ಸದಸ್ಯ:Meghana.L
ಮೇಘನ
[ಬದಲಾಯಿಸಿ]ನನ್ನ ಪರಿಚಯ
[ಬದಲಾಯಿಸಿ]ಮೇಘನ.ಎಲ್, ಶಾಸ್ತ್ರೀ ಮತ್ತು ಲಾವಣ್ಯರ ಮೊದಲ ಸಂತಾನ. ನಾನು ಹುಟ್ಟಿದ್ದು ಕೋಲಾರದಲ್ಲಿ. ನಮ್ಮ ಮನೆ ಇರುವುದು ಕಗ್ಗನೂರು, ಹೊಸೂರು ತಾಲೂಕು, ತಮಿಳುನಾಡು. ನನಗೆ ತಮ್ಮ ಮತ್ತು ತಂಗಿ ಇದ್ದಾರೆ. ಅವರಿಬ್ಬರೆಂದರೆ ನನಗೆ ಬಹಳ ಇಷ್ಟ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ಮೊದಲ ಮೂರು ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನ ಬಾಗಲೂರಿನಲ್ಲಿ ಮುಗಿಸಿದೆ. ನಂತರ ಮುಂದಿನ ವಿದ್ಯಾಭ್ಯಾಸವನ್ನು ಸಂತ. ಫಿಲೋಮಿನಾಸ್ ಆಂಗ್ಲ ಶಾಲೆಯಲ್ಲಿ ( ಸರ್ಜಾಪುರ,ಬೆಂಗಳೂರು [೧] ಮುಗಿಸಿದೆ. ನಾನು ತಮಿಳುನಾಡಿನಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಮಾಡಿದ್ದರಿಂದ, ನನಗೆ ಕನ್ನಡ ತಿಳಿದಿರಲಿಲ್ಲ. ನಂತರ ನಾನು ಸಂತ. ಫಿಲೋಮಿನಾಸ್ ಶಾಲೆಗೆ ಸೇರಿಕೊಂಡೆ, ಆದರೆ ಅಲ್ಲಿ ತಮಿಳು ಭಾಷೆ ಇರಲಿಲ್ಲ ಆದ್ದರಿಂದ ನಾನು ಕನ್ನಡ ಕಲೆಯಬೇಕಾಯಿತು. ನಾನು ಕನ್ನಡ ಕಲಿಯಲು ಬಹಳ ಕಷ್ಟ ಪಟ್ಟೆ. ಮೂರನೆಯ ತರಗತಿಯಲ್ಲಿ ಕನ್ನಡದಲ್ಲಿ ಅನುತೀರ್ಣಳಾದೆ (ನೂರಕ್ಕೆ ಹದಿನಾರು ಅಂಕ). ನಂತರ, ನನ್ನ ತಾಯಿ ಹಾಗೂ ಗುರುಗಳ ಸಹಾಯದಿಂದ ಕನ್ನಡ ಕಲಿತೆ ಹಾಗೂ ಹತ್ತನೆಯ ತರಗತಿಯಲ್ಲಿ ನೂರ ಇಪ್ಪತೈದು ಅಂಕಗಳಿಗೆ ನೂರ ಇಪ್ಪತ್ತೊಂದು ಅಂಕಗಳನ್ನು ಗಳಿಸಿದೆ. ಪಿಯುಸಿಯನ್ನು ಜೆ.ಎಸ್.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಮೈಸೂರುಮುಗಿಸಿದೆ. ನಾನು ಎಂಟನೆ ತರಗತಿಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯದಲ್ಲಿ ಶಾಲೆಯ ಪರವಾಗಿ ಭಾಗವಹಿಸಿದ್ದೆ. ರಸಪ್ರಶ್ನೆಯಲ್ಲಿಯು ಸಹ ನನಗೆ ಆಸಕ್ತಿ ಇದೆ.
