ಸದಸ್ಯ:Nikitha Mavinkere/ನನ್ನ ಪ್ರಯೋಗಪುಟ/CC

ವಿಕಿಪೀಡಿಯ ಇಂದ
Jump to navigation Jump to search
ರೊಬೊ ಸರ್ಜರಿ

ರೋಬೊ ಸರ್ಜರಿ[ಬದಲಾಯಿಸಿ]

  • ದವಿಂಚಿ,ಅಮೂರ್ತ ಕಲ್ಪನೆಗಳನ್ನೆಲ್ಲ ಸಾಕಾರಕ್ಕಿಳಿಸುವ ಈ ಹೆಸರು ಅದ್ಭುತಕ್ಕೆ ಅನ್ವರ್ಥನಾಮ ಎನ್ನಬಹುದು.ಇದನ್ನು ಕೊನೆಯ ಹೆಸರನ್ನಾಗಿ ಹೊಂದಿದ್ದ ಇಟಲಿಯ ಕಲಾವಿದ ಲಿಯೊನಾರ್ಡೊ ಕಲಾಕೃತಿಗಳು ಈಗಲೂ ಅದ್ಭುತ ಕಲಾಕೃತಿಗಳಾಗಿ ಉನ್ನತ ಸ್ಥಾನದಲ್ಲಿ ನಿಂತಿವೆ.
  1. ಈ ರೊಬಾಟ್ ೨೫ ವರ್ಷಗಳ ಹಿಂದೆ ಅಮೆರಿಕಾದ ವೈದ್ಯಕೀಯ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿತ್ತು.ಭಾರತಕ್ಕೆ ಪ್ರವೇಶಿಸಿದ್ದು೧೪ ವರ್ಷಗಳ ಹಿಂದೆಯೇ ಆದರೂ ಜನಪ್ರಿಯವಾಗಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಅಷ್ಟೆ.
  2. ಮಾನಿಟರ್ ಮುಂದೆ ವೈದ್ಯ ಕೂತರೆ ಸಾಕು,ಆಪರೆಷನ್ ಟೇಬಲ್ ಮೇಲೆ ಮಲಗಿದ ರೋಗಿಯ ಮೇಲೆ ನಾಲ್ಕು ಕೈಗಳಲ್ಲಿ ಹಿಡಿದ ಉಪಕರಣಗಳಿಂದ ಚಕಚಕನೆ ಶಸ್ತ್ರಚಿಕಿತ್ಸೆ ನಡೆಸಿ ಹೊಲಿಗೆ ಹಾಕಿ ಮುಗಿಸುವ ಈ'ರೋಬಾಟ್ ವೈದ್ಯ' ವೈದ್ಯ ಲೋಕದ ಅಚ್ಚರಿ ಮಾತ್ರವಲ್ಲಿ,ವರದಾನ ಕೂಡ.

'ದ ವಿಂಚಿ ಕೋಡ್'[ಬದಲಾಯಿಸಿ]

ದ ವಿಂಚಿ ಕೋಡ್[೧] ಹೆಸರಿನ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರನವಾಗಿ ಸಂಚಲನ ಮೂಡಿಸಿತ್ತು.ಈತ ದ ವಿಂಚಿ ಹೆಸರಿನ ರೊಬಾಟ್ ವೈದ್ಯಕೀಯ ಲೋಕದಲ್ಲಿ ತನ್ನ ಕೈಚಳಕ ತೋರಿಸುತ್ತಿದೆ.ವೈದ್ಯರ ಕೈಬೆರಳುಗಳು ತಲುಪದ ಮಾನವನ ಅಂಗಾಂಗಗಳ ಕೊನೆಯ ಪಾಯಿಂಟ್ಗೆ ಹೋಗಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದೆ ಈ ರೊಬಾಟ್. ಈ ಮೂಲಕ ಮಾನವನ ಬುದ್ಧಿಮತ್ತೆಗೆ ಈ ಕೃತಕ ಬುದ್ಧಿಮತ್ತೆ ಸೆಡ್ಡು ಹೋಡೆಯುತ್ತಿದೆಯೋ ಅಥವಾ ಮನುಷ್ಯ ತನ್ನ ಅಸಾಧಾರಣ ಬೌದ್ಧಿಶಕ್ತಿಯನ್ನು ಈ ಯಂತ್ರಮಾನವನ ಮೂಲಕ ಹರಿಯಬಿಡುತ್ತಿದ್ದಾನೋ ಎಂಬ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ತೆರೆದ ಶಸ್ತ್ರ ಚಿಕಿತ್ಸೆ,ಕೀ ಹೋಲ್ಶ[ಬದಲಾಯಿಸಿ]

ಸ್ತ್ರಚಿಕಿತ್ಸೆ ಎಂದರೆ ಎಂತಹ ಗಟ್ಟೆ ಮನಸ್ಸಿನವರಾದರು ಒಳಗೊಳಗೆ ಅಳಕುವುದು ಸಹಜ.ಚಿಕಿತ್ಸೆ ಸಂರ್ಧಭದಲ್ಲಾಗುವ ರಕ್ತಸ್ರಾವ,ನಂತರ ಆಗುವ ನೋವು,ಗಾಯದಲ್ಲಿ ಉಂಟಾಗಬಹುದಾದ ಸೋಂಕು,ದೀರ್ಘಕಾಲದ ಆಸ್ಪತ್ರೆವಾಸ ,ನಂತರ ಉಪಚಾರ ,ಗಾಯದ ಕಲೆಯಿಂದಾಗುವ ಮಾನಸಿಕ ಕಿರಿಕಿರಿ....ಕಾಯಿಲೆ ಜೊತೆಗಾದರೂ ಒಂದಿಷ್ಟು ಬದುಕಬಹುದು,ದೇಹವನ್ನು ಕೊರೆಯುತ್ತಾರಲ್ಲ, ಮುಂದೆ ಹೇಗೊ ಏನೊ ಎಂಬ ಆತಂಕ ಮೂಡುವುದು ಸಾಮಾನ್ಯ.

ಉಲ್ಲೇಖಗಳು[ಬದಲಾಯಿಸಿ]

[೨]

  1. https://en.wikipedia.org/wiki/The_Da_Vinci_Code_(film)
  2. https://medlineplus.gov/ency/article/007339.htm