ಸದಸ್ಯ:Nikitha Mavinkere

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಖಿತ

ಕುಟುಂಬ[ಬದಲಾಯಿಸಿ]

ನನ್ನ ಹೆಸರು ನಿಖಿತ ಮಾವಿನಕೆರೆ .ನಾನು ಪ್ರಥಮ ಬಿಎಸ್ಸಿ(ಪಿ.ಎಂ.ಇ) ವಿದ್ಯಾರ್ಥಿನಿ ಆಗಿದ್ದೇನೆ , ಹಾಗು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವೆನು .ನನ್ನ ವಯಸ್ಸು ಹದಿನೇಳು ವರುಷ .ನಾನು ಏಳನೆ ಫ಼ೆಬ್ರವರಿ ಸಾವಿರದ ಒಂಬೈನೂರ ತೊಂಬತ್ ಎಂಟರಲ್ಲಿ ಬೆಂಗಳೂರಿನಲ್ಲಿ ಜನಿಸಿದೆನು.ಆದರು ನಾನು ಬೆಳೆದಿದ್ದು ದಾವಣಗೆರೆಯಲ್ಲಿ .ನನ್ನ ತಂದೆ ಮಧುಕರ್.ಎಂ.ಆರ್ ,ಅವರು ಬಿಕಾಂ ಪದವೀದರರು ಆಗಿದ್ದು ತಮ್ಮ ತಂದೆಯವರಾದ ರಾಜಶೇಕರಪ್ಪರವರ ಕಸುಬನ್ನು ಮುಂದುವರಿಸುತ್ತಿರುವರು .ನನ್ನ ತಾಯಿಯ ಹೆಸರು ನೇತ್ರಾವತಿ ,ಅವರು ಚಳ್ಳಕೆರೆಯವರು .ನನಗೆ ಇಬ್ಬರು ಅಣ್ಣಂದಿರು .ಒಬ್ಬರು ದಾವಣಗೆರೆಯ ಬಾಪೂಜಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವರು .ಮತ್ತೊಬ್ಬ ನನ್ನ ಅವಳಿ ಆಗಿದ್ದಾನೆ ,ಅವನ ಹೆಸರು ನವೀನ್ ಮಾವಿನಕೆರೆ.ಮತ್ತೊಬ್ಬರ ಹೆಸರು ನಿತಿನ್ ಮಾವಿನಕೆರೆ .ನಾನು ಮತ್ತು ನನ್ನ ಅವಳಿಯಾದ ನವೀನನು ಹತ್ತನೇ ತರಗತಿಯವರೆಗು ಒಂದೇ ತರಗತಿಯಲ್ಲಿ ಇದ್ದೆವು .ನಾನು ಮತ್ತು ನನ್ನ ಅಣ್ಣಂದಿರು ಹನ್ನೆರೆಡೆನೆ ತರಗತಿಯವರೆಗು ದಾವಣಗೆರೆಯ ಶ್ರೀ ತರಳಬಾಳು ಜಗದ್ಗುರು ಎಂಬ ಶಾಲೆಯಲ್ಲಿ ವ್ಯಾಸಂಗ ಮಾಡಿದೆವು.ನನ್ನ ಅಜ್ಜಿಯವರಾದ ಸುನಂದಾದೇವಿಯವರು ಹಿಂದಿಯ ಹಲವಾರು ಪರೀಕ್ಷೆಗಳನ್ನು ಪೂರೈಸಿದ್ದಾರೆ .ನನ್ನ ಬಾಲ್ಯದಲ್ಲಿ ಹಲವಾರು ಕಥೆಗಳನ್ನು ಹೇಳುತ್ತಿದ್ದರು .ನನಗೆ ಅನೇಕ ಬಾಲ್ಯಸ್ನೇಹಿತರ ಪರಿಚಯ ಈಗಲು ಕೂಡಾ ಇದೆ .

