ವಿಷಯಕ್ಕೆ ಹೋಗು

ಸದಸ್ಯ:Kavya.S.M/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ

[ಬದಲಾಯಿಸಿ]
ಉಡುಪಿ
ಜಿಲ್ಲಾ ಕ್ರೀಡಾಂಗಣ
ಸ್ಥಳಉಡುಪಿ, ಕರ್ಣಾಟಕ
ನವೀಕರಿಸಲಾದದ್ದು೨೦೧೫
ಮಾಲೀಕಉಡುಪಿ ಜಿಲ್ಲಾ ಕ್ರೀಡಾ ಸಂಘ
ನಿರ್ಮಾಣ ವೆಚ್ಚ ೨ ಕೋಟಿ
ಸಾಮರ್ಥ್ಯ೧೦೦೦೦

ಉಡುಪಿ ಜಿಲ್ಲಾ ಕ್ರೀಡಾಂಗಣ ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು ಕರ್ನಾಟಕದ ಉಡುಪಿಯಲ್ಲಿರುವ ಬಹುಪಯೋಗಿ ಕ್ರೀಡಾಂಗಣವಾಗಿದೆ. ಕ್ರೀಡಾಂಗಣವು ೧೦೦೦೦ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್‌ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ ೨ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು ೮-ಲೇನ್ ೪೦೦ ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ೧೦-ಲೇನ್ ೧೦೦ ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು ೪-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್‌ಗಳ ಒಳಗೆ ಫುಟ್ ಬಾಲ್ ಮೈದಾನವಿದೆ.[]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

http://wikimapia.org/103892/Ajjarkad-Stadium

ಉಲ್ಲೇಖಗಳು

[ಬದಲಾಯಿಸಿ]
  1. Udupi district stadium to get 2 crore development: Jain