ಸದಸ್ಯ:Nayanaj61

ವಿಕಿಪೀಡಿಯ ಇಂದ
Jump to navigation Jump to search


ನನ್ನ ಬಗ್ಗೆ[ಬದಲಾಯಿಸಿ]

ನನ್ನ ಹೆಸರು ನಯನ.ಬೆಂಗಳೂರಿನ ಆನೇಕಲ್ ತಾಲ್ಲೂಕು ನನ್ನ ಊರು.ನನ್ನ ತಂದೆ ಜಗನ್ನಾಥ್,ತಾಯಿ ಸಂಧ್ಯಾ,ಅಕ್ಕ ಮೇಘನ ನನಗಿಂತ ಐದು ವರ್ಷ ದೊಡ್ಡವಳು.ಮನೆಯಲ್ಲಿ ನಾನೇ ಚಿಕ್ಕವಳು.ನನ್ನ ತಂದೆ ತಾಯಿ ಇಬ್ಬರ ಕಡೆಯೂ ಬಳಗ ಹೆಚ್ಛು,ಹೀಗಾಗಿ ಯಾವಾಗಲೂ ಜನರ ಜೊತೆ ಬೆರೆಯುವುದು ನನಗಿಷ್ಟ.

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ಮತ್ತು ನನ್ನ ಅಕ್ಕ ಇಬ್ಬರೂ ಓದಿದ್ದು ಆನೇಕಲ್ ಪಬ್ಲಿಕ್ ಶಾಲೆಯಲ್ಲಿ .ಆಕೆ ೧೦ನೇ ತರಗತಿಯಲ್ಲಿ ಅತೀ ಹೆಚ್ಛು ಅಂಕಗಳಿಸಿ ತಾಲ್ಲೂಕಿಗೇ ಪ್ರಥಮಳಾದರೆ,ನಾನು ೯೬.೩೨% ಗಳಿಸಿ ಶಾಲೆಗೇ ಪ್ರಥಮಳಾದೆ.

ಪ್ರವಾಸದ ನೆನಪು[ಬದಲಾಯಿಸಿ]

ಹಾಸನ

ಪ್ರವಾಸ ನನ್ನ ನೆಚ್ಚಿನ ಸಂಗತಿ.ನಮ್ಮ ಶಾಲೆಯ ವಾರ್ಷಿಕೋತ್ಸವ ಹಾಗು ಪ್ರವಾಸದ ಸಮಯ ಬಹುತೇಕ ೨,೩ ದಿನಗಳ ಅಂತರದಲಿರುತಿತ್ತು.ನಾನು ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳಬೇಕಿದ್ದರಿಂದ,ಅದರ ಅಭ್ಯಾಸದಲ್ಲಿ ತೊಡಗಿರುತ್ತಿದ್ದೆ.ಹೀಗಾಗಿ ಶಾಲೆಯ ಮುಕಾಂತರ ಪ್ರವಾಸ ಹೋಗಿರುವುದಕ್ಕಿಂತ,ಮನೆಯವರೊಟ್ಟಿಗೆ ತೆರಳಿರುವುದೇ ಹೆಚ್ಚು.ಮನೆ ಮಂದಿಯೆಲ್ಲರೂ ಒಟ್ಟಿಗೆ ಸೇರಿ ಸಮಯ ಕಳೆಯುವುದರ ಸಂತೋಷ ಅದನ್ನು ಅನುಭವಿಸಿದವರಿಗೇ ಗೊತ್ತು.ಯಾರಿಗೆ ಎಷ್ಟೇ ಕೆಲಸವಿದ್ದರೂ ಪ್ರತೀ ಬೇಸಿಗೆ ರಜೆಗೆ ಹೊರಗೆಹೋಗುವುದನ್ನು ಮಾತ್ರಾ ಎಂದೂ ತಪ್ಪಿಸುವುದಿಲ್ಲ.ತಿಂಗಳುಗಳ ಮುಂಚೆಯೇ ಎಲ್ಲಿಗೆ ಹೋಗುವುದು ಎಂಬ ಚರ್ಚೆ ಶುರುವಾಗಿರುತ್ತದೆ.ಹೊರಡುವ ಮುನ್ನದ ತಯಾರಿಯೂ ಚೆನ್ನ,ಗಡಿಬಿಡಿಯೂ ಚೆನ್ನ,ಪ್ರಯಾಣ ಚೆಂದ,ಒಟ್ಟಾರೆಗೆ ಪ್ರವಾಸ ಎನ್ನುವ ವಿಚಾರವೇ ಸುಂದರ.ಇತ್ತೀಚೆಗೆ ಕೇರಳದ ವಯನಾಡು,ಕಾಲಟಿ,ಗುರುವಾಯುರ್ ಜಾಗಗಳಿಗೆ ಭೇಟಿ ನೀಡಿದೆವು.ಹಲವಾರು ಸಿಹಿ ನೆನಪುಗಳನ್ನು ಕೊಟ್ಟ ಪ್ರವಾಸ ಅದಾಗಿತ್ತು.ಇದರ ಜೊತೆ ಬಿಜಾಪುರದ ಗೋಳ ಗುಮ್ಮಟ,ಹಾಸನದ ಬೇಲೂರು ಹಳೇಬೀಡು,ಶ್ರವಣಬೆಳಗೊಳ ಪ್ರವಾಸಿತಾಣಗಳು ಸದಾ ನೆನಪಲ್ಲಿ ಉಳಿಯುವಂತದ್ದು.ಇನ್ನು ಸ್ವಲ್ಪ ಬಿಡುವಾದಾಗಲೆಲ್ಲಾ ಬನ್ನೇರುಘಟ್ಟ ರಾಷ್ಟ್ರೀಯ ಉಧ್ಯಾನವನ,ಮುತ್ಯಾಲಮಡುವಿಗೆ ಹೋಗುವುದು ಖುಷಿಯ ವಿಚಾರ.ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಕಾಲ ಕಳೆದರೂ ಮನಸ್ಸಿಗೆ ಸಿಗುವ ನೆಮ್ಮದಿ,ಶಾಂತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.

