ಸದಸ್ಯ:Maadhavapriyaa/ಸರಸಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಸಾ ನದಿ ಅಥವಾ ಸಿರಸಾ ನದಿ (ಪಂಜಾಬಿಯಲ್ಲಿ ਸਰਸਾ /ਨਦੀ, ಹಿಂದಿಯಲ್ಲಿ सरसा नदी, सिरसा नदी) ಇದು ಉತ್ತರ ಭಾರತದ ಒಂದು ನದಿ. [೧]

ನದಿಯ ಉಗಮ ಮತ್ತು ಹರಿವು[ಬದಲಾಯಿಸಿ]

ರೂಪ್ನಗರ ಜಿಲ್ಲೆಯಲ್ಲಿ ಸರಸಾ ನದಿ

ದಕ್ಷಿಣ ಹಿಮಾಚಲ ಪ್ರದೇಶದ ಶಿವಾಲಿಕ್ ಪರ್ವತಗಳ ತಪ್ಪಲಿನಲ್ಲಿ ಸರಸಾ ನದಿ ಉಗಮವಾಗುತ್ತದೆ. ಇದು ಸೋಲನ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಹರಿಯುತ್ತದೆ, ನಂತರ ಪಂಜಾಬ್‌ಗೆ ದಿವಾರಿ ಹಳ್ಳಿಯ ಬಳಿ ಪ್ರವೇಶಿಸುತ್ತದೆ. ಸರಸಾ ನದಿಯು ಪಂಜಾಬಿನ ರೂಪ್‍ನಗರ ಜಿಲ್ಲೆಯ ಪೂರ್ವ ಭಾಗದಲ್ಲಿ ಸಟ್ಲೆಜ್ ನದಿಯನ್ನು ಸೇರುತ್ತದೆ. ಇದು ತರಾಫ್ ಹಳ್ಳಿಯ ಬಳಿ ಸತ್ಲುಜ್ ನದಿಯನ್ನು ಸೇರುತ್ತದೆ.

ಇತಿಹಾಸ[ಬದಲಾಯಿಸಿ]

ಪರಿವಾರ ವಿಛೋಡಾ ಗುರುದ್ವಾರ

ಡಿಸೆಂಬರ್ ೧೭೦೪ರಲ್ಲಿ, ಖಲ್ಸಾ ಮತ್ತು ಮೊಘಲ್ ಸಾಮ್ರಾಜ್ಯದ ನಡುವೆ ಸರಸಾ ಕದನ (ಮೊಘಲ್-ಸಿಖ್ ಯುದ್ಧಗಳ ಒಂದು ಭಾಗ) ನಡೆಯಿತು. ಆ ರಾತ್ರಿ ನದಿಯಲ್ಲಿ ಪ್ರವಾಹ ಉಂಟಾಯಿತು. ಗುರು ಗೋವಿಂದ್ ಸಿಂಗ್ ಅವರು ಸಿಖ‍್ಖರ ಹತ್ತನೇ ಗುರು. ಈ ಘಟನೆಯ ಸಮಯದಲ್ಲಿ ಅವರ ಕುಟುಂಬ ಬೇರ್ಪಟ್ಟಿತು ಮತ್ತು ಸತ್ತವರಲ್ಲಿ ಅವರೂ ಸೇರಿದ್ದಾರೆ ಎಂದು ಭಾವಿಸಲಾಗಿದೆ.

ಪರಿವಾರ ವಿಛೋಡಾ ಎಂಬ ಗುರುದ್ವಾರವು ಸಿರಸಾ ನದಿಯ ದಡದ ಬಳಿ ಇರುವ ಮಜ್ರಿ ಹಳ್ಳಿಯಲ್ಲಿದೆ.

ಮಾಲಿನ್ಯ[ಬದಲಾಯಿಸಿ]

ಬದ್ದಿ, ನಾಲಾಗಡ್, ಬರೋಟಿವಾಲಾ ಇವು ಈ ನದಿಯ ದಡದಲ್ಲಿ ಸೋಲನ್ ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶಗಳಾಗಿವೆ. ಬದ್ದಿ, ನಾಲಾಗಡ್, ಬರೋಟಿವಾಲಾ ಕೈಗಾರಿಕಾ ಪ್ರದೇಶಗಳ ಕೈಗಾರಿಕಾ ತ್ಯಾಜ್ಯಗಳು, ಸಾಮಾನ್ಯ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಿಂದ ವಿಸರ್ಜಿತವಾದ ತ್ಯಾಜ್ಯಗಳು, ಅಕ್ರಮವಾಗಿ ಕಸ ಸುರಿಯುವುದು ಮತ್ತು ಕಾನೂನುಬಾಹಿರ ಮರಳು ಗಣಿಗಾರಿಕೆಯು ಸಿರಸಾ ನದಿಗೆ ಪ್ರಮುಖವಾಗಿ ಅಪಾಯ ಉಂಟುಮಾಡುತ್ತಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಹಿಮ್ ಧಾರಾ (ಹಿಮಾಚಲ ಮೂಲದ ಸಂಶೋಧನಾ ಸಂಸ್ಥೆ) ಮತ್ತು ಇತರ ಮಾಧ್ಯಮಗಳ ವಿವಿಧ ಸಂಶೋಧನಾ ವರದಿಗಳು ತಿಳಿಸಿವೆ. [೨]. ಮಾಲಿನ್ಯವು ಸಿರಸಾ ನದಿಯಲ್ಲಿನ ಜಲಚರಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಿದೆ ಮತ್ತು ಮೀನುಗಳ ಮರಣ ಪ್ರಮಾಣವನ್ನು ಕೂಡ ಹೆಚ್ಚಿಸಿದೆ. [೩] [೪] ,

ಉಲ್ಲೇಖಗಳು[ಬದಲಾಯಿಸಿ]

 

  1. Dash, Pratik (28 April 2019). "Hydrological Studies in Sirsa Basin of Satluj River, Himachal Pradesh Using Remote Sensing and GIS".
  2. IANS (29 December 2018). "Himachal's Sirsa river facing ecological disaster: Green group".
  3. "Due To High Pollution, Sirsa River Is Facing Ecological Disaster, says a Himachal Pradesh-Based Green Group - News". ndtv.com. 31 December 2018.
  4. "Fish mortality reported in HP's Sirsa river in Baddi industrial area". www.indiawaterportal.org.