ಸದಸ್ಯ:Kannayanyadav/WEP 2018-19 dec
ವರ್ಣಪಟಲ ದರ್ಶನ :-
[ಬದಲಾಯಿಸಿ]ವರ್ಣಪಟಲ ದರ್ಶನ (Spectroscopy) ಎಂದರೆ, ಬೌತದ್ರವ್ಯ ಹಾಗು ವಿದ್ಯುತ್ಕಾಂತ ವಿಕಾರಣಧ ನಡುವಣ ಸಂಬಂಧ. ಐತಿಹಾಸಿಕವಾಗಿ ವರ್ಣಪಟಲ ದರ್ಶನವು , ಬೆಳಕು ವರ್ಣಪಟಲದ ಮೇಲೆ ಬಿದ್ದಾಗ ಅದರ ಅಲೆಯ ಪ್ರಕಾರ ವಿಕಿರಣಗೊಂಡು ಮೂಡುವುದರಿಂದ ಗುರುತಿಸಲಾಗಿತ್ತು. ತದನಂತರ, ವಿಕಾರಣ ಶಕ್ತಿಯ ಫ್ರೀಕ್ವೆನ್ಸಿಯಿಂದ ಈ ತತ್ವವನ್ನು ಅರ್ಥ ಮಾಡಿಕೊಳ್ಳಲಾಯಿತು .
ವರ್ಣಪಟಲ ದರ್ಶನವು ಮಾಹಿತಿಯನ್ನು ಹಾಗು ದತ್ತಾಂಶಗಳನ್ನು ಅಣುರೋಹಿತ ಮೂಲಕ ಸೂಚಿಸಲಾಗಿದೆ.
ಪೀಟಿಕೆ :-
[ಬದಲಾಯಿಸಿ]ವರ್ಣಪಟಲ(ಅಶ್ರಕ) ದರ್ಶನ ಹಾಗು ವರ್ಣಪಟಲ ದರ್ಶಕಗಳು ವಿಕಿರಣದ ತೀವ್ರತೆಯನ್ನು ಅಳೆಯಲು ಬಳಸುವ ವಿಧಾನಗಳು. ವರ್ಣಪಟಲ ಮಾಪನಗಳನ್ನು ಸ್ಪೆಕ್ಟ್ರೋಮೀಟರ್ಸ್, ಸ್ಪೆಕ್ಟ್ರೋಗ್ರಾಫ್ ಅಥವಾ ಸ್ಪೆಕ್ಟ್ರೋ ಅನಲೈಸರ್ ಎಂದು ಕರೆಯಲಾಗುತ್ತದೆ. ದಿನನಿತ್ಯದ ಬಣ್ಣಗಳ ಅವಲೋಕನವನ್ನು ವರ್ಣಪಟಲ ದರ್ಶನವೆನ್ನಲಾಗುತ್ತದೆ. ಅಣುವಿನ ವರ್ಣಪಟಲ ದರ್ಶನದ ಮುಖ್ಯ ಪ್ರಯೋಜನವೇ ನಿಯಾನ್ ಬೆಳಕು. ನಿಯಾನ್ ರಾಸಾಯನಿಕ ಲಾಟೀನಿನಿಂದ ಋಣಾತ್ಮಕ ಕಣಗಳು, ನಿಯಾನ್ ರಾಸಾಯನಿಕದೊಳಗೆ ಆಗುವ ಕೆಲವು ಕ್ರಿಯೆಗಳಿಂದ ಹೊಮ್ಮುತ್ತವೆ. ದಿನನಿತ್ಯದ ಬಣ್ಣಗಳು, ಕೂದಲಿನ ಬಣ್ಣಗಳು ಹಾಗು ಬೇರೆ ಬೇರೆಯ ಬಣ್ಣಗಳ ಮೂಲಕವೂ ಕೂಡ ವರ್ಣಪಟಲ ದರ್ಶನದ ಬಗ್ಗೆ ತಿಳಿಯಬಹುದು .
[೧]
ಅಭಿಪ್ರಾಯಾ :-
[ಬದಲಾಯಿಸಿ]ವರ್ಣಪಟಲ ದರ್ಶನದ ಒಂದು ಬಹು ಮುಖ್ಯ ಬಾಗ. ಪೆಂಡ್ಯುಲಮ್ಸ್ ನಲ್ಲಿ ಮೊದಲ ಬಾರಿಗೆ ಪ್ರತಿಕಂಪನದ (resonance) ಬಗ್ಗೆ ವ್ಯಾಕ್ಯಾನ ಮಾಡಲಾಯಿತು. ಈ ಪೆಂಡ್ಯುಲಮ್ ಗಳು ಕಂಪಿಸಿದಾಗ ದೊಡ್ಡ ಮಟ್ಟದ ಆಂಪ್ಲಿಟ್ಯುಡ್(amplitude) ಹೊಂದಿದ ಪ್ರತಿಕಂಪನದ ಪ್ರೀಕ್ವೆನ್ನಿಯು ಉದ್ಭವಿಸುತ್ತದೆ . ಕಣಗಳ ಸ್ಪೆಕ್ಟ್ರವೂ ಯಾವಾಗಲು ಸ್ಪೆಕ್ಟ್ರಲ್ ಗೆರೆಗಳ ಸರಣೆಗಳನ್ನು ಹೊಂದಿರುತ್ತದೆ. ಇಲ್ಲಿ ಪ್ರತಿಯೊಂದು ಸ್ಪೆಕ್ಟ್ರಲ್ ಗೆರೆಗಳು ಎರಡು ಬೇರೆಯ ಕ್ವಾಂಟಮ್ ಸ್ಥಿತಿಯ ನಡುವೆ ಸಮಾನ ಕಂಪನ ಅಥವಾ ಪ್ರತಿಕಂಪನವನ್ನು ಹೊಂದಿರುತ್ತದೆ. ಈ ವಿಷಯದಿಂದ ಕ್ವಾಂಟಮ್ ಮೆಕ್ಯಾನಿಕ್ಸ್ ಎಂಬ ಹೊಸ ಅಧ್ಯಾಯದ ಆರಂಭಕ್ಕೆ ಹಾಗು ಅದರ ಅಭಿವೃದ್ಧಿಗೆ ಸಹಾಯ ದೊರಕಿತು.
