ಸದಸ್ಯ:Niroop97/sandbox
ಆಲ್ ಪಸಿನೊ
ಆಲ್ ಪಸಿನೊ | |
---|---|
Born | ಆಲ್ಫ್ರೆಡೋ ಜೇಮ್ಸ್ ಪಸಿನೊ birth date and age ಮ್ಯಾನ್ಹ್ಯಾಟನ್, ನ್ಯೂಯಾರ್ಕ್ ಸಿಟಿ, ಯು ಎಸ್. |
Alma mater | ಆಕ್ಟರ್ಸ್ ಸ್ಟುಡಿಯೋ, ಎಚ್ ಬಿ ಸ್ಟುಡಿಯೋ |
Occupation(s) | ನಟ , ಚಲನಚಿತ್ರಗಾರ |
Years active | ೧೯೬೫-ಪ್ರಸ್ತುತ |
Children | ೩ |
ಜನನ
[ಬದಲಾಯಿಸಿ]ಆಲ್ ಪಸಿನೊ ಇವರನ್ನು ಆಲ್ಫ್ರೆಡೋ ಜೇಮ್ಸೆ ಪಸಿನೊ ಎಂದು ಕರೆಯುತ್ತಾರೆ.ಇವರೊಬ್ಬರು ಅಮೇರಿಕನ್ ನಟ,ಇವರು ಏಪ್ರಿಲ್ ೨೫ ೧೯೪೦ ರಲ್ಲಿ ಹುಟ್ಟಿದರು.ಇವರು ನ್ಯೂಯಾರ್ಕ್ ಮ್ಯಾನ್ಹ್ಯಾಟನ್ ನಗರದಲ್ಲಿ ಜನಿಸಿದರು,ಇವರು ಸಿಸಿಲಿಯನ್ ಅಮೆರಿಕನ್ ವರ್ಗಕೆ ಸೇರಿದವರು, ಇವರ ತಂದೆಯ ಹೆಸರು ಸಲ್ವಾಟೋರ್ ಪಸಿನೊ ಮತ್ತು ಇವರ ತಾಯಿ ರೋಸ್. ಇವರ ಹದಿಹರೆಯದ ವಯಸ್ಸಿನಲಿ ಇವರ ಸ್ನೇಹಿತರು ಇವರನ್ನು 'ಸನ್ನಿ' ಎಂದು ಕರಿಯುತ್ತಿದ್ದರು.
ಬಾಲ್ಯ
[ಬದಲಾಯಿಸಿ]ಇವರನ್ನು ಅನೇಕ ತರಗತಿಗಳಿಂದ ಹೊರಗೆ ಹಾಕಿದರು ಆದರೆ ಇವರು ಇಂಗ್ಲೀಷ್ ಕ್ಲಾಸ್ ಗೆ ತಪ್ಪದೆ ಹೋಗುತ್ತಿದ್ದರು. ಇವರು ೧೭ ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟರು.ಇವರ ತಾಯಿ ಇವರ ತೀರ್ಪನ್ನು ಒಪ್ಪಲಿಲ್ಲ ಆದರಿಂದ ಪಾಸಿನೊರವರು ಮನೆ ಬಿಟ್ಟು ಹೊರಗೆ ಹೋದರು. ಇವರು ನಟನೆ ಅಧ್ಯಯನಗಳನ್ನು ಮಾಡಲು ಹಣ ಕಾಸು ಇಲದ್ದ ಕಾರಣ ಇವರು ಸಂದೇಶವಾಹಕ,ದ್ವಾರಪಾಲಕ, ಮತ್ತು ಅಂಚೆ ಗುಮಾಸ್ತನಾಗಿ ಕೆಲಸ ಮಾಡಿದರು.ಇವರ ಹದಿವಯಸ್ಸಿನಲ್ಲಿ ನ್ಯೂ ಯಾರ್ಕ್ ನ ನಾಟಕೀಯ ಭೊಗತದೊಂದಿಗೆ ನಾಟಕಗಳಲಿ ನಟಿಸಿದ್ದಾರೆ, ಆದರೆ ಆಕ್ಟರ್ಸ್ ಸ್ಟುಡಿಯೋದಲ್ಲಿ ಇವರನ್ನು ನಿರಾಕರಿಸಿದರು. ಪಸಿನೊನ ನಂತರ ಹರ್ಬರ್ಟ್ ಬರ್ಗೋಫ್ ಸ್ಟುಡಿಯೊಗೆ ಸೇರಿದರು,ಅಲ್ಲಿ ಚಾರ್ಲಿ ಲಾಫ್ಟನ್ ಇವರ ನಟನೆಯ ಶಿಕ್ಷಕರಾಗಿ ಹಾಗು ಆತ್ಮೀಯ ಸ್ನೇಹಿತರಾಗಿದ್ದರು ಈ ಸಮಯದಲ್ಲಿ ಇವರು ನಿರುದ್ಯೋಗಿ ಮತ್ತು ವಸತಿಹಿನರಾಗಿದ್ದರು, ಕೆಲವೊಮ್ಮೆ ಇವರು ಬೀದಿಯಲ್ಲಿ ಹಾಗು ಸ್ನೇಹಿತರ ಮನೆಯಲ್ಲಿ ಮಲಗುತ್ತಿದ್ದರು.
