ಸದಸ್ಯ:Mithila N S/ನನ್ನ ಪ್ರಯೋಗಪುಟ/1
ಫಿಲ್ಲಿಸ್ ಹಾರ್ಟ್ನಾಲ್, ಒಬ್ಬ ಬ್ರಿಟಿಷ್ ಕವಯಿತ್ರಿ, ಬರಹಗಾರ್ತಿ ಹಾಗೂ ಸಂಪಾದಕಿಯಾಗಿದ್ದರು.ಅವರು ಸೆಪ್ಟೆಂಬರ್ ೨೨, ೧೯೦೬ರಲ್ಲಿ, ಈಜಿಪ್ಟ್ ನಲ್ಲಿ ಜನಿಸಿದರು. ಅವರ ತಂದೆ ಸೇನಾಧಿಕಾರಿಯಾಗಿದ್ದರು.
ಶಿಕ್ಷಣ
[ಬದಲಾಯಿಸಿ]ಹಾರ್ಟ್ನಾಲ್ ಅವರು ವಾಂಟೇಜ್ ನಲ್ಲಿರುವ ಸಂತ ಮೆರಿಯ ಕಾನ್ವೆಂಟ್, ಹಾಗೂ ಚೆಲ್ಟೆನ್ಹಮ್ ಮಹಿಳಾ ಕಾಲೇಜಿನಲ್ಲಿ ಓದಿದರು.ಅವರು ಸಂತ ಹಗ್ಸ್ ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿ ಪಡೆದು, ಉನ್ನತ ಶಿಕ್ಷಣವನ್ನು ಲಯೊನ್ಸ್ ಹಾಗೂ ಅಲ್ಗಿಯರ್ಸ್ ವಿಶ್ವವಿದ್ಯಾಲಯಗಳಲ್ಲಿ ಪೂರೈಸಿದರು.
ಜೀವನ
[ಬದಲಾಯಿಸಿ]ಫಿಲ್ಲಿಸ್ ಹಾರ್ಟ್ನಾಲ್ ಅವರು ಉದಾರ ವ್ಯಕ್ತಿಯಾಗಿದ್ದು, ಒಂದು ಸಕ್ರಿಯವಾದ ಸಾಮಾನ್ಯ ಜೇವನವನ್ನು ನಡೆಸುತ್ತಿದ್ದರು. ತಮ್ಮ ಕೆಲಸಕ್ಕೆ ಅಭಿರುಚಿಯನ್ನು ಹೊಂದಿದ್ದರು. ಅದರ ಜೊತೆಯೇ, ತಮ್ಮಲ್ಲಿದ್ದ, ಸಾಂಸ್ಥಿಕ ಕೌಶಲವನ್ನು ಗುರಿಯ ಸಾಧನೆಗೆ ಬಳಸಿಕೊಂಡರು. ಕವಿತೆಯೇ ತನ್ನ ಆಸಕ್ತಿಯಾಗಿದ್ದು, ಅದನ್ನೇ ಜೀವನದ ಉದ್ದಕ್ಕೂ ಮುಂದುವರೆಸಿಕೊಂಡು ಹೋಗಿದ್ದರು. ಆಕ್ಸ್ ವರ್ಡ್ ನಲ್ಲಿರುವ, ಬ್ಲ್ಯಾಕ್ವೆಲ್ ಪುಸ್ತಕದ ಅಂಗಡಿಯಲ್ಲಿ ಸಂಕ್ಷಿಪ್ತವಾಗಿ ಕೆಲಸ ಮಾಡಿ, ನಂತರ ಜೆರುಸಲೆಮ್ ನಲ್ಲಿರುವ ಬಾಲಕಿಯರ ಶಾಲೆಯಲ್ಲಿ ಕಾರ್ಯದರ್ಶಿಯಾಗಿದ್ದರು.'ಮ್ಯಾಕ್ಮಿಲ್ಲನ್' ಪ್ರಕಾಶನವು, ೧೯೨೯ ರಿಂದ ೧೯೬೭ ವರೆಗೆ, ಫಿಲ್ಲಿಸ್ ಅವರನ್ನು ಓದುಗಾರ್ತಿಯಾಗಿ, ಬರಹಗಾರ್ತಿಯಾಗಿ ಹಾಗೂ ಅನುವಾದಕಿಯಾಗಿ ನೇಮಕಮಾಡಿಕೊಂಡಿತು.