[೨]
ವಿಕಾರಣದ ಶಕ್ತಿಗಳು :-
[ಬದಲಾಯಿಸಿ]ವಿದ್ಯುತ್ಕಾಂತ ವಿಕಾರಣ ಮೊದಲ ಶಕ್ತಿಯ ಅದರಲ್ಲೂ ಮೊದಲ ವರ್ಣಪಟಲದ ಅಧ್ಯಯನದ ಮೂಲ. ತದನಂತರ, ಮೈಕ್ರೋವೇವ್, ಇನ್ಫ್ರಾರೆಡ್, ಅತಿನೇರಳೆ ಕಿರಣಗಳು, ಎಕ್ಸ್ರೆ ಕಿರಣಗಳು, ಗಾಮ ಕಿರಣಗಳು ಹೀಗೆ ಬೇರೆ ಬೇರೆಯ ತರಂಗದ ಅಳತೆಯಲ್ಲಿರುವ ವರ್ಣ ಪಟಲದ ಬಾಗಗಳಲ್ಲಿ ಅಧ್ಯಯನ ನಡೆಸಬಹುದಾಗಿದೆ. ಅರ್ನೆಸ್ಟ್ ರುದರ್‍ಫೋರ್ಡ್ ಹಾಗು ನೀಲ್ಸ್ ಬೋರ್ರ ಕ್ವಾಂಟಮ್ ಮಾದರಿಯು ಸ್ಪೆಕ್ಟ್ರಲ್ ಸರಣಿಯನ್ನು ಸಮರ್ಪಕವಾಗಿ ವಿವರಣೆ ನೀಡುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಜಲಜನಕದ ಸ್ಪೆಕ್ಟ್ರಲ್ ಸರಣಿಯನ್ನು ಇನ್ನು ಯಶಸ್ವಿಯಾಗಿ ವಿವರಣೆಯನ್ನು ಈ ವಿಜ್ನ್ಯಾನಿಗಳು ನೀಡಿದರು .[೩]
ವರ್ಣಪಟಲ ದರ್ಶನದ ವಿಧಗಳು :-
[ಬದಲಾಯಿಸಿ]೧) ಕಿರಣಗಳ ಸ್ವೀಕರಿಕೆಯ ವರ್ಣಪಟಲ ದರ್ಶನದ ವಿಧಗಳು
೨) ಎಮಿಶನ್ ವರ್ಣಪಟಲ ದರ್ಶನದ ವಿಧಗಳು
೩) ಎಲಾಸ್ಟಿಕ್ ವಕ್ರೀಭವನ ಹಾಗು ಪ್ರತಿಫಲನದ
೧) ಕಿರಣಗಳ ಸ್ವೀಕರಿಕೆಯ ವರ್ಣಪಟಲ ದರ್ಶನದ ವಿಧಗಳು :-
[ಬದಲಾಯಿಸಿ]ಕಿರಣಗಳ ಹೊರ ಸೂಸುವಿಕೆಯನ್ನು ಕೆಲವು ವಸ್ತುಗಳು ಹೀರುವುದರಿಂದ ಈ ರೀತಿಯ ದರ್ಶನವು ಶ್ರುಷ್ಟಿಯಾಗುತ್ತದೆ .
೨) ಎಮಿಶನ್ ವರ್ಣಪಟಲ ದರ್ಶನದ ವಿಧಗಳು:-
[ಬದಲಾಯಿಸಿ]ವಸ್ತುಗಳಿಂದ ಕಿರಣವು ಹೊರಹೊಮ್ಮುವುದರಿಂದ ಈ ರೀತಿಯ ದರ್ಶನವು ಶ್ರುಷ್ಟಿಯಾಗುತ್ತದೆ. ಬ್ಲಾಕ್ ಬೋಡಿಯ ಸ್ಪೆಕ್ಟ್ರಮ್ ಈ ರೀತಿಯ ವರ್ಣಪಟಲ ದರ್ಶನದ ವಿಬಾಗಕ್ಕೆ ಸೇರುತ್ತದೆ.
೩) ಎಲಾಸ್ಟಿಕ್ ವಕ್ರೀಭವನ ಹಾಗು ಪ್ರತಿಫಲನದ:-
[ಬದಲಾಯಿಸಿ]ಈ ರೀತಿಯ ದರ್ಶನದಲ್ಲಿ ವಸ್ತುವು ತನ್ನ ಮೇಲೆ ಬಿದ್ದ ಕಿರಣಗಳನ್ನು ವಕ್ರೀಭವನ ಪ್ರಕ್ರಿಯೆಗೆ ಒಳಪಡಿಸುತ್ತದೆ.