ಸದಸ್ಯ:Kavya.S.M/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಜಲಪಾತಗಳು[ಬದಲಾಯಿಸಿ]

ಕರ್ನಾಟಕವು ಹಲವು ಜಲಪಾತಗಳನ್ನು ಹೊಂದಿದೆ.[೧]ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.

ಕರ್ನಾಟಕ ಜಲಪಾತಗಳು
ಕರ್ನಾಟಕ ಜಲಪಾತಗಳು

ಅವುಗಳೆಂದರೆ:

ಗಗನಚುಕ್ಕಿ ಜಲಪಾತ[ಬದಲಾಯಿಸಿ]

ಶಿವನ ಸಮುದ್ರ

ಗಗನ ಅವಳಿ ಜಲಪಾತಗಳು ಮತ್ತು ಪೂರ್ವ ಶಾಖೆ ಭರಚುಕ್ಕಿ ಜಲಪಾತಗಳನ್ನುಂಟುಮಾಡುತ್ತದೆ. ಗಗನ ಚುಕ್ಕಿ ಜಲಪಾತಗಳನ್ನು ಶಿವನ ಸಮುದ್ರ ಗಡಿಯಾರ ಗೋಪುರರಿಂದ ಉತ್ತಮವಾಗಿ ನೋಡಬಹುದು.[೧]

ಅಬ್ಬಿ ಜಲಪಾತ[ಬದಲಾಯಿಸಿ]

ಅಬ್ಬಿ ಜಲಪಾತ

ಬೇಸಿಗೆಯಲ್ಲಿ ಒಣಗಿ ತನ್ನ ಸೊಬಗನ್ನು ಕಳೆದುಕೊಳ್ಳುವ ಅಬ್ಬಿ ಜಲಪಾತದ ಸೊಬಗನ್ನು ಸವಿಯಲು ಮಳೆಗಾಲವೇ ಸೂಕ್ತ. ಬೆಂಗಳೂರಿನಿಂದ ೨೫೨ ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದ ನೇರ ಬಸ್ ಸೌಲಭ್ಯ ಇದೆ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಕೇವಲ ೧೦ ಕಿಲೋ ಮೀಟರ್. ಮಡಿಕೇರಿಯಲ್ಲಿ ಮೊದಲು ಮಡಿಕೇರಿ ಕೋಟೆ ನೋಡಿ, ಅಲ್ಲಿಂದ ಅಬ್ಬಿಗೆ ಬರಬಹುದು. ಮಡಿಕೇರಿಯಿಂದ ಭಾಗಮಂಡಲಕ್ಕೆ ೩೯ ಕಿ.ಮೀಟರ್. ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳು ಸೇರುವ ಈ ಸ್ಥಳದಲ್ಲಿ ಸುಂದರ ದೇವಾಲಯವಿದೆ. ಹತ್ತಿರದಲ್ಲೇ ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯೂ ಇದೆ. (ಮಡಿಕೇರಿಯಿಂದ ತಲಕಾವೇರಿಗೆ ೪೪ ಕಿ.ಮೀಟರ್). ಮಡಿಕೇರಿಯಿಂದ ನಿಸರ್ಗಧಾಮಕ್ಕೆ ೨೫ ಕಿ.ಮೀ ಹಾಗೂ ಹಾರಂಗಿ ಜಲಾಶಯಕ್ಕೆ ೩೬ ಕಿ.ಮೀ. ಮಾತ್ರ.[೨]

ಜೋಗ ಜಲಪಾತ[ಬದಲಾಯಿಸಿ]

ಜೋಗ ಜಲಪಾತ

ಜೋಗ ಅಥವಾ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ.[೧][೨] ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ಜಲಪಾತ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ.[೩]

ಗೊಕಾಕ ಜಲಪಾತ[ಬದಲಾಯಿಸಿ]

