ಸದಸ್ಯ:Kavitha.L Kavitha Lakshminarayana

ವಿಕಿಪೀಡಿಯ ಇಂದ
Jump to navigation Jump to search
ಕವಿತಾ ಲಕ್ಷ್ಮಿನಾರಾಯಣ
pretty girl
ಕವಿತಾ ಲಕ್ಷ್ಮಿನಾರಾಯಣ
Nationalityಭಾರತ
Educationಬಿ.ಕಾಮ್
Occupationವಿಧ್ಯಾಭ್ಯಾಸ

ಹೆಸರು[ಬದಲಾಯಿಸಿ]

ನನ್ನ ಹೆಸರು ಕವಿತಾ.ಎಲ್. ತಂದೆ-ಲಕ್ಷ್ಮಿನಾರಾಯಣ, ತಾಯಿ- ಸರಸ್ವತಿ

ಜನನ[ಬದಲಾಯಿಸಿ]

ನಾನು ಹುಟ್ಟಿದ್ದು ೨೪ ಡಿಸೆಂಬರ್ ೧೯೯೭, ಆಂಧ್ರಾ ಪ್ರದೇಶದ ಚಿತ್ತೂರ್ ಜಿಲ್ಲೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನನ್ನ ಕುಟುಂಬ ಬೆಂಗಳೂರುನಲ್ಲಿ ಸ್ಥಿರವಾಗಿದ್ದರಿಂದ ನಾನು ಇಲ್ಲೇ ನನ್ನ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದೇನೆ.ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಫ಼್ರಾನ್ಸಿಸ್ಕನ್ ಶಾಲೆಯಲ್ಲಿ ಮುಗಿಸಿದೆ ಹಾಗೂ ನನ್ನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ತರಗತಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ.ನನಗೆ ನನ್ನ ಶಾಲೆಯ ನೆನಪು ತುಂಬಾ ಇಷ್ಟ ಯಾಕೆಂದರೆ ನಾನು ತುಂಬಾ ಸಂತೋಷವಾಗಿದ್ದೆ.ಒಳ್ಳೆ ಸ್ನೇಹಿತರು, ಗುರುಗಳು, ಒಟ್ಟೀಗೆ ಊಟ ಮಾಡೋದು ,ಎಲ್ಲಾ ಹಬ್ಬಗಳನ್ನು ಎಲ್ಲಾರು ಒಟ್ಟಿಗೆ ಆಚರಿಸೋದು,ಒಟ್ಟಿಗೆ ಮನೆಗೆ ಮಾತಾಡುಕೊಂಡು ಹೊಗೋದು,ಇನ್ನು ಟೂರಿಗೆ ಹೋದಾಗ ಎಲ್ಲಾರು ಆಟಾಡೋದು, ಇನ್ನು ಮಕ್ಕಳ ದಿನಾಚರಣೆಯಂದು ನಮ್ಮ ನಮ್ಮ ಗುರುಗಳು ನ್ರುತ್ಯ ಮಾಡೋದು ಒಳ್ಳೆ ಒಳ್ಳೆ ಸಿಹಿ-ಸಿಹಿ ತಿಂಡಿಗಳು ಒಳ್ಳೆ ನೆನಪು ಬಿಟ್ಟು ಹೋಗದು ಕೊನೆತನಕ. ನಾನು ಶಾಲೆಲ್ಲಿ ಇರುವಾಗ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆ ಹಾಗು ನಾನು ಕ್ರೈಸ್ಟ್ ಜೂನಿಯರ್ ಕಾಲೇಜ್ ನಡಿಸುವ ದೀಪಿಕ ಮಕ್ಕಳ ಲೀಗ್ ನಲ್ಲಿ ಭಾಗವಹಿಸಿ ಪ್ರಥಮ ಹಾಗು ದ್ವಿತೀಯ ಬಹುಮತಿಗಳನ್ನು ಗಳಿಸಿದ್ದೇನೆ. ಈಗ ನಾನು ನನ್ನ ಬಿಕಾಮ್ ನನ್ನು ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಮಾಡುತ್ತಿದ್ದೇನೆ.

