ಸದಸ್ಯ:Nihal sagar gowda
ನನ್ನ ಜೀವನ್ನ
[ಬದಲಾಯಿಸಿ]ನಮಸ್ಕಾರ:
ನನ್ನ ಪರಿವಾರದ ವಿಶಯ :
ನನ್ನ ಹೆಸರು ನಿಹಾಲ್ ಸಾಗರ್ ಗೌಡ, ನನ್ನ ವಯಸ್ಸು 18,ನಾನು ಕ್ರೈಸ್ಟ್ ಡೀಮ್ಡ್ ಟೂ ಬಿ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ನನ್ನ ತಂದೆಯ ಹೆಸರು ಶ್ರೀ ನಿಂಗರಾಜು.ಕೆ,ನನ್ನ ತಂದೆಯವರು ಒಬ್ಬ ಉದ್ಯಮಿ. ನನ್ನ ತಂದೆಯವರು ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೋಕಿನ ಸಂತೇಮೊಗೇನಹಳ್ಳಿ ದೊಡ್ಡಿ ಎಂಬ ಗ್ರಾಮದವರು. ನನ್ನ ತಂದೆಯವರ ತಂದೆ ಅಂದರೆ ನನ್ನ ಅಜ್ಜರವರು ಶ್ರೀ ಕೆಂಪೇಗೌಡರು (ಕೃಷಿಕರು),ನನ್ನ ಅಜ್ಜರವರ ಕುಲ ಕಸುಬು ವ್ಯವಸಾಯ, ನನ್ನ ಅಜ್ಜ ತುಂಬಾ ಕಠಿಣ ಪರಿಶ್ರಮಿ, ಇವರು ಹೊಲದಲ್ಲಿ ರಾಗಿ,ಭತ್ತ, ಹುರುಳಿ, ಜೋಳ ಬೆಳೆಯುತ್ತಾರೆ.ನನ್ನ ತಂದೆಯವರಿಗೆ ಒಬ್ಬರು ಅಕ್ಕ ಇದ್ದಾರೆ. ಅವರು ಕೂಡ ಬೆಂಗಳೂರು ನಗರದಲ್ಲಿ ವಾಸವಾಗಿರುತ್ತಾರೆ.ಇದು ನನ್ನ ತಂದೆಯವರ ಪರಿಚಯ.
ನನ್ನ ತಾಯಿಯ ಹೆಸರು ಶ್ರೀಮತಿ ಲತಾ ರವರು, ನನ್ನ ತಾಯಿ ಗೃಹಿಣಿ, ನನ್ನ ತಾಯಿ ತುಂಬಾ ಮುಗ್ದಸ್ವಾಭಾವದವರು,ನನ್ನ ತಾಯಿಯ ತಂದೆಯ ಹೆಸರು ಶ್ರೀ ರಾಮೇ ಗೌಡ, ತಾಯಿಯ ಹೆಸರು ಶ್ರೀಮತಿ ದೊಡ್ಡತಾಯಮ್ಮ.ನನ್ನ ತಾಯಿಗೆ ಇಬ್ಬರು ಅಕ್ಕಂದಿರು, ಮೂವರು ಅಣ್ಣಂದಿರು ಇರುತ್ತಾರೆ.
ನನಗೆ ಒಬ್ಬ ತಮ್ಮ ನಿದ್ದಾನೆ ಅವನ ಹೆಸರು ಅನಿಷ್ ಸಾಗರ್ ಗೌಡ. ನನ್ನ ತಮ್ಮ ಕೃಪಾನಿಧಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.ಇವನು ತುಂಬಾ ಬುದ್ಧಿವಂತ.ಇದು ನನ್ನ ಕುಟುಂಬದ ಪರಿಚಯ./
ನಾನು ಕ್ರೈಸ್ಟ್ ಡೀಮ್ಡ್ ಟೂ ಬಿ ಯುನಿವರ್ಸಿಟಿಯಲ್ಲಿ ಬಿಬಿಎ ವಿಷಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುತ್ತಿದ್ದೆನೆ.
ಅಸಕ್ಥಿ:
ನನ್ನ ಹವ್ಯಾಸಗಳು ಕ್ರಿಕೆಟ್ ಆಡುವುದು, ಕಬ್ಬಡಿ ಆಡುವುದು, ಫುಟ್ ಬಾಲ್, ವಾಲಿಬಾಲ್, ಥ್ರೋಬಾಲ್ ಆಡುವುದು, ಪುಸ್ತಕಗಳನ್ನು ಓದುವುದು, ನಾನು ಶಾಲಾ ದಿನದಲ್ಲಿ ತುಂಬಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿದ್ದೀನೆ.ಹಾಗೂ ಇವುಗಳ ಜೊತೆಗೆ ಕೆಲವು ತಿಂಗಳುಗಳಿಂದ ಬಾಕ್ಸಿಂಗ್ ಕಲಿಕೆಯಲ್ಲಿ ತೊಡಗಿದ್ದೇನೆ.
