ವಿಷಯಕ್ಕೆ ಹೋಗು

ಸದಸ್ಯ:Mandara.L/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]
ಚಿಯಾಂಗ್ ಕಾಯ್ ಶೇಕ್
(ಅಕ್ಟೋಬರ್ ೩೧, ೧೮೮೭ - ಏಪ್ರಿಲ್ ೫, ೧೯೭೫) ಚೀನಾದ ಒಬ್ಬ ರಾಜಕಾರಣಿ ಮತ್ತು ಮಿಲಿಟರಿಯ ನಾಯಕನಾಗುವುದರ ಜೊತೆಗೆ "ರಿಪಬ್ಲಿಕ್ ಆಫ್ ಚೀನಾ" ನಾಯಕನಾಗಿಯೂ ಕೂಡ (೧೯೨೮ ಮತ್ತು ೧೯೭೫ ರೊಳಗೆ) ಸೇವೆ ಸಲ್ಲಿಸಿದ್ದಾನೆ. ಚಿಯಾಂಗ್, ಕುವಾಮಿಂಗ್ ಟಾಂಗ್ ಎಂಬ ಚೀನಾದ ರಾಷ್ಟೀಯತಾವಾದಿ ಪಕ್ಷದಲ್ಲಿ ಒಬ್ಬ ಪರಿಣಾಮಕಾರಿ ಸದಸ್ಯನಾಗಿದ್ದ ಮತ್ತು ಸನ್ ಯತ್ ಸೇನನ ಶಿಶ್ಯನಾಗಿದ್ದ. ಚಿಯಾಂಗ್ ಕುವಾಮಿಂಗ್ ಟಾಂಗ್ ವಾಂಪೋ ಮಿಲಿಟರಿ ಅಕ್ಯಾಡಮಿಯ ಕಮಾಂಡಂಟ್ ಆದ. ತಮ್ಮ ನಾಯಕ ಸನ್ ಯತ್ ಸೇನ್ ೧೯೨೫ರಲ್ಲಿ ವಿಧಿವಶರಾಗುತ್ತರೆ. ಆಗ ಅವರ ಉತ್ತರಾಧಿಕಾರಿಯಾಗಿ ಚಿಯಾಂಗ್ ಅವರ ಸ್ಥಾನವನ್ನು ಅಲಂಕರಿಸುತ್ತಾನೆ ಮತ್ತು ಅದರ ಮೂಲಕ ಕುವಾಮಿಂಗ್ ಟಾಂಗ್ ನ ನಾಯಕನಾಗುತ್ತಾನೆ. ೧೯೨೬ರಲ್ಲಿ ಚಿಯಾಂಗ್ ಚೀನಾ ದೇಶದ ನಾಯಕನಾಗಿ ದೇಶವನ್ನು ಒಗ್ಗೂಡಿಸಲು ಉತ್ತರ ದಂಡಯಾತ್ರೆಯನ್ನು ಮಾರ್ಗದರ್ಶಿಸುತ್ತಾನೆ. ನಂತರ ಚಿಯಾಂಗ್ ರಿಪಬ್ಲಿಕ್ ಆಫ್ ಚೀನಾದ, ರಾಷ್ಟೀಯತಾವಾದಿ ಸರ್ಕಾರದ ರಾಷ್ಟೀಯ ಮಿಲಿಟರಿ ಕೌನ್ಸಿಲ್ ನ ಅಧ್ಯಕ್ಷನಾಗಿ (೧೯೨೮ ರಿಂದ ೧೯೪೮ರೊಳಗೆ) ಹಿಂದಿದ್ದ ಪ್ರಾದೇಶಿಕ ವಾರ್ ಲಾರ್ಡ್ ಗಳ ಅಧಿಕಾರವನ್ನು ಕ್ರೋಡೀಕರಿಸಿ ಚಿನಾದ ಎರಡನೆ ಸಿನೋ ಜ್ಯಾಪನೀಸ್ ಯುಧ್ದದ ನೇತ್ರತ್ವವನ್ನು ಚಿಯಾಂಗ್ ವಹಿಸಿಕೊಳ್ಳುತ್ತಾನೆ. ಚಿಯಾಂಗ್ ಕಾಯ್ ಶೇಕ್ ತನ್ನ ನಾಯಕ ಸನ್ ಯತ್ ಸೇನ್ ನ ಹಾಗೆ ನ್ಯೂ ಲೈಫ್ ಚಳುವಳಿಯಲ್ಲಿ ಸಾಮಾಜಿಕ ಸಂಪ್ರದಾಯ ಮತ್ತು ಚೀನಾದ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದನಲ್ಲದೆ ಸನ್ ಪರವಾಗಿದ್ದ ಸರ್ವಾಧಿಕಾರಿ ಸರ್ಕಾರದ ಪಶ್ಚಿಮ ಪ್ರಜಾಪ್ರಭುತ್ವ ಮತ್ತು ರಾಷ್ಟೀಯತಾವಾದಿ ಪ್ರಜಾಪ್ರಭುತ್ವ ಸಮಾಜವಾದವನ್ನು ತಿರಸ್ಕರಿಸುತ್ತಾನೆ. 