ಆಕ್ಟರ್ಸ್ ಸ್ಟುಡಿಯೋ ತರಬೇತಿ
[ಬದಲಾಯಿಸಿ]ನಾಲ್ಕು ವರ್ಷಗಳ ನಂತರ ಆಕ್ಟರ್ಸ್ ಸ್ಟುಡಿಯೋ ದಲ್ಲಿ ಇವರು ಯಶಸ್ವಿಯಾಗಿ ಆಯ್ಕೆ ಆದರು,ಅನಂತರ ಇವರು ತಾದಾತ್ಮ್ಯಾ ಅಭಿನಯ ಅಧ್ಯಯನ ಮಾಡಿದರು ಇಲ್ಲಿ ಲೀ ಸ್ಟ್ರಾಸ್ಬರ್ಗ್ ಇವರ ನಟನೆಯ ಶಿಕ್ಷಕರಾಗಿದ್ದದರು ನಂತರ ಅವರು ಪಸಿನೊರವರ ಜೊತೆ ದಿ ಗಾಡ್ಫಾದರ್ ಪಾರ್ಟ್ ೨ ಚಲನಚಿತ್ರದ್ದಲಲ್ಲಿ ಅಭಿನಯಿಸಿದರು.ಅನಂತರ ಇವರು ಒಂದು ಇಂರ್ಟವ್ಯುನಲ್ಲಿ ಸ್ಟ್ರಾಸ್ಬರ್ಗ್ ಹಾಗು ಸ್ಟುಡಿಯೊ ತಮ್ಮ ವೃತ್ತಿ ಜಿವನದಲ್ಲಿ ಎಷ್ಟು ಪರಿಣಾಮ ಬೀರಿತ್ತು ಎಂದು ಹೇಳಿದರು.ಆಕ್ಟರ್ಸ್ ಸ್ಟುಡಿಯೋ ಇವರ ಜೀವನವಾಗಿತ್ತು. ಪ್ರಸ್ತುತ್ತದಲ್ಲಿ ಇವರು ಆಕ್ಟರ್ಸ್ ಸ್ಟುಡಿಯೋದಲ್ಲಿ ಎಲ್ಲೆನ್ ಬರ್ಸ್ಟ್ ನ್ ಮತ್ತು ಹಾರ್ವೆ ಕಿಟೆಲ್ ಅವರ ಜೊತೆ ಸಹ ಅಧ್ಯಕ್ಷರಾಗಿದ್ದಾರೆ. ೧೯೭೬ ನಲ್ಲಿ,ಪಸಿನೊರವರು ಒಂದು ಋತುವರೆಗೆ ಚಾರ್ಲ್ಸ್ ಪ್ಲೇಹೌಸ್ ನಲ್ಲಿ ಅವೇಕ್ ಸಿಂಗ್ ಪ್ರದರ್ಶನ ಮಾಡಿದರು.೧೯೬೮ ರಲ್ಲಿ ದಿ ಇಂಡಿಯನ್ ವಾನ್ಟ್ಸ್ ದ ಬ್ರಾಂಕ್ಸ್ ಕಥೆಯನ್ನ ಆಸ್ಟರ್ ಪ್ಲಸ್ ಥಿಯೇಟರ್ನಲ್ಲಿ ನಟಿಸಿದರು.ಇವರಿಗೆ ಹಾಗು ಇವರ ಅತ್ಯುತ್ತಮ ನಟನೆಗೆ ಓಬೀ ಪ್ರಶಸ್ತಿ ದೊರಕಿತ್ತು .ಇವರು ದಿ ಇಂಡಿಯನ್ ವಾನ್ಟ್ಸ್ ದ ಬ್ರಾಂಕ್ಸ್ ಅಭಿನಯಕಾಗಿ ಇಟಲಿಗೆ ಹೋದರು.ಇದು ಇವರ ಮೊದಲೆನೆಯ ಹೊರದೇಶ ಪ್ರಯಾಣವಾಗಿತ್ತು.[೧]
ಹಂತ ವೃತ್ತಿ ಜೀವನ ಹಾಗು ಚಲನಚಿತ್ರ ವೃತ್ತಿ ಜೀವನ
