ಸದಸ್ಯ:Jayanth1710153

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ[ಬದಲಾಯಿಸಿ]

ನನ್ನ ಹೆಸರು ಜಯಂತ್. ನನ್ನ ಹೆಸರಿನ ಅರ್ಥ ಚಂದ್ರ. ನಾನು ಹುಟ್ಟಿದ್ದು ೦೨/೧೦‌/೧೯೯೯ ರಂದು. ನಾನು ಜನಿಸಿದ ಸ್ಥಳ ಬೆಂಗಳೂರು. ನಾನು ಮೂಲತಃ ಬೆಂಗಳೂರಿನವ. ನನ್ನ ತಂದೆಯ ಹೆಸರು ನರೇಂದ್ರ ಕುಮಾರ ಹಾಗು ತಾಯಿಯ ಹೆಸರು ಮಮತ. ನನ್ನ ತಾಯಿ ಮೂಲತಃ ಕೋಲಾರಿನವರು. ನನಗೆ ಒಬ್ಬ ತಮ್ಮನಿದ್ದಾನೆ. ಅವನ ಹೆಸರು ರೇವಂತ್. ಅವನು ೩ನೇ ತರಗತಿಯಲ್ಲಿ ಓದುತ್ತಿದ್ದಾನೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಶಿಕ್ಷಣ ವನ್ನುಅತೇನ ಪಬ್ಲಿಕ್ ಸ್ಕೂಲಿನಲ್ಲಿ ಮುಗಿಸಿದೆ. ನನ್ನ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಜನಕ ವಿದ್ಯಾಲಯದಲ್ಲಿ ಮುಗುಸಿರುವೆನು. ನಾನು ೧೦ನೇ ತರಗತಿಯಲ್ಲಿ ಶೇಕಡಾ ೯೫ ಪಡೆದು ನನ್ನ ಆಸೆಯಂತೆ ಕ್ರೈಸ್ಟ್ ಕಾಲೇಜನ್ನು ಸೇರಿದೆ. ಇದು ನನ್ನ ಮೊದಲ ಸಾಧನೆ. ನಂತರ ದ್ವಿತೀಯ ಪಿಯುಸಿಯಲ್ಲಿ ಶೇಕಡಾ ೮೫ ಪಡೆದಿರುವ ನಾನುಬೀಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವೆನು. ಇದು ನನ್ನ ಮತ್ತೊಂದು ಸಾಧನೆ.

ಕ್ರೀಡೆ[ಬದಲಾಯಿಸಿ]

Cricketer bowled.jpg

ನನಗೆ ಕ್ರಿಕೆಟ್ ಎಂದರೆ ಪ್ರಾಣ. ನನ್ನ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡುವೆನು. ನಾನು ಒಳ್ಳೆಯ ಕ್ರಿಕೆಟಿಗ ಎಂದು ಎಲ್ಲರೂ ಹೇಳುತ್ತಾರೆ. ನನಗೆ ದಿನವೂ ದಿನಪತ್ರಿಕೆ ಓದುವ ಒಳ್ಳೆಯ ಅಭ್ಯಾಸವಿದೆ. ನನ್ನ ಆತ್ಮವಿಶ್ವಾಶವೇ ನನ್ನ ಶಕ್ತಿ. ನನ್ನ ಮಾತು ಸದಾ ನೇರವಾಗಿರುತ್ತದೆ. ಇದೂ ಸಹ ನನ್ನ ಶಕ್ತಿ ಎಂದು ಹೇಳಬಹುದು. ನನ್ನ ಮನಸ್ಸು ತುಂಬಾ ಸೂಕ್ಷ್ಮ. ಸಣ್ಣ ಸಣ್ಣ ವಿಚಾರಗಳನ್ನು ಮನಸ್ಸಿಗೆ ತುಂಬಾ ಬೇಗ ತೆಗೆದುಕೊಂಡುಬಿಡುವೆನು. ನಾನು ಯಾರೊಂದಿಗು ಜಾಸ್ತಿ ಮಾತನಾಡುವುದಿಲ್ಲ. ಇದು ನನ್ನ ಸ್ವಭಾವ. ನನಗೆ ಚರ್ಚೆಗಳೆಂದರೆ ತುಂಬಾ ಆಸಕ್ತಿ. ನಾನು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನನ್ನನ್ನು ತೊಡಗಿಸಿಕೊಂಡಿರುವೆನು.

