವು ತುಂಬಾ ಹರ್ಷಿ ಚಿತ್ತದಿಂದ ಮತ್ತು ಸಂತೋಷದಿಂದ ಕೂಡಿರುತ್ತದೆ. ಅವರ ಮಗಳಾಗಲು ನನಗೆ ಹೆಮ್ಮೆ ಅನಿಸುತ್ತಿದೆ .ನಾನು ಬೆಳೆದ ನಂತರ ನನ್ನ ಹೆತ್ತವರನ್ನು ನೋಡಿಕೊಳ್ಳಲು ಬಯಸುತ್ತೇನೆ.
      
          ನನ್ನ ತಂಗಿಯರು
                 ನನಗೆ ಮೂರು ತಂಗಿಯರು ಮೂರು ತಂಗಿಯರು ತುಂಬಾ ಮೃದು ಮತ್ತು ಸೌಮ್ಯ ಹುಡುಗಿಯರು .ನನ್ನ ತಂಗಿಯರು ನನಗೆ ಮೊದಲ ಸ್ನೇಹಿತೆ ಮತ್ತು ವಿಶ್ವಾಸಾರ್ಹಗಳು.ನಾವು ಸಿಲ್ಲಿ ವಿಷಯಗಳ ಬಗ್ಗೆ ಜಗಳವಾಡುತ್ತೇವೆ. ಆದರೆ ಅವರು ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ನನ್ನನ್ನು ತುಂಬಾ ಪ್ರೀತಿಸುತ್ತಾರೆ ಎಂದು ನನಗೆ ತಿಳಿದಿದೆ. ನಾನು ಯಾವಾಗಲೂ ಕಷ್ಟದಲ್ಲಿ ಇರುದಿನೋ ಅವಾಗ ನನ್ನ ಸಹೋದರಿಯರು ನನಗೆ ಬೆಂಬಲವಾಗಿ ನಿಲ್ಲುತ್ತಾರೆ. ನಾನು ನನ್ನ ಹೆತ್ತವರಿಂದ ದೂರದಲ್ಲಿರುವಾಗ ನಾನು ನನ್ನ ತಂಗಿಯರ ಜೊತೆ ತುಂಬಾ ಸುರಕ್ಷಿತವಾಗಿರುತ್ತೇನೆ.
               ೩.ನನ್ನ ಶಾಲೆಯ ನೆನಪುಗಳು
      
                      ನನಗೆ ನನ್ನ ಶಾಲೆಯು ಕೇವಲ ಒಂದು ಸಂಸ್ಥೆಗಿಂತ ಹೆಚ್ಚು. ಇದು ನನ್ನ ಎರಡನೆಯ ಕುಟುಂಬ .ನಾನು ನನ್ನ ಬಾಲ್ಯದಲ್ಲಿ ಸ್ಥಾಪಿಸಿದ ಅದ್ಭುತ 
ಸ್ನೇಹಿತರ ಕುಟುಂಬ .ಅತ್ಯುತ್ತಮ ಶಿಕ್ಷಕರು ಮತ್ತು ಪ್ರೀತಿಯ ಶಾಲಾ ನೆನಪುಗಳು. ನಾನು ನನ್ನ ಶಾಲೆಯನ್ನು ಆಧಾರಿಸುತ್ತೇನೆ. ಏಕೆಂದರೆ ಅಲ್ಲಿ ನಾನು ಉತ್ತಮ ನಾಗರಿಕನಾಗುವುದು ಹೇಗೆ ಮತ್ತು ನನ್ನ ಗುರಿಗಳನ್ನು ಹೇಗೆ ತಲುಪಬೇಕು ಎಂಬುದನ್ನು ಕಲಿಯುತ್ತೇನೆ. ಪ್ರತಿಯೊಬ್ಬರ ಜೀವನದ ಭಾಗ ಮತ್ತು ಭಾಗವಾಗಿದೆ. ಮನುಷ್ಯನು ತಾನು ಕಳೆದ ಒಳ್ಳೆಯ ದಿನಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾನೆ .ಜೀವನದಲ್ಲಿ ಕೆಲವು ಒಳ್ಳೆಯ ನೆನಪುಗಳು ಮತ್ತು ಕೆಲವು ಕೆಟ್ಟ ನೆನಪುಗಳು ಇವೆ. ಅದರಲ್ಲಿ ಶಾಲೆಯ ನೆನಪುಗಳು ತುಂಬಾ ಸಂತೋಷಗಳನ್ನು ಕೊಡುತ್ತದೆ.
         
