ಸದಸ್ಯ:Naveenkumar362/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗಭೂಷಣ್

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಇವರು ೧೯೫೨ ಫೆಬ್ರುವರಿ ೧ರಂದು ಬೆಂಗಳೂರು ಜಿಲ್ಲೆಯ ತಿಮ್ಮಸಂದ್ರದಲ್ಲಿ ಜನಿಸಿದರು. ಸದ್ಯಕ್ಕೆ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪರಿಚಯ[ಬದಲಾಯಿಸಿ]

      ಇವರು “ಲೋಹಿಯಾ ವ್ಯಕ್ತಿ-ವಿಚಾರ-ವಿಮರ್ಶೆ” ಕೃತಿಯನ್ನು ಸಂಪಾದಿಸಿದ್ದಾರೆ ಹಾಗು “ಜೆ.ಪಿ.ಸೆರೆಮನೆಯ ದಿನಚರಿ” ಕೃತಿಯನ್ನು ಅನುವಾದಿಸಿದ್ದಾರೆ.ಡಿ.ಎಸ್.ನಾಗಭೂಷಣ್ ಅವರು ಬೆಂಗಳೂರು ಗ್ರಾಮಂತರ ಜಿಲ್ಲೆ ಹೊಸಕೋತ ತಾಲುಕಿನ ತಿಮ್ಮಸ್ಂದ್ರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಸಿ.ಎಚ್.ಸೂರಾಚಾರ ಹಾಫ಼ು ಇವರ ತಾಯಿ ಗೌರಮ್ಮ. ನಾಗಭೂಷಣ ಅವರು ಅವರ ತಂದೆತಾಯಿಗಳಿಗೆ ಎರಡನೇ ಪುತ್ರನಾಗಿ ಜನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಅವರದೇ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನಲ್ಲಿ ಮುಗಿಸಿದರು. 
      ಅದಾದ ನಂತರ ಬೆತಮ್ಮ ಉನ್ನತ ಶಿಕ್ಷಣವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬೆಂಗಳೂರು ವಿಶ್ವವಿದ್ಯನಿಲಯದಿಂದ ಗಣಿತಶಾಸ್ರದಲ್ಲಿಆನರ್ಸ್ ಹಾಗು ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ. ೧೯೭೫ ರಿಂದ ಅವರು ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿ ೩೦ ವರ್ಷಗಳ ನಂತರ ೨೦೦೫ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಅವರ ಪತ್ನಿ ಸವಿತಾ ನಾಗಭೂಷಣದಲ್ಲಿ ಈ ಶಿವಮೊಗ್ಗದಲ್ಲಿ ತಮ್ಮ ನಿವೃತ್ತಿ ಜೀವನವನ್ನು ಸಂತೋಷವಾಗಿ ನಡೆಸುತ್ತಿದ್ದಾರೆ. ಇವರು ಸುಮಾರು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಅದರಲ್ಲಿ ಮುಖ್ಯವಾದುದು 'ಜೆ.ಪಿ.ಸೆರೆಮನೆಯ ದಿನಚರಿ'. ಇವರು ಗಾಂಧಿ, ಲೋಹಿಯಾ ಹಾಗು ಅಂಬೇಡ್ಕರ ಅವರ ವಿಚಾರಗಳ ಜೊತೆಗೆ ಬುದ್ಧ, ರಾಮಕೃಷ್ಣ ಪರಮಹಂಸ ಅವರಿಂದ ಪ್ರಭವಗೊಂಡಿದ್ದಾರೆ. 

ವೃತ್ತಿ ಮತ್ತು ಕೃತಿ[ಬದಲಾಯಿಸಿ]

