ಸದಸ್ಯ:Mandara.L

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chinese national party Kuomintang.

ಸ್ಥಾಪನೆ[ಬದಲಾಯಿಸಿ]

ಕುವೋಮಿಂಟಾಂಗ್ ಪಾರ್ಟಿ ಒಂದು ಚೀನಾದ ರಾಜಕೀಯ ಪಕ್ಷ. ಈ ಪಕ್ಷ ವು ಚೀನಾವನ್ನು ೧೯೨೭ - ೪೮ ರ ವರೆಗೆ ಆಡಳಿತ ನಡೆಸಿ ತೈವಾನ್ ಗೆ ಹೋಯಿತು.ಕುವೋಮಿಂಟಾಂಗ್ ನ ಅನುವಾದ ಮಾಡಿದಲ್ಲಿ ಅದು "ಚೀನೀ ರಾ‌‌ಶ್ಟ್ರೀಯ ಜನರ ಪಕ್ಷ" ವಾಗುತ್ತದೆ ಮತ್ತು ಐತಿಹಾಸಿಕವಾಗಿ ಈ ಪಕ್ಷದಲ್ಲಿದ್ದವರನ್ನು ಚೀನಾದ ರಾಶ್ಟ್ರೀಯತಾವಾದಿಗಳು ಎಂದು ಕರೆಯಲಾಗಿತ್ತು. ಈ ಪಕ್ಷ ವು ಮೊದಲಿಗೆ ಆರಂಭವಾಗಿದ್ದು ಆಗಸ್ಟ್ ೩೫, ೧೯೧೨ ರಲ್ಲಿ. ಇದನ್ನು ಆರಂಭಿಸಿದವರು ಸನ್ ಯತ್ ಸೆನ್. ಆದರೆ ನವೆಂಬರ್ ೧೯೧೩ ರಲ್ಲೇ ಈ ಪಕ್ಷವು ವಿಸರ್ಜನೆಯಾಯಿತು. ಮರು ಪ್ರಾರಂಭ ಎಂಬಂತೆ ಈ ಪಕ್ಷವು ಮತ್ತೆ ಅಕ್ಟೋಬರ್ ೧೦, ೧೯೧೯ ನಲ್ಲಿ ಮತ್ತೆ ಸನ್ ಯತ್ ಸೆನ್ ರವರ ಮುಖ್ಯಸ್ಠಿಕೆಯಿಂದಲೆ ಪ್ರಾರಂಭವಾಯಿತು .

ಆಡಳಿತ[ಬದಲಾಯಿಸಿ]

