ಸದಸ್ಯ:Karthik Rao/ನನ್ನ ಪ್ರಯೋಗಪುಟ/2
ಎಮ್ ಸಿದ್ದಾಂತ
[ಬದಲಾಯಿಸಿ]ಭೌತಶಾಸ್ತ್ರದಲ್ಲಿ, ಸ್ಟ್ರಿಂಗ್ ಸಿದ್ದಾಂತವು ಒಂದು ಸೈದ್ದಾಂತಿಕ ಫ್ರೇಮ್ವರ್ಕ್ ಆಗಿದ್ದು, ಇದು ಪಾಯಿಂಟ್ ಆಕಾರದ ಕಣಗಳನ್ನು ಒಂದು ಆಯಾಮದ ಸ್ಟ್ರಿಂಗ್ ಆಗಿ ಭಾವಿಸುತ್ತದೆ. ಇದು ಸ್ಟ್ರಿಂಗ್ ಕಣಗಳು ವ್ಯೋಮದಲ್ಲಿ ಹೇಗೆ ಚಲಿಸುತ್ತದೆ ಹಾಗೂ ಇತರ ಕಣಗಳೊಂದಿಗೆ ಹೇಗೆ ಸಂವಹನಗೊಳ್ಳುತ್ತದೆ ಎಂಬುದನ್ನು ವಿವರಿಸುತ್ತದೆ. ಸ್ಟ್ರಿಂಗ್ ಪ್ರಮಾಣಗಿಂತ ದೊಡ್ದ ಪ್ರಮಾಣದಲ್ಲಿ ಸ್ಟ್ರಿಂಗ್ ಕಣವು ಕಣದಂತೆ ಕಾಣಿಸುತ್ತದೆ, ಅದರಂತೆ ತೂಕ, ಚಾರ್ಜ್ ಮತ್ತು ಇತರ ಗುಣಗಳು ಇರುತ್ತದೆ. ಸ್ಟ್ರಿಂಗ್ ಸಿದ್ದಾಂತದಲ್ಲಿ ಬರುವ ಮುಖ್ಯವಾದ ಗುಣ ಎಂದರೆ ಗ್ರಾವಿಟಾಣ್, ಇದು ಕ್ವಾಂಟಮ್ ಮೆಕ್ಯಾನಿಕಲ್ ಕಣದಲ್ಲಿರುವ ಗುರುತ್ವಾಕರ್ಶಣೆಯ ಶಕ್ತಿ. ಆದ್ದರಿಂದ ಸ್ಟ್ರಿಂಗ್ ಸಿದ್ದಾಂತವು ಒಂದು ಕ್ವಾಂಟಮ್ ಗುರುತ್ವಾಕರ್ಷಣೆಯ ಸಿದ್ದಾಂತವಾಗಿದೆ. ಸ್ಟ್ರಿಂಗ್ ಸಿದ್ದಾಂತವು ವಿಶಾಲ ಹಾಗೂ ವೈವಿದ್ಯಮಯವಾದ ವಿಷಯವಾಗಿದೆ, ಇದು ಭೌತಶಾಸ್ತ್ರದ ಮೂಲ ಪ್ರಷ್ನೆಗಳನ್ನು ಉತ್ತರಿಸಲು ಪ್ರಯತ್ನಿಸುತ್ತದೆ. ಇದು ಕಪ್ಪು ಕುಳಿ, ಪರಮಾಣು ಶಾಸ್ತ್ರ, ಪ್ರಪಂಚದ ಉಗಮದ ಹಿಂದಿರುವ ಪ್ರಷ್ನೆಗಳನ್ನು ಉತ್ತರಿಸುವುದಕ್ಕೆ ಬಳಸಲಾಗಿದೆ. ಆದರೆ ೧೯೯೫ರ ಹೊತ್ತಿಗೆ ೫ ರೀತಿಯ ಸ್ಟ್ರಿಂಗ್ ಸಿದ್ದಾಂತವು ಉಗಮವಾಗಿತ್ತು, ಇದರಲ್ಲಿ ಯಾವುದು ನಿಖರವಾದುದು ಎಂದು ಹೇಳುವುದಕ್ಕಾಗಲಿಲ್ಲ. ಈ ಸಂದರ್ಭದಲ್ಲಿ ಎಡ್ವರ್ಡ್ ವಿಟ್ಟನ್ ಎಂಬ ಭೌತಶಾಸ್ತ್ರಗ್ಯ್ನನು, ಈ ೫ ಸಿದ್ದಾಂತಗಳನ್ನು ಸೇರಿಸಿ ಎಮ್ ಸಿದ್ದಾಂತವನ್ನು ತಂದನು. ಇದು ಸಂಪೂರ್ಣವಾಗದಿದ್ದರು ಇದು ೨ ಮತ್ತು ೫ ಆಯಾಮಗಳಲ್ಲಿ ಕಣಗಳ ಚಚಲನೆಯನ್ನು ವಿವರಿಸುತ್ತದೆ. ಇದರ ಪ್ರಕಾರ ಒಟ್ಟಾಗಿ ೧೧ ಆಯಾಮಗಳಿವೆ. ಎಮ್ ಸಿದ್ದಾಂತವು ಭೌತಶಾಸ್ತ್ರದ ಎಲ್ಲಾ ಸಿದ್ದಾಂತಗಳನ್ನು ಏಕೀಕೃತಗೊಳಿಸು ಕನಸನ್ನು ಸಂಪೂರ್ಣಗೊಳಿಸುವ ಸಾದ್ಯತೆಯನ್ನು ಹೆಚ್ಚಿಸಿದೆ.
ಹಿನ್ನಲೆ
[ಬದಲಾಯಿಸಿ]ಆಧಿನಿಕ ಭೌತಶಾಸ್ತ್ರದಲ್ಲಿ ಇರುವ ದೊಡ್ಡ ಸಮಸ್ಯೆ ಎಂದರೆ ಕ್ವಾಂಟಮ್ ಗುರುತ್ವಾಕರ್ಷಣೆ. ಐನ್ಸ್ಟೈನಿನ ಜೆನರಲ್ ರಿಲೇಟಿವಿಟಿ, ಅಪಾರ ಗಾತ್ರದ ವಸ್ತುಗಳ ಗುರುತ್ವಾಕರ್ಷಣೆಯನ್ನು ಮಾತ್ರ ವರ್ಣಿಸಲು ಸಾಧ್ಯವಗಿದ್ದು, ಇದು ಕಣಗಳ ಗುರುತ್ವಾಕರ್ಷಣೆಯ ಬಗ್ಗೆ ಏನು ಹೇಳಲಿಲ್ಲ. ಆದ್ದರಿಂದ ಕ್ವಾಂಟಮ್ ಗುರುತ್ವಾಕರ್ಷಣೆಯನ್ನು ವಿವರಿಸಲು ಯಾವ ಸಿದ್ದಾಂತವು ಇರಲಿಲ್ಲ, ಇದನ್ನು ಸ್ಟ್ರಿಂಗ ಸಿದ್ದಾಂತವು ನೀಡಿತ್ತು. ಆದರೆ ಕಾಲ ಕ್ರಮೇಣ ವಿಧವಿಧವಾದ ಸ್ಟ್ರಿಂಗ್ ಸಿದ್ದಾಂತವು ಉಗಮವಾಗಲು ಪ್ರಾರಂಭವಾಯಿತು, ಇದರಲ್ಲಿ ಯಾವುದು ನಿಖರವದುದು ಎಂದು ಹೇಳಲು ಸಾಧ್ಯವಾಗಲಿಲ್ಲ, ಏಕೆಂದರೆ ಒಂದೊಂದು ಸಿದ್ದಾಂತವು ಕಣಗಳ ಒಂದೊಂದು ಗುಣಗಳನ್ನು ವಿವರಿಸುತಿತ್ತು. ೧೯೯೫ರಲ್ಲಿ ಎಡ್ವರ್ಡ್ ವಿಟ್ಟನ್ ತಂದ ಎಮ್ ಸಿದ್ದಾಂತವು ಈ ಐದು ಸಿದ್ದಾಂತಗಳನ್ನು ಒಂದು ಗೂಡಿಸಲು ಪ್ರಯತ್ನಿಸಿತು.
