ಸದಸ್ಯ:Harshitha Girish 2220677/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು ಮತ್ತು ಕುಟುಂಬ[ಬದಲಾಯಿಸಿ]

ನನ್ನ ಹೆಸರು ಹರ್ಷಿತ ಗಿರೀಶ್. ಹರ್ಷಿತ ಅಂದರೆ "ನಗುವ ಮುಖ"; ನನ್ನ ಹೆಸರಿಗೆ ತಕ್ಕಂತೆ ನಾನು ಎಲ್ಲರನ್ನು ನಗುನಗುತ ಮಾತನಾಡಿಸುತ್ತೇನೆ. ನನ್ನ ತಂದೆಯ ಹೆಸರು ಗಿರೀಶ್ ಹೆಚ್ ಎ, ನನ್ನ ತಾಯಿಯ ಹೆಸರು ವಿಜಯಲಕ್ಷ್ಮಿ ಗಿರೀಶ್. ನನ್ನ ತಮ್ಮನ ಹೆಸರು ರಿಷಿತ್.ನಾವು ನಾಲ್ಕು ಜನ ನಮ್ಮ ಪುಟ್ಟ ಮನೆಯಲ್ಲಿ ನಮ್ಮ ಪ್ರಪಂಚವನ್ನು ಕಟ್ಟಿದ್ದೇವೆ. ನಾವು ನಾಲ್ವರು ಎಲ್ಲೇ ಇದ್ದರು ರಾತ್ರಿ ಊಟವನ್ನು ನಾವು ಜೊತೆಗೆ ತಿನ್ನುತ್ತೆವೆ. ಆ ವಿಷಯದಲ್ಲಿ ನನಗೆ ದೇವರಂತಹ ತಂದೆ-ತಾಯಿ ಹಾಗು ಸ್ನೇಹಿತನಂತ ತಮ್ಮ ವರವಾಗಿ ಬಂದಿದ್ದಾರೆ. ಶಾಲೆ ಮುಗಿದ ನಂತರ ನಾನು ಮತ್ತೆ ನನ್ನ ತಾಯಿ ಜೊತೆಗೆ ಕೂತು ಕಾಫಿಯನ್ನು ಕುಡಿಯುತ್ತ ನಮ್ಮ ದಿನಗಳ ಬಗ್ಗೆ ಮಾತನಾಡುತ್ತೇವೆ. ನಮ್ಮ ಮನೆಯಲ್ಲಿ ದೇವರಿಗೆ ಬಹಳ ಮಹತ್ವ. ಮನೆಯನ್ನು ಬಿಡುವ ಮುನ್ನ ಶಲ್ಕಗಳನ್ನು ಹೇಳಿಯೇ ಹೋಗಬೇಕು ಎಂದು ನನ್ನ ತಂದೆ ತಾಯಿ ಹೇಳಿಕೊಟ್ಟರು. ಈ ಅಭ್ಯಾಸದಿಂದ ನಾನು ಪ್ರತಿ ದಿನವನ್ನು ಒಂದು ಒಳ್ಳೆಯ ಭಾವನೆ ಹಾಗು ಶಾಂತ ಮನಸಿನಿಂದ ಶುರು ಮಾಡುತ್ತೇನೆ.

ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ಬಾಲ್ಯ ಬಹಳ ಪ್ರಶಾಂತವಾಗಿತ್ತು. ನನಗೆ ಬೇಕಾಗಿದೆಲ್ಲ ನನ್ನ ತಂದೆ ತಾಯಿ ನನಗೆ ಕೊಡಿಸಿದರು; ಆದರೆ ನನ್ನನು ಅವರು ಎಂದು ಹಾಳು ಮಾಡಲಿಲ್ಲ. ನಾನು ೧೨ ವರ್ಷಗಳು ಶ್ರೀ ಕುಮಾರನ್ಸ್ ಚಿಲ್ದ್ರೆನ್ಸ್ ಹೋಂನಲ್ಲಿ ವಿದ್ಯಾಭ್ಯಾಸವನ್ನು ಮಾಡಿದೆ. ಆ ೧೨ ವರ್ಷಗಳಲ್ಲಿ ಆ ಶಾಲೆ ನನಗೆ ವಿದ್ಯೆಯಾ ಜೊತೆಗೆ ಸಮಾಜ ಜ್ಞಾನವನ್ನು ಕೊಟ್ಟಿತು.ನಾನು ಆಗಿರುವ ಮನುಷ್ಯಳಿಗೆ ನನ್ನ ಶಾಲೆ ಕೊಟ್ಟಿರುವ ಅನುಭವವೇ ಕಾರಣ. ಈಗ ನಾನು ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿನಲ್ಲಿ ಬಿ ಬಿ ಏ ಯನ್ನು ಓಡುತಿದ್ದೇನೆ. ಚಿಕ್ಕವಳು ಆಗಿದ್ದಾಗ ನಾನು ಕ್ರೈಸ್ಟ್ ನಲ್ಲೆ ಓದಬೇಕೆಂದು ಹಠವನ್ನು ಮಾಡಿ, ಕಷ್ಟ ಪಟ್ಟು ಓದಿ, ಈ ಕಾಲೇಜ್ನಲ್ಲಿ ಸೀಟ್ ಪಡಿದುಕೊಂಡೆ. ನನ್ನ ತಂದೆ ತಾಯಿ ಎಂದಿಗೂ ಹೇಳಿದ್ದು ಒಂದೇ ಮಾತು; ಕಷ್ಟ ಪಟ್ಟು "ಮೆರಿಟ್" ನಲ್ಲಿ ಸೀಟ್ ಪಡಿಯ ಬೇಕು. ಅವರ ಆಶಯಗಳನ್ನೂ ತೀರಿಸಲು ನಾನು ಕ್ರೈಸ್ಟ್ ನಲ್ಲಿ ಮೆರಿಟ್ ಸೀಟ್ ಹಾಗು ಸ್ಕಾಲರ್ಷಿಪ್ ಪಡೆದಿದ್ದೇನೆ. ನನ್ನ ತಂದೆ ತಾಯಿ ಓದಿದ್ದು ಬಿ ಕಾಮ್; ಆದರೆ ಅವರ ಆಶಯ ಏನೆಂದರೆ ನಾನು ನನ್ನ ಇಷ್ಟವಾದ ವಿಷಯದಲ್ಲಿ ಮಾಸ್ಟರ್ಸ್ ಓದಬೇಕೆಂದು. ನನಗು ಬಿಸಿನೆಸ್ನಲ್ಲಿ ಆಸಕ್ತಿ ಇದ್ದರಿಂದ, ನಾನು ಬಿಸಿನೆಸ್ ಮಾಸ್ಟರ್ಸ್ ಮಾಡಬೇಕೆಂದು ಆಶಯಿಸುತ್ತೇನೆ. ಜೀವನದಲ್ಲಿ ವಿದ್ಯೆಯೇ ಬಹುಮುಖ್ಯ, ಆದದ್ದರಿಂದ ನಾನು ವಿದ್ಯಾಭ್ಯಾಸದಲ್ಲಿ ಎಂದಿಗೂ ಹಿಂದೆಬೀಳುವುದಿಲ್ಲ.