ಆರಂಭವಾದ ಬಳಿಕ ಈ ಕುವೋಮಿಂಟಾಂಗ್ ಪಕ್ಷ ಚೀನಾದ ಆಡಳಿತ ಪಕ್ಷವಾಯಿತು. ಸನ್ ಯತ್ ಸೆನ್ ರವರ ಸಾವಿನ ನಂತರ ಇವನದೇ ಶಿಶ್ಯನಾಗಿದ್ದ ಚಿಯಾಂಗ್ ಕಾಯ್ ಶೇಕ್ ಈ ಪಕ್ಷದ ಅಧಿಕಾರವನ್ನು ತೆಗೆದುಕೊಂಡು ೧೯೨೭ ರಿಂದ ೧೯೭೫ ರ ವರೆಗೆ ಆಡಳಿತ ನಡೆಸಿದ. ಈ ಪಕ್ಷದ ಜೊತೆ ಸಹ ಅಸ್ತಿತ್ವದಲ್ಲಿದ್ದ ಮತ್ತೊಂದು ಪಕ್ಷ ಚೀನಾದ ಸಮತಾವಾದಿಗಳ ಪಕ್ಷ ವಾಗಿತ್ತು. ೧೯೪೯ ರಲ್ಲಿ ಕುವೋಮಿಂಟಾಂಗ್ ಚೀನಾದ ಸಮತಾವಾದಿಗಳ ಪಕ್ಷದ ವಿರುದ್ಧ ನಡೆದ ಅಂತರ್ಯುದ್ಧದಲ್ಲಿ ಸೋಲುತ್ತದೆ. ಆದರು ಕುವೋಮಿಂಟಾಂಗ್ ಚೀನಾದ ತೈವಾನ್ ಪ್ರದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ತೈವಾನ್ ನಲ್ಲಿ ತಳವೂರಿ ರಿಪಬ್ಲಿಕ್ ಆಫ್ ಚೀನಾದ ಒಂದು ಮುಖ್ಯ ರಾಜಕೀಯ ಪಕ್ಷ ವಾಯಿತು. ಈ ಪಕ್ಷ ವು ಚೀನಾದ ಮೊದಲ ರಾಶ್ಟ್ರೀಯ ಅಸೆಂಬ್ಲಿಯ ಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಯಿತು. ಮೊದಲ ರಾಶ್ಟ್ರೀಯ ಅಸೆಂಬ್ಲಿಯ ಲ್ಲಿ ಕುವೋಮಿಂಟಾಂಗ್ ಪಕ್ಷ ವೇ ಮುಖ್ಯ ಹಾಗು ಬಲಿಶ್ಟ ಪಕ್ಷ ವಾಗಿತ್ತು. ಆದರೆ ಏನೇ ಮಾಡಿದರು ಕುವೋಮಿಂಟಾಂಗ್ ಚೀನಾ ದೇಶವಿಡೀ ಸಂಪೂರ್ಣ ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.ಅಧ್ಯಕ್ಷ ಹುದ್ದೆಯನ್ನು ಯುವಾನ್‌ ಶಿಕಾಯ್‌ ಗೆ ಆತನ ಹೋರಾಟಕ್ಕೆ ಮತ್ತು ಕ್ರಾಂತಿಗೆ ಬಳುವಳಿಯಾಗಿ ನೀಡಲಾಯಿತು. ಯುವಾನ್ ಶಿಕಾಯ್ ಸಂವಿಧಾನ ಸಂಯೋಜನೆಗಳನ್ನು ಮೀರಿಸಿ ಮತ್ತು ಸ್ವತಃ ಮತ್ತು ಇತರ ಪಕ್ಷಗಳ ನಡುವೆ ಬಲವಾದ ಉದ್ವಿಗ್ನತೆ ಸೃಷ್ಟಿಸುವ ಅಧಿಕಾರದ ದುರುಪಯೋಗಪಡಿಸಿಕೊಂಡನು.ಜುಲೈ 1913 ರಲ್ಲಿ ಕುವೋಮಿಂಟಾಂಗ್ ಯುವಾನ್ ನನ್ನು ಕೆಳಗಿಳಿಸುವ 'ಎರಡನೇ ಕ್ರಾಂತಿ' ಪ್ರದರ್ಶಿಸಿದರು. ಆದರೆ ಇದು ವಿಫಲವಾಯಿತು ಮತ್ತು ಯುವಾನ್ ಹೆಚ್ಚಾಗಿ ಜಪಾನ್, ಕುವೋಮಿಂಟಾಂಗ್ ನ ವಿಸರ್ಜನೆ ಮತ್ತು ಅದರ ನಾಯಕತ್ವದ ಗಡಿಪಾರು ಮಾಡಲು ಕಾರಣನಾದನು.

ಉತ್ತಮ ನಾಯಕರು[ಬದಲಾಯಿಸಿ]