ಗೊಕಾಕ್ ಜಲಪಾತ

ಕರ್ನಾಟಕದ ಎರಡನೆ ದೊಡ್ಡ ಜಲಪಾತ. ಬೆಳಗಾವಿ ಜಿಲ್ಲೆಯ ಗೋಕಾಕದಿಂದ ೬ ಕಿ.ಮಿ. ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. ೧೮೦ ಅಡಿಯಿಂದ ಧುಮುಕುವ ನೀರು ಇಲ್ಲಿ ನಯನ ಮನೋಹರ ದೃಶ್ಯವನ್ನು ನಿರ್ಮಿಸಿದೆ. ವರ್ಷದ ಜೂನ್ ಆರಂಭದಿಂದ ಡಿಸೆಂಬರವರೆಗೂ ಇಲ್ಲಿಗೆ ಭೇಟಿ ನೀಡಬಹುದು. ಮಳೆಗಾಲದಲ್ಲಿ ದಪ್ಪ ಕೆಂಪು ಕಂದು ಬಣ್ಣದ ನೀರು ಬಂಡೆಯ ಅಂಚನ್ನು ಉಜ್ಜುತ್ತ ಸ್ವಲ್ಪ ದೂರದಿಂದ ಕೇಳಿಸುವ ಸಣ್ಣ ಘರ್ಜನೆಯೊಂದಿಗೆ ಹರಿದು ಬರುತ್ತದೆ. ನದಿಗೆ ಅಡ್ಡಲಾಗಿ ಒಂದು ತೂಗು ಸೇತುವೆ ಇದೆ. ಅದರ ಅಳತೆ ೨೦೧ ಮೀಟರ್ (೬೫೯ ಅಡಿ). ಇದರ ಎತ್ತರ ಕಲ್ಲು ಹಾಸಿಗೆಗಿಂತ ೧೪ ಮೀಟರ್ (೪೬ ಅಡಿ) ಮೇಲೆ. ಹಳೆಯದೊಂದು ವಿದ್ಯುತ್ ಉತ್ಪಾದನಾ ಕೇಂದ್ರ ಇದೆ ಮತ್ತು ಇದು ವಿದ್ಯುತ್‍ಅನ್ನು ೧೮೮೭ ರಲ್ಲಿ ಮೊದಲ ಬಾರಿಗೆ ಇಲ್ಲಿ ಉತ್ಪಾದಿಸಿತು.

ಇರ್ಪು ಜಲಪಾತ[ಬದಲಾಯಿಸಿ]

ಇರ್ಪು ಜಲಪಾತ

ಮಡಿಕೇರಿ ಇರ್ಪು ಜಲಪಾತವು ಕೊಡಗಿನ ಒಂದು ಅಮೊಘವಾದ ಪ್ರವಾಸಿ ಸ್ಥಳವಾಗಿದೆ. ಈ ಜಲಪಾತವು ದಕ್ಶಿಣ ಕೊಡಗಿನ ಭ್ರಹ್ಮಗಿರಿ ಬೆಟ್ಟದ ಎಡ ಭಾಗದಿಂದ ಹರಿಯುತ್ತದೆ. ಇದಕ್ಕೆ ಲಕ್ಶ್ಮಣ ತೀರ್ಥ ಎಂಬ ಹೆಸರು ಇದೆ. ತ್ರೆಥಾಯುಗದಲ್ಲಿ ರಾಮ ಲಕ್ಶ್ಮಣರು ಸೀತೆಯನ್ನು ಅರಸುತ ಈ ನದಿಯನ್ನು ದಾಟಿರುವ ಇತಿಹಾಸ ಇದೆ. ರಾಮನು ದಾಹದಿಂದ ಲಕ್ಶ್ಮಣನಲ್ಲಿಗೆ ನೀರು ತರಲು ಹೇಳಿದಾಗ,ಲಕ್ಶ್ಮಣನು ಬ್ರಹ್ಮಗಿರಿ ಬೆಟ್ಟಕ್ಕೆ ಅಂಬು ಹೊಡೆದು ಬೆಟ್ಟದಿಂದ ನೀರನ್ನು ಚಿಮ್ಮಿಸಿದನು. ಇದರ ಪರಿಯಾಗಿ ಈ ನದಿಗೆ ಲಕ್ಶ್ಮಣ ತೀರ್ಥ ಎಂಬ ಹೆಸರು ಬಂದಿರುವ ಇತಿಹಾಸವಿದೆ. ಇದು ೬೦ ಮೀಟರ್ ಎತ್ತರದಿಂದ ಹರಿಯುತ್ತದೆ. ಅಲ್ಲಿಂದ ಇದು ಹಸಿರು ತುಂಬಿದ ಬೆಟ್ಟಗಳ ನಡುವಿನಿಂದ ಹರಿಯುತ್ತದೆ.