ಸದಸ್ಯ:Meera Gopala Rao/ಭೀಮಗಡ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೀಮಗಡ ಕೋಟೆಯು ಭಾರತಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲಾ ಖಾನಾಪುರ ತಾಲ್ಲೂಕಿನ ಬಳಿಯ ಜಂಬೋತಿ ಹಳ್ಳಿಯಲ್ಲಿ <a href="./ಭೀಮಗಡ ವನ್ಯಜೀವಿ ಅಭಯಾರಣ್ಯ" rel="mw:WikiLink" data-linkid="5" data-cx="{&quot;adapted&quot;:false,&quot;sourceTitle&quot;:{&quot;title&quot;:&quot;Bhimgad Wildlife Sanctuary&quot;,&quot;thumbnail&quot;:{&quot;source&quot;:&quot;https://upload.wikimedia.org/wikipedia/commons/thumb/5/55/Otomops_wroughtoni.jpg/80px-Otomops_wroughtoni.jpg&quot;,&quot;width&quot;:80,&quot;height&quot;:57},&quot;description&quot;:&quot;Wildlife Sanctuary in Karnataka, India&quot;,&quot;pageprops&quot;:{&quot;wikibase_item&quot;:&quot;Q4901777&quot;},&quot;pagelanguage&quot;:&quot;en&quot;},&quot;targetFrom&quot;:&quot;mt&quot;}" class="cx-link" id="mwCA" title="ಭೀಮಗಡ ವನ್ಯಜೀವಿ ಅಭಯಾರಣ್ಯ">ಭೀಮಗಡ ವನ್ಯಜೀವಿ ಅಭಯಾರಣ್ಯದ</a> ಒಂದು ದಿಣ್ಣೆಯ ಮೇಲೆ ಐತಿಹಾಸಿಕ ಅವಶೇಷಗಳ ರೂಪದಲ್ಲಿ ಸ್ಥಿತವಾಗಿದೆ. ಇದು ಮಹದೇ ನದಿಯ ಜಲಾನಯನ ಪ್ರದೇಶದ ಹೃದಯಭಾಗದಲ್ಲಿದೆ. 17 ನೇ ಶತಮಾನದಲ್ಲಿ ಗೋವಾವನ್ನು ನಿಯಂತ್ರಿಸುತ್ತಿದ್ದ ಪೋರ್ಚುಗೀಸ್ ವಸಾಹತು ಸೈನ್ಯಗಳ ಹಿಡಿತದಿಂದ ದಕ್ಷಿಣ ಭಾರತವನ್ನು ಉಳಿಸಲು ಜೈತ್ರಯಾತ್ರೆ ಹೊರಟ ಶಿವಾಜಿಯು ನಿರ್ಮಿಸಿ ವಶದಲ್ಲಿಟ್ಟುಕೊಂಡ ಕೋಟೆ ಇದು.

ಸ್ಥಳ[ಬದಲಾಯಿಸಿ]

ಕೋಟೆಯು <a href="./ಜಾಂಬೋಟಿ" rel="mw:WikiLink" data-linkid="9" data-cx="{&quot;adapted&quot;:false,&quot;sourceTitle&quot;:{&quot;title&quot;:&quot;Jamboti&quot;,&quot;thumbnail&quot;:{&quot;source&quot;:&quot;https://upload.wikimedia.org/wikipedia/commons/thumb/9/9c/India_Karnataka_location_map.svg/56px-India_Karnataka_location_map.svg.png&quot;,&quot;width&quot;:56,&quot;height&quot;:80},&quot;description&quot;:&quot;Village in Karnataka, India&quot;,&quot;pageprops&quot;:{&quot;wikibase_item&quot;:&quot;Q6127845&quot;},&quot;pagelanguage&quot;:&quot;en&quot;},&quot;targetFrom&quot;:&quot;mt&quot;}" class="cx-link" id="mwDA" title="ಜಾಂಬೋಟಿ">ಮಹದೇ ವನ್ಯಜೀವಿ ಅಭಯಾರಣ್ಯ</a>ಕ್ಕೆ ಮುಖ ಮಾಡಿರುವ ಬೆಟ್ಟದ ಇಳಿಜಾರಿನ ಮೇಲೆ ೩೦೦ ಅಡಿ ಎತ್ತರದ ಶಿಖರದ ಮೇಲಿದೆ. ಪಶ್ಚಿಮದ ಬಯಲು ಪ್ರದೇಶದಿಂದ ೧೮೦೦ ಅಡಿಗಳಷ್ಟು ಎತ್ತರಕ್ಕೆ ಹೆಚ್ಚು ಕಮ್ಮಿ ಲಂಬವಾಗಿ ನಿಂತಿದೆ. ಕೋಟೆಯ ರಕ್ಷಣೆಯು ಬಹುಮಟ್ಟಿಗೆ ಪ್ರಾಕೃತಿಕ ರಚನೆಗಳಿಂದಲೇ ಸಾಧಿತವಾಗಿದ್ದು, ಅಲ್ಪ ಮಾತ್ರದ ಕಟ್ಟೋಣವು ಅಗತ್ಯವಾಗಿತ್ತು. [೧]

