ಬೇಸರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರಾಹಕರಿಗಾಗಿ ಕಾಯುತ್ತಿರುವ ಸ್ಮಾರಕ ವಸ್ತುಗಳ ವ್ಯಾಪಾರಿಯು ಬೇಸರಗೊಂಡಂತೆ ಕಾಣುತ್ತಾಳೆ

ಸಾಂಪ್ರದಾಯಿಕ ಬಳಕೆಯಲ್ಲಿ, ಬೇಸರ ಒಬ್ಬ ವ್ಯಕ್ತಿಗೆ ಮಾಡುವಂಥದ್ದು ನಿರ್ದಿಷ್ಟವಾಗಿ ಏನೂ ಉಳಿದಿರದಿದ್ದಾಗ, ಅವನಿಗೆ ಅಥವಾ ಅವಳಿಗೆ ಸುತ್ತಮುತ್ತಿನದರಲ್ಲಿ ಆಸಕ್ತಿ ಇಲ್ಲದಿದ್ದಾಗ, ದಿನ ಅಥವಾ ಅವಧಿ ನೀರಸ ಅಥವಾ ಕಿರಿಕಿರಿಯಾಗಿ ಅನಿಸಿದಾಗ ಅನುಭವವಾಗುವ ಒಂದು ಭಾವನಾತ್ಮಕ ಅಥವಾ ಮಾನಸಿಕ ಸ್ಥಿತಿ. ವಿದ್ವಾಂಸರು ಇದನ್ನು ಸಾಂಸ್ಕೃತಿಕ ಆಯಾಮ ಹೊಂದಿರುವ ಒಂದು ಆಧುನಿಕ ವಿದ್ಯಮಾನವೆಂದು ಅರ್ಥಮಾಡಿಕೊಳ್ಳುತ್ತಾರೆ. "ಬೇಸರಕ್ಕೆ ವಿಶ್ವವ್ಯಾಪಕವಾಗಿ ಸ್ವೀಕರಿಸಲಾದ ಯಾವುದೇ ವ್ಯಾಖ್ಯಾನವಿಲ್ಲ. ಆದರೆ ಅದು ಏನೇ ಇದ್ದರೂ, ಅದು ಕೇವಲ ಖಿನ್ನತೆ ಅಥವಾ ನಿರಾಸಕ್ತಿಗೆ ಮತ್ತೊಂದು ಹೆಸರಲ್ಲ ಎಂದು ಸಂಶೋಧಕರು ವಾದಿಸುತ್ತಾರೆ. ಅದು ಜನರಿಗೆ ಅಹಿತಕರ ಅನಿಸುವ ಒಂದು ನಿರ್ದಿಷ್ಟ ಮಾನಸಿಕ ಸ್ಥಿತಿ ಎಂದು ತೋರುತ್ತದೆ—ಉತ್ತೇಜನದ ಕೊರತೆಯು ಜನರಿಗೆ ಪರಿಹಾರವನ್ನು ಹಂಬಲಿಸುವಂತೆ ಮಾಡುತ್ತದೆ, ಜೊತೆಗೆ ಅನೇಕ ವರ್ತನ, ವೈದ್ಯಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಬಿಟ್ಟುಹೋಗುತ್ತದೆ."[೧] ಬಿಬಿಸಿ ನ್ಯೂಸ್ ಪ್ರಕಾರ, ಬೇಸರವು "ನಿಮ್ಮ ಆರೋಗ್ಯಕ್ಕೆ ಹಾನಿಮಾಡುವ ಒಂದು ಅಪಾಯಕರ ಮತ್ತು ವಿಚ್ಛಿದ್ರಕಾರಕ ಮಾನಸಿಕ ಸ್ಥಿತಿಯಾಗಬಲ್ಲದು"; ಆದರೆ "ಬೇಸರ ಇಲ್ಲದೆ ನಾವು ನಮ್ಮ ಸೃಜನಾತ್ಮಕ ಸಾಧನೆಗಳನ್ನು ಸಾಧಿಸಲಾಗುವುದಿಲ್ಲ ಎಂದು ಸಂಶೋಧನೆಯು ಸೂಚಿಸುತ್ತದೆ."[೨]