ನನ್ನ ಹವ್ಯಾಸ[ಬದಲಾಯಿಸಿ]

Bangalore-City-Stn.jpg
ನನ್ನ ತಾಯಿಗೆ ಪುಸ್ತಕ ಓದುವುದು ಚಿಕ್ಕಂದಿನಿಂದಲೇ ಶುರುವಾದ ಹವ್ಯಾಸ.ನಾನು ಪುಟ್ಟ ಪುಟ್ಟ ಕತೆಗಳನ್ನು ಓದುತ್ತಿದ್ದನೇ ವಿನಹ ಕಾದಂಬರಿ,ನಾಟಕಗಳನ್ನು ಓದುತ್ತಿರಲಿಲ್ಲ.ಆದರೆ,ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಿತ್ರ ಬೆಟ್ಟದ ಜೀವ ನೋಡಿದ ನಂತರ ಆ ಪುಸ್ತಕವನ್ನು ಓದುವ ಹಂಬಲವುಂಟಾಗಿ ಕೆ.ಶಿವರಾಂ ಕಾರಂತರ ಬೆಟ್ಟದ ಜೀವ ಕಾದಂಬರಿ ಓದಿದೆ.ನಾನು ಓದಿದ ಮೊದಲನೆ ಕಾದಂಬರಿಯೇ ನನಗೆ ಅಚ್ಚುಮೆಚ್ಚಾಯಿತು.ಸಾಹಿತ್ಯದ ಬಗೆಗೆ ಆಸಕ್ತಿಯನ್ನು ಹೆಚ್ಚಿಸಿತು.ಈಗ ಶಿವರಾಂ ಕಾರಂತರಿಗೆ ಜ್ನಾನಪೀಠ ಪ್ರಶಸ್ತಿ ತಂದು ಕೊಟ್ಟ ಮೂಕ್ಕಜ್ಜಿಯ ಕನಸುಗಳು ಕಾದಂಬರಿಯನ್ನು ಓದುವ ಇಚ್ಛೆಯಿದೆ.ಪುಸ್ತಕಗಳನ್ನು ಓದುವುದರ ಜೊತೆಗೆ ಸಂಗೀತ ಕೇಳುವುದ ನನಗೆ ಒತ್ತಡ ನಿವಾರಕ.ಮನೆಯಿಂದ ಕಾಲೇಜಿಗೆ ತೆರಳುವ ೨ ಘಂಟೆಗಳ ಅವಧಿಯನ್ನು ಸಂಗೀತ ಕೇಳಲು ಮೀಸಳಿಡುತ್ತೇನೆ.ಭರತನಾಟ್ಯ ನನ್ನ ನೆಚ್ಚಿನ ನೃತ್ಯ ಕಲೆ.ಸಂಗೀತದಲ್ಲಿ ಆಸಕ್ತಿ ಹುಟ್ಟಲು ಕಾರಣವೂ ನೃತ್ಯವೇ.ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರ್ಧಿಷ್ಟ ಸಂಗೀತ ಕಲಿಯುವುದು ಅನಿವಾರ್ಯವಾಗಿದ್ದರಿಂದ,ಸಂಗೀತ ತರಗತಿಗೆ ಹೋಗಲು ಶುರುಮಾಡಿದೆ.ಜೂನಿಯರ್ ಪರೀಕ್ಷೆಯನಂತರ ಭರತನಾಟ್ಯ ಮತ್ತು ಸಂಗೀತದಲ್ಲಿ ಮುಂದುವರಿಯಲಾಗಲಿಲ್ಲ.ಆದರೆ,ಎರಡರಲ್ಲೂ ಆಸಕ್ತಿ ಮಾತ್ರ ಕಡಿಮೆಯಾಗಲಿಲ್ಲ.ಪುಸ್ತಕಗಳನ್ನು ಓದುವುದರ ಜೊತೆಗೆ ಸಂಗೀತ ಕೇಳುವುದ ನನಗೆ ಒತ್ತಡ ನಿವಾರಕ.ಮನೆಯಿಂದ ಕಾಲೇಜಿಗೆ ತೆರಳುವ ೨ ಘಂಟೆಗಳ ಅವಧಿಯನ್ನು ಸಂಗೀತ ಕೇಳಲು ಮೀಸಳಿಡುತ್ತೇನೆ.ಭರತನಾಟ್ಯ ನನ್ನ ನೆಚ್ಚಿನ ನೃತ್ಯ ಕಲೆ.ಸಂಗೀತದಲ್ಲಿ ಆಸಕ್ತಿ ಹುಟ್ಟಲು ಕಾರಣವೂ ನೃತ್ಯವೇ.ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರ್ಧಿಷ್ಟ ಸಂಗೀತ ಕಲಿಯುವುದು ಅನಿವಾರ್ಯವಾಗಿದ್ದರಿಂದ,ಸಂಗೀತ ತರಗತಿಗೆ ಹೋಗಲು ಶುರುಮಾಡಿದೆ.ಜೂನಿಯರ್ ಪರೀಕ್ಷೆಯ ನಂತರ ಭರತನಾಟ್ಯ ಮತ್ತು ಸಂಗೀತದಲ್ಲಿ ಮುಂದುವರಿಯಲಾಗಲಿಲ್ಲ.ಆದರೆ,ಎರಡರ ಮೇಲಿನ ಆಸಕ್ತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.