ಸದಸ್ಯ:Meghana.HM 1910465/ನನ್ನ ಪ್ರಯೋಗಪುಟ
ಗೋಚರ
ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಉತ್ತನಹಳ್ಳಿ ಮೈಸೂರು:
[ಬದಲಾಯಿಸಿ]ಚಾಮುಂಡಿ ಬೆಟ್ಟದ ಸಮೀಪದಲಿರುವ ಉತ್ತನಹಳ್ಳಿ ಎಂಬ ಗ್ರಾಮದಲ್ಲಿ ನೆಲೆಸಿರುವ ಉತ್ತನಹಳ್ಳಿ ಮಾರಮ್ಮನ ದೇವಸ್ಥಾವೆ ಜ್ವಾಲಮುಖಿ ತ್ರಿಪುರ ಸುಂದರಿ ದೇವಾಲಯ ಎಂದು ಪ್ರಸಿದ್ಧಿಯಾಗಿದೆ .ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನವು ಮೈಸೂರಿನಿ೦ದ ಸುಮಾರು 7 ಕಿಲೋಮೀಟರ್ ದೂರದಲ್ಲಿದೆ ಮತ್ತು ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಿಂದ 3 ಕಿ.ಮೀ ದೂರದಲ್ಲಿದು ಚಾಮುಂಡಿ ಬೆಟ್ಟಗಳ ಕಾಲುಭಾಗದಲ್ಲಿ. ಜ್ವಾಲಾಮುಖಿ ದೇವಿಯು ಚಾಮುಂಡೇಶ್ವರಿಯ ದೇವಿಯ ಸಹೋದರಿ ಎಂದು ನಂಬಲಾಗಿದೆ. ದೇವಿಯನ್ನು ಉತ್ತನಹಳ್ಳಿ ಮಾರಮ್ಮ, ಉತ್ತನಹಳ್ಳಿ ಊರುಗತಿ ಎಂದು ಕರೆಯುತಾರೆ.
ಹಿನ್ನಲೆ ಅಥವಾ ಇತಿಹಾಸ:
[ಬದಲಾಯಿಸಿ]ದೇವಿ ಪುರಾಣದ ಪ್ರಕಾರ,ರಾಕ್ಷಸರು ಕಠಿಣ ತಪಸ್ಸುಗಳನ್ನು ಮಾಡಿ ದೇವರುಗಳಿಂದ ಅಮರತ್ವ ಹಾಗೂ ಮುಂತಾದ ವರಗಳನ್ನು ಪಡೆದುಕೊಂಡು ದೇವತೆಗಳು ಹಾಗೂ ಮನುಷ್ಯರ ಮೇಲೆ ಅಟ್ಟಹಾಸ ಮೆರೆಯುತಿದ್ದ ಕಾಲವದು. ಈ ರಾಕ್ಷಸರ ಕಾಟಗಳಿಂದ ಬೇಸತ್ತ ದೇವತೆಗಳು ತ್ರಿಮೂರ್ತಿಗಳ ಮೊರೆ ಹೋಗುತಾರೆ. ಒಬ್ಬ ಸ್ತೀಯಿಂದಲೇ ಈ ರಾಕ್ಷಸರ ಮರಣವೆಂಬುದು ತಿಳಿದಿದ್ದ ತ್ರಿಮೂರ್ತಿಗಳು ತಮ್ಮ ಶಕ್ತಿಗಳನ್ನು ಧಾರೆಯೆರೆಯುತಾರೆ ಈ ಶಕ್ತಿಗಳಿಂದ ಶೃಷ್ಟಿಯಾದ ದೇವಿಯೇ ಚಾಮುಂಡೇಶ್ವರಿ ಅಥವಾ ದುರ್ಗಾ ಎಂಬ ನಂಬಿಕೆ ಇದೆ. ಹೇಗೆ ರಾಕ್ಷಸರ ಸಂಹಾರಕೆಂದೆ ಜನ್ಮತಾಳಿದ ದೇವಿಯು ಓಬೋಬ ರಕ್ಷರನು ಸಂಹರಿಸುತ ಬರುವಳು. ಹೇಗೆ ರಕ್ತಬೀಜಾಸುರ ಎಂಬ ರಾಕ್ಷಸನನ್ನು ಸಂಹರಿಸುವ ವೇಳೆಯಲಿ ಎಷ್ಟು ಬರಿ ಆತನ ಶಿರಸ್ಛೇಧನ ಮಾಡಿದರು ಸಹ ಆತನ ಶಿರವು ಮತ್ತೆ ಕೂಡಿಕೊಳುತಿತ್ತು ಹಾಗೂ ಪ್ರತಿಬರಿ ಆತನ ರಕ್ತವು ನೆಲದಮೇಲೆ ಬಿದ್ದಾಗೆಲ್ಲಾ ಸಹಸ್ರರು ರಾಕ್ಷಸರು