ಚಿಯಾಂಗ್ ನ ನಾಯಕ ಸನ್ ಯತ್ ಸೇನ್ ನನ್ನು ಸಮತಾವಾದಿಗಳು ಇಷ್ಟಪಟ್ಟು ಗೌರವಿಸುತ್ತಿದ್ದರು. ಆದರೆ ಸನ್ ಯತ್ ಸೇನ್ ನ ಮರಣದ ನಂತರ ಅವನ ಉತ್ತರಾಧಿಕಾರಿಯಾಗಿದ್ದ ಚಿಯಾಂಗ್ ಅದೇ ಚಿನಾದ ಸಮತಾವಾದಿ ಪಕ್ಷದ ಜೊತೆ ಒಳ್ಳೆ ಬಾಂಧವ್ಯವನ್ನು ಬೆಳೆಸಲು ಸಾಧ್ಯವಾಗಲಿಲ್ಲ.೧೯೨೭ರಲ್ಲಿ ಶಾಂಘಾಯ್ ನಲ್ಲಿ ಹತ್ಯಾಕಾಂಡ ನಡೆಯುವುದು.ಚಿಯಾಂಗ್ ನಾಯಕತ್ವದಲ್ಲಿ ರಾಷ್ಟೀಯತಾವಾದಿಗಳು ದೇಶಾದ್ಯಂತ ಕಮ್ಯುನಿಸ್ಟ್ ಗಳ ವಿರುದ್ಧ ಅಂತರ್ಯುದ್ಧವನ್ನು ನಡೆಸುತ್ತಾರೆ. ಅದರ ಪರಿಣಾಮವಾಗಿ ರಾಷ್ಟೀಯತಾವಾದಿ ಮತ್ತು ಕಮ್ಯುನಿಸ್ಟ್ ಗಳ ನಡುವೆ ಪ್ರಮುಖ ಒಡುಕು ಮೂಡುತ್ತದೆ. ೧೯೩೭ ರಲ್ಲಿ ಜಪಾನ್ ದೆಶವು ಚೀನಾ ದೇಶದ ಮೇಲೆ ಆಕ್ರಮಣ ನಡೆಸುತ್ತದೆ. ಆ ಸಮಯದಲ್ಲಿ ಜಾಂಗ್ ಜುಯಿಲಿಯಾಂಗ್ ಎಂಬ ವಾರ್ ಲಾರ್ಡ್ ಚಿಯಾಂಗ್ ನನ್ನು ಬಂಧಿಸುತ್ತಾನೆ. ಬಂಧಿಸಿದ ನಂತರ ಸಿ.ಸಿ.ಪಿಯ ಜೊತೆ ಒಂದು ತಾತ್ಕಾಲಿಕ ಒಪ್ಪಂದವನ್ನು ಮಾಡಿಕೊಳ್ಳಲು ಚಿಯಾಂಗ್ ನನ್ನು ಒತ್ತಾಯುಸುತ್ತಾನೆ. ಜಪಾನ್ ವಿರುದ್ಧ ಮೊದಲಿನ ಸಹಕಾರಿ ಮಿಲಿಟರಿ ಜಯ ಸಾಧಿಸಿದರ ಹೊರತಾಗಿಯೂ ಜ್ಯಾಪನೀಸರು ೧೪೫ರಲ್ಲಿ ಶರಣಾಗತರಾಗುವಷ್ಟರಲ್ಲಿ ಸಿ.ಸಿ.ಪಿ ಮತ್ತು ಕೆ ಮ್ ಟಿಯ ನಡುವಿನ ನಂಬಿಕೆಯಾಗಲಿ ಸಹಕಾರ ಮನೋಭಾವವಾಗಲಿ ಉಳಿದುಕೊಂಡಿರಲಿಲ್ಲ.ಮಾರ್ಶಲ್ ಮಿಷನ್ ನ ನಂತರ ಒಬ್ಬ ಅಮೇರಿಕ ದೇಶದಲ್ಲಿ ಒಂದುಗೂಡಿಕೆ ಸರ್ಕಾರವನ್ನು ರಚಿಸಲು ಸಮಾಲೋಚಿಸುವ ಪ್ರಯತ್ನ ಮಾಡಿದನಾದರು ಅದು ೧೯೪೬ರಲ್ಲಿ ವಿಫಲವಾಯಿತು.ಆದರೆ ಅದರ ಪರಿಣಾಮವಾಗಿ ಚಿನಾ ವಾರ್ ಕೈಗೆತ್ತಿಕೊಂಡಿತು.ಸಿ.ಸಿ.ಪಿ.ಯು ರಾಷ್ಟೀಯತಾವಾದಿಗಳನ್ನು ೧೯೪೯ರಲ್ಲಿ ಸೋಲಿಸಿತು.