ಇವರು ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಹಾಗೆಯೇ ಇವರು ತ್ರಿಭಾಷೀಯರಾಗಿದ್ದರೂ, ಇಟಾಲಿಯನ್, ಸ್ವೀಡಿಷ್, ಹೆಬ್ರ್ಯು ಹಾಗೂ ಅರೇಬಿಕ್ ಭಾಷೆಗಳಲ್ಲಿ ಚೆನ್ನಾಗಿ ಮಾತನಾಡುತ್ತಿದ್ದರು. ನಾಟಕ, ರಂಗಭೂಮಿ ಹಾಗೂ ನಾಟಕ ಇತಿಹಾಸ ವಿಷಯಗಳಲ್ಲಿ ಇವರಿಗೆ ಬಹಳ ಆಸಕ್ತಿಯಿದ್ದು, ಈ ವಿಷಯಗಳನ್ನು ೧೯೫೦ ರ ದಶಕದಲ್ಲಿ, ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ ಎಂಬ ಶಾಲೆಯಲ್ಲಿ ಪಾಠಮಾಡುತ್ತಿದ್ದರು. ಸುಮಾರು ವರ್ಷಗಳ ಕಾಲ, ಸೊಸೈಟಿ ಫಾರ್ ಥಿಯೇಟರ್ ರಿಸರ್ಚ್ ಎಂಬ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಹಲವಾರು ಬರವಣಿಗೆಗಳಲ್ಲಿ ಒಂದಾದ 'ಥಿಯೇಟರ್ ರಿಸರ್ಚ್' ಎಂಬ ಜರ್ನಲ್ ಅನ್ನು, ಇಂಟರ್ ನ್ಯಾಷನಲ್ ಫ಼ೆಡರೇಷನ್ ಫಾರ್ ಥಿಯೇಟರ್ ರಿಸರ್ಚ್ ಎಂಬ ಸಂಸ್ಥೆಯು ಪ್ರಕಟಿಸಿತು. ಈ ಸಂಸ್ಥೆಯಲ್ಲಿ, ಹಾರ್ಟ್ನಾಲ್ ಅವರು ಸ್ಥಾಪಕ ಸದಸ್ಯೆಯಾಗಿ ಕೆಲಸಮಾಡಿದ್ದರು. ಫಿಲ್ಲಿಸ್ ಅವರು,೧೯೩೦ರಲ್ಲಿ, ತಮಗೆ ಇಷ್ಟವಾದ ನಾಟಕ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ೧೯೫೧ ರಲ್ಲಿ, ಇವರ 'ಆಕ್ಸ್ವರ್ಡ್ ಕಂಪ್ಯಾನಿಯನ್ ಟು ದ ಥಿಯೇಟರ್' ಎಂಬ ಪ್ರವರ್ತಕ ಸಂಕಲನವನ್ನು, ಆಕ್ಸ್ವರ್ಡ್ ಪ್ರೆಸ್ ಪ್ರಕಟಿಸಿತು. ಈ ಸಂಕಲನವು, ಮುಂದಿನ ಅನೇಕ ಎನ್ಸೈಕ್ಲೋಪೀಡಿಯಾಗಳಿಗೆ ಮಾದರಿಯಾಗಿತ್ತು.