ವ್ಯಕ್ತಿತ್ವ[ಬದಲಾಯಿಸಿ]

ನನ್ನ ವ್ಯಕ್ತಿತ್ವ ಬಗ್ಗೆ ಮಾತನಾಡಬೇಕೆಂದರೆ ನಾನು ತುಂಬಾ ಹಟ ಹಿಡಿಯುವವಳು, ಯಾರ ಮಾತು ಕೇಳುವುದಿಲ್ಲ, ಅವಸರ ಜಾಸ್ತಿ,ಸಂಕೋಚ ಜಾಸ್ತಿ,ಭಯ ಜಾಸ್ತಿ.

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸಗಳೆಂದರೆ, ನನಗೆ ಹಾಡು ಕೇಳುವುದು,ಇತರರಿಗೆ ಸಹಾಯ ಮಾಡುವುದು,ಸಾಕುಪ್ರಾಣಿಯನ್ನು ಸಾಕುವುದು,ದೂರದರ್ಶ ನವನ್ನು ನೋಡುವುದು, ಆಟ ಆಡುವುದು,ಮೊಬೈಲ್ ನಲ್ಲಿ ಸ್ನೇಹಿರತರ ಜೊತೆಗೆ ಮಾತಾಡೋದು. ನನಗೆ ಹಾಡುಗಳು ಎ೦ದರೆ ಇ೦ಪಾಗಿ ಕಿವಿಗೆ ಮುಟ್ಟುವ೦ತ್ತಿರಬೇಕು, ಒಳ್ಳೆ ಹಿತನುಡಿಗಲ್ಲಿ೦ದ ಕೂಡಿರಬೇಕು,ಮನಸ್ಸಿಗೆ ಸ೦ತೋಷ ತರುವ೦ತ್ತಿರಬೇಕು.ನನಗೆ ನನ್ನ ಸ್ನೇಹಿತರ ಜೊತೆಗೆ ಹರಟೆ ಹೊಡಿಬೇಕಂದರೆ,ಎಲ್ಲಾದ್ರು ಹೊಸ ಸ್ಥಳಗಳಿಗೆ ಸುತ್ತಾಡಬೇಕಂದರೆ ,ಚಿಕ್ಕ-ಚಿಕ್ಕ ಮಕ್ಕಳ ಜೊತೆ ಆಟ ಆಡಬೇಕಂದರೆ ನನಗೆ ಏನೊ ತಿಳಿಯದ ಆನಂದ ಮನಸ್ಸಿಗೆ.ಹಾಗೂ ನನಗೆ ಮಳೆಲ್ಲಿ ನೆನಿಬೇಕಂದರೆ ತುಂಬಾ ಇಷ್ಟ.ಆದರೆ ಮನೆಲ್ಲಿ ನೆನೆಯಲು ಬಿಡುವುದಿಲ್ಲ.

ಆಸಕ್ತಿ[ಬದಲಾಯಿಸಿ]

ನನ್ನ ಆಸಕ್ತಿಗಳೆಂದರೆ ಕಥೆ ಪುಸ್ತಕಗಳನ್ನು ಓದಬೆಕೆಂದರೆ ಆಸಕ್ತಿ,ಇನ್ನು ಆತ್ಮಕಥೆಗಳು,ಹೊಲಗದ್ದೆ ಕೆಲಸ ಮಾಡಬೇಕೆಂದರೆ ಇಷ್ಟ,ಬೇರೆಯವರ ಜೊತೆಗೆ ಕೆಲಸ ಮಾಡಬೇಕೆಂದರೆ,ಇನ್ನು ಕ್ರಿಕೆಟ್ ಆಡಬೇಕೆಂದರೆ ಮಕ್ಕಳ ಜೊತೆಗೆ ,ಆಡಿಗೆ ಕಳಿಬೇಕೆಂದರೆ ಇಷ್ಟ.ಮಳೆಲ್ಲಿ ಐಸ್ ಕ್ರೀಮ್ ತಿನ್ನಬೇಕೆಂದರೆ ಇಷ್ಟ,ಸ್ನೇಹಿತರ ಜೊತೆಗೆ ಸಿನಿಮಾಗೆ ಹೋಗಬೇಕೆಂದರೆ ಇಷ್ಟ. ನನಗೆ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ.