ಹವ್ಯಾಸ[ಬದಲಾಯಿಸಿ]

ನಾನು ವಿದೂಷಿ ಪೂರ್ಣಿಮ ಭಾಗವತರವರ ಬಳಿ ಭರತನಾಟ್ಯವನ್ನು ,ಹಾಗು ರಾಜ್ಗೋಪಾಲ್ ಭಾಗವತರವರ ಬಳಿ ಸಂಗೀತವನು ಕಲಿತಿರುವೆನು .ಹಾಗು ಅದರ ಪರೀಕ್ಷೆಗಳಲ್ಲು ಕೂಡ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣಳಾಗಿರುವೆನು ಭರತನಾಟ್ಯ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿನಿ ಆಗಿದ್ದೆನು .ಆದ್ದರಿಂದ ನನ್ನ ಅಪ್ಪ ಅಮ್ಮ ಹಾಗು ನನನ್ನು ಸನ್ಮಾನಿಸಿದರು . ನನ್ನ ನೆಚ್ಚಿನ ಆಟವೆಂದರೆ ಬಾಸ್ಕೆಟ್ ಬಾಲ್ .ಅನೇಕ ರಾಷ್ಟ್ರಮಟ್ಟದ ಹಾಗು ಜಿಲ್ಲಾ ಮಟ್ಟದ ಪಂದ್ಯಾವಳಿಗಳನ್ನು ಆಡಿ ಪದಕಗಳನ್ನು ಗೆದ್ದಿರುವೆನು .ನಮ್ಮ ಶಾಲೆಯಲ್ಲಿ ನಡೆದ ಪಂದ್ಯಾವಳಿಗಳಲ್ಲು ಸಹ ಭಾಗವಹಿಸಿರುವೆನು .ಹಾಗು ಹಲವಾರು ಕ್ರೀಡೆಗಳಲ್ಲಿಯು ಸಹ ಭಾಗವಹಿಸಿರುವೆನು .ಶಾಲೆಯು ರಜಾ ಇರುವ ಸಮಯದಲ್ಲಿ ಮನೆಯಲ್ಲಿ ಅಮ್ಮನಿಗೆ ಅಡುಗೆ ಮಾಡಲು, ಮನೆ ಸ್ವಚ್ಚ ಮಾಡಲು ನೆರವಾಗುತ್ತಿದ್ದೆನು .ಅಪ್ಪನಿಗು ಸಹ ವಾಹನ ಸ್ವಚ್ಚ ಮಾಡಲು ಹೀಗೆ ಹಲವರು ರೀತಿ ಸಹಾಯಮಾಡುತ್ತಿದ್ದೆನು . ಶಾಲೆಯಲ್ಲಿ ಇರುವಾಗ ಎನ್.ಸಿ.ಸಿ ಯಲ್ಲಿ ಇದ್ದೆನು .ರಿಪಬ್ಲಿಕ್ ಡೇ ಕಾಂಪ್(ಆರ್ ಡಿ ಸಿ)ಗಾಗಿ ಪ್ರತೀದಿನ ಶಾಲೆ ಮುಗಿದ ಬಳಿಕ ಕಠಿಣ ಅಭ್ಯಾಸವನ್ನು ಮಾಡುತ್ತಿದ್ದೆವು ,ಹಾಗು ಅನೇಕ ಕ್ಯಾಂಪ್ಗಳಲ್ಲು ಕೂಡ ಭಾಗವಹಿಸಿರುವೆನು .ಪ್ರತಿ ವಾರವು ಕೂಡ ಪರೇಡ್ ಗಳಿರುತ್ತಿದ್ದವು .ಎನ್.ಸಿ.ಸಿ ಯಲ್ಲಿ 'ಎ' ಪ್ರಮಾಣಪತ್ರವನ್ನು ಶೇಖಡ ಅಂಕಗಳಿಂದ ಉತ್ತೀರ್ಣಳಾಗಿರುವೆನು . ಎನ್.ಸಿ.ಸಿ ಗೆ ಸೇರುವ ಮೊದಲು ಗೈಡ್ಸ್ ಎಂಬುದರಲ್ಲಿಯು ಇದ್ದೆನು .ಅದರಲ್ಲಿಯು ಕೂಡ ಹಲವಾರು ಪರೀಕ್ಷೆಗಳನ್ನು ಮುಗಿಸಿಕೊಂಡಿರುವೆನು .ಹಾಗು ಹೊನ್ನಾವರ ,ಕೊಂಡಜ್ಜಿ ,ಹೀಗೆ ಹಲವಾರು ಕಡೆಗಳಲ್ಲಿ ಕಾಂಪ್ಗಳಲ್ಲಿ ಭಾಗವಹಿಸಿರುವೆನು .ಸೈಕ್ಲಿಂಗ್ ,ಈಜುವುದು ,ಅಡುಗೆಮಾದುವುದು ಇವುಗಳನ್ನು ಮಾಡಿರುವೆವು .ಆಪತ್ತು ಬಂದಾಗ ಜನರಿಗೆ ಸಹಾಯ ಮಾಡುವುದು, ಪ್ರಥಮ ಚಿಕಿತ್ಸೆ ಮಾದುವುದು ಇವುಗಳಮನ್ನು ಸಹ ಹೇಳಿ ಕೊಟ್ಟಿರುವರು .