[ಬದಲಾಯಿಸಿ]ಪಸಿನೊರವರು ೨೦೧೦ರಲ್ಲಿ ಶೈಲಾಕ್ ಇನ್ ಶೇಕ್ಸ್ಪಿಯರ್ ನಿರ್ಮಾಣ ಮಾಡಿದರು ಇವರ ಈ ಚಲನಚಿತ್ರಕ್ಕೆ ಒಂದು ವಾರದಲ್ಲಿ ಯು ಎಸ್ ಡಾಲರ್ ೧ ಮಿಲಿಯನ್ ಬಂದಿತ್ತು.ಇವರ ಆಭಿನಯಕ್ಕೆ ಅತ್ಯುತ್ತಮ ನಟ ಎಂದು ಹೆಳಲಾಯಿತ್ತು.ಇವರು ೧೯೭೧ ರಲ್ಲಿ ದ್ ಪಾನಿಕ್ ಇನ್ ನೀಡಲ್ ಪಾರ್ಕ್ ಚಲನ ಚಿತ್ರದಲ್ಲಿ ಹಿರೋಹಿನ್ ವ್ಯಸನಿ ಹಾಗಿ ನಟಿಸಿದರು.೧೯೭೩ರಲ್ಲಿ ಸ್ಕೇರ್ಕ್ರೊ ಚಲನಚಿತ್ರದಲ್ಲಿ ಜೀನ್ ಹಾಕ್ಮನ್ ಅವರ ಜೊತೆ ನಟಿಸಿದರು.೧೯೭೪ರಲ್ಲಿ ದ ಗಾಡ್ಫಾದರ್ ಪಾರ್ಟ್ ೨ ಚಲನಚಿತ್ರದಲ್ಲಿ ನಟಿಸಿದರು.೧೯೭೫ ರಲ್ಲಿ ಡಾಗ್ ಡೆ ಆಫ್ಟರ್ನೂನ್ ಬಿಡುಗಯಾದಾಗ ಇವರ ಮುಂದಿನ ಯಶಸ್ಸನ್ನು ಈ ಚಿತ್ರದ ಮೂಲಕ ಕಂಡರು.೧೯೭೭ರಲ್ಲಿ ಇವರು ಸಿಡ್ನಿ ಪೋಲಾಕ್ ನಿರ್ದೇಶನದ ಬಾಬಿ ಡೀರ್ಫೀಲ್ದ್ನಲ್ ಚಲನ್ನಚಿತ್ರದಲ್ಲಿ ರೇಸ್ ಕಾರ್ ಚಾಲಕರಾಗಿ ನಟಿಸಿದರು.೧೯೭೦ರಲ್ಲಿ ಉತ್ತಮ ನಟನಾಗಿ ಇವರು ನಾಲ್ಕು ಬಾರಿ ಆಸ್ಕರ್ ನಾಮನಿರ್ದೇಶನವಾಗಿತ್ತು.೧೯೮೩ರಲ್ಲಿ ಬ್ರಿಯಾನ್ ಡಿ ಪಾಲ್ಮಾ ಎಂಬ ನಿರ್ದೇಶಕರು ಸ್ಕಾರ್ಫೇಸ್ ಎಂಬ ಚಲನಚಿತ್ರ ಮಾಡಿದ್ದರು ಅದರಲ್ಲಿ ಪಸಿನೊರವರಿಗೆ ವೃತ್ತಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ಸಿಕ್ಕಿತು. ೨೦೦೦ರಲ್ಲಿ ಇವರು ಲೆವಿಸ್ 'ನಾಟಕದ ಚೀನೀ ಕಾಫಿ ಎಂಬ ಚಲನಚಿತ್ರವನ್ನು ಬಿಡುಗಡೆ ಮಾಡಿದರು. ಈ ಚಲನಚಿತ್ರ ಮುಗಿಯಲು ೩ ವರ್ಷಗಳಾಯಿತು. ಪಸಿನೊರವರ ಎರಡು ಅಪರೂಪದ ಚಿತ್ರಗಳಾದ 'ಲುಕ್ಕಿಂಗ್ ಫಾರ್ ರಿರ್ಚರ್ಡ್' ಹಾಗು 'ಸ್ಥಳಿಯ ಸ್ಟಿಗ್ ಮಾಟಿಕ್' ಜೊತೆ ಚೀನೀ ಕಾಫಿ ಎಂಬ ಚಲನಚಿತ್ರವು ಸೇರಿ ಕೊಂಡಿತ್ತು.೨೦೦೩ರಲ್ಲಿ 'ದ್ ರಿಕ್ರೂರ್ಟ್' ಎಂಬ ಚಲನಚಿತ್ರ ಬಿಡುಗಡೆಯಾಯಿತು. ಇವರು ಸ್ಟೀವನ್ ಸಾಡರ್ ಬರ್ಗ್ ಓಷಿಯನ್ಸ್ ಥರ್ಟೀನ್ ಚಲನಚಿತ್ರದಲ್ಲಿ ಅಣಕ ಪಾತ್ ರನಾಗಿ ನಟಿಸಿದರು. ೮೮ ನಿಮಿಶ ಎಂಬ ಚಲನಚಿತ್ರ ಏಪ್ರಿಲ್ ೧೮ ೨೦೦೮ ರಲ್ಲಿ ಬಿಡುಗಡೆ ಮಾಡಿದರು. ಇವರ 'ಯು ಡೊನೊ ಜ್ಯಾಕ್' ಚಲನಚಿತ್ರದಲ್ಲಿ ನಟಿಸಿದರು [೨]