ಹುಟ್ಟಿಕೊಳುತಿದರು . ಹೀಗಾಗಿ ಎಷ್ಟೇ ಬರಿ ಸಂಹರಿಸಿದರು ಆತನ ಅಂತ್ಯವಾತುತಿರಲಿಲ್ಲಾ. ಇದರಿಂದ ಬೇಸತ್ತ ದೇವಿ ಚಾಮುಂಡೇಶ್ವರಿಯು ತನ್ನ ಹಣೆಯ ಬೆವರನ್ನು ಆಗ್ನೇಯ ದಿಕ್ಕಿನಲಿ ಹಾಕಿ ಕೌಶಿಕೆ ಎಂದು ಕೂಗುತಾಳೆ, ಹೇಗೆ ಚಾಮುಂಡೇಶ್ವರಿಯ ಬೆವರಿನಿಂದ ಜನ್ಮತಾಳಿದ ದೇವಿಯೇ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ. ಹೇಗೆ ಜನ್ಮತಾಳಿದ ತ್ರಿಪುರ ಸುಂದರಿ ದೇವಿಯು ಅಕ್ಕ ಚಾಮುಂಡೇಶ್ವರಿಯ ಆಜ್ಞೆಯನ್ನು ಕೇಳುತಾಳೆ. ಇದಕೆ ಪ್ರತಿಯಾಗಿ ಚಾಮುಂಡೇಶ್ವರಿ ಪ್ರತಿಬರಿ ರಕ್ತಬೀಜಾಸುರನ ರಕ್ತವು ನೇಲದಮೇಲೆ ಬಿದಾಗಲೂ ಸಹಸ್ರರರು ರಾಕ್ಷಸ ಹುಟ್ಟಿಕೊಳುತಿರುವ ಕಾರಣ ಆತನನ್ನು ಸಂಹರಿಸಲು ಸಾದ್ಯವಾಗುತ್ತಿಲ್ಲಾ ಎಂದು ಹೇಳುತಾಳೆ. ಅಕ್ಕ ಚಾಮುಂಡೇಶ್ವರಿಯ ಸಮಸ್ಯೆಯನ್ನು ಅರಿತ ತಂಗಿ ತ್ರಿಪುರ ಸುಂದರಿಯೂ ತನ್ನ ನಾಲಿಗೆಯನ್ನು ಭೂಮಿಯಾಗಲ ಚಾಚುತಾಳೆ. ಹೇಗೆ ತನ್ನ ನಾಲಿಗೆಯನ್ನು ಯುದ್ಧಭೂಮಿಯನಾಗಿಸಿ ಅದರಮೇಲೆ ರಕ್ತಬೀಜಾಸುರನನ್ನು ಸಂಹರಿಸುವಂತೆ ಹಾಗೂ ಆತನ ರಕ್ತ ಮಾಂಸಗಳು ನೆಲಕೆ ಬಿಳಾದಂತೆ ಅವುಗಳನ್ನು ಪಾನ ಮಾಡುವುದಾಗಿ ಹೇಳಿದಳು ತನ್ನ ಮಾಯಾ ಸ್ವರೂಪದಿಂದ ಬೆಟ್ಟದಲೆಲ್ಲಾ ತನ್ನ ನಾಲಿಗೆಯನು ಚಾಚಿದಾಳಾಂತೆ. ಅದರಂತೆಯೇ ಚಾಮುಂಡೇಶ್ವರಿಯು ತನ್ನ ತಂಗಿಯ ಸಹಾಯದಿಂದ ರಕ್ತಬೀಜಾಸುರನ ಸಂಹಾರ ಮಾಡುತಾಳೆ. ಹೇಗೆ ರಾಕ್ಷಸನನ್ನು ಸಂಹರಿಸಲು ಸಹಾಯಮಾಡಿದ ತ್ರಿಪುರ ಸುಂದರಿ ದೇವಿಯನ್ನು ಚಾಮುಂಡೇಶ್ವರಿಯು ತನ್ನ ಜಾತ್ರೆ, ತೆಪ್ಪ, ತೇರುಗಳಲ್ಲಿ ಸಮ ಭಾಗ ಕೊಡುವುದಾಗಿ ಹೇಳಿ ಆಜ್ಞೆಯ ದಿಕ್ಕಿನಲ್ಲಿರುವ ರಾಮಾನಾಥ ಗಿರಿಯಲ್ಲಿ ನೆಲೆಸುವಂತೆ ಹೇಳುತಾಳೆ, ಈ ರಾಮಾನಾಥ ಗಿರಿಯು ಶ್ರೀರಾಮನು ಅಜ್ನ್ಯಾತವಾಸದಲಿ ಈಶ್ವರನನ್ನು ಪೂಜಿಸಿದ ಸ್ಥಳವಾಗಿದೆ ಹಾಗೂ ಎಲ್ಲಿ ಈಶ್ವರನು ನೆಲಸಿರುವನು. ತಂಗಿ ತ್ರಿಪುರ ಸುಂದರಿಯನ್ನು ಇಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಹೇಳುತಾಳೆ.
ದೇವಸ್ಥಾನದ ಕುರಿತು:
[ಬದಲಾಯಿಸಿ]ಇದು ಪುರಾತನ ದೇವಾಲಯವಾಗಿದೆ. ದೇವಸ್ಥಾನದಲ್ಲಿ ದೇವಿ ತ್ರಿಪುರ ಸುಂದರಿಯೂ ಪಶ್ಚಿಮಾಭಿಮುಖವಾಗಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯು ಉದ್ಭವಮೂರ್ತಿಯು ಪೂರ್ವಾಭಿಮುಖವಾಗಿ ನೆಲೆಸಿರುವುದನು ಕಾಣಬಹುದು. ಈ ದೇವಾಲಯವು ಬೆಳಗ್ಗೆ ೭:೩0 ರಿಂದ ೨:00 ಹಾಗೂ ೩:೩0 ರಿಂದ ೮:೩0 ತೆರೆದಿರುವುದು ಹಾಗೂ ಆಷಾಡ, ಪಾವ್ರ್ನಮಿ ಹಾಗೂ ಅಮಾವಾಸ್ಯೆಯ ದಿನಗಳಲ್ಲಿ ಬೆಳಗಿನಿಂದ ರಾತ್ರಿಯವರೆಗೂ ತೆರೆದಿರುತದೆ.ದೇವಾಲಯದ ಪರಿಸರವು ಶಾಂತ ಹಾಗೂ ಸುಂದರವಾಗಿದು ಭಕ್ತರು ಹಾಗೂ ಪ್ರವಾಸಿಗರನ್ನು ತನ್ನತಾ ಸೆಳೆಯುವುದು
ಜಾತ್ರೆಯ ಕುರಿತು:
[ಬದಲಾಯಿಸಿ]ಪ್ರತಿವರ್ಷದ ಮಾಘಮಾಸದಲ್ಲಿ ೩ ದಿನಗಳ ಕಾಲ ಜಾತ್ರ ಮಹೋತ್ಸವ ನೆಡೆಯುವುದು. ಹಾಗೂ ಇಲ್ಲಿ ದೇವಿಯಲ್ಲಿ ವರಾ ಕೇಳುವ ಪದ್ದತಿಯು ವಿಶೇಷವಾಗಿದೆ. ಹಾಗೂ ವಿವಿಧ ಕಾರ್ಯಗಳಿಗೆ ಹರಕೆಹೊತ್ತರೆ ಶೀಘ್ರವಾಗಿ ನೆರವೇರುವುದೆಂಬ ನಂಬಿಕೆ ಇದೆ.
ದೇವಿಯ ಬಗೆಗಿನ ಉಲೇಖಗಳು:
[ಬದಲಾಯಿಸಿ]ದೇವಿ ಮಹಾತ್ಮೆಯ ಎಂಟನೇ ಅಧ್ಯಯದಲ್ಲಿ ರಕ್ತ ಬೀಜಸುರನ ಸಂಹಾರ ಮಾಡಿದ ಕಥೆಯಲ್ಲಿ ದೇವಿಯ ಉಲ್ಲೇಖ ಇದೆ. ಹಾಗೂ ಚಾಮುಂಡೇಶ್ವರಿ ನಂಜುಂಡೇಶ್ವರ ಪ್ರೇಮ ಕಥೆಯಲ್ಲಿ ದೇವಿಯ ಪತ್ರ ಹಾಗೂ ಉಲೇಖಗಳು ಇವೆ. ಚಾಮುಂಡೇಶ್ವರಿಯ ಆಜ್ಞೆಯಂತೆ ಜ್ವಲಮುಖಿ ತ್ರಿಪುರ ಸುಂದರಿ ದೇವಿಯು ಭಾವ ನಂಜುಂಡೇಶ್ವರನನ್ನು ಕರೆಯುವ ಪ್ರಸಂಗವು ಜಾನಪದಿಗರ (ತಂಬೂರಿ ಶೈಲಿಯಲ್ಲಿ ) ಮೂಡಿಬರುವುದು.