ಫಿಲ್ಲಿಸ್ ಹಾರ್ಟ್ನಾಲ್ ಅವರು ಸ್ವಂತವಾಗಿ ಫ್ರೆಂಚ್ ರಂಗಭೂಮಿಗೆ ಸಂಬಂಧಿಸಿದ ಎಲ್ಲಾ ಉಲ್ಲೇಖನಗಳನ್ನು ಬರೆದರು. ಸೈಬಿಲ್ ರೊಸೆನ್ ಫೀಲ್ಡ್, ಹಾನ್ ಕೈರ್ಲ್ ಫ಼್ಲೆಚರ್, ರಿಚರ್ಡ್ ಸದರ್ನ್, ಮುರೈಲ್ ಸೈಂಟ್ ಕ್ಲಾರ್ ಬೈರ್ನೆ ಹಾಗೂ ಜಾರ್ಜ್ ಸ್ಪಿಎಟ್ ಅವರೆಲ್ಲಾ, ೧೯೪೮ರಲ್ಲಿ ಸ್ಥಾಪಿಸಲಾಗಿದ್ದ ಫಾರ್ ಥಿಯೇಟರ್ ರಿಸರ್ಚ್ ಎಂಬ ಸಮಿತಿಯಲ್ಲಿ , ಫಿಲ್ಲಿಸ್ ಅವರ ಜೊತೆ, ಸ್ಥಾಪಕ ಆಧ್ಯಕ್ಷರಾಗಿ ಕೆಲಸ ಮಾಡಿದ್ದರು. ಹಾರ್ಟ್ನಾಲ್ ಅವರು, ಬೇರೆ ಬರಹಗಾರರಿಗೆ ಹಾಗೂ ರಂಗಭೂಮಿ ಕಲಾವಿದರಿಗೆ ಬೆಂಬಲ ಹಾಗೂ ಪ್ರೋತ್ಸಾಹವನ್ನು, ತಮ್ಮ ಶಕ್ತಿ ಮೀರಿ ನೀಡುತಿದ್ದರು.ರಂಗಭೂಮಿ ಇತಿಹಾಸ ಕ್ಷೇತ್ರವು ಅವರ ಖ್ಯಾತಿಗೆ ಪರಾಕಾಷ್ಠೆಯನ್ನು ನೀಡಿತು. ಮುಖ್ಯವಾಗಿ, ವಿರೋಧಿ ನಾಟಕ ಸಾಹಿತ್ಯ ಸ್ಥಾಪನೆಯ ಉಲ್ಲಂಘನೆಯನ್ನು ಸೂಚಿಸುವ ಹೊಸ ಪ್ರಭಾವಗಳನ್ನು ಇವರು ನಿದರ್ಶಿಸಿದರು. ರಂಗಭೂಮಿ ಇತಿಹಾಸವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ವಿದ್ಯಾರ್ಥಿವೇತನ ದೊರಕಬೇಕು ಎಂದು ಅವರು ಸೂಚಿಸಿದ್ದರು. ಹಾರ್ಟ್ನಾಲ್ ಅವರು ಬರೆದಿರುವ 'ದಿ ಕಂಪ್ಯಾನಿಯನ್' ಎಂಬ ಪುಸ್ತಕಕ್ಕೆ ಒಯುಪಿ ಬೆಸ್ಟ್ ಸೆಲ್ಲರ್ ಪ್ರಶಸ್ತಿ ದೊರಕಿತು. ಈ ಪುಸ್ತಕವು, ೧೯೫೨ರಲ್ಲಿ ಮರುಮುದ್ರಣಗೊಂಡಿತು ಹಾಗೂ ೧೯೫೭ರಲ್ಲಿ ಇದರ ಎರಡನೇ ಆವೃತ್ತಿಯನ್ನು ಬಿಡುಗಡೆಮಾಡಲಾಗಿತ್ತು. ೧೯೬೭ರಲ್ಲಿ, ಮತ್ತಷ್ಟು ಪುನರ್ಮುದ್ರಣ ಹಾಗೂ ಮೂರನೇ ಆವೃತ್ತಿಯನ್ನು ಹೆಚ್ಚು ಹೆಚ್ಚಾಗಿ ಪರಿಷ್ಕರಿಸಲಾಗಿತ್ತು. ಲೇಖಕರ ಪ್ರಮುಖ ಪುಸ್ತಕಗಳ ಪಟ್ಟಿಯಲ್ಲಿ ಈ ಪುಸ್ತಕವು ಇದ್ದು, ಇದನ್ನು