ಪ್ರಶಸ್ತಿ ಹಾಗು ಸಾಧನೆಗಳು
[ಬದಲಾಯಿಸಿ]1992 ರಲ್ಲಿ ಪಸಿನೊ ರವರ ಅತ್ಯುತ್ತಮ ನಟನೆಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿತ್ತು. ೧೯೯೩ರಲ್ಲಿ ಸೆಂಟ್ ಆಫ್ ಎ ವುಮನ್ ಚಲನಚಿತ್ರದಲ್ಲಿ ಅತ್ಯುತ್ತಮ ನಟನೆಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿತ್ತು. ಡಾಗ್ ಡೇ ಆಫ್ಟರ್ನೂನ್ ಹಾಗು ಗಾಡ್ಫಾದರ್ ಪಾರ್ಟ್೨ ಚಲನಚಿತ್ರಕ್ಕೆ ಬಾಫ್ತ ಫಿಲ್ಮ್ ಪ್ರಶಸ್ತಿ ಸಿಕ್ಕಿದೆ. ಇವರಿಗೆ ೫ ಬಾರಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ, ಹಾಗು ೨ ಬಾರಿ ಎಮ್ಮಿ ಅವಾರ್ಡ್ಸ್ ಮತ್ತು ಟೋನಿ ಅವಾರ್ಡ್ಸ್ ಸಿಕ್ಕಿದೆ. ಇವರ ಡಿಕ್ಕಿ ಟ್ರಾಕ್ ಚಲನಚಿತ್ರಕ್ಕೆ ಅಮೆರಿಕನ್ ಕಾಮಿಡಿ ಪ್ರಶಸ್ತಿ ಹಾಗು ಇವರ ಡಾನಿ ಬ್ರಾಸ್ಕೊ ಚಿತ್ರಕ್ಕೆ ಬಾಸ್ಟನ್ ಅವಾರ್ಡ್ಸ್ ಸಿಕ್ಕಿದೆ, ಜಾಕ್ ಅಂಡ್ ಜಿಲ್ ಚಿತ್ರಕ್ಕೆ ಗೊಲ್ಡನ್ ರಾಸ್ ಬೆರಿ ಪ್ರಶಸ್ತಿ ಸಿಕ್ಕಿದೆ. [೩]
ವೈಯಕ್ತಿಕ ಜೀವನ
[ಬದಲಾಯಿಸಿ]ಇವರಿಗೆ ಮದುವೆ ಆಗಲ್ಲಿಲ್ಲ ಆದರೆ ೩ ಮಕ್ಕಳಿದ್ದರು. ಈ ಮಕ್ಕಳ ತಾಯಿ ನಟಿ ಬೆವರ್ಲಿ ದಂಜೆಲೋ. ಆಂತರಿಕ ಕಂದಾಯ ಸೇವೆ ಅವರು ೨೦೦೮-೨೦೦೯ರಲ್ಲಿ ಸರ್ಕಾರಕ್ಕೆ $ ೧೮೮,೦೦೦ ಒಟ್ಟು ನೀಡಬೇಕೆಂದು ಪಸಿನೊನ ವಿರುದ್ಧ ತೆರಿಗೆಯ ಭೋಗ್ಯದ ಹಕ್ಕಿನ ಪರುವಾಗಿ ಆರೋಪ ಮಾಡಿದಾರೆ.
ಉಲ್ಲೇಖಗಳು
[ಬದಲಾಯಿಸಿ]