ಸದಸ್ಯ:Niharika P Kaushik/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಸಂಧಿಪದಿಗಳು (ಫೈಲo ಆರ್ಥೋಪೊಡಾ)[ಬದಲಾಯಿಸಿ]

ಸಂಧಿಪದಿಗಳು, ಅಕಶೇರುಕಗಳಿಗೆ ಸೇರಿದ ವಂಶಗಳಲ್ಲಿ ಒಂದಾಗಿದೆ. ಸಂಧಿಪದಿಗಳ ವಂಶವು ಪ್ರಾಣಿಗಳ ಗುಂಪುಗಳಲ್ಲಿಯೇ ಅತ್ಯಂತ ದೊಡ್ಡದಾದ ವಂಶವಾಗಿದೆ. ಈ ವಂಶದ ಪ್ರಾಣಿಗಳೆಲ್ಲಾ ಕೀಲುಕಾಲುಗಳನ್ನು ಒಳಗೊಂಡ ಚಲನಾಂಗವಿರುವುದರಿಂದ ಇವುಗಳನ್ನು ಸಂಧಿಪದಿಗಳು ಅಥವಾ ಆರ್ಥೋಪಾಡ್ಸ್ ಎಂದು ಕರೆಯಲಾಗುತ್ತದೆ.ಸಂಧಿಪದಿಗಳು ಎಲ್ಲಾ ಬಗೆಯ ವಾತಾವರಣಗಳಿಗೆ ಹಾಗು ಪರಿಸರಗಳಿಗೆ ಹೊಂದಿಕೊಂಡು ವಾಸಿಸುತ್ತವೆ. ಇದು ಇವುಗಳ ವಿಶಿಷ್ಟ ಲಕ್ಷಣ. ಇವು ಮುಪ್ಪದರದ ಪ್ರಾಣಿಗಳು. thumb|ಚಿಟ್ಟೆ

ಅಂಗರಚನಾಶಾಸ್ತ್ರ[ಬದಲಾಯಿಸಿ]

ಚಿಲಿಜಾ ಫ್ಲೈ

ಈ ಪ್ರಾಣಿಗಳ ದೇಹವು ನೀಳವಾಗಿ ಅಥವಾ ಖಂಡಮಯವಾಗಿರುತ್ತದೆ. ಪ್ರತಿಯೊಂದು ಖಂಡವೂ ಒಂದೊಂದು ಜೊತೆ ಉಪಾಂಗಗಳನ್ನು ಹೊಂದಿದೆ. ಇವುಗಳಲ್ಲಿ ಹಲವು ಕೀಲು ಅಥವಾ ಸಂಧಿಗಳನ್ನು ಹೊಂದಿವೆ.ಈ ಉಪಾಂಗಗಳು ದವಡೆ,ಕುಡಿಮೀಸೆ ಮತ್ತು ಕಾಲುಗಳಾಗಿ ಮಾರ್ಪಟ್ಟಿದೆ.ಇದರ ಇಡೀ ದೇಹವು ಕೈಟಿನ್ ಎಂಬ ವಸ್ತುವಿನಿಂದ ಕೂಡಿದೆ.ಒಂದು ಕವಚದ ರೀತಿಯಲ್ಲಿ ದೇಹಕ್ಕೆ ರಕ್ಷಣೆಯನ್ನು ಮತ್ತು ನಿರ್ದಿಷ್ಟ ಆಕಾರವನ್ನು ನೀಡುತ್ತದೆ. ಇದರಿಂದಾಗಿ ಈ ಕವಚವು ಅಗಾಗ ಕಳಚಿ ಬಿದ್ದು ಆ ಜಾಗದಲ್ಲಿ ಹೊಸ ಪೊರೆಯು ರೂಪುಗೊಳ್ಳುತ್ತದೆ. ಈ ಕ್ರಿಯೆಯನ್ನು ವಿಜ್ಞಾನಿಕವಾಗಿ ಎಕ್ಡೈಸಿಸ್ ಅಥವಾ ಪೊರೆ ಬಿಡುವುದೆಂದು ಕರೆಯುತ್ತಾರೆ. ಇದರ ದೇಹವನ್ನು ಸಾಮಾನ್ಯವಾಗಿ ತಲೆ, ಎದೆ ಮತ್ತು ಉದರವೆಂದು ಮುರು ಭಾಗಗಳಾಗಿ ವಿಂಗಡಿಸಬಹುದು.ದೇಹಾಂತರಾಕಾಶವು (ಸಿಲೋಮ್ ಅಥವಾ ಕ್ಯಾವಿಟಿ) ಬಹಳ ವಿಸ್ತಾರವಾಗಿ ಬೆಳೆದಿರುವುದಿಲ್ಲ. ಆದರೆ ಈ ದೇಹಾಂತರಾಕಾಶದಲ್ಲಿ ರಕ್ತ ತುಂಬಿರುವುದರಿಂದ ಇದಕ್ಕೆ ಹೀಮೊಸೀಲ್ ಎಂದು ಹೆಸರಿಡಲಾಗಿದೆ.ಈ ಜೀವಿಗಳಲ್ಲಿ ಕಂಡುಬರುವ ರಕ್ತವು ಬಣ್ಣರಹಿತವಾಗಿರುತ್ತದೆ.