ಪ್ರವಾಸ
[ಬದಲಾಯಿಸಿ]ನನಗೆ ಪ್ರವಾಸ ಹೋಗುವುದೆಂದರೆ ಬಹಳ ಇಷ್ಟ. ತಮಿಳುನಾಡು, ಕರ್ನಾಟಕ, ಕೇರಳ, ಗೋವಾ, ಆಂಧ್ರಪ್ರದೇಶ ಹಾಗೂ ನವದೆಹಲಿ ಮುಂತಾದ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಅನೇಕ ಪ್ರವಾಸ ತಾಣಗಳನ್ನು ಸಂದರ್ಶಿಸಿದ್ದೇನೆ. ಹೊಸ ಸ್ಥಳಗಳಿಗೆ ಭೇಟಿ ನೀಡುವುದೆಂದರೆ ನನಗೆ ಬಹಳ ಆಸಕ್ತಿ. ರಾಮೇಶ್ವರಕ್ಕ[೨]ೆ ಹೋಗುವುದೆಂದರೆ ನನಗೆ ಬಹಳ ಇಷ್ಟ. ಅಲ್ಲಿನ ವಾತಾವರಣ, ದೇವಸ್ಥಾನಗಳು, ಸಮುದ್ರತೀರ ಬಹು ಆಕರ್ಷಣೀಯ. ರಾಮೇಶ್ವರದಲ್ಲಿ ಧನುಷ್ಕೋಡಿ ಎಂಬ ಸ್ಥಳ ಬಹಳ ಆಕರ್ಷಣೀಯ. ಅದರ ಪ್ರಾಮುಖ್ಯತೆ ಏನೆಂದರೆ, ಬೆಂಗಾಳದ ಕೊಲ್ಲಿ, ಅರೇಬಿಯಾ ಸಮುದ್ರ, ಹಾಗೂ ಹಿಂದೂ ಮಹಾಸಾಗರ[೩] ಸೇರುವ ಸ್ಥಳ ಇದಾಗಿದೆ. ಈ ಸಂಗಮವನ್ನು ನೋಡುವುದು ಒಂದು ಸಂಭ್ರಮ.
ಅಭಿರುಚಿಗಳು
[ಬದಲಾಯಿಸಿ]ಅಜ್ಜಿ ಕಾಲದ ತಿಂಡಿಗಳೆಂದರೆ ಬಹಳ ಇಷ್ಟ. ಅದರಲ್ಲೂ, ಹೋಳಿಗೆ ಎಂದರೆ ತುಂಬ ಇಷ್ಟಪಟ್ಟು ತಿನ್ನುವೆ. ಖಾಲಿ ಸಮಯದಲ್ಲಿ ಓದುವ ಹವ್ಯಾಸ ಇದೆ. ಮುಖ್ಯವಾಗಿ, ‘ಅರ್ಲಾಂಡ್ ಟೌನ್ ಬಿ’ ಅವರ ಪುಸ್ತಕಗಳನ್ನು ಓದುತ್ತೇನೆ. ಈವರೆಗು ಅವರ ಇಪ್ಪತೈದು ಕಥೆಗಳನ್ನು ಓದಿದ್ದೇನೆ. ‘ಅಬ್ದುಲ್ ಕಲಾಂ’ ರವರ ‘ವಿಂಗ್ಸ್ ಆಫ್ ಫಯರ್’ ಪುಸ್ತಕವು ನನ್ನ ಮೇಲೆ ಬಹಳ ಪರಿಣಾಮ ಬೀರಿದೆ. ಇದರ ಜೊತೆಗೆ, ಚಲನಚಿತ್ರಗಳನ್ನು ನೋಡುವ ಹವ್ಯಾಸ ಇದೆ, ನನಗೆ ಇಷ್ಟವಾದ ಚಿತ್ರವೆಂದರೆ ನಾಗಾರ್ಜುನ ಹಾಗೂ ಕಾರ್ತಿ ನಟಿಸಿರುವ ‘ಊಪಿರಿ’, ಮತ್ತು ‘ಗೀತ ಪೋಗಟ್’ ಅವರ ‘ದಂಗಲ್’( ಅಮೀರ್ ಖಾನ್ ನಟಿಸಿರುವ ಚಿತ್ರ ). ಊಪಿರಿ ಚಿತ್ರದ ವೈಶಿಷ್ಟ್ಯತೆ ಏನೆಂದರೆ, ಅಂಗವಿಕಲತೆ ಒಂದು ಲೋಪವಲ್ಲ, ಎಲ್ಲರಂತೆ ಅವರು ಸಂತೋಷದಿಂದ ಬತುಕ ಬಲ್ಲರು ಎಂಬ ಸಂದೇಶವನ್ನು ನೀಡುತ್ತದೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಂತಾನ ಹೊಂದಿರುವ ತಂದೆತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗೆ ಸಮಾನವಾಗಿ ಹೇಗೆ ಬೆಳಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿದ ಒಬ್ಬ ಹರಿಯಾಣದ ತಂದೆಯ ಕಥೆಯು ತುಂಬ ಪ್ರಭಾವ ಬೀರಿತು.