          ನನ್ನ ಶಾಲೆಯ ದಿನಗಳಂದರೆ ಅವು ಜೀವನದ ಚಿನ್ನದ ಗಳಿಕೆಗಳು. ನಾನು ಓದಿದ್ದು ಬೆಂಗಳೂರಿನ ಕ್ರಿಸ್ತ ವಿದ್ಯಾಲಯ ಎಂಬ ಶಾಲೆಯಲ್ಲಿ ಓದಿದ್ದು. ನನ್ನ ಶಾಲೆ ನೆನಪು ಅಂದರೆ ನನ್ನ ಶಿಕ್ಷಕರು ಮತ್ತು ನನ್ನ ಗೆಲಿತಿಯರು. ನನ್ನ ಶಾಲಾ ದಿನಗಳು ನನ್ನ ಜೀವನದ ಅತ್ಯುತ್ತಮ ದಿನಗಳು ,ಶಾಲೆಯಲ್ಲಿ ನನ್ನ ಮೊದಲ ದಿನ ನನಗೆ ಸ್ಪಷ್ಟವಾಗಿ ನೆನಪಿದೆ. ನಾನು ಇಂದು ಉತ್ತಮ ಸ್ನೇಹಿತರನ್ನು ಹೊಂದಿದ್ದೇನೆ ಮತ್ತು ನನ್ನ ಪ್ರೌಢಶಾಲೆಯಿಂದ ಪಡೆದ ಕಲಿಕೆಯ ಅನುಭವ ಮತ್ತು ಜೀವನದ ನೆನಪುಗಳು ಅಮೂಲ್ಯವಾದ ಭಾಗವಾಗಿದೆ .ಇದು ನಿಜಕ್ಕೂ ಮೆರೆಯಲಾಗದ ಪ್ರಯಾಣ ವಾಗಿದ್ದು ಅದು ನನ್ನ ಹೃದಯದಲ್ಲಿ ಶ್ವಾಸತವಾಗಿ ಉಳಿಯುತ್ತಿದೆ. ನನ್ನ ಶಾಲಾ ಜೀವನವು ಬಹಳಷ್ಟು ಉತ್ಸಾಹ ಮತ್ತು ಪ್ರೀತಿಯಿಂದ ತುಂಬಿತ್ತು . ನನಗೆ ಈ ಸಮಯದ ಮೌಲ್ಯವನ್ನು ಅರ್ಥ  ಮಾಡಿಕೊಟ್ಟಿದ್ದು ಮತ್ತು ನನ್ನ ಜೀವನದಲ್ಲಿ ಒಂದು ಅದ್ಭುತ ಅಧ್ಯಯವಾಗಿದ್ದು .ಇದು ಖಂಡಿತವಾಗಿಯೂ ನಾನು ನನ್ನನ್ನು ಕಂಡುಕೊಂಡ ಮತ್ತು ನನ್ನ ಬಗ್ಗೆ ಸಾಕಷ್ಟು ಕಲಿತ ಅವಧಿಯಾಗಿದೆ. ನನ್ನ ಶಾಲಾ ಜೀವನವು ನನಗೆ ಸಮರ್ಪಣೆ ಮತ್ತು ಕಲಿಯಲು ಸಹಾಯವಾಗಿದ್ದು .ನನ್ನ ಶಿಕ್ಷಕರು ನನ್ನನ್ನು ಪ್ರೇರೇಪಿಸಿದರು ಮತ್ತು ನನ್ನ ಅತ್ಯುತ್ತಮವಾದುದನ್ನು ಸಾಧಿಸಲು, ನನ್ನನ್ನು ತಲ್ಲಿದರು ಅದು ನಾನು ಇಂದು ಇರುವ ದೊಡ್ಡ ಭಾಗವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಸ್ನೇಹಿತರನ್ನು ಸಂಭಾದಿಸಿದೆ ನನ್ನ ಜೀವನ ಮಾನವಿಡೀ ಆಗಿಯೇ ಉಳಿಯುವ ಸ್ನೇಹಿತರು. ನನ್ನ ಶಾಲಾ ಜೀವನದ ಒಂದು ದೊಡ್ಡ ಆಶೀರ್ವಾದವೆಂದರೆ ನನ್ನ ಸ್ನೇಹಿತರು ಈ ಪ್ರಯಾಣದಲ್ಲಿ ನಾನು ಕೆಳಗೆ ಇದ್ದಾಗ ಅವರು ನನಗೆ ಸಹಾಯ ಮಾಡಿದರು ಮತ್ತು ನಾನು ಮೇಲೆದ್ದಾಗ ನನ್ನನ್ನು ಮೇಲಕ್ಕೆ ಎತ್ತಿದರು, ಇದಲ್ಲದೆ ನನಗೆ ಹೊಸದನ್ನು ಪ್ರಯತ್ನಿಸಿದೆ ಪ್ರಯತ್ನಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡಿದರು. ನನ್ನ ಅತ್ಯಂತ ಸ್ಮರಣೆಯ ಕ್ಷಣಗಳು ನನ್ನ ಸ್ನೇಹಿತರೊಂದಿಗೆ ಕಳೆದಿದ್ದೆ. ನನಗೆ ತಿಳಿದಿರುವಂತೆ ನನ್ನ ಶಾಲಾ ಜೀವನದ ಮೊದಲ ಮತ್ತು ಕೊನೆಯ ದಿನವು ಮರೆಯಲಾಗದ ದಿನಗಳು. ನಾನು ಅಳುತ್ತ ನನ್ನ ಶಾಲೆಗೆ ಪ್ರವೇಶಿದೆ ಮತ್ತು ಹೊರಡುವಾಗಲೂ ನನ್ನ ಕಣ್ಣಿನಲ್ಲಿ ಅದೇ ನೀರು. ಮೊದಲಿನ ವ್ಯತ್ಯಾಸವೆಂದರೆ ಹೋಗಲು ಬಯಸಿದ್ದಿರುವುದು ಮತ್ತು ಎರಡನೆಯದು ಬಿಡಲು ಬಯಸದೇ ಇರುವುದು. ನನ್ನ ಶಾಲಾ ಜೀವನವು ನೀಡಿದ ಸಂತೋಷಗಳು ಕಂಡಿತವಾಗಿಯೂ ಲೆಕ್ಕವಿಲ್ಲದಷ್ಟು ಮತ್ತು ನನ್ನ ಜೀವನದ ಅತ್ಯುತ್ತಮ ದಿನಗಳಾಗಿ ಉಳಿಯುತ್ತಿದೆ.