ಶಲೆಯ ವಿಶಯ :
ನಾನು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್.ಸಿ.ಸಿ ಯಲ್ಲಿ ಸೇರಿಕೊಂಡು ಉತ್ತಮವಾಗಿ ಅಭ್ಯಾಸ ಮಾಡಿ, ಹಲವಾರು ಪ್ರಶಸ್ತಿಗಳು ಮತ್ತು ಬಿರುದುಗಳನ್ನು ಪಡೆದು ಕೊಂಡಿದ್ದೇನೆ.ನಾನು ಶಾಲೆಯಲ್ಲಿ ಅಭ್ಯಾಸ ಮಾಡುವಾಗ ಕ್ರೈಸ್ಟ್ ಶಾಲಾ ಸಂಸ್ಥೆಯಿಂದ ಗಣರಾಜ್ಯೋತ್ಸವದ ಕ್ಯಾಂಪಿಗೆ ಮೊದಲನೆ ಕ್ಯಾಡೆಟ್ ವಿದ್ಯಾರ್ಥಿಯಾಗಿ ಆಕ್ಕೆಯಾಗಿದ್ದೆ.ಇದು ನನಗೆ ತುಂಬಾ ಹೆಮ್ಮೆಯ ವಿಷಯ. ಇವುಗಳು ನನ್ನ ಶಾಲಾದಿನದ ಸುಂದರ ಕ್ಷಣಗಳು.
ನಾನು ಜೀವನದಲ್ಲಿ ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂದು ತೀರ್ಮಾನಿಸಿದ್ದೇನೆ .ನನ್ನ ಮುಂದಿನ ಗುರಿ ಐ.ಎ.ಎಸ್ ಮಾಡುವುದು. ನನ್ನ ಈ ಆಸೆಗಳಿಗೆಲ್ಲಾ ನನ್ನ ಕುಟುಂಬದ ಕಡೆಯಿಂದ ಉತ್ತಮವಾದ ಪ್ರೋತ್ಸಾಹಸಿಗುತ್ತಿದೆ.
ನಮ್ಮಲ್ಲಿ ಅನೇಕರು ಇಲ್ಲದಿದ್ದುದಕ್ಕಾಗಿ ಕೊರಗುತ್ತಾ ಇದ್ದುದನ್ನು ಗೌರವಿಸದೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಜೀವನದ ಗೊತ್ತು ಗುರಿಗಳರಿಯದೆ ಕೇವಲ ಸುಖವೆಂಬ ಮರೀಚಿಕೆಯನ್ನು ಅರಸುತ್ತಾ ಅಲೆದಾಡುತ್ತಿರುತ್ತೇವೆ.
ಕನ್ನಡಿ ಮಲೀನವಾಗಿದ್ದರೆ ರೂಪ ಹೇಗೆ ಕಾಣುವುದಿಲ್ಲವೋ ಹಾಗೂ ನೀರು ತಿಳಿಯಾಗಿಲ್ಲದಿದ್ದರೆ ತಳ ಕಾಣುವುದಿಲ್ಲವೋ ಹಾಗೆಯೇ ಮನಸ್ಸು ಮಲೀನವಾಗಿದ್ದರೆ ಜ್ಞಾನ ಪ್ರಾಪ್ತಿಯಾಗದು.
ಬೇಡದ ವಿಚಾರಗಳು ಮನಸ್ಸಿನಲ್ಲಿ ತುಂಬಿದಾಗ ಶುದ್ದ ಜ್ಞಾನದ ಪ್ರಕಟಿಕರಣ ಅಸಾಧ್ಯ.
ಇಂದ್ರಿಯ, ಶರೀರ ಹಾಗೂ ಮನಸ್ಸುಗಳಲ್ಲಿ ಪರಿಶುದ್ದತೆ ಇರಬೇಕು. ಪತ್ರಿಕೆ,ಟಿವಿ ಮಾಧ್ಯಮಗಳ ಮೂಲಕ ನಿತ್ಯ ಅನವಶ್ಯಕ ಬಾಹ್ಯ ವಿಚಾರಗಳತ್ತ ಮನಸ್ಸು ಹರಿಯತೊಡಗಿದ್ದರೆ ,ಆಂತರಿಕ ಪರಿಶುದ್ದಿಗೆ ಅವಕಾಶವೆಲ್ಲಿ?.
ಯಾವುದೇ ವ್ಯಕ್ತಿ, ವಿಷಯಗಳ ಕುರಿತು ಮನಸ್ಸಿನಲ್ಲಿ ಉಂಟಾಗುವ ಅತಿಯಾದ ಪ್ರೀತಿ, ಬೇಕು ಬೇಕೆಂಬ ಭಾವ,ಪ್ರಬಲವಾದ ದ್ವೇಷಗಳು ಮುಂದಿನ ಜನ್ಮದಲ್ಲಿ ಇವುಗಳ ಫಲವುಣ್ಣಲೂ ಕಾರಣವಾಗುತ್ತಿದೆ. ಆದ್ದರಿಂದ ನಿರ್ಲಿಪ್ತವಾಗಿ ಕರ್ಮ ಮಾಡುವುದು ಕೇವಲ ಭಗವಂತನನ್ನು ಮೆಚ್ಚಿಸಲು ಮಾಡುವ ಕಾರ್ಯಗಳು ಜನ್ಮ, ಮರಣಗಳೆಂಬ ಬಂಧನದಿಂದ ಮುಕ್ತಿ ದೊರಕಿಸಬಲ್ಲವು. ಇದೇ ರೀತಿ ಪ್ರತಿಯೊಬ್ಬ ಜೀವಿಯು ಬದುಕಿನ ಪರಮ ಉದ್ದೇಶವಾಗಿದೆ......