ವಿಕಿಸೋರ್ಸ್[ಬದಲಾಯಿಸಿ]

ಇನ್ನು ವಿಕಿಸೋರ್ಸ್ ಬಗ್ಗೆ ಮಾತನಾಡುವುದಾದರೆ ನನಗೆ ವಿಕಿಸೋರ್ಸ್ ನಾನು ಬಿಕಾಮ್ ಗೆ ಸೇರಿದ ಬಳಿಕ ಪರಿಚಿತವಾಯಿತು,ಅದು ಕನ್ನಡ ಸಿ.ಐ.ಎ. ಮೂಲಕ ಪರಿಚಿತವಾಯಿತು.ಇ ವಿಕಿಸೋರ್ಸ್ ನನಗೆ ಕನ್ನಡವನ್ನು ಹೇಗೆ ಲಿಪ್ಯಂತರಣದ ಮೂಲಕ ಕನ್ನಡ ಪದಗಳನ್ನು ಹೇಗೆ ಟೈಪ್ ಮಾಡುವುದು ಎಂದು,ಹಾಗು ಅನೇಕ ಕವಿಗಳ, ಲೇಖಕರ ಕವನ ಸಂಕಲನ, ಕ್ರುತಿಗಳು, ಪ್ರಬಂಧಗಳು ಮುಂತಾದ ಅನೇಕ ಮಾಹಿತಿಗಳನ್ನು ನಾವು ಇ ವಿಕಿಸೋರ್ಸ್ ಮೂಲಕ ತಿಳಿದುಕೊಳ್ಳಬಹುದು.ಈಗಿನ ಕಾಲದಲ್ಲಿ ಕನ್ನಡ ಎಂಬುದರ ಪಥನದಲ್ಲಿ ಇ ವಿಕಿಸೋರ್ಸ್ ಕನ್ನಡವನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.ಯಾಕೆಂದರೆ ಕನ್ನಡದಲ್ಲಿ ನಮಗೆ ಮಾಹಿತಿ ನೀಡುವ ಮಾಧ್ಯಮಗಳು ಬಹಳ ಕಡಿಮೆ ಅದರಲ್ಲು ಕನ್ನಡದಲ್ಲಿ ಮಾಹಿತಿ ಸಿಗೋದು ತುಂಬಾನೆ ಕಡಿಮೆ.ಆದ್ದರಿಂದ ನಮಗೆ ವಿಕಿಸೋರ್ಸ್ ಸಹಾಯಕರವಾಗಿದೆ.ಮುಂದಕ್ಕು ಹೀಗೆ ವಿಕಿಸೋರ್ಸ್ ಎಲ್ಲರಿಗೂ ಸಹಾಯಕರವಾಗಬೇಕು.ನಾನು ಇ ವಿಕಿಸೋರ್ಸ್ ಗೆ ನನ್ನದೆ ಆದ ಸಹಾಯವನ್ನು ಮಾಡುತ್ತೇನೆ.ನನಗೆ ಆಸಕ್ತಿ ಇರುವ ಕವನಗಳು ಹಾಗು ಪ್ರಬಂಧವನ್ನು ಇ ವಿಕಿಸೋರ್ಸ್ ಜೊತೆಗೆ ಹಂಚಿಕೊಳ್ಳುತ್ತೇನೆ.

ವಿಕಿಪೀಡಿಯ[ಬದಲಾಯಿಸಿ]

ವಿಕಿಪೀಡಿಯ ಅನೇಕ ಮಾಹಿತಿ ನೀಡುವಲ್ಲಿ, ವಿಧ್ಯಾರ್ಥಿಗಳಿಗೆ ಸಹಾಯಕವಾಗಿದೆ.ಹಾಗು ವಿಕಿಪೀಡಿಯ ಅನೇಕ ವಿವಿಧ ಭಾಷೆಗಳಲ್ಲಿ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ ಇದರಿಂದ ವಿಧ್ಯಾರ್ಥಿಗಳಿಗೆ ಯಾವುದೆ ತೊಂದರೆ ಇಲ್ಲವಾಗಿದೆ.