ಕಲೆ ಹಾಗು ಆಸಕ್ತಿಯ ಕ್ಷೇತ್ರಗಳು[ಬದಲಾಯಿಸಿ]

ನಾನು ೧೨ ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದೇನೆ. ನನಗೆ ನಾಟ್ಯವೆಂದರೆ ಬಹಳ ಇಷ್ಟವೆಂದು ನನ್ನ ತಾಯಿ ನನ್ನನು ಭರತನಾಟ್ಯಕ್ಕೆ ವಿದ್ವಾನ್ ಶ್ರೀ ರಾಮು ಕಣಗಾಲ್ರವರ ಹತ್ತಿರ ನಾಟ್ಯ ಕಲಿಯುವುದಕ್ಕೆ ಸೇರಿಸಿದರು. ಅವರ ಜೊತೆ ನಾನು ಗಂಧರ್ವ ಮಹಾವಿದ್ಯಾಲಯದ "ಪ್ರವೇಶಿಕ" ಪರೀಕ್ಷೆಯನ್ನು ಬರಿದು ಡಿಸ್ಟಿಂಕ್ಷನ್ ಪಡೆದಿದ್ದೇನೆ. ಆನಂತರ ಕಲಾಕ್ಷೇತ್ರ ಬಾನಿಯನ್ನು ವಿಧುಷಿ ಶ್ರೀಮತಿ ಗಾರ್ಗಿ ಪಂಚಾಂಗಂರಾವ ಕಲಿಯುತ್ತಿದ್ದೇನೆ. ಕರ್ನಾಟಕ ಸ್ಟೇಟ್ ಬೋರ್ಡಿನ ಜೂನಿಯರ್ ಎಕ್ಸಾಮಿನಲ್ಲಿ ಫಸ್ಟ್ ಕ್ಲಾಸ್ ಪಡೆದ್ದಿದ್ದೇನೆ, ಹಾಗು ಈಗ ಸೀನಿಯರ್ ಎಕ್ಸಾಮಿಗೆ ಕಟ್ಟಿದ್ದೇನೆ. ನವೆಂಬರ್ನಲ್ಲಿ ನನ್ನ ರಂಗಪ್ರವೇಶವನ್ನು ಪೂರ್ಣಗೊಳಿಸಿದೆ. ೬ ತಿಂಗಳು ಈ ಕಾರ್ಯಕ್ರಮಕ್ಕೆ ಬಹಳ ಕಷ್ಟ ಪಟ್ಟಿದೆ; ಆದರೆ ಆ ರಂಗದಲ್ಲಿ ನಿಂತು ಹಲವಾರು ನನಗೆ ಚಪ್ಪಾಳೆ ತಟ್ಟುವಾಗ ನನ್ನ ಕಣ್ಣಲ್ಲಿ ಬಂಡ ನೀರನ್ನು ನಾನು ಈ ದಿನಕ್ಕೂ ಮರೆಯಲಾರೆ. ನನ್ನ ಕೊನೆಯ ಪ್ರದರ್ಶನ ಕೃಷ್ಣನ ಮೇಲಿತ್ತು; ಇದು ಬ್ರಾಂಹೆಯೋ ನಿಜವೋ ಗೊತ್ತಿಲ್ಲ, ಆದರೆ ಆ ರಂಗದಲ್ಲಿ ನನಗೆ ಸಾಕ್ಷಾತ್ ಕೃಷ್ಣನೇ ಕಾಣಿಸಿದಂತೆ ಆಯಿತು; ನಂಗೆ ಗೊತ್ತಿಲ್ಲದ ಕಣ್ಣೀರನ್ನು ಸುರಿಬಿಟ್ಟೆ. ಭಾರತನಾಟ್ಯ ನನ್ನ ಜೀವನದ ಉದ್ದೇಶವಾಗಿಬಿಟ್ಟಿತು; ಏನೇಯಾದರು ಆ ರಂಗಮಂಟಪದಲ್ಲಿ ಆ ದೇವರಿಗೆ ಕೊಡುವ ನನ್ನ ಕಾಣಿಕೆ ನತ್ಯದಲ್ಲೇ. ಈ ಕಲೆ ನನ್ನಲಿ ಬದಲಾವಣೆಗಳು, ಭಕ್ತಿ, ಹಾಗು ಶಿಸ್ತನ್ನು ತಂದಿದೆ. ಭರತನಾಟ್ಯದ ಜೊತೆಗೆ ನಾನು ಕರ್ನಾಟಿಕ್ ಸಂಗೀತವನ್ನು ಕಲೆತಿದೆನ್ನೆ. ನನ್ನ ಹವ್ಯಾಸಗಳು ಬರವಣಿಗೆ, ಓದುವುದು, ಈಜುವುದು, ವಾಲಿಬಾಲ್, ಬ್ಯಾಸ್ಕೆಟ್ಬಾಲ್, ಚೆಸ್ ಆಡುವುದು, ಹಾಗು ಚಿತ್ರಕಲೆ.