ಇದೊ೦ದು ಪುಣ್ಯ ಸ್ಥಳವಾಗಿದೆ. ಜನರು ಈ ನೀರನ್ನು ಪುಣ್ಯ ನೀರೆಂದು ನ೦ಬಿದ್ದಾರೆ,ಆದ್ದರಿ೦ದ ಹೆಚ್ಚಾಗಿ ಸಾವಿರಾರು ಜನರು ಶಿವರಾತ್ರಿಯ ದಿನದಂದು ಈ ಸ್ಥಳಕ್ಕೆ ಆಗಮಿಸುತ್ತಾರೆ. ಜಲಪಾತವು ಬಹಳ ಪ್ರವಾಸಿ ಸ್ಥಳಗಳಿಗೆ ಹತ್ತಿರವಾಗಿದೆ. ಗೋಣಿಕೊಪ್ಪದಿಂದ ೩೦ ಕಿ.ಮಿ,ಮಡಿಕೇರಿಯಿಂದ ೮೦ ಕಿ.ಮಿ ಮತ್ತು ನಗರ ಹೊಳೆಯಿಂದ ೨೫ ಕಿ.ಮಿ ದೂರದಲ್ಲಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ ಜಲಪಾತ,ನಾಗರಹೊಳೆ ಪ್ರಾಣಿ ರಕ್ಷಣಧಾಮದ ಕಾಡಿನಲ್ಲಿ ಸ್ಥಾಪಿತವಾಗಿದೆ.ಎಲ್ಲಾ ಕಾಲದಲ್ಲೂ ನೀರಿನಿಂದ ತುಂಬಿರುವ ಈ ಜಲಪಾತ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ.ಈ ಜಲಪಾತವು ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ.ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಲಕ್ಷಣತೀರ್ಥ ನದಿಗೆ ಸೇರ್ಪಡೆಯಾಗುತ್ತದೆ. ಪುರಾಣದಲ್ಲಿ ಬರುವ ಹಾಗೆ ರಾಮಾಯಣದ ಯುಗದಲ್ಲಿ ರಾಮನು ತನ್ನ ವನವಾಸದ ಕಾಲದಲ್ಲಿ ಈ ಕಾಡಿನಲ್ಲಿ ತಂಗಿದ್ದನು. ಲಕ್ಶ್ಮಣನು ರಾಮನಿಗೆ ನೀರು ತರಲು ಹೊರಟಾಗ ನೀರು ಎಲ್ಲೂ ಸಿಗದೆ ಬಾಣವನ್ನು ಕಾಡಿಗೆ ಬಿಟ್ಟನು.ಬಾಣ ಮುಟ್ಟಿದ ಜಾಗದಿಂದ ಜಲಪಾತವು ಸೃಷ್ಟಿಯಾಗುತ್ತದೆ.ಈ ಜಲಪಾತವೇ ಈಗಿನ ಇರ್ಪು ಜಲಪಾತ.ಜಲಪಾತವಿರುವ ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ದೇವಸ್ಥಾನವಿದೆ.ಪುರಾಣದ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವಯಂ ಶ್ರೀರಾಮನೇ ಸ್ಥಾಪಿಸಿದನೆಂಬ ನಂಬಿಕೆ ಇದೆ.