ಬಂಬು ಫ್ಲೈ

ಶರೀರಶಾಸ್ತ್ರ[ಬದಲಾಯಿಸಿ]

ಜೀರ್ಣಾಂಗವ್ಯೂಹವು ಪೂರ್ಣವಾಗಿದ್ದು ಬಾಯಿಯ ಒಳಗಿರುವ ಉಪಾಂಗಗಳು ಮಾರ್ಪಟ್ಟು ಆಹಾರವನ್ನು ಅಗಿಯಲು ಮತ್ತು ಹೀರಲು ಸಾಹಯ ಮಾಡುತ್ತದೆ. ಗಂಟಲು, ಅನ್ನನಾಳ, ಕ್ರಾಪ್, ಗಿಜರ್ಡ್ ಹಾಗು ಕರಳು ಆಹಾರ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.ಉಸಿರಾಟ ಕ್ರಿಯಯು ಶರೀರದ ಮೇಲಿರುವ ಪದರದ ಮೂಲಕ,ಕಿವಿರುಗಳ ಮೂಲಕ ಅಥವಾ ಪುಪ್ಪುಸ ಪುಸ್ತಿಕೆಗಳ ಮೂಲಕ ನಡೆಯುತ್ತದೆ.ಈ ಪ್ರಾಣಿಗಳಲ್ಲಿ ರಕ್ತ ಪರಿಚಾಲನ ಕ್ರಮ ತೆರೆದ ರೀತಿಯಾಗಿರುವುದರಿಂದ ಊರ್ಧ್ವ್ ಭಾಗದಲ್ಲಿ ಕೊಳವೆಯ ಆಕಾರದಲ್ಲಿರುವ ಹೃದಯ ಮತ್ತು ರಕ್ತ ತುಂಬಿದ ಆವಕಾಶಗಳು ಕಂಡುಬರುತ್ತದೆ.ನರ ಮಂಡಲವು ಬಹುತೇಕ ವಲಯವಂತಗಳ ನರಮಂಡಲವನ್ನು ಹೊಲುತ್ತದೆ.ಇದರಲ್ಲಿ ನರ ಉಂಗುರ, ನರಹುರಿಗಳು ಮತ್ತು ನರಮುಡಿಗಳು ಒಳಗೊಂಡಿದೆ. ಜ್ಞಾನೇಂದ್ರಿಯಗಳು ಹಲವು ಬಗೆಗಳಾಗಿದ್ದು ದೃಷ್ಟಿಗೆ ಮೀಸಲಾರದ ಕಣ್ಣುಗಳು, ರುಚಿನೋಡಲು ರಸನೇಂದ್ರಿಯಗಳು, ಕುಡಿ ಮೀಸೆಗಳಂತಹ ಸ್ವರ್ಶಾಂಗಗಳು, ಸಮತೊಲನಾಂಗಗಳು ಮತ್ತು ಶ್ರವಣೇಂದ್ರಿಯಗಳು ಕಂಡುಬರುತ್ತದೆ.ವಿಸರ್ಜನ ಕ್ರಿಯೆಯು ಅನ್ನನಾಳಕ್ಕೆ ತೆರೆದುಕೊಳ್ಳುವ ಮಾಲ್ಫೀಘಿಯನ್ ಎಂಬ ನಳಕೆಯ ಮೂಲಕ ಅಥವಾ ಹಸಿರು ಗ್ರಂಥಿಗಳ ಮೂಲಕ ನಡೆಯುತ್ತದೆ.


ವಂಶದ ಪ್ರಾಣಿಗಳು ಸಾಮಾನ್ಯವಾಗಿ ಏಕಲಿಂಗಗಳಾಗಿರುತ್ತವೆ.

[೧]

[೨]

[೩]

  1. https://en.wikipedia.org/wiki/Arthropod
  2. http://www.ucmp.berkeley.edu/arthropoda/arthropoda.html
  3. http://www.studysite.org/dictionary/Kannada-meaning-of-arthropod