ಮೂರು ಬಗೆಯ ಬೇಸರಗಳಿವೆ, ಇವೆಲ್ಲದರಲ್ಲೂ ಗಮನದ ತೊಡಗಿಕೆಯ ಸಮಸ್ಯೆಗಳು ಸೇರಿವೆ. ಬಯಸಿದ ಚಟುವಟಿಕೆಯಲ್ಲಿ ತೊಡಗದಂತೆ ನಿರ್ಬಂಧಿಸಿದ ಸಂದರ್ಭಗಳು, ಬಯಸದ ಚಟುವಟಿಕೆಯಲ್ಲಿ ತೊಡಗುವಂತೆ ನಮಗೆ ಬಲವಂತ ಮಾಡಿದ ಸಂದರ್ಭಗಳು, ಅಥವಾ ಯಾವುದೇ ಚಟುವಟಿಕೆ ಅಥವಾ ಪ್ರದರ್ಶನದಲ್ಲಿ ಯಾವುದೇ ಸ್ಪಷ್ಟ ಕಾರಣವಿಲ್ಲದೆ ತೊಡಗುವಿಕೆ ಮುಂದುವರಿಸಲು ನಿಜವಾಗಿಯೂ ಸಾಧ್ಯವಾಗದಿರುವ ಸಂದರ್ಭಗಳು, ಇವುಗಳಲ್ಲಿ ಸೇರಿವೆ. ಬೇಸರ ಪ್ರವೃತ್ತಿ ಅಂದರೆ ಎಲ್ಲ ಬಗೆಯ ಬೇಸರವನ್ನು ಅನುಭವಿಸುವ ಪ್ರವೃತ್ತಿ. ಇದನ್ನು ವಿಶಿಷ್ಟವಾಗಿ ಬೇಸರ ಪ್ರವೃತ್ತಿ ಮಾಪಕದಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಬೇಸರ ಪ್ರವೃತ್ತಿಯು ಸ್ಪಷ್ಟವಾಗಿ ಮತ್ತು ಸ್ಥಿರವಾಗಿ ಗಮನ ವೈಫಲ್ಯಗಳೊಂದಿಗೆ ಸಂಬಂಧಿಸಿದೆ ಎಂದು ಇತ್ತೀಚಿನ ಸಂಶೋಧನೆ ಕಂಡುಹಿಡಿದಿದೆ. ಬೇಸರ ಮತ್ತು ಅದರ ಪ್ರವೃತ್ತಿ ಎರಡೂ ಖಿನ್ನತೆ ಮತ್ತು ಹೋಲುವ ಲಕ್ಷಣಗಳಿಗೆ ಸೈದ್ಧಾಂತಿಕವಾಗಿ ಹಾಗೂ ಪ್ರಾಯೋಗಿಕವಾಗಿ ಸಂಬಂಧಿಸಿವೆ. ಆದಾಗ್ಯೂ, ಬೇಸರ ಪ್ರವೃತ್ತಿಯು ಖಿನ್ನತೆಯಷ್ಟೆ ಗಮನ ವೈಫಲ್ಯಗಳೊಂದಿಗೆ ಬಲವಾಗಿ ಸಂಬಂಧಿಸಿವೆ ಎಂದು ಕಂಡುಹಿಡಿಯಲಾಗಿದೆ. ಬೇಸರವನ್ನು ಹಲವುವೇಳೆ ಕ್ಷುಲ್ಲಕ ಮತ್ತು ಸೌಮ್ಯ ಉದ್ರೇಕಕಾರಿ ಎಂದು ಕಾಣಲಾಗುತ್ತದಾದರೂ, ಬೇಸರ ಪ್ರವೃತ್ತಿಯನ್ನು ವೈವಿಧ್ಯಮಯ ಶ್ರೇಣಿಯ ಸಂಭಾವ್ಯ ಮಾನಸಿಕ, ದೈಹಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಬೇಸರ&oldid=907254" ಇಂದ ಪಡೆಯಲ್ಪಟ್ಟಿದೆ