ತರುವಾಯ, ಯುವಾನ್ ಶಿಕಾಯ್ ತನ್ನನ್ನು ಸ್ವತಃ ಚೀನಾದ ಚಕ್ರವರ್ತಿ ಎಂದು ಘೋಷಿಸಿಕೊಂಡನು.ದೇಶಭ್ರಷ್ಟ, ಸುನ್ ಯಾತ್ ಸೇನ್ ಮತ್ತು ಇತರ ಮಾಜಿ ಕುವೋಮಿಂಟಾಂಗ್ ಸದಸ್ಯರು ಹಲವು ಹೆಸರುಗಳಲ್ಲಿ ಅನೇಕ ಕ್ರಾಂತಿಕಾರಿ ಪಕ್ಷಗಳನ್ನು ಸ್ಥಾಪಿಸಿದರು. ಆದರೆ ಯಶಸ್ಸು ಗಳಿಸಲಿಲ್ಲ. ೧೯೧೯ರಲ್ಲಿ ಈ ಪಕ್ಷಗಳನ್ನು ಸನ್ ಯಾತ್ ಸೇನ್ "ಕುವೋಮಿಂಟಾಂಗ್ ಆಫ್ ಚೀನಾ" ಎಂಬ ಹೆಸರಿನಡಿಯಲ್ಲಿ ಒಂದುಗೂಡಿಸಿದನು. ಈ ಹೊಸ ಪಕ್ಷ ೧೯೨೦ ರಲ್ಲಿ ಗುವಾಂಗ್ ಗೆ ಹಿಂದಿರುಗಿ ಹೊಸ ಸರ್ಕಾರವನ್ನು ಸ್ಥಾಪಿಸಿತು. ಆದರೆ ಚೀನಾದ ಎಲ್ಲಾ ಭಾಗದಲ್ಲಿ ನಿಯಂತ್ರಣ ಸಾಧಿಸಲು ವಿಫಲವಾಯಿತು. 1916 ರಲ್ಲಿ ಯುವಾನ್ ಶಿಕಾಯ್ ಮರಣ ಹೊಂದಿದ ನಂತರ, ಚೀನಾ ಸೇನಾಧಿಕಾರಿಗಳಿಂದ ನಿಯಂತ್ರಿಸಲ್ಪಡುವ ಅನೇಕ ವಲಯಗಳಾಗಿ ವಿಭಜಿಸಿತು. ಪಕ್ಷದ ಸ್ಥಾನವನ್ನು ಬಲಪಡಿಸಲು, ಇದು ಸೋವಿಯೆತ್ ಒಕ್ಕೂಟ ಹಾಗೂ ಕೋಮಿಂಟರ್ನ್ ನೆರವು ಮತ್ತು ಬೆಂಬಲವನ್ನು ಒಪ್ಪಿಕೊಂಡಿಕೊಂಡಿತು. ಬೆಳೆಯುತ್ತಿರುವ ಚೀನಾ ಕಮ್ಯುನಿಸ್ಟ್ ಪಾರ್ಟಿ ಕುವೋಮಿಂಟಾಂಗ್ ಸೇರಲು ಪ್ರೇರೆಪಿಸಿಕೊಂಡು ಮೊದಲ ಯುನೈಟೆಡ್ ರೂಪುಗೊಂಡಿತು.ಕ್ರಮೇಣ ಕುವೋಮಿಂಟಾಂಗ್ ಅದರ ಗುವಾಂಗ್ಝೌ ನೆಲೆಯಿಂದ ಪ್ರಭಾವಿತಗೊಂಡಿತು.ಅದರ ಪರಿಧಿ ಹೆಚ್ಚಾಯಿತು. ಸನ್ ಯತ್-ಸೆನ್ 1925 ರಲ್ಲಿ ನಿಧನರಾದರು ಮತ್ತು ಚಿಯಾಂಗ್ ಕೈ-ಶೇಕ್ ಕುವೋಮಿಂಟಾಂಗ್ ನ ಬಲವಾದ ವ್ಯಕ್ತಿಯಾದರು.1926 ರಲ್ಲಿ ಚಿಯಾಂಗ್ ಸೇನಾಧಿಕಾರಿಗಳನ್ನು ವಿರುದ್ಧ ಉತ್ತರ ದಂಡಯಾತ್ರೆ ಎಂಬ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ. ಇದರ ಪರಿಣಾಮವಾಗಿ ಆತ ದೇಶದಲ್ಲಿ ಹೆಚ್ಚು ನಿಯಂತ್ರಣ ಸಾಧಿಸಲು ಸಾಧ್ಯವಾಯಿತು.

Reference[ಬದಲಾಯಿಸಿ]

1 <https://en.m.wikipedia.org/wiki/Kuomintang/> 2 <https://www.britannica.com/topic/Nationalist-Party-Chinese-political-party />