ಪ್ರಮಾಣಿತ ಉಲ್ಲೇಖನವನ್ನಾಗಿ ಶ್ವೀಕರಿಸಲಾಗಿದೆ. ಕಂಪಾನಿಯನ್ ಪುಸ್ತಕವನ್ನು ಮರುಸಂಪಾದನೆಯನ್ನು ಮಾಡುವುದು ಅವರ ಆಜೀವ ಉದ್ಯೋಗವಾಗಿದ್ದರೂ, ಅದರ ಜೊತೆ ಜೊತೆಯಲ್ಲಿ, ಹಲವಾರು ಸಂಕ್ಷಿಪ್ತ ಪುಸ್ತಕಗಳನ್ನು ಬಿಡುಗಡೆಮಾಡಿದ್ದಾರೆ.೧೯೬೮ರಲ್ಲಿ ಎ ಕಂಸೈಸ್ ಹಿಸ್ಟರಿ ಆಫ್ ದ ಥಿಯೇಟರ್', ೧೯೭೯ರಲ್ಲಿ 'ಎ ಕಂಸೈಸ್ ಕಂಪಾನಿಯನ್', 'ಪ್ಲೇಸ್ ಆಂಡ್ ಪ್ಲೇಯರ್ಸ್'(೧೯೮೪), 'ಹೂಸ್ ಹೂ ಇನ್ ಶಾ'(೧೯೭೫), ಹೀಗೆ ಮುಂತಾದ ಪುಸ್ತಗಳನ್ನು ಇವರು ಬರೆದಿದ್ದಾರೆ. ಜಾನ್ ಗೀಲ್ಗಡ್ ಎಂಬುವರು ತಮ್ಮ ತಾಯಿ ಬರೆದಿದ್ದ ಒಂದು ನಾಟಕ ವಿಮರ್ಶೆಯನ್ನು ಸಂಪಾದಿಸಲು, ಫಿಲ್ಲಿಸ್ ಹಾರ್ಟ್ನಾಲ್ ಅವರ ಸಹಾಯವನ್ನು ಪಡೆದರು. ಲೈಮ್ ರೆಗಿಸ್ ಎಂಬ ಪಟ್ಟಣದಿಂದ ಅವರು ನಿರ್ಗಮಿಸಿದಾಗ, ಹಲವಾರು ನಾಟಕಗಳನ್ನು ಸ್ಥಳೀಯ ನಾಟಕ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರು ೧೯೫೨ರಲ್ಲಿ 'ದಿ ಗ್ರೀಸಿಯನ್ ಎನ್ ಚಾಂಟೆಡ್' ಎಂಬ ಕಾದಂಬರಿಯನ್ನು ಬರೆದಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಫಿಲ್ಲಿಸ್ ಹಾರ್ಟ್ನಾಲ್ ಅವರು, ನ್ಯೂಡಿಗೇಟ್ ಪ್ರಶಸ್ತಿಯನ್ನು,೧೯೨೯ರಲ್ಲಿ, ಆಕ್ಸ್ ವರ್ಡ್ ನಲ್ಲಿ ಪಡೆದರು. ೧೯೪೭ರಲ್ಲಿ ಹಾಗೂ ೧೯೬೫ರಲ್ಲಿ, ಸೇಕ್ರೆಡ್ ವರ್ಸ್ ಎಂಬುವುದಕ್ಕೆ ಆಕ್ಸ್ ವರ್ಡ್ ಪ್ರಶಸ್ತಿ ದೊರಕಿದೆ.
ಮರಣ
[ಬದಲಾಯಿಸಿ]ಬಾಲ್ಯದಲ್ಲಿಯೇ ಆವರಿಸಿಕೊಂಡಿದ್ದ ಟೈಫೌಡ್ ರೋಗವು, ಅವರ ನೆರಳಿನಂತೆ ಇದ್ದಿತು. ಈ ಅನಾರೋಗ್ಯದಿಂದ, ೧೯೯೭ರಲ್ಲಿ, ಜನವರಿ ೮ರಂದು, ಲೈಮ್ ರೆಗಿಸ್ ನಲ್ಲಿ ಮರಣ ಹೊಂದಿದ್ದರು. [೩]
ಉಲ್ಲೇಖಗಳು
[ಬದಲಾಯಿಸಿ]