ಬುರುಡೆ ಜಲಪಾತ[ಬದಲಾಯಿಸಿ]

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಸುಮಾರು ೯೦ ಮೀ. ಎತ್ತರದಿಂದ ಧುಮುಕುತ್ತದೆ. ಇಲ್ಲಿ 'ಇಳ್ಳಿಮನೆ' ಎಂಬ ಹಳ್ಳಿಯಿರುವುದರಿಂದ ಇದಕ್ಕೆ 'ಇಳ್ಳಿಮನೆ ಜಲಪಾತ' ಎಂದೂ ಕರೆಯುತ್ತಾರೆ. ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ಕಿ ನಂತರ ಅಘನಾಶಿನಿ ನದಿ ಸೇರುತ್ತದೆ.ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಅಂದರೆ ಈ ಫಾಲ್ಸ್ ನೋಡಲು ನವಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ ನಡೆಸುವುದಕ್ಕೆ ಅನುಕೂಲವಾಗುವಂತೆ ಸಣ್ಣ ನಾಲೆಯೂ ಇದೆ.

ಬುರುಡೆ ಜಲಪಾತ

ಬಂಡಾಜೆ ಜಲಪಾತ[ಬದಲಾಯಿಸಿ]

ಬಂಡಾಜೆ ಜಲಪಾತ

ನೇತ್ರಾವತಿ ನದಿಯ ಉಪನದಿಯಿಂದ ಬಂಡಾಜೆ ಜಲಪಾತವು ರೂಪುಗೊಂಡಿದೆ ಮತ್ತು ಇದು ಪಶ್ಚಿಮ ಘಟ್ಟಗಳ ಒಳಗೆ ದೂರದ ಪ್ರದೇಶದಲ್ಲಿದೆ. ಇದನ್ನು ಪ್ರವಾಸಿ ಮಾರ್ಗದರ್ಶಕರ ಸಹಾಯದಿಂದ ಚಾರಣದ ಮೂಲಕ ತಲುಪಬಹುದು[೧]. ಜಲಪಾತಗಳ ಎತ್ತರ ಸುಮಾರು ೨೦೦ಅಡಿಗಳು. ವಾಲಂಬ್ರಾದಿಂದ ಬಂಡಾಜೆ ಜಲಪಾತದ ಹಾದಿಯು ದಟ್ಟವಾದ ಹಸಿರು ಕಾಡಿನ ಮೂಲಕ ಹಾದುಹೋಗುತ್ತದೆ.ಅದು ಹುಲ್ಲು ಭೂಮಿಯಲ್ಲಿ ಕೊನೆಗೊಳ್ಳುತ್ತದೆ ಮತ್ತು ಮಾರ್ಗದರ್ಶಿ ಇಲ್ಲದೆ ಚಾರಣ ಮಾಡುವವರು ಕಾಡಿನಲ್ಲಿ ಕಳೆದುಹೋಗುವ ಸಾಧ್ಯತೆಯಿದೆ[೨]. ಬಂಡಾಜೆ ಜಲಪಾತಕ್ಕೆ ಭೇಟಿ ನೀಡಲು ಎರಡು ವಿಭಿನ್ನ ಮಾರ್ಗಗಳಿವೆ. ನೀವು ಮಂಗಳೂರು - ಉಜಿರೆ ಮೂಲಕ ಪ್ರಯಾಣಿಸುತ್ತಿದ್ದರೆ, ಅದು ಉಜಿರೆಯಿಂದ ೨೫ ಕಿ.ಮೀ ದೂರದಲ್ಲಿದೆ. ಉಜಿರೆಯಿಂದ ಚಾರ್ಮಡಿ ಘಾಟ್ ಕಡೆಗೆ ೬ ಕಿ.ಮೀ ಪ್ರಯಾಣಿಸಿ, ಸೋಮಂತಡ್ಕದಲ್ಲಿ ಎಡಕ್ಕೆ ಹೋಗಿ, ಇನ್ನೂ ೬ ಕಿ.ಮೀ ಪ್ರಯಾಣಿಸಿ, ನಂತರ ಬಲ ತಿರುವು ತೆಗೆದುಕೊಂಡು, ೨ ಕಿ.ಮೀ ಪ್ರಯಾಣಿಸಿ ಕಡಿರುದಯವರ ಎಂಬ ಹಳ್ಳಿಯನ್ನು ತಲುಪಿದಾಗ ಅಲ್ಲಿಂದ ನೀವು ಜಲಪಾತದ ದೂರದ ನೋಟವನ್ನು ನೋಡಬಹುದು. ಆದರೆ, ಜಲಪಾತವನ್ನು ತಲುಪಲು ನೀವು ಕಡಿರುದಯವರದಿಂದ ಜಲಪಾತಗಳನ್ನು ತಲುಪಲು ಹೆಚ್ಚು ೧೦ ಕಿ.ಮೀ. ಚಾರಣ ಮಾಡಬೇಕು[೩], ಸ್ಥಳೀಯವಾಗಿ ಈ ಜಲಪಾತವನ್ನು ಬಂಡಾಜೆ ಅರ್ಬಿ ಎಂದು ಕರೆಯಲಾಗುತ್ತದೆ. ತುಳು ಭಾಷೆಯಲ್ಲಿ ಅರ್ಬಿ ಅರ್ಥ ಜಲಪಾತ ಎಂದು. ಬೆಳ್ತಂಗಡಿ ವನ್ಯಜೀವಿ ಶ್ರೇಣಿಯ ಕಚೇರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ಶ್ರೇಣಿ ಕಚೇರಿಯ ಅರಣ್ಯ ಅಧಿಕಾರಿಯಿಂದ ಬಂಡಾಜೆ ಜಲಪಾತಕ್ಕೆ ಚಾರಣ ಮಾಡಲು ಅನುಮತಿ ಪಡೆಯುವ ಅಗತ್ಯವಿದೆ. ನಿಮಗೆ ಅರಣ್ಯ ಇಲಾಖೆಯಿಂದ ಪ್ರವಾಸಿ ಮಾರ್ಗದರ್ಶಕರ ನೀಡಲಾಗುವುದು, ಅದು ನಿಮಗೆ ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ, ಉಜಿರೆಯ ಜೀಪ್ ಡ್ರೈವರ್ ನಿಮಗಾಗಿ ಅರಣ್ಯ ಕೆಲಸದ ಪತ್ರಿಕೆಗಳನ್ನು ವ್ಯವಸ್ಥೆಗೊಳಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

--Kavya.S.M (ಚರ್ಚೆ) ೦೯:೧೯, ೨೫ ಜೂನ್ ೨೦೨೨ (UTC)

  1. https://en.wikipedia.org/wiki/Shivanasamudra_Falls
  2. https://web.archive.org/web/20060907032433/http://www.hindu.com/2005/12/04/stories/2005120404920300.htm
  3. https://www.worldwaterfalldatabase.com/waterfall/Jog-Falls-118