ಗುರಿ[ಬದಲಾಯಿಸಿ]

ನನಗೆ ಈ ದೇಶದ ಒಳ್ಳೆಯ ಪ್ರಜೆಯಾಗ ಬೇಕೆಂಬುದು ನನ್ನ ಆಸೆ ,ಹಾಗು ದೇಶಕ್ಕೆ ಏನಾದರು ಸಹಾಯ ಮಾಡಬೇಕೆಂಬುದು ಕೂಡ ಮತ್ತೊಂದು ಆಸೆ .ಎಲ್ಲದುಕ್ಕಿಂತ ಮುಖ್ಯವಾದುದು ನನ್ನ ಗುರಿಯನ್ನು ಸಾಧಿಸುವುದು .ನಮ್ಮ ಗುರಿಯ ಕಡೆಗೆ ಗಮನವಿದ್ದರೆ ಅದನ್ನು ಸಾಧಿಸುವುದು ಸುಲುಭವಾಗುವುದು .ಗುರಿಯನ್ನು ಸಾಧಿಸಲು ಏಕಾಗ್ರತೆ ಬಹು ಮುಖ್ಯವಾದುದು . ಮುಖ್ಯವಾದ ಹಂತಗಳಾದ ಹತ್ತನೆ ಹಾಗು ಹನ್ನೇರಡೆನೆ ತರಗತಿಗಳಲ್ಲಿಯು ಒಳ್ಳೆಯ ಅಂಕಗಳನ್ನು ಪಡೆದು ಕೊಂಡಿರುವೆನು.ಹತ್ತನೆ ತರಗತಿಯಲ್ಲಿ ನಾನು ಶೇಖಡ ೮೯% ನಷ್ಟು ಅಂಕ ಪಡಿದು ಉತ್ತೀರ್ಣಳಾಗಿರುವೆನು .ಹೆಚ್ಚು ಅಂಕ ಪಡಿದಿರುವ ಸಲುವಾಗಿ ದಾವಣಗೆರೆಯ ಮುರುಘಾ ಮಠದಲ್ಲಿ ಹಾಗು ಗಾಣಿಗ ಸಮಾಜದಿಂದ ಸನ್ಮಾನ ಮಾಡಲಾಗಿತ್ತು .ಹನ್ನೇರಡೆನೆ ತರಗತಿಯಲ್ಲಿ ೮೩% ಅಂಕಗಳನ್ನು ವಿಜ್ನಾನ ವಿಭಾಗದಲ್ಲಿಪಡೆದುಕೊಂಡಿದ್ದೆನು.

ನನ್ನ ಆಸಕ್ತಿ[ಬದಲಾಯಿಸಿ]

ನನಗೆ ಗಣಿತದಲ್ಲಿ ಆಸಕ್ತಿ ಹೆಚ್ಚು ,ಮುಂದೆ ವ್ಯಾಸಂಗ ಪೂರ್ಣ್ಗೊಂಡ ಬಳಿಕ ಒಳ್ಳೆಯ ಕಂಪನಿಯಲ್ಲಿ ಕೆಲ ಕಾಲ ಕೆಲಸ ಮಾಡಿ ,ಅನುಭವ ಆದ ಬಳಿಕ ಹೊಸ ಕಂಪನಿಯನ್ನು ಪ್ರಾರಂಭಿಸುವುದು ನನ್ನ ಗುರಿಯಾಗಿದೆ .ಸುಧಾ ಮೂರ್ಥಿಯವರಂತಹ ಯಶಸ್ವಿ ಮಹಿಳೆಯಾಗ ಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ.ಅದರಂತೆಯೆ ನನಗು ಸಹ ಜೀವನದಲ್ಲಿ ಯಶಸ್ವಿ ಆಗಬೇಕೆಂಬ ಆಸೆ ಇದೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]