೧೬೭೬ರ ಅಂತ್ಯದ ವೇಳೆಗೆ ಛತ್ರಪತಿ ಶಿವಾಜಿ ಬೆಳಗಾವಿ ಮತ್ತು ಪ್ರಸ್ತುತ ಉತ್ತರ ಕರ್ನಾಟಕದಲ್ಲಿರುವ ವಾಯೆಮ್ ರಾಯೀಮ್ ಅನ್ನು ಮುತ್ತಿಗೆ ಹಾಕಿದರು. ಇಲ್ಲಿಂದ ಅವರು 30,000 ಅಶ್ವಸೈನ್ಯ ಮತ್ತು 20,000 ಪದಾತಿಗಳ ಒಂದು ದೊಡ್ಡ ಬಲದೊಂದಿಗೆ ದಕ್ಷಿಣ ಭಾರತದಲ್ಲಿ ವಿಜಯದ ಅಲೆಯನ್ನು ಹುಟ್ಟು ಹಾಕಿದರು. [೨] ಛತ್ರಪತಿ ಶಿವಾಜಿ ೧೬೮೦ ರಲ್ಲಿ ನಿಧನರಾದಾಗಲೂ ಅವರ ಒಡೆತನದಲ್ಲಿಯೇ ಉಳಿದಿದ್ದ ಕೋಟೆಗಳಲ್ಲಿ ಭೀಮಗಡ ಕೋಟೆಯೂ ಸೇರಿತ್ತು. [೧]

೧೭೧೯ರಲ್ಲಿ, ಶಿವಾಜಿಯ ಮೊಮ್ಮಗನಾದ ಛತ್ರಪತಿ ಶಾಹುಗೆ ನೀಡಿದ 16 ಜಿಲ್ಲೆಗಳೊಂದಿಗೆ ಕೋಟೆಯನ್ನೂ ಸೇರಿಸಲಾಯಿತು. ಸುಮಾರು ೧೭೮೭ರಲ್ಲಿ ಕೋಟೆಯನ್ನು ನೇಸಗರಿ ಮುಖ್ಯಸ್ಥನು ವಶ ಪಡಿಸಿಕೊಂಡನು. ಆದರೆ ಶೀಘ್ರದಲ್ಲೇ ಅದನ್ನು ಮರಳಿ ಪಡೆಯಲಾಯಿತು. ೧೮೨೦ರಲ್ಲಿ ಬ್ರಿಟಿಷರ ಕಣ್ಣು ಕೋಟೆಯ ಮೇಲೆ ಬಿತ್ತು. ೧೮೪೪ ರಲ್ಲಿ ಬೆಳಗಾವಿಗೆ ಬೆದರಿಕೆಯೊಡ್ಡಿದ ದಂಗೆಕೋರರಿಂದ ರಕ್ಷಣೆಗಾಗಿ ಇದನ್ನು ಅವರು ಆಕ್ರಮಿಸಿಕೊಂಡರು. [೨]

ಕೋಟೆಗೆ ಹೋಗಲು ಒಂದು ಕಿರಿದಾದ, ಕಲ್ಲಿನಲ್ಲಿ ಕೆತ್ತಿದ ಜಾಡು ಇದೆ. ಕೋಟೆಯ ಅವಶೇಷಗಳು ಉತ್ತರದಿಂದ ದಕ್ಷಿಣಕ್ಕೆ ೧೩೮೦ ಅಡಿ (೪೨೦ಮೀ) ಉದ್ದ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ೮೨೫ ಅಡಿ (೨೫೧ಮೀ) ಅಗಲದಷ್ಟು ವ್ಯಾಪಿಸಿದೆ.  ಕೋಟೆಯು ಕೇವಲ ಒಂದು ದ್ವಾರವನ್ನು ಹೊಂದಿದೆ ಮತ್ತು ಗೋಡೆಗಳು ಇನ್ನೂ ಸಾಕಷ್ಟು ಭದ್ರವಾಗಿಯೇ ಇವೆ. ಒಳಭಾಗವು ಪೊದೆಗಳಿಂದ ತುಂಬಿದೆ. ಪಶ್ಚಿಮ ಭಾಗದಲ್ಲಿ ಒಂದು ಸಿಹಿನೀರಿನ ಬುಗ್ಗೆ ಮತ್ತು ಉತ್ತರದಲ್ಲಿ ಒಂದು ಸಣ್ಣ ಜಲಾಶಯವಿದೆ. ಇವೆರಡೂ ವರ್ಷದಲ್ಲಿ ಕಡು ಬೇಸಗೆಯ ಎರಡು ತಿಂಗಳು ಒಣಗಿರುತ್ತವೆ. ಕೋಟೆಯು ಎಂಟು ಪೌಂಡ್ ಬಂದೂಕು ಮತ್ತು ಮೂರು ಪೌಂಡ್ ಬಂದೂಕಿನ ಜೊತೆಗೆ ಗೋಡೆಯ ತುಪಾಕಿ ಹೊಂದಿತ್ತು. ಶಿವಾಜಿಯು ೧೬೮೦ರಲ್ಲಿ ನಿಧನರಾದಾಗಲೂ ಅವರ ಒಡೆತನದಲ್ಲಿದ್ದ ಕೋಟೆಗಳಲ್ಲಿ ಭೀಮಗಡ ಕೋಟೆಯೂ ಸೇರಿತ್ತು. [೧]

ಉಲ್ಲೇಖಗಳು[ಬದಲಾಯಿಸಿ]

 

  1. ೧.೦ ೧.೧ ೧.೨ Bimgad Fort. Vol. 21. Bombay: Government Central Press. 1877. pp. 9, 552. Retrieved 2012-01-14. {{cite book}}: |work= ignored (help) ಉಲ್ಲೇಖ ದೋಷ: Invalid <ref> tag; name "GBP" defined multiple times with different content
  2. ೨.೦ ೨.೧ Purandare, Babasaheb (August 2003). "Raja Shivachhatrapati (Marathi: राजा शिवछत्रपती)" (15th ed.). Pune: Purandare Prakashan. {{cite journal}}: Cite journal requires |journal= (help) ಉಲ್ಲೇಖ ದೋಷ: Invalid <ref> tag; name "Babasaheb Purandare" defined multiple times with different content