ನನ್ನ ಆದರ್ಶ ವ್ಯಕ್ತಿಗಳು
[ಬದಲಾಯಿಸಿ]ನನ್ನ ಎಲ್ಲಾ ಭಾವನೆಗಳನ್ನು ನನ್ನ ತಾಯಿಯ ಜೊತೆಗೇ ಹಂಚಿಕೊಳ್ಳುವೆ. ಗೀತ ಪೋಗಟ್ ಹಾಗೂ ಅಬ್ದುಲ್ ಕಲಾಂ ನನ್ನ ಆದರ್ಶ ವ್ಯಕ್ತಿಗಳು. ಪ್ರಾಚೀನ ಕಾಲದಿಂದಲೂ ಪುರುಷರಿಗೆ ಸೀಮಿತವಾಗಿದ್ದ ಕ್ರೀಡೆ ‘ಕುಸ್ತಿ’. ಅಂತಹ ಕ್ರೀಡೆಯಲ್ಲಿ, ಗೀತ ಪೋಗಟ್ ತನ್ನ ತಂದೆಯ ಪ್ರೋತ್ಸಾಹ ಹಾಗೂ ಬೆಂಬಲದಿಂದ ಭಾಗವಹಿಸಿ ನಮ್ಮ ಭಾರತದ ಹೆಸರನ್ನು ಪ್ರಪಂಚದ ಕ್ರೀಡಾ ಪುಟದಲ್ಲಿ ಬರೆದಳು[೪]. ಶ್ರೀಮಾನ್ಯ ಅಬ್ಲುಲ್ ಕಾಲಂ ಅವರು ಒಂದು ಬಡ ಕುಟುಂಬದಲ್ಲಿ ಜನಿಸಿ ಒಬ್ಬ ವಿಜ್ಞಾನಿಯಾಗಿ ನಮ್ಮ ದೇಶದ ಕೀರ್ತಿಯನ್ನು ಪ್ರಪಂಚಕ್ಕೆ ಸಾರಿದರು. ಭಾರತದ ರಾಷ್ಟ್ರಪತಿಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದರು[೫]. ಈ ರೀತಿಯಾಗಿ ಇವರಿಬ್ಬರು ನನ್ನ ಮೇಲೆ ಪ್ರಭಾವ ಬೀರಿದರು. ಭಾರತಿಯಳಾಗಿ ಹುಟ್ಟಿದ ನಾನು ನನ್ನ ದೇಶಕ್ಕೆ ನನ್ನಿಂದ ಸಾಧ್ಯವಾದಮಟ್ಟಿಗೆ ಸೇವೆಯನ್ನು ಸಲ್ಲಿಸಿ ಋಣವನ್ನು ತೀರಿಸಿಕೊಳ್ಳಲು ಪ್ರಯತ್ನಿಸುವೆ.
ಉಲ್ಲೆಖ
[ಬದಲಾಯಿಸಿ]- ↑ https://www.karnataka.com/bangalore/
- ↑ https://in.downloadsearch.cnet.com/en/s?q=about%20rameswaram&qsrc=0&src=jo&gch=AdNetB_CNET_223&au=11652601&tt=T0000128&clickid=f7e3ff07a41818c74dbba361d0149997&utm_campaign=IND_EN_BL_P_TravelTourism_LTG000_oo_oo_S_A%23223&ct=10017&mkt=IND&ts=b&utm_source=b&utm_medium=bcpc&msclkid=f7e3ff07a41818c74dbba361d0149997
- ↑ https://www.indiawaterportal.org/articles/story-dhanushkodi-cyclone-hit-town-where-reality-coexists-myths-mysteries-and-miracles
- ↑ https://timesofindia.indiatimes.com/entertainment/hindi/movie-reviews/dangal/movie-review/56102623.cms
- ↑ https://www.ndtv.com/people/apj-abdul-kalam-the-peoples-president-1201126