ಸುಪರ್ ಸಿಮ್ಮಿಟ್ರಿ
[ಬದಲಾಯಿಸಿ]ಎಮ್ ಸಿದ್ದಾಂತದಲ್ಲಿ ಬರುವ ಒಂದು ಮುಖ್ಯವಾದ ಪರಿಕಲ್ಪನೆ ಎಂದರೆ ಸುಪರ್ ಸಿಮ್ಮಿಟ್ರಿ. ಕಣಗಳಲ್ಲಿ ಬೊಸಾನ್ಸ್ ಹಾಗು ಫರ್ಮಿಯಾನ್ಸ್ ಎಂಬ ಎರಡು ರೀತಿಯ ಕಣಗಳಿರುತ್ತವೆ, ಪ್ರತಿಯೊಂದು ಬೊಸಾನ್ಗು ಅದರದೇ ಆದ ಪ್ರತಿರೂಪವಾದ ಫರ್ಮಿಯಾನ್ ಇರುತ್ತದೆ. ಇದನ್ನು ಬಳಸಿ ಕ್ವಾಂಟಮ್ ಗುರುತ್ವಾಕರ್ಷಣೆಯನ್ನು ವಿವರಿಸ ಬಹುದಾಗಿದೆ. ಸುಪರ್ ಸಿಮ್ಮಿಟ್ರಿಯನ್ನು ಬಳಸುವ ಸ್ಟ್ರಿಂಗ್ ಸಿದ್ದಾಂತವನ್ನು ಸುಪರ್ ಸ್ಟ್ರಿಂಗ್ ಸಿದ್ದಾಂತ ಎಂದು ಕರೆಯುತ್ತೇವೆ. ಇದರಲ್ಲೂ ಬಹಳ ವಿಧಗಳಿವೆ, ಇದನೆಲ್ಲಾ ಎಮ್ ಸಿದ್ದಾಂತದಲ್ಲಿ ಸೇರಿಸಲಾಗಿದೆ.
ಬ್ರೇನ್ಸ್
[ಬದಲಾಯಿಸಿ]ಬ್ರೇನ್ ಎಂಬುವುದು ಒಂದಕ್ಕಿಂತ ಆಯಾಮದಲ್ಲಿ ಒಂದು ಪಾಯಿಂಟ್ ಕಣವಾಗಿದೆ. ಉದಾಹರಣೆಗೆ ಸ್ಟ್ರಿಂಗ್ ಎಂಬುವುದು ಒಂದು ಆಯಾಮದಲ್ಲಿ ಬರುವ ಬ್ರೇನ್. ಪಿ ಎಂಬ ಆಯಾಮದಲ್ಲಿರುವ ಬ್ರೇನ್ ಅನ್ನು ಪಿ-ಬ್ರೇನ್ ಎಂದು ಕರೆಯುತ್ತಾರೆ. ಬ್ರೇನ್ ಒಂದು ಕ್ರಿಯಾತ್ಮಕ ವಸ್ತು, ಕ್ವಾಂಟಮ್ ಮೆಕ್ಯಾನಿಕ್ಸಿನ ನಯಮಗಳನ್ನು ಪಾಲಿಸುತ್ತಾ ಇವು ಸ್ಪೇಸ್-ಟೈಮನಲ್ಲಿ ಸಂಚರಿಸುತ್ತಾವೆ. ಬ್ರೇನ್ಸ್ ಗೂ ಸಹ ತೂಕ, ಚಾರ್ಜ್ ಮತ್ತು ಇತರ ಗುಣಗಳು ಇರಬಹುದು. ಎಮ್ ಸಿದ್ದಾಂತದಲ್ಲಿ ೨ ಮತ್ತು ೫ ಆಯಾಮಗಳ ಬ್ರೇನಗಳನ್ನು ಹೆಚ್ಚಾಗಿ ನೋಡುತ್ತೇವೆ.