ಕೈಗಾರಿಕಾ ಕೇಂದ್ರ ಭೇಟಿ[ಬದಲಾಯಿಸಿ]

Hebburu, Tumkuru District (4).jpg

ನಮ್ಮ ಕಾಲೇಜಿನಿಂದ ಕೈಗಾರಿಕಾ ಕೇಂದ್ರ ಭೇಟಿಗೆ ತುಮಕೂರಿಗೆ ಕರೆದುಕೊಂಡು ಹೋಗಿದ್ದರು. ನಾವು ಅಲ್ಲಿ ಎರೆಡು ಕೇಂದ್ರಗಳಿಗೆ ಭೇಟಿ ಮಾಡಿದೇವು. ಅಲ್ಲಿ ಹೇಗೆ ಎಲ್ಲಾ ಕೆಲಸಗಳು ಏಕಕಾಲದಲ್ಲಿ, ಸಂಯಮವಾಗಿ ನಡೆಯುತ್ತವೆ ಎಂದು ನೋಡಿದೇವು. ಸಾವಿರಾರು ಜನರು ಕೇಂದ್ರಗಳಲ್ಲಿ ತಮ್ಮ ದಿನ ನಿತ್ಯ ಜೀವನವನ್ನು ನಡೆಸಲು ಕಷ್ಟ ಪಡುತ್ತಿರುವುದನ್ನು ನೋಡಿ ನನಗೆ ಬಹಳ ಬೇಸರವಾಯಿತು. ಕೇಂದ್ರಗಳಲ್ಲದೆ ಊರಿನ ಮನೆಗಳಿಗೂ ಸಹ ಹೋಗಿದ್ದೇವು. ಅಲ್ಲಿನ ಜನರಿಗೆ ನಮ್ಮನ್ನು ನೋಡಿ ಬಹಳ ಖುಷಿಯಾಯಿತು. ನಮಗೂ ಕೂಡ ಸಂತೋಷವಾಯಿತು. ಅವರೊಂದಿಗೆ ಕಾಲ ಕಳೆಯಲು ಅವಕಾಶ ಮಾಡಿಕೊಟ್ಟ ನನ್ನ ಶಿಕ್ಷಕರಿಗೆ ವಂದಿಸುತ್ತೇನೆ.

ನನ್ನ ಗುರಿ[ಬದಲಾಯಿಸಿ]

ಮುಂದೆ ನನ್ನ ಶಿಕ್ಷಣ ಮುಗಿದ ಮೇಲೆ ನನ್ನ ಸ್ವಂತ ವ್ಯಾಪಾರ ನಡೆಸಬೇಕೆಂದು ಅಂದುಕೊಂಡಿದ್ದೇನೆ. ಅದಕ್ಕೆ ನನ್ನ ಪೋಷಕರ ಪ್ರೋತ್ಸಾಹವು ಇದೆ. ನನ್ನ ಜೀವನದಲ್ಲಿ ನಾನು ನನ್ನ ಕಾಲಿನ ಮೇಲೆ ನಿಂತು, ಒಬ್ಬ ಒಳ್ಳೆಯ ವ್ಯಕ್ತಿಯಾಗಿ, ನನ್ನ ದೇಶಕ್ಕೆ ಒಳ್ಳೆ ಪ್ರಜೆಯಾಗಿ, ಎಲ್ಲರಿಗೂ ಮಾದರಿಯಾಗುವ ಹಾಗೆ ಬದುಕಬೇಕೆಂಬ ನನ್ನ ಆಸೆ. ಇದೇ ನನ್ನ ಗುರಿ.