              ೪.ನನ್ನ ಜೀವನದ ಗುರಿ
                        ಜೀವನದಲ್ಲಿ ಗುರಿ ಮತ್ತು ಕನಸು ತುಂಬಾ ಮುಖ್ಯ. ಕನಸು ಗುರಿಯಾಗಬೇಕೆ ಹೊರತು ,ಗುರಿ ಕಾಣಸಾಗಬಾರದು .ನನ್ನ ಗುರಿ ಎಂದರೆ ನಾನು ಚೆನ್ನಾಗಿ ಓದಬೇಕು, ಹೆಚ್ಚು ವಿಷಯಗಳನ್ನು ಕಳೆಯಬೇಕು. ನನಗೆ ಹೆಚ್ಚು ಓದಬೇಕಂಬ ಆಸೆ ಇದೆ ನಾನು ಓದಿದ ನಂತರ ಒಂದು ಕೆಲಸಕ್ಕೆ ಹೋಗಿ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನಗೆ ತುಂಬಾ ಆಸೆ ಇದೆ. ನನಗೆ ತುಂಬಾ ಕಲಿಯುವುದು ಇಷ್ಟ ಮತ್ತು ಒಂದು ವಿಷಯದ ಬಗ್ಗೆ ತುಂಬಾ ಆಸಕ್ತಿಯಿಂದ ಅದನ್ನು ಕೇಳುವುದು ಮತ್ತು ಅದನ್ನು ಕಳೆಯುವುದು ತುಂಬಾ ಇಷ್ಟ .ನನ್ನ ಜೀವನದ ಗುರಿ ಗಳಲ್ಲಿ ಹೆಚ್ಚು ವಿಷಯಗಳ ಜ್ಞಾನವನ್ನು ಪಡೆಯುವುದು ಮತ್ತು ಅದರ ಬಗ್ಗೆ ತಿಳಿದುಕೊಳ್ಳುವುದು ನನಗೆ ತುಂಬಾ ಆ ಶಕ್ತಿ ಇದೆ ಮತ್ತು ಹೆಚ್ಚು ಜ್ಞಾನಗಳನ್ನು ಪಡೆಯುತ್ತೇನೆ ಎಂಬ ನಂಬಿಕೆ ಇದೆ .
                          
                     ವಂದನೆಗಳೊಂದಿಗೆ