ಇತಿಹಾಸ
[ಬದಲಾಯಿಸಿ]ಕಲುಜ಼ಾ-ಕ್ಲೈನ್ ಸಿದ್ದಾಂತ
[ಬದಲಾಯಿಸಿ]೨೦ನೇ ಶತಮಾನದ ಪ್ರಾರಂಭದಲ್ಲಿ ಐನ್ಸ್ಟೈನ್ ಹಾಗೂ ಇತರ ಖ್ಯಾತ ವಿಜ್ನ್ಯಾನಿಗಳು ನಮ್ಮ ಜಗತ್ತನ್ನು ವರ್ಣಿಸಲು ೪ನೇ ಆಯಾಮದ ಜ್ಯಾಮಿತಿಯನ್ನು ಉಪಯೋಗಿಸಲು ಪ್ರಾರಂಭಿಸಿದರು. ಇದರಿಂದ ಜೆನರಲ್ ರಿಲೇಟಿವಿಟಿಯನ್ನು ಸಾಬೀತು ಮಾಡಲು ಸಾಧ್ಯವಾಯಿತು. ಈ ಯಶಸ್ಸಿನಿಂದ ಹೆಚ್ಚು ಆಯಮದ ಜ್ಯಾಮಿತಿಯನ್ನು ಬಳಸಲು ಪ್ರಾರಂಭಿಸಿದರು. ೧೯೧೯ರಲ್ಲಿ ತಿಯೊಡೋರ್ ಕಲೂಜ಼ ೫ನೇ ಆಯಾಮದಲ್ಲಿ ಗುರುತ್ವಾಕರ್ಷಣೆ ಮತ್ತು ವಿದ್ಯುತ್ಕಾಂತೀಯತೆಯನ್ನು ಏಕೀಕರಿಸಲು ಸಾದ್ಯವಾಗುತ್ತದೆ ತೋರಿಸಿದನು. ಆಸ್ಕರ್ ಕ್ಲೈನ್ ಇದರಲ್ಲಿ ಹೆಚ್ಚು ಸಂಶೋದನೆಯನ್ನು ಮಾಡಿದನು. ಆದರೆ ಇದು ಫೀಲ್ಡ್ ಸಿದ್ದಾಂತ ಏಕೀಕರಣ ಮಾಡುವುದರಲ್ಲಿ ಸಾದ್ಯವಾಗಲಿಲ್ಲ.
ಸುಪರ್ ಗ್ರಾವಿಟಿ ಸಂಶೋಧನೆ
[ಬದಲಾಯಿಸಿ]೧೯೭೦ರ ವೇಳೆಯಲ್ಲಿ ಹೆಚ್ಚು ಆಯಾಮಗಳ ಮೇಲಿನ ಸಿದ್ದಾಂತಗಳನ್ನು ಜೆನರಲ್ ರಿಲೇಟಿವಿಟಿಯನ್ನು ಏಕೀಕರಿಸಲು ಸುಪರ್ ಸಿಮಿಟ್ರಿ ಬಳಸಲು ಪ್ರಯತ್ನಿಸಿದರು, ಇದನ್ನು ಸುಪರ್ ಗ್ರಾವಿಟಿ ಸಿದ್ದಾಂತವೆಂದು ಕರೆಯುತ್ತಾರೆ. ಸುಪರ್ ಗ್ರಾವಿಟಿಯು ೧೧ ಆಯಾಮಗಳು ಇರಲು ಅನುಮತಿಸುತ್ತದೆ.
ಫಿನಾಮೊಲಾಜಿ
[ಬದಲಾಯಿಸಿ]ಫಿನಾಮೊಲಾಜಿಯು ಸೈದ್ಧಾಂತಿಕ ಭೌತಶಾಸ್ತ್ರದ ಒಂದು ಭಾಗ, ಇದರಲ್ಲಿ ಸೈದ್ಧಾಂತಿಕ ಕಲ್ಪನೆಗಳನ್ನು ಭೌತಿಕ ಮಾದರಿಯಾಗಿ ತೋರಿಸಲಾಗುತ್ತದೆ.
ಉಲ್ಲೇಕಗಳು
[ಬದಲಾಯಿಸಿ]- ↑ https://en.wikipedia.org/wiki/M-theory
- ↑ http://www.damtp.cam.ac.uk/research/gr/public/qg_ss.html
- ↑ https://www.quantamagazine.org/why-is-m-theory-the-leading-candidate-for-theory-of-everything-20171218/
- ↑ https://en.wikipedia.org/wiki/Brane_cosmology
- ↑ http://www.nuclecu.unam.mx/~alberto/physics/string.html
- ↑ http://superstringtheory.com/