ಇವರು ಕೇವಲ ತಮ್ಮ ಕೆಲಸದಲ್ಲಿ ಅಷ್ಟೆ ತೊಡಗಿಳಿಸಿಕೊಳ್ಳದೆ ರೈತ-ದಲಿತ ಚಳುವಳಿಗಳಲ್ಲು ಪಾಲ್ಗೊಂಡು ತಾವು ತಮ್ಮ ಕೈಲಾದಾಷ್ಟು ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಹಾಗು ಅದರ ವಿಚಾರವಾಗಿ 'ಗಮನ' ಹಾಗೂ 'ಅನೇಕ' ಸಾಮಾಜಿಕ ವಿಮರ್ಶೆ ಚಿಂತನೆಗಳ ಸಂಕಲನಗಳಾಗಿಗೆ ಮತ್ತು ಅವರು 'ಜಮಪ್ರಕಾಶ ನಾರಾಯಣ' ಎಂಬ ಕ್ರಾಂತಿಯ ಕಥೆಯನ್ನು ಬರೆದಿದ್ದಾರೆ. ಇವಲ್ಲದೆ ನಾಗಭೂಷಣ ಅವರು 'ಲೋಹಿಯಾ'. ವ್ಯಕ್ತಿ-ವಿಚಾರ-ವಿಮರ್ಶೆ, ಕ'ಕುವೆಂಪು:ಒಂದು ಪುನರನ್ವೇಷಣೆ', 'ಹಣತೆ': ಜಿ.ಎಸ್.ಎಸ್ ಅಭಿನಂದನ ಗ್ರಂಥ, 'ಮಾಸ್ತಿ ಸಾಹಿತ್ಯ: ಸಮಗ್ರ ದರ್ಶನ', 'ಕಾಡಿನ ಹುಡುಗ ಕೃಷ್ಣ',:ಆಲನಹಳ್ಳಿ ನೆನಪಿನ ಸಂಪುಟ ಹಾಗೂ 'ಒಲವು':ಅಂತರ್ಜಾತಿ ವಿವಾಹಿತರ ಮೊದಲ ಸಮಾವೇಶದ ಸ್ಮರಣ ಸಂಚಿಕೆಯ ಸ್ಂಪಾದನೆ/ ಸಹ ಸಂಪಾದನೆ ಮಾಡಿದ್ದಾರೆ. 'ಮಾನವ' ಹಾಗೂ 'ಸಾಹಿತ್ಯ ಸಂವಾದ' ನಿಯತಕಾಲಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿರುವ ಇವರು, ಚಿತ್ರದುರ್ಗದ 'ಅಭಿರುಚಿ': ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸ್ಥಾಪಕ ಸಂಚಾಲಕರೊಬ್ಬರಾಗಿದ್ದಾರೆ.
      ಡಿ.ಎಸ್. ನಾಗಭೂಷಣ್ ಅವರ ಹಲವಾರು ಕೃತಿಗಳು ಸಮಾಜವಾದದ ಕುರಿತಾಗಿಯೇ ಇವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅವರ 'ಬೇರು-ಬಿಳಲು' ಎಂಬ ಕಥನದಲ್ಲಿ ಸಮಾಜವಾದದ ಬಗ್ಗೆ ತುಂಬ ಅದ್ಭುತವಾಗಿ ಚಿತ್ರಿಸಿದ್ದಾರೆ.ಈ ಕಥನವು ನಮ್ಮ ವರ್ಥಮಾನದ ಹಲವಾರು ಸಂದಿಗ್ನತೆಗಳಿಗೆ ಅವರ ಆಲೋಚನೆಹಗಳು ಕನ್ನಡಿ ಹಿಡಿದಿದೆ.ಈ ಕನ್ನಡಿಯು ಸಿದ್ಧಾಂತಗಳ ಹಿಂದೆ ಪರದೆಗಳಲ್ಲಿ ಅವಿಸಿಟ್ಟಿರುವ ಮುಖದ ಸುಕ್ಕುಗಳನ್ನು ಸಹ ಬಿಂಬಿಸುವಷ್ಟು ಶುದ್ದವಾಗಿದೆ.

ಉಪಸಂಹಾರ[ಬದಲಾಯಿಸಿ]

     ಡಿ.ಎಸ್. ನಾಗಭೂಷಣ್ ಅವರ ಚಿಂತನೆಗಳು ಜನಪ್ರಿಯ ಮಾದರಿಗಿಂತ ಭಿನ್ನವಾಗಿ ಕಾಣುತ್ತದೆ.ಯಾವುದೇ  ವ್ಯಕ್ತಿ ವಸ್ತುವೆಂಬ ಮುಲಾಜುಗಳಿಲ್ಲದೆ ಸತ್ಯಾನ್ವೇಷಣೇ ಮಾಡುವುದೊಂದೆ ಅವರ ಗುರಿ ಬಚಿತವಾಗಿ ತಮಗಿರುವ ಬಹುಶಾಸ್ತ್ರದ ಆದ್ಯಯಯನ ತಿಳುವಳಿಕೆಯೊಂದಿಗೆ ಅವರು ಮಂಡಿಸುವ ವಿಚಾರ ತಮ್ಮ ಜ್ನಾನದ ಅರಿವೆಯಿಂದ ಬಂದಿರುತ್ತದೆ.
    ಇನ್ನೊಂದು ಅವರ ಮಹತ್ವದ ಗುಣವೆಂದರೆ ಅವರೊಂದಿಗೆ ಸೈದ್ದಾಂತಿಕವಾಗಿ ಜಗಳವಾಡಿದರೂ ಅವರ ಜೊತೆ ಸ್ನೇಹದೊಂದಿಗೆ ಇರಬಹುದು. ಇದು ಅವರಿಗಿರುವ ದೊಡ್ಡಗುಣ ಎನ್ನಲಡ್ಡಿಯಿಲ್ಲ.

ಉಲ್ಲೇಖ[ಬದಲಾಯಿಸಿ]

ಬೇರು ಬಿಳಲು: ಸಮಾಜವಾದಿ ಸಂಕಥನಗಳು

ಕುವೆಂಪು ಸಾಹಿತ್ಯ ದರ್ಶನ

ಸೆರೆಮನೆಯ ದಿನಚರಿ