ವೆಸ್ಟಾಡ್ ಎಂಬ ಬರಹಾಗಾರನು ಹೇಳುವ ಪ್ರಕಾರ ಕಮ್ಯುನಿಸ್ಟರು ಅಂತರ್ಯುದ್ಧದಲ್ಲಿ ಜಯ ಸಾಧಿಸಲು ಕಾರಣವೇನೆಂದರೆ ಅವರು ಚಿಯಾಂಗ್ ಕಾಯ್ ಶೇಕ್ ಗಿಂತ ಕೆಲವೊಂದು ಮಿಲಿಟರಿ ತಪ್ಪುಗಳನ್ನು ಮಾತ್ರ ಮಾಡಿದ್ದರು ಮತ್ತು ಇನ್ನೊಂದು ಕಾರಣ ಚಿಯಾಂಗ್ ಪ್ರಬಲ ಕೇಂದ್ರೀಕ್ರತ ಸರ್ಕಾರವನ್ನು ಹುಡುಕುವುದರಲ್ಲಿ ಅನೇಕ ಹಿತಾಸಕ್ತಿ ಗುಂಪುಗಳ ವಿರೋಧವನ್ನು ಕಟ್ಟಿಕೊಂಡಿರುತ್ತನೆ.ಇನ್ನಷ್ಟು ಜಪಾನ್ ಮೇಲಿನ ಯುದ್ಧದಲ್ಲಿ ಅವನ ಪಕ್ಷ ದುರ್ಬಲಗೊಂಡಿತು.ಅಷ್ಟರಲ್ಲಿ ಕಮ್ಯುನಿಸ್ಟರು ಅನೇಕ ಬೇರೆ ಗುಂಪುಗಳಾದ ರೈತರ ಗುಂಪುಗಳನ್ನೆಲ್ಲ ಚಿನಾ ರಾಷ್ಟ್ರೀಯತಾವಾದ ಪಕ್ಷಕ್ಕೆ ಸೇರಿಸಿಕೊಂಡಿತು.

ಬೆಳವಣಿಗೆ

[ಬದಲಾಯಿಸಿ]

ಚಿಯಾಂಗ್ "ಮರ್ಶಿಯಲ್ ಲಾ"ವನ್ನು ಹೇರುತ್ತಿದ್ದಾಗ ಮತ್ತು "ವೈಟ್ ಟೆರರ್" ಎಂಬ ಅವಧಿಯಲ್ಲಿ ಜನರಿಗೆ ನಿರ್ಣಾಯಕ ಕಿರುಕುಳವನ್ನು ಕೊಡುತ್ತಿದ್ದ ಸಮಯದಲ್ಲಿ ಚಿಯಾಂಗ್ ಸರ್ಕಾರ ಮತ್ತು ಸೈನ್ಯ ತೈವಾನ್ ಗೆ ಹಿಮ್ಮೆಟ್ಟಿತು.ತೈವಾನ್ ಗೆ ವಿಸರ್ಜಿಸಿದ ನಂತರ ಚಿಯಾಂಗ್ ನ ಸರ್ಕಾರವು ಚಿನಾದ ಮುಖ್ಯಭೂಮಿಯನ್ನು ಹಿಂಪಡೆಯುವ ಅದರ ಉದ್ದೇಶವನ್ನ್ನು ಘೋಷಿಸಲು ಮುಂದುವರೆಯಿತು.ಚಿಯಾಂಗ್ ತೈವಾನ್ ನನ್ನು ಮತ್ತು ಜೆನರಲ್ ಆಫ್ ಕುವಾಮಿಂಗ್ ಟಾಂಗ್ ನ ಲೌಕಿಕವಾಗಿ ತಾನು ಸಾಯುವವರೆಗೂ (೧೯೭೫)ಆಡಳೆತ ನಡೆಸಿದ.ಚಿಯಾಂಗ್ ಜಿಕುವ್ ಎಂಬ ಸ್ಥಳದಲ್ಲಿ ಜನಿಸಿದ.ಆ ಜಾಗವು ಜಿಜಿಯಾಂಗ್ ನ ನಿಂಗ್ ಬೊ ಪಟ್ಟಣಕ್ಕೆ ಸುಮಾರು ಮೂವತ್ತು ಕಿಲೋಮೀಟರ್ ಗಳ ದೂರದಲ್ಲಿದೆ.ಚಿಯಾಂಗ್ ನ ಪುರಾತನರು ಹೆಕ್ಲಾವೊ ಎಂಬ ಪ್ರದೇಶದಿಂದ ಬಂದವರಾಗಿದ್ದರು.ಟ್ಯಾಂಗ್ ನ ತಂದೆ ಜಿಯಾಂಗ್ ಜಾಂಗ್ ಕಾಂಗ್ ಮತ್ತು ತಾಯಿ ವಾಂಗ್ ಕಾಯು.ಇವರು "ಸಾಲ್ಟ್ ಮರ್ಚ್ಂಟ್" ಎಂಬ ಕುಟುಂಬಕ್ಕೆ ಸೇರಿದವರು ಮತ್ತು ಚಿನಾ ಸಮಾಜದಲ್ಲಿ ಮೇಲು ವರ್ಗಕ್ಕೆ ಸೇರಿದವರಾಗಿದ್ದರು.ಚಿಯಾಂಗ್ ಎಂಟು ವರ್ಷದ ಬಾಲಕನಾಗಿದ್ದಾಗಲೆ ತನ್ನ ತಂದೆಯನ್ನು ಕಳೆದುಕೊಂಡ.ಚಿಯಾಂಗ್ ತನ್ನ ತಾಯಿಯನ್ನು "ಎಂಬಾಡಿಮೆಂಟ್ ಆಫ್ ಕನ್ಫೂಸಿಯನ್ ವರ್ಚ್ಯೂಸ್" ಎಂದು ವರ್ಣಿಸಿದ್ದಾನೆ.ಚಿನಾ ದೇಶವು ವಾರ್ ಲಾರ್ಡ್ ಗಳ ನಡುವಿನ ಯುದ್ಧಗಳಿಂದ ಅಸ್ಥಿರಗೊಳಿಸಿ ಮತ್ತು ಸಾಲ ಮಾಡಿಕೊಂಡ ದೇಶವಾಗಿತ್ತು. ಈ ಸಂದರ್ಭದ ನಡುವೆ ಮತ್ತು ಜೊತೆ ಜೊತೆಗೆ ಚಿಯಾಂಗ್ ಬೆಳೆಯುತ್ತಾನೆ.ಪಾಶ್ಚಿಮಾತ್ಯ ಬಲಗಳು ಮತ್ತು ಜಪಾನ್ ೧೮೩೯ - ೧೮೬೦ರ ಅಫೀಮು ಯುದ್ಧಗಳ ಸತತ ಬೇಡಿಕೆಗಳನ್ನು ಚಿನಾ ಬೆಳ್ಳಿಯ ಟೇಲ್ಸ್ ಗಳ ಲಕ್ಷಾಂತರ ಕಾರಣದಿಂದ ಬಿಟ್ಟರು.ಅವನು ಮಿಲಿಟರಿಯಲ್ಲಿ ತನ್ನ ವ್ರುತ್ತಿ ಕಂಡು ಕೊಳ್ಳಲು ತೀರ್ಮಾನಿಸಿದ.ಅವನು ೧೯೦೬ರಲ್ಲಿ ಬವೊಡಿಂಗ್ ಮಿಲಿಟರಿ ಅಕ್ಯಾಡೆಮಿಯಲ್ಲಿ ತನ್ನ ಮಿಲಿಟರಿ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದಾಗ ಕಾಕತಾಳೀಯತೆಯಾಗಿ ಅದೇ ವರ್ಷದಲ್ಲಿ ಜಪಾನ್ ದೇಶವು ಕಾಗದದ ಕರೆನ್ಸಿಯನ್ನು ಚಿನ್ನ ಮತ್ತು ಬೆಳ್ಳಿ ಯ ಜೊತೆ ಹೋಲಿಸಿ ಅದರ ಬೆಲೆಯನ್ನು ಕಡಿಮೆ ಮಾಡುತ್ತದೆ.ಅವನು ನಂತರ ೧೯೦೭ರಲ್ಲಿ ಚೀನೀ ವಿದ್ಯಾರ್ಥಿಗಳಿಗಾಗಿ ಟೊಕ್ಯೊ ಶಿಂಬು ಗಾಕ್ಕೊದಲ್ಲಿದ್ದ ಇಂಪೀರಿಯಲ್ ಜ್ಯಾಪನೀಸ್ ಆರ್ಮಿ ಅಕಾಡೆಮಿ ಪ್ರಿಪರೇಟರಿ ಶಾಲೆ ಗೆ ಹೋದ ಮತ್ತು ಚಿಯಾಂಗ್ ಇಂಪೀರಿಯಲ್ ಜ್ಯಾಪನೀಸ್ ಆರ್ಮಿಯಲ್ಲಿ ೧೯೦೯ರಿಂದ ೧೯೧೧ರ ವರೆಗೆ ಕಾರ್ಯ